ಕುoದಾಪುರ(ಜೂ,13): ಕುoದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪ್ರಸ್ತುತಿ ಶೆಟ್ಟಿ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ 618 ಅಂಕ ಗಳಿಸಿದ್ದು ಮರುಮೌಲ್ಯಮಾಪನದ ನಂತರ 621 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದಿರುತ್ತಾಳೆ. ಕನ್ನಡ, ಆಂಗ್ಲ ಭಾಷೆ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ 3 ಹೆಚ್ಚುವರಿ ಅಂಕ ಗಳಿಸುವುದರೊಂದಿಗೆ ಈ ಸಾಧನೆ ಮಾಡಿರುತ್ತಾಳೆ. […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ವಿ. ಕೆ. ಆರ್. ಶಾಲೆ ಕುಂದಾಪುರದ ತೇಜಸ್ ವಿ. ನಾಯಕ್ ರಾಜ್ಯಕ್ಕೆ 8ನೇ ರ್ಯಾಂಕ್
ಕುoದಾಪುರ(ಜೂ,13): ಇಲ್ಲಿನ ಕುoದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ತೇಜಸ್ ವಿ. ನಾಯಕ್ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ 611 ಅಂಕ ಗಳಿಸಿದ್ದು ಮರುಮೌಲ್ಯಮಾಪನದ ನಂತರ 618 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದಿರುತ್ತಾನೆ. ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ 7 ಹೆಚ್ಚುವರಿ ಅಂಕ ಗಳಿಸುವುದರೊಂದಿಗೆ ಈ ಸಾಧನೆ ಮಾಡಿರುತ್ತಾನೆ. […]
ವಿ. ಕೆ. ಆರ್. ಶಾಲೆ ಕುಂದಾಪುರ: ಪ್ರತೀಕ್ ಎನ್ ಶೆಟ್ಟಿ ರಾಜ್ಯಕ್ಕೆ 6ನೇ ರ್ಯಾಂಕ್
ಕುoದಾಪುರ(ಜೂ,12): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಪ್ರತೀಕ್ ಎನ್. ಶೆಟ್ಟಿ ಇವನು ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ 616 ಅಂಕ ಗಳಿಸಿದ್ದು ಮರುಮೌಲ್ಯಮಾಪನದ ನಂತರ 620 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದಿರುತ್ತಾನೆ. ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ 4 ಹೆಚ್ಚುವರಿ ಅಂಕ ಗಳಿಸುವುದರೊಂದಿಗೆ ಈ ಸಾಧನೆ ಮಾಡಿರುತ್ತಾನೆ. […]
ಎಂಐಟಿಕೆ ಮೂಡ್ಲಕಟ್ಟೆ : ವಿದ್ಯಾರ್ಥಿ ಚಂದನ್ ಕುಮಾರ್ ರವರ ಸಮಾಜಮುಖಿ ಕಾರ್ಯ ಪ್ರಶಂಸನೀಯ
ಕುಂದಾಪುರ ( ಜೂ,10): ಇಲ್ಲಿನ ಎಂಐಟಿ ಕಾಲೇಜಿನ ಇ ಎಂಡ್ ಸಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಚಂದನ್ ಕುಮಾರ್ ಸಿ.ಎನ್ ಓರ್ವ ಸಮಾಜಮುಖಿ ವಿದ್ಯಾರ್ಥಿಯಾಗಿದ್ದು ವಿದ್ಯಾರ್ಥಿ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದಾರೆ. ಕಲಿಕೆಯಲ್ಲಿ ಉಪನ್ಯಾಸಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿರುವ ಇವರ ಸಾಮಾಜಿಕ ಕಳಕಳಿ ಪ್ರಶಂಸನೀಯ. ಅವರು ಬಿಡುವಿನ ಸಮಯದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಫಲಾಪೇಕ್ಷೆಯಿಲ್ಲದೆ ತರಗತಿಗಳನ್ನು ನಡೆಸಿದ್ದರು ಮತ್ತು ಆ ಮಕ್ಕಳಿಗೆ ಉತ್ತಮ ಅಂಕ ಬಂದಿರುತ್ತದೆ. ಹಳ್ಳಿಯ ವಿದ್ಯಾರ್ಥಿಗಳಿಗೆ ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ತಿಳುವಳಿಯ […]
ಗಂಗೊಳ್ಳಿ: ಬಿಲ್ಲವರ ಹಿತರಕ್ಷಣಾ ವೇದಿಕೆಯ ವತಿಯಿಂದ ನೋಟ್ ಪುಸ್ತಕಗಳ ಉಚಿತ ವಿತರಣೆ
ಗಂಗೊಳ್ಳಿ (ಜೂ, 10) : ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಅವರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಯಾವುದೇ ಸಂಸ್ಥೆಗೆ ಘನತೆಯನ್ನು ತಂದು ಕೊಡುತ್ತದೆ. ಪ್ರತಿ ಸಂಘ- ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವನಾಥ ಭಟ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ವತಿಯಿಂದ ನಡೆದ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಬಿಲ್ಲವರ […]
ಕುಂದಾಪುರ: ಸ್ವಾತಂತ್ರ್ಯ ಹೋರಾಟಗಾರ ಸಟ್ವಾಡಿ ಬಿ.ಎಸ್.ಸೂರಪ್ಪ ಶೆಟ್ಟಿ ರವರ ಮನೆಯಲ್ಲಿ ನಾಮ ಫಲಕ ಅನಾವರಣ
ಕುಂದಾಪುರ(ಜೂ.10): ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಟ್ವಾಡಿ ಬಿ.ಎಸ್.ಸೂರಪ್ಪ ಶೆಟ್ಟಿ ಯವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎಂದು ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಸ್ವರಾಜ್ಯ 75 ತಂಡದ 24ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾಯ೯ಕ್ರಮಕ್ಕೆ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದಜೆ೯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ,ಹಸ್ತ ಚಿತ್ರ ಫೌಂಡೇಶನ್ ಕ್ವಾಡಿ,ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಘಟಕ,ಜನಸೇವಾ ಟ್ರಸ್ಟ್ […]
ಸರಸ್ವತಿ ವಿದ್ಯಾಲಯ ಗಂಗೊಳ್ಳಿ : ವಾರ್ಷಿಕ ಸಂಚಿಕೆ “ದೃಷ್ಟಿ ” ಅನಾವರಣ
ಗಂಗೊಳ್ಳಿ(ಜೂ,9): ಬದುಕಿನಲ್ಲಿ ಬರವಣಿಗೆಯಷ್ಟು ಖುಷಿ ಕೊಡುವ ಮತ್ತೊಂದು ದೊರಕದು. ನೋವು ಗಳನ್ನು ನಲಿವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ. ಸೂಕ್ಷ್ಮ ಸಂವೇದನೆಯಲ್ಲಿ ಹುಟ್ಟಿಕೊಂಡ ಬರವಣಿಗೆ ಹೆಚ್ಚು ಪ್ರಬಲವಾಗಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿಯೇ ಬರವಣಿಗೆಯ ಹವ್ಯಾಸಗಳನ್ನು ಬೆಳೆಸಿಕೊಂಡರೆ ಮುಂದೆ ಆ ವಿದ್ಯಾ ಸಂಸ್ಥೆ ನಿಮ್ಮ ಬಗೆಗೆ ಹೆಮ್ಮೆ ಪಡುವಂತಾಗುತ್ತದೆ” ಎಂದು ಖ್ಯಾತ ಕತೆಗಾರರು, ಲಲಿತ ಪ್ರಬಂಧ ಬರಹಗಾರರು ಆಗಿರುವ ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು […]
ಚಿತ್ತೂರು: ಜೂನ್ 23 ರಂದು ನೈಕಂಬ್ಳಿ ಮಹಾಲಿಂಗೇಶ್ವರ ದೇವಸ್ಥಾನದ ವರ್ದಂತಿ ಉತ್ಸವ
ಚಿತ್ತೂರು(ಜೂ,9):ಗ್ರಾಮದ ನೈಕಂಬ್ಳಿ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ವರ್ದಂತಿ ಉತ್ಸವ ಇದೇ ಜೂನ್ 23 ರಂದು ನೆಡೆಯಲಿದೆ. ಆ ದಿನ ಬೆಳಿಗ್ಗೆ 9 ಗಂಟೆಗೆ ಧಾರ್ಮಿಕ ಪೂಜಾ ವಿಧಿವಿಧಾನಗಳು ನೆಡಯಲಿದ್ದು 12 ಘಂಟೆಗೆ ಶ್ರೀಮತಿ ಸುಧಾರಾಜಗೋಪಾಲ್ ಭಟ್ ಮತ್ತು ಬಳಗದವರಿಂದ ಭಕ್ತಿ ಸುಧೆ ಕಾರ್ಯಕ್ರಮ ನೆಡೆಯಲಿದೆ. ಮದ್ಯಾಹ್ನ ಮಹಾಪೂಜೆ ನಂತರ ಅನ್ನಸಂತರ್ಪಣೆ ನೆಡೆಯಲಿದ್ದು ಸಂಜೆ 7 ಘಂಟೆಗೆ ರಂಗಪೂಜೆ ಹಾಗೂ ರಾತ್ರಿ 8 ರಿಂದ ಸ್ಥಳೀಯ ಪ್ರೇರಣಾ ಯುವ ವೇದಿಕೆ ವತಿಯಿಂದ […]
ಕಸವನ್ನು ಮರುಬಳಕೆ ಮಾಡುವುದರ ಮೂಲಕ ಪರಿಸರ ಸಂರಕ್ಷಣೆ ಸಾಧ್ಯ : ರೊ. ಚಂದ್ರಶೇಖರ್ ಸಾಲಿಯಾನ್
ಶಿರ್ವ(ಜೂ,06): ಕಸವನ್ನು ಮರುಬಳಕೆ ಮಾಡುವುದರ ಮೂಲಕ ಪರಿಸರ ಸಂರಕ್ಷಣೆ ಸಾಧ್ಯ ಎಂದು ಇನ್ನಂಜೆ ಗ್ರಾಮ ಪಂಚಾಯತು ಕಾರ್ಯದರ್ಶಿ ರೊ. ಚಂದ್ರಶೇಖರ್ ಸಾಲಿಯಾನ್ ನುಡಿದರು. ಅವರು ಶಿರ್ವ ಸಂತ ಮೇರಿ ಕಾಲೇಜಿನ ಯುವ ರೆಡ್ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ & ರೇಂಜರ್ಸ್ ಘಟಕ ಹಾಗೂ ರೋಟರಿ ಕ್ಲಬ್ ಶಿರ್ವ ಇದರ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ ಮಳೆ ನೀರು ಕೊಯ್ಲು ಅರಿವು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ […]
ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಸನ್ಮಾನ
ಕುಂದಾಪುರ( ಜೂನ್ 05): ಮಂಗಳೂರು ವಿಶ್ವವಿದ್ಯಾನಿಲಯದ ಎಸ್. ವಿ. ಪಿ.ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ಅಭಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪುರಸ್ಕೃತರಾದ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ಜೂನ್ 3 ರಂದು ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದ ರಕ್ಷಕ- ಶಿಕ್ಷಕ ಸಂಘದ ಮಹಾಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀ ವಿನ್ಸೆಂಟ್ ಡಿ ಸೋಜಾ ಸನ್ಮಾನಿಸಿ […]










