ಹೋಟೆಲ್ ಕಾರ್ಮಿಕರೆಂದರೆ ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಹು ಸಂಖ್ಯಾತರಲ್ಲಿ ಪ್ರಮುಖವಾದ ಬಡ ಮತ್ತು ಮಧ್ಯಮ ವರ್ಗದವರ ಒಂದು ಸಮುದಾಯ. ಸಣ್ಣ ಪುಟ್ಟ ಹೋಟೆಲ್ ಕ್ಯಾಂಟೀನ್ ಬೇಕರಿ ಇತ್ಯಾದಿ ವ್ಯಾಪಾರ ಮಾಡಿಕೊಂಡು ತಮ್ಮ ದಿನನಿತ್ಯಕ್ಕೆ ಬೇಕಾಗುವಷ್ಟು ಸಂಪಾದನೆ ಮಾಡಿಕೊಂಡು, ತಮ್ಮ ಸಂಸಾರ ,ತಂದೆ ತಾಯಿಯನ್ನು ಸಾಕಿಕೊಂಡು ಇರುವುದರಲ್ಲಿ ತೃಪ್ತಿಪಟ್ಟುಕೊಂಡು ಅತೀ ಸುಖದಲ್ಲಿ ಇಲ್ಲದಿದ್ದರೂ ಸಹ ತಕ್ಕ ಮಟ್ಟಿನ ಸಂತೋಷ ಜೀವನ ಸಾಗಿಸುತ್ತ ಬದುಕಿನ ದಿನ ದುಡುತ್ತಿರುವ ಈ ವರ್ಗ ಇಂದು […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಮಕ್ಕಳಿಗೆ ಚಮಚ ಕೊಡಿ ಸಾಕು… ಚಿನ್ನದ ಚಮಚ ಬೇಡ
ಅಂದು ಗೋಪಾಲರಾಯರ ಪಾಲಿಗೆ ವಿಶೇಷ ದಿನವಾಗಿತ್ತು. ಅಂದು ಅವರಿಗೆ 72 ವರ್ಷವಾಗಿತ್ತು. ಬ್ಯಾಂಕಿಗೆ ಓಡೋಡಿ ಹೋಗಿದ್ದರು. ಅಂದು ಅವರ 25 ವರ್ಷದ ಕನಸು ನನಸಾಗುವುದರಲ್ಲಿತ್ತು. ಆ ದಿನಕ್ಕಾಗಿಯೇ ಅವರು 25 ವರ್ಷ ಕಾದಿದ್ದರು. ಸರಕಾರಿ ಶಾಲೆಯೊಂದರಲ್ಲಿ ಅಧ್ಯಾಪಕನಾಗಿ, ನಿವೃತ್ತಿಯ ನಂತರ ಸಮೀಪದ ದೇವಸ್ಥಾನದಲ್ಲಿ ಮೇಲ್ವಿಚಾರಕನಾಗಿ ತಾನು ಸಂಪಾದಿಸಿದ ಹಣದಲ್ಲಿ ಪ್ರತಿ ತಿಂಗಳು ಒಟ್ಟು 25 ವರ್ಷ ಅಂದರೆ 300 ತಿಂಗಳು 4000 ರೂ. ಜಮೆ ಮಾಡಲು ಅದೆಷ್ಟೊ ಕಷ್ಟ ಪಟ್ಟಿದ್ದರು. […]
ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯ : ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ
ಉಡುಪಿ (ಮೇ. 12): ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ IEEE ವಿದ್ಯಾರ್ಥಿ ಶಾಖೆಯ ಆಶ್ರಯದಲ್ಲಿ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಗಮನ ಸೆಳೆದ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಆರ್ಥಿಕವಾಗಿ ಪ್ರಾಯೋಜಿಸಲ್ಪಟ್ಟ ವಿವಿಧ ಪ್ರಾಜೆಕ್ಟ್ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಶಾಖೆಯ ಅಧ್ಯಕ್ಷರಾದ ಶ್ರೀ ಅಶುತೋಷ್ ಕುಮಾರ್ ಕಾರ್ಯಕ್ರಮವನ್ನು ಸಂಯೋಜಿಸಿ […]
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸಂಸದ ಬಿ. ವೈ. ರಾಘವೇಂದ್ರ ಭೇಟಿ
ಕೊಲ್ಲೂರು (ಮೇ, 10) : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸಂಸದ ಬಿ. ವೈ. ರಾಘವೇಂದ್ರ ಮತ್ತು ಅವರ ಧರ್ಮಪತ್ನಿ ತೇಜಸ್ವಿನಿ ರಾಘವೇಂದ್ರ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ, ಮತ್ತು ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ಇಡೀ ದೇಶಕ್ಕೆ ಆವರಿಸಿಕೊಂಡಿರುವ ಮಹಾಮಾರಿ ಕೊರೊನಾ ನಿವಾರಣೆಗಾಗಿ ಸಂಸದರು ಮೂಕಾಂಬಿಕೆಗೆ ವಿಶೇಷ ಪೂಜೆ […]
ಅಕ್ಕ ಎರಡು ಸೇರು ಅಕ್ಕಿ ಇದ್ರೆ ಕೊಡಿ ಅಕ್ಕ……
ನಾನು ಬೆಂಗಳೂರಿನಿಂದ ಬಂದು ಸುಮಾರು ಹತ್ತು ದಿನ ಆಗಿದೆ. ಮನೆಯ ಮಹಡಿ ಮೇಲಿನ ಒಂದು ಕೋಣೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದೇನೆ. (Covid ಇಲ್ಲ ಆದರೂ ನಮ್ಮ ಜಾಗ್ರತೆ ). ಮನೆಯ ಗೇಟ್ ಹತ್ತಿರ ಒರ್ವ ಮಹಿಳೆಯ ಕೂಗು ಕೇಳಿಸಿತು. ನಮ್ಮ ಮನೆಯ ಎರಡು ನಾಯಿ ಬೌ ಬೌ ಎಂದು ಕೂಗುತ್ತಾ ಆಕೆಯ ಮೇಲೆ ದಾಳಿ ಮಾಡಲು ಮುಂದಾದವು. ನಾನು ಜೋರಾಗಿ ನಾಯಿಗಳನ್ನು ವಾಪಸು ಕರೆದೆ… ಅವು ಸುಮ್ಮನಾದವು.. ಆ ತಾಯಿಯ […]
ಮರಳಿ ಬಂತು ಲಾಕಡೌನ್
ಕರೋನ ಎನ್ನುವ ಮಹಾಮಾರಿ ಕಾಯಿಲೆ ಬಂದು ಸರಿಸುಮಾರು ಎರೆಡುವರೆ ವರ್ಷಗಳೆ ಕಳೆದಿದೆ.ಆದರೆ ಅದರ ವಿರುದ್ದ ಹೋರಾಟ ಮಾಡಿ ಜಯಗಳಿಸಲು ನಮಗೆ ಸಾಧ್ಯವಾದಿರುವುದು ವಿಪರ್ಯಾಸವೇ ಸರಿ.ಅದಕ್ಕೆ ಕಾರಣಗಳು ಹಲವು … ಜನತೆಯ ನಿರ್ಲಕ್ಷ್ಯ, ಸರ್ಕಾರದ ಅವೈಜ್ಞಾನಿಕ ಕಠಿಣ ನಿರ್ಧಾರ ಗಳು ಇತ್ಯಾದಿ.ಕರೋನ ನಿಯಂತ್ರಿಸುವಲ್ಲಿ ಸರ್ಕಾರ ಮೊದಲ ಅಲೆಯಲ್ಲ ಎಡವಿದೆ ಎನ್ನುವುದರಲ್ಲಿ ಎರೆಡು ಮಾತಿಲ್ಲ .! ಎರೆಡನೆ ಅಲೆ ಬರುವ ಮುನ್ನ ಬೇಕಾದಷ್ಟು ಸಮಯಾವಕಾಶ ಇದ್ದರೂ ಅದನ್ನು ಸದುಪಯೋಗ ಮಾಡಿಕೊಳ್ಳದೆ ಹಲವಾರು ಸಾವು […]
ತಾಯಿ ಎಂಬ ಮುಗಿಲು (ವಿಶ್ವ ತಾಯಂದಿರ ದಿನದ ಈ ಸಂದರ್ಭದಲ್ಲಿ)
ತಾಯೇ ನಿನದು ಪೊರೆವ ಮಡಿಲುಹಿತದಿ ಒರಗಿಕೊಳ್ಳುವೆಪ್ರೀತಿ ಮಳೆಯ ಹನಿಸೋ ಮುಗಿಲುತಂಪನುಣುತ ತಣಿಯುವೆ ಕೊನೆಯಿರದ ವಾತ್ಸಲ್ಯ ಕಡಲುಪ್ರತೀ ಹನಿಯದು ಅಮೃತನಿನ್ನ ಪ್ರೇಮದ ಜೀವಜಲವನೆಸವಿದು ಬದುಕುವೆನವಿರತ ಬೆಚ್ಚನೆ ಭಾವ ನೀ ಜೊತೆಗಿರಲುನಿನ್ನ ಸನಿಹವು ಅದ್ಭುತಅರಿವ ತೆರೆಯುತ ಪ್ರತೀ ಕ್ಷಣದಲುಬೆರಗಿನೊಳಿಡುವೆ ಸಂತತ ನೋವಿನಲ್ಲೂ ನಗುವ ಧರಿಸಿಹರುಷ ಹಂಚಿ ಉಣಿಸುವೆಕೋಪ ತಾಪ ಎರಗಿ ಬರಲಿಮಮತೆಯಲ್ಲೇ ಮಣಿಸುವೆ ನಿನ್ನ ರಕ್ಷೆಯು ಎದುರು ನಿಲಲುಜಗಕೆ ಜಗವೇ ಮೌನವುಕಾಡದೆಂದಿಗೂ ಭಯ – ದಿಗಿಲುನಿನ್ನ ಜೊತೆಯಿರೆ ಸೌಖ್ಯವು ನೀನೊಂದು ಮುಗಿಯದ ಕವಿತೆನನ್ನೆದೆಯೊಳಗಿನ […]
ಕುಂದಾಪುರ ಸಿಟಿ ಪ್ರವೇಶಿಸಲು ಸಮರ್ಪಕ ರಸ್ತೆ ಮಾರ್ಗಸೂಚಿ ಫಲಕ ಇಲ್ಲ – ಫ್ಲೈ ಓವರ್ ಎರಿದರೆ ಗೋಳು
ಕುಂದಾಪುರ (ಮೇ, 8) : ಕುಂದಾಪುರ ಭಾಗದ ಜನತೆಯ ದಶಕಗಳ ಕನಸಾಗಿದ್ದ ಫ್ಲೈ ಓವರ್ ನಲ್ಲಿ ಹಲವು ದಿನಗಳಿಂದ ವಾಹನಗಳು ಓಡಾಟ ಪ್ರಾರಂಭಿಸಿದೆ.ಆದರೆ ಕುಂದಾಪುರ ಸಿಟಿಯನ್ನು ನೀವು ಪ್ರವೇಶಿಸಬೇಕಾದರೆ ಮೊದಲೇ ಜಾಗ್ರತೆ ವಹಿಸಬೇಕಾಗುತ್ತದೆ.ಕುಂದಾಪುರ ಸಿಟಿ ಪ್ರವೇಶಿಸಬೇಕಾದರೆ ಉಡುಪಿ ಕಡೆಯಿಂದ ಬರುವವರು ಹಂಗಳೂರಿನಲ್ಲಿಯೇ ಅಂದರೆ ದುರ್ಗಾಂಬಾ ಆಫೀಸ್ ಪಕ್ಕದ ಸರ್ವಿಸ್ ರಸ್ತೆಯನ್ನೇ ಹಿಡಿಯಬೇಕಾಗುತ್ತದೆ. ಏಕೆಂದರೆ ಹಂಗಳೂರಿನಲ್ಲಿ ಪ್ರಾರಂಭವಾಗುವ ಫ್ಲೈಓವರ್ ರಸ್ತೆಯನ್ನು ನೀವು ಏರಿದರೆ ಮತ್ತೆ ಇಳಿಯುವುದು ಕುಂದಾಪುರದ ಸಂತೆ ಮಾರುಕಟ್ಟೆ ಬಳಿ. […]
ಭಾರತವನ್ನು ಇಂದು ಕೊರೊನಾ ಮಾತ್ರ ಕೊಲ್ಲುತ್ತಿಲ್ಲ, ಇಂದು ಭ್ರಷ್ಟರೂ ಭಾರತವನ್ನು ಕೊಲ್ಲುತ್ತಿದ್ದಾರೆ!!!
ಇಡೀ ಜಗತ್ತಿಗೆ ಮಾನವೀಯತೆಯ ಪಾಠ ಮಾಡಿದ ನಾವು ….ಈಗ ಮಾಡುತ್ತಿರುವುದಾದರು ಏನು? ಕರೋನಾ ಸಂಕಷ್ಟ ದ ಪರಿಸ್ಥಿತಿಯ ಈ ಸಂಧರ್ಬದಲ್ಲಿನ ಮಾನವೀಯತೆ ಮತ್ತು ಪ್ರಾಮಾಣಿಕತೆಯ ಕುರಿತಾದ ಅವಲೋಕನ –🔶ವೈದ್ಯರು ವಿಟಮಿನ್ ‘ಸಿ’ ಹೆಚ್ಚು ಸೇವಿಸಲು ಸಲಹೆ ನೀಡಿದಾಗ, ನಿಂಬೆಹಣ್ಣನ್ನು ಕೆ.ಜಿ.ಗೆ 50 ರೂ. ಬದಲು 150 ರೂ.ಗೆ ಮಾರಾಟ ಮಾಡುವವರು. ನಾವೇ🙄 🔶700-800 ರೂ. ದರದ ಆಕ್ಸಿಮೀಟರ್ ಗಳನ್ನ 3,000 ರೂ.ಗೂ ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿರುವುದು. ಇದು ನಾವೇ! […]
ಜೆ.ಸಿ.ಐ. ಕುಂದಾಪುರ ಸಿಟಿ ವತಿಯಿಂದ 10 ನೇ ದಿನದ ಸಹಾಯ ಹಸ್ತ
ಕುಂದಾಪುರ (ಮೇ, 7): ಕಳೆದ ಹತ್ತು ದಿನದಿಂದ ಜೆ.ಸಿ.ಐ. ಕುಂದಾಪುರ ಸಿಟಿ ವತಿಯಿಂದ ಕುಂದಾಪುರದ ಹಲವು ಕಡೆಯಲ್ಲಿ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಹಸಿದವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ ನಡೆಯುವ ಈ ಸೇವಾ ಕಾರ್ಯದಲ್ಲಿ ಜೆಸಿಐ ಕುಂದಾಪುರ ಸಿಟಿ ಯ ಅಧ್ಯಕ್ಷ ವಿಜಯ್ ಭಂಡಾರಿ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ವಲಯಾಧಿಕಾರಿ ಪ್ರಶಾಂತ್ ಹವಾಲ್ದಾರ್, ಪೂರ್ವ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ ಹಾಗೂ ಜೆ.ಸಿ.ಐ. ಕುಂದಾಪುರ […]










