ಕುಂದಾಪುರ (ಜೂನ್ 21): ಯೋಗ ಮನುಷ್ಯನ ಶರೀರ ಮತ್ತು ಮನಸ್ಸನ್ನು ಸಮತೋಲನದಲ್ಲಿರಿಸಲು ಸಹಕಾರಿಯಾಗುತ್ತದೆ. ಯೋಗವನ್ನು ಪ್ರಾಣಯಾಮ, ದೈಹಿಕ ಕಸರತ್ತು ಎನ್ನುವ ಸೀಮಿತ ಅರ್ಥದಲ್ಲಿ ಗ್ರಹಿಸದೆ, ಅದು ಬದುಕಿನ ಸರ್ವಾಂಗೀಣ ವಿಕಸನಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ತಿಳಿಯಬೇಕು. ಯೋಗ ಆತ್ಮ ದರ್ಶನಕ್ಕೆ ಹೊರತು ಪ್ರದರ್ಶನಕ್ಕೆ ಅಲ್ಲ ಎಂದು ನಿವೃತ್ತ ಶಿಕ್ಷಕ, ಯೋಗ ತರಬೇತುದಾರ ಶ್ರೀ ಕರುಣಾಕರ ಶೆಟ್ಟಿ ಕಟ್ಕೇರಿ ಹೇಳಿದರು. ಅವರು ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಕುಂದಾಪುರ: ಆರ್.ಎನ್.ಶೆಟ್ಟಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಂದ ಕೋಡಿ ಸೀ ವಾಕ್ ನಲ್ಲಿ ಯೋಗ ಪ್ರದರ್ಶನ
ಕುಂದಾಪುರ(ಜು.23):ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಕೋಡಿ ಸಮುದ್ರ ತೀರದ ಸೀ ವಾಕ್ ನಲ್ಲಿ ಯೋಗ ಪ್ರದರ್ಶನ ನಡೆಯಿತು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಈ ಯೋಗ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ಯುವ ಬಂಟರ ಸಂಘದಿಂದ ಗ್ರಹ ಚೇತನಕ್ಕೆ ಆರ್ಥಿಕ ನೆರವು
ಕುಂದಾಪುರ (ಜೂ,15): ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗ್ರಹ ಚೇತನ ಯೋಜನೆಯಡಿಯಲ್ಲಿ ಯಡಾಡಿ ಮತ್ಯಾಡಿ ಗ್ರಾಮದ ಕ್ಯಾಸನಮಕ್ಕಿ ಸಂಜೀವ ಎನ್ನುವವರ ಮನೆಗೆ ದುಷ್ಕರ್ಮಿ ರಾತ್ರಿ ಬೆಂಕಿ ಹಚ್ಚಿದ ಕಾರಣದಿಂದ ಸುಟ್ಟು ಕರಕಲಾದ ಕುಟುಂಬಕ್ಕೆ ತುರ್ತು ಪರಿಹಾರವಾಗಿ ಸಂಘದ ಮಹಾಪೋಷಕರಾದ ಶ್ರೀ ಅರುಣ್ ಕುಮಾರ್ ಹೆಗ್ಡೆ ಅವರ ಶಿಫಾರಸ್ಸಿನ ಮೇರೆಗೆ ಅವರ ಉಪಸ್ಥಿತಿಯಲ್ಲಿ ಆರ್ಥಿಕ ನೆರವಿನ ಚೆಕ್ ನ್ನು ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಫಲಾನುಭವಿಗೆ ಹಸ್ತಾಂತರಿಸಿದರು. […]
ಕುಂದಾಪುರದ ಎಚ್. ಎಮ್. ಎಮ್ ಶಾಲೆಯಲ್ಲಿ ಟೀಚರ್ ಟ್ರೈನಿಂಗ್ ವಿಭಾಗ ಆರಂಭ
ಕುಂದಾಪುರ (ಜು .22) : ಇಲ್ಲಿನ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಟೀಚರ್ ಎಜ್ಯುಕೇಶನ್ ವಿಭಾಗವನ್ನು ಆರಂಭಿಸಲಾಗಿದೆ. ಒಂದು ವರ್ಷದ ಅವಧಿಯ ಪ್ರೈಮರಿ ಟೀಚರ್ ಟ್ರೈನಿಂಗ್, ಮೊಂಟೆಸ್ಸರಿ / ನರ್ಸರಿ ಟೀಚರ್ ಟ್ರೈನಿಂಗ್, ಅರ್ಲಿ ಚೈಲ್ಡ್ ಹುಡ್ ಎಜ್ಯುಕೇಶನ್, ಕಮ್ಯುನಿಕೇಶನ್ ಸ್ಕಿಲ್ಸ್ ಅಂಡ್ ಇಂಗ್ಲಿಷ್ ಸ್ಪೀಕಿಂಗ್ ಹಾಗೂ ಕೌನ್ಸ್ ಲಿಂಗ್ & ಗೈಡೆನ್ಸ್ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳು ಲಭ್ಯವಿದೆ. ಬಿಎಸ್ಎಸ್ ವೃತ್ತಿಪರ ಶಿಕ್ಷಣ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸ್ […]
ಸರಕಾರಿ ಪಿ ಯು ಕಾಲೇಜು ಹೊಸಂಗಡಿ: ನಮ್ಮ ”ಸೇನೆ ನಮ್ಮ ಹೆಮ್ಮೆ” ಕಾರ್ಯಕ್ರಮ
ಹೊಸಂಗಡಿ:(ಜು.19): ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಮ್ಮ “ಸೇನೆ ನಮ್ಮ ಹೆಮ್ಮೆ” ಇತ್ತೀಚೆಗೆ ಕಾರ್ಯಕ್ರಮ ನಡೆಯಿತು. ನಿ, ಸೇನೆಯಲ್ಲಿ 17 ವರ್ಷಗಳ ಕಾಲ ಸುಧೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ನಂತರ ಕರ್ನಾಟಕ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶ್ರೀ ಸುರೇಶ್ ರಾವ್ ರವರು ಮುಖ್ಯ ಭಾಷಣಕಾರರಾಗಿ ಆಗಮಿಸಿ ಸೇನೆ ಮತ್ತು ಸೇನೆ ನೇಮಕಾತಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಭಾರತದ ಸೈನಿಕರು ತಮ್ಮ ಪ್ರಾಣದ ಹಂಗನ್ನು ಚಳಿ ಮಳೆ […]
ಅಂತರ್ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟ: ಡಾIಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಚಾಂಪಿಯನ್
ಉಡುಪಿ (ಜು,18): ಬಾರ್ಕೂರು ಶ್ರೀಮತಿ ರುಕ್ಕಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಮತ್ತು ಕಾಲೇಜಿನ ಉಪನ್ಯಾಸಕ ಸಂಘದ ಆಶ್ರಯದಲ್ಲಿ ಜೂನ್ 16 ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಅಂತರ್ ಕಾಲೇಜು ಮಟ್ಟದ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಕುಂದಾಪುರದ ಪ್ರತಿಷ್ಟಿತ ಡಾಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ತಂಡ ಬ್ರಹ್ಮಾವರದ ಎಸ್ ಎಮ್ ಎಸ್ ಕಾಲೇಜು ತಂಡದ ಎದುರು ಗೆಲುವು ಸಾಧಿಸಿ […]
ಮರವಂತೆ: ವಿವಿಧ ಸಂಘಟನೆಗಳಿಂದ ರಕ್ತದಾನ ಶಿಬಿರ
ಮರವಂತೆ(ಜು,18): ರಕ್ತದಾನಿಗಳ ಬಳಗ ಮರವಂತೆ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ. ), ಉಡುಪಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಜೂನ್ ,16ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರವಂತೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ. )ಉಡುಪಿ ಇದರ ಅಧ್ಯಕ್ಷರಾದ ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಶಿಬಿರ ಉದ್ಘಾಟಿಸಿದರು. ಪ್ರಾಥಮಿಕ ಅರೋಗ್ಯ ಕೇಂದ್ರ ಮರವಂತೆ ಇದರ […]
ವಿಶ್ವ ರಕ್ತದಾನಿಗಳ ದಿನಾಚರಣೆ: ಸತೀಶ್ ಸಾಲಿಯನ್ ಮಣಿಪಾಲರಿಗೆ ಸನ್ಮಾನ
ಮಣಿಪಾಲ (ಜು ,14): ವಿಶ್ವ ರಕ್ತದಾನಿಗಳ ದಿನದಂದು ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಅವರು ರಕ್ತದಾನ ಅಭಿಯಾನದ ಸಮರ್ಪಣಾ ಕಾರ್ಯಕ್ಕಾಗಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ (ರಿ .), ಇದರ ಅಧ್ಯಕ್ಷರಾದ ಸತೀಶ್ ಸಾಲಿಯನ್ ಮಣಿಪಾಲ್ ರವರನ್ನು ಕೆಎಂಸಿ ಮಣಿಪಾಲ ಡೀನ್ ಡಾIಪದ್ಮರಾಜ್ ಹೆಗ್ಡೆ ಯವರು ಗೌರವಿಸಿದರು. ಕುಂದಾಪುರದ ಸಹಾಯಕ ಕಮಿಷನರ್ ಶ್ರೀಮತಿ ರಶ್ಮಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ವೈದ್ಯಕೀಯ ಅಧೀಕ್ಷಕರಾದ ಡಾIಅವಿನಾಶ್ ಶೆಟ್ಟಿ,,ಬ್ಲಡ್ ಸೆಂಟರ್ ಕೆಎಂಸಿ ಮಣಿಪಾಲ […]
ಗಂಗೊಳ್ಳಿ: ರಕ್ತದಾನ ಶಿಬಿರ
ಗಂಗೊಳ್ಳಿ (ಜು,14): ಇಲ್ಲಿನ ಯಕ್ಷಭಿಮಾನಿ ರಕ್ತದಾನಿ ಬಳಗ ಗಂಗೊಳ್ಳಿ, ಮೀನುಗಾರರ ಸಂಘ ರಿ. ಗಂಗೊಳ್ಳಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.), ಉಡುಪಿ ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಿ. ಕುಂದಾಪುರ ಇವರ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಜೂನ್ .11 ರಂದು ವಿಜಯ ವಿಠಲ ಸಭಾಭವನದಲ್ಲಿ ನಡೆಯಿತು. ಶಿಬಿರದಲ್ಲಿ 69 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಕೇೂಟೇಶ್ವರ : ವಕ್ವಾಡಿ ಗುರುಕುಲ ಪದವಿ ಪೂವ೯ಕಾಲೇಜಿನಲ್ಲಿ ಓರಿಯೆಂಟೇಷನ್ ಕಾರ್ಯಕ್ರಮ
ಕೇೂಟೇಶ್ವರ( ಜು,14): ಇಲ್ಲಿನ ವಕ್ವಾಡಿ ಗುರುಕುಲ ಪದವಿ ಪೂವ೯ಕಾಲೇಜಿನಲ್ಲಿ ಹೆುಾಸದಾಗಿ ಪ್ರಥಮ ಪಿಯುಸಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸಂಸ್ಥೆಯ ಜಂಟಿ ಮ್ಯಾನೇಜ್ಮೆಂಟ್ ಟ್ರಸ್ಟಿ ಅನುಪಮ ಎಸ್.ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು.ಸಂಸ್ಥೆಯ ಅಧ್ಯಕ್ಷ ಬಾಂಡ್ಯ ಸುಭಾಷ್ಚಂದ್ರ ಶೆಟ್ಟಿ ಶುಭಾ ಕೇೂರಿದರು.ಪ್ರಧಾನ ಉಪನ್ಯಾಸಕರಾಗಿ ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ; ಅರಿವು ಶೈಕ್ಷಣಿಕ ವಿಭಾಗದ ಮುಖ್ಯ ಕಾರ್ಯ ನಿವ೯ಣಾಧಿಕಾರಿ ಸುಜಿತ್ ,ಕಾಲೇಜು ಪ್ರಾಂಶುಪಾಲ ಅವಿನಾಶ್ ; ಕಛೇರಿ […]










