ಕುಂದಾಪುರ (ಮೇ ,22): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ & ವಿ. ಕೆ. ಆರ್ ಆಂಗ್ಲ ಮಾಧ್ಯಮ ಶಾಲೆಗಳು ತೀರಾ ವಿಭಿನ್ನ, ವಿಶಿಷ್ಟ ರೀತಿಯಲ್ಲಿ ಶಿಸ್ತುಬದ್ಧವಾಗಿ ಸಮ್ಮರ್ ಕ್ಯಾಂಪ್ ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರ ಹರ್ಷೋದ್ಗಾರ, ಅಭಿಮಾನ ಮತ್ತು ಅಭಿನಂದನೆಯೊಂದಿಗೆ 10 ದಿನಗಳ “ಪ್ಯಾಟಿ ಮಕ್ಕಳ್ ಹಳ್ಳಿ ಟೂರ್” ಸಮ್ಮರ್ ಕ್ಯಾಂಪ್ ಸಂಪನ್ನಗೊಂಡಿತು. ಬೇಸಿಗೆ ಶಿಬಿರಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮಾತ್ರವಲ್ಲ ಮನೋವಿಕಸನ ಕೂಡ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಐ ಎಮ್ ಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ ಮೂಡ್ಲಕಟ್ಟೆ: ಮಂಗಳೂರು ವಿ.ವಿ ಥ್ರೋಬಾಲ್ ಪಂದ್ಯಾವಳಿ- ಆಳ್ವಾಸ್ ಮೂಡುಬಿದಿರೆ ಚಾಂಪಿಯನ್
ಮೂಡ್ಲಕಟ್ಟೆ (ಮೇ,21): ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ ಮೂಡ್ಲಕಟ್ಟೆ ಕುಂದಾಪುರ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳೆಯರಿಗಾಗಿ ನಡೆದ ಅಂತರ ವಲಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಮೂಡುಬಿದಿರೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು 2-0 ನೇರ ಸೆಟ್ಗಳಿಂದ ಸೋಲಿಸಿ ಆಳ್ವಾಸ್ ಚಾಂಪಿಯನ್ ಪಟ್ಟ ಅಲಂಕರಿಸಿತು . ಈ ಅಂತರ ವಲಯ ಪಂದ್ಯಾವಳಿಗೂ ಮುನ್ನ ಇದೇ […]
ಕ್ರಿಯೇಟಿವ್ ಪಿ.ಯು ಕಾಲೇಜು ಕಾರ್ಕಳ: ಸಿ.ಎಮ್.ಐ ಅರ್ಹತಾ ಪರೀಕ್ಷೆಯಲ್ಲಿ ಉತ್ಕ್ರಷ್ಟ ಸಾಧನೆ – 11 ವಿದ್ಯಾರ್ಥಿಗಳು ಆಯ್ಕೆ
ಕಾರ್ಕಳ(ಮೇ,17): ಕಂಪೆನಿ ಸೆಕ್ರೇಟರಿ ಆಫ್ ಇಂಡಿಯಾ ಇದರ ಮೊದಲ ಹಂತದ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪಿ.ಯು ಕಾಲೇಜಿನ 14 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇನಸ್ಟಿಟ್ಯೂಟ್ ಆಫ್ ಕಂಪೆನಿ ಸಕ್ರೇಟರಿ ಆಫ್ ಇಂಡಿಯಾ ಇದೇ ಮೇ 6 ರಂದು ನಡೆಸಿದ ಸಿ.ಎಸ್.ಇ.ಇ.ಟಿ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ಆರ್ಯ ಅಶೋಕ್, ಅನಘ, ಅನಿರುದ್ಧ್, ಧ್ರುವ ಕೆ.ಜಿ, ಅವನೀಶ್ ದೇವಾಡಿಗ, ಓಂಕಾರ್ ಪ್ರಕಾಶ್ ಹೆಗಡೆಯಾಲ್, ಧೃತಿ ಡಿ. […]
ಗುಳ್ಳಾಡಿಯ ಶ್ರೀ ಚಿತ್ತೇರಿ ಬ್ರಹ್ಮಲಿಂಗೇಶ್ವರ ದೈವಸ್ಥಾನ- ಒಂದು ಅಧ್ಯಯನ
ತುಳುನಾಡ ಸಿರಿ ಯ ಬದುಕಿನ ಪೂರ್ವಾರ್ಧ ಭಾಗವೆಲ್ಲಾ ನಡೆದಿರುವುದು ಕರಾವಳಿಯ ಕುಂದಾಪುರದ ಪರಿಸರದಲ್ಲೇ. ಕುಲದೈವ ಬ್ರಹ್ಮರ ವರಪ್ರಸಾದದಿಂದ ಸಿರಿಯ ಜನನವಾಯಿತೆಂಬ ಮಾಹಿತಿ ನಮಗೆ ತಿಳಿದುಬರುತ್ತದೆ. ಹೊದೆದ ಬಟ್ಟೆಯಲ್ಲಿ ಬಿರ್ಮಾಳ್ವರಿಗೆ ನೀಡಿದ ಪ್ರಸಾದವು ಹಿಂಗಾರದ ಹಾಳೆ ( ಪಿಂಗಾರದ ಹೂವಿನ ಗೊಂಚಲು ) ಮತ್ತು ಗಂಧದ ಗುಳಿಗೆ, ಈ ಪ್ರಸಾದದಲ್ಲಿ ಬಿರ್ಮಾಳ್ವರಿಗೆ ಹೆಣ್ಣು ಮಗುವೊಂದು ಜನಿಸುತ್ತದೆ. ಈ ಹೆಣ್ಣು ಮಗುವಿಗೆ ಸಿರಿ, ಅಕ್ಕೆರಸು ಸಿರಿ, ಸತ್ಯನಾಪುರದ ಸಿರಿ, ಸತ್ಯಮಾಲೋಕದ ಸಿರಿ, ಸತ್ಯದ […]
ಮೂಡ್ಲಕಟ್ಟೆ ಐ.ಎಂ.ಜೆ. ಕಾಲೇಜಿನಲ್ಲಿ ಮೇ 17-18 ರಂದು ಮಂಗಳೂರು ವಿ.ವಿ. ಮಟ್ಟದ ತ್ರೋ ಬಾಲ್ ಪಂದ್ಯಾಟ
ಕುಂದಾಪುರ(ಮೇ16): ಮೂಡ್ಲಕಟ್ಟೆಯ ಐ.ಎಂ.ಜೆ ವಿದ್ಯಾ ಸಂಸ್ಥೆಯ ಅಂಗಸಂಸ್ಥೆಯಾದ ಐ.ಎಂ.ಜೆ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾ ಸಂಸ್ಥೆ ಯ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳೆಯರ ತ್ರೋ ಬಾಲ್ ಪಂದ್ಯಾಟ ಇದೇ ಮೇ 17 ರಿಂದ 18ರ ತನಕ ನಡೆಯಲಿದೆ. ಉಡುಪಿ ಜೋನ್ ಮಟ್ಟದ ಪಂದ್ಯಗಳನ್ನು ಆಯೋಜಿಸುವುದರೊಂದಿಗೆ ಅದರ ಮುಂದಿನ ಹಂತವಾಗಿ ಉಡುಪಿ-ಮಂಗಳೂರಿನ ಅಂತರ್ ಜೋನ್ ಪಂದ್ಯಗಳನ್ನು ಸಂಸ್ಥೆ ನಡೆಸಿಕೊಡಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರತಿಭಾ ಎಂ.ಪಟೇಲ್ ಹಾಗೂ […]
ಶಂಕರನಾರಾಯಣ : ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ
ಶಂಕರನಾರಾಯಣ( ಮೇ,16): ಸರಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ ಪ್ರೌಢ ಶಾಲಾ ವಿಭಾಗದ 1990ನೇ ಸಾಲಿನ ಎಸ್ .ಎಸ್ .ಎಲ್. ಸಿ .ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಗುರುವಂದನೆ ಕಾರ್ಯಕ್ರಮವು ಕಾಲೇಜಿನ ಶ್ರೀ ಸುಬ್ರಹ್ಮಣ್ಯ ಜೋಯಿಷ ಸುವರ್ಣ ಸಭಾಂಗಣದಲ್ಲಿ ಇತ್ತೀಚೆಗೆ ನೆರವೇರಿತು. ಸುಮಾರು 45ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ತಮ್ಮ ಕುಟುಂಬ ಸಮೇತ ಈ ಪುನರ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಅಂದಿನ ಪ್ರೌಢಶಾಲಾ ಶಿಕ್ಷಕರಾದ ಶ್ರೀ ಗೋಪಾಲ್ ಶೆಟ್ಟಿಗಾರ್ , […]
ಡಾ. ಬಿ. ಬಿ.ಹೆಗ್ಡೆ ಕಾಲೇಜು: ಮಂಗಳೂರು ವಿ.ವಿ ಅಂತರ್ ಕಾಲೇಜು ಮಟ್ಟದ ಚೆಸ್ ಟೂರ್ನಿಯಲ್ಲಿ ದ್ವಿತೀಯ ಸ್ಥಾನ
ಮಂಗಳೂರು (ಮೇ,16): ಇಲ್ಲಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಚೆಸ್ ಟೂರ್ನಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಡಾ. ಬಿ. ಬಿ.ಹೆಗ್ಡೆ ಕಾಲೇಜು ದ್ವಿತೀಯ ಸ್ಥಾನ ಹಾಗೂ ಪುರುಷರ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದೆ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಬಿ.ಎo.ಸುಕುಮಾರ ಶೆಟ್ಟಿ, ಪ್ರಾಂಶುಪಾಲರಾದ ಪ್ರೋ.ಕೆ .ಉಮೇಶ್ ಶೆಟ್ಟಿ , ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೊವಾಡಿ , ಉಪನ್ಯಾಸಕ ವೃಂದ ವಿಜೇತರಿಗೆ ಹಾಗೂ ತರಬೇತಿ ನೀಡಿದ […]
ಡಾ. ಬಿ.ಬಿ. ಹೆಗ್ಡೆ ಕಾಲೇಜು – “ಫುಡ್ ಆರ್ಟ್” – ಆಹಾರ ಮೇಳ
ಕುಂದಾಪುರ (ಮೇ,14): ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಫುಡ್ ಆರ್ಟ್- ಆಹಾರ ಮೇಳ ಇತ್ತೀಚೆಗೆ ಜರಗಿತು.ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ತೀರ್ಪುಗಾರರಾಗಿ ಆಗಮಿಸಿದ ವಿ.ಕೆ.ಆರ್. ಮತ್ತು ಎಚ್. ಎಮ್.ಎಮ್. ಶಾಲೆಯ ಶೈಕ್ಷಣಿಕ ಸಲಹೆಗಾರರಾದ ಶ್ರೀಮತಿ ಭಾರತಿ ನಾಯ್ಕ್ ಕಾರ್ಯಕ್ರಮವನ್ನು ಉದ್ದೇಶಿಸಿ ನೈಸರ್ಗಿಕ ಆಹಾರದ ಮಹತ್ವ ಹಾಗೂ ಅದರ ಉಪಯೋಗದಲ್ಲಿ ಆಹಾರದ ತಯಾರಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಸವಿವರವಾಗಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು:ಹೂಡಿಕೆದಾರರ ಅರಿವು ಕಾರ್ಯಾಗಾರ
ಕುಂದಾಪುರ, (ಮೇ 13): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕಾಮರ್ಸ್ ಟೀಚರ್ಸ್ ಅಸೋಸಿಯೇಶನ್ ವತಿಯಿಂದ ಅಂತಿಮ ವರ್ಷದ ಬಿ.ಕಾಂ ಮತ್ತು ಬಿ.ಬಿ.ಎ. ವಿದ್ಯಾರ್ಥಿಗಳಿಗೆ ಹೂಡಿಕೆದಾರರ ಅರಿವು ಕಾರ್ಯಾಗಾರವನ್ನು ನಡೆಸಲಾಯಿತು. ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಶ್ರೀ ಹುಂತ್ರಿಕೆ ಸುಧಾಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಶ್ರೀ […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಕೈಗಾರಿಕಾ ಮತ್ತು ತಂತ್ರಜ್ಞಾನ ವಿಭಾಗದ ಭೇಟಿ
ಕುಂದಾಪುರ : (ಮೇ 15): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ರ್ಜೆ ಕಾಲೇಜಿನ ವಿಜ್ಞಾನ ಮತ್ತು ಗಣಕ ವಿಜ್ಞಾನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಮತ್ತು ತಂತ್ರಜ್ಞಾನ ವಿಭಾಗದ ಭೇಟಿ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಮಂಗಳೂರು ವಿಶ್ವ ವಿದ್ಯಾನಿಲಯದ ಡೇಟಾ ಸೆಂಟರ್ ಹಾಗೂ ಮೈಕ್ರೋಟ್ರೋನ್ ಸೆಂಟರ್ ಗೆ ಭೇಟಿ ನೀಡಿ ಅಲ್ಲಿನ ಕಾರ್ಯವಿಧಾನಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿಯನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಮಂಗಳಗಂಗೋತ್ರಿ ಗ್ರಂಥಾಲಯಕ್ಕೆ ಭೇಟಿ ನೀಡಿದ […]










