ಕುಂದಾಪುರ(ಡಿ,18): ಇಲ್ಲಿನ ಡಾ|ಬಿ.ಬಿ.ಹೆಗ್ಡೆ ಕಾಲೇಜಿನ ಉಪನ್ಯಾಸಕರಾದ ಶ್ರೀ ಸುಧಾಕರ್ ಪಾರಂಪಳ್ಳಿಯವರಿಗೆ ಗ್ಲೋಬಲ್ ಮ್ಯಾನೆಜ್ಮೆಂಟ್ ಕೌನ್ಸಿಲ್ ಅಹಮದಾಬಾದ್ ಸಂಸ್ಥೆ ರಾಷ್ಟ್ರ ಮಟ್ಟದ ಆದರ್ಶ ವಿದ್ಯಾ ಸರಸ್ವತಿ ರಾಷ್ಟ್ರೀಯ ಪುರಸ್ಕಾರ- ನ್ಯಾಷನಲ್ ಎಕ್ಸ್ ಲೆನ್ಸ್ ಅವಾರ್ಡ್-2022 ಪ್ರಶಸ್ತಿ ನೀಡಿ ಗೌರವಿಸಿದೆ. ಮಂಗಳೂರು ವಿ.ವಿ.ಅರ್ಥಶಾಸ್ತ್ರ ಸಂಘದ ಕಾರ್ಯದರ್ಶಿಯಾಗಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸಹ ಇವರು ಸೇವೆ ಸಲ್ಲಿಸಿದ್ದಾರೆ.
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಕುಂದಾಪುರದ ಕುವರಿ ದಿವ್ಯಾ ಶೆಟ್ಟಿಯಿಂದ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸಾಧನೆ
ಕುಂದಾಪುರ (ಡಿ,18); ಕುಂದಾಪುರದ ಕುವರಿ ಯೋಗ ಪಟು ದಿವ್ಯಾ ಶೆಟ್ಟಿ ಸತತ 20 ನಿಮಿಷಗಳ ಕಾಲ ಪದ್ಮಾ ಶಿರ್ಶಾಸನವನ್ನು ಯಶಸ್ವಿಯಾಗಿ ಪ್ರದರ್ಶನ ನೀಡಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಸಾಧನೆಗೈದಿದ್ದಾರೆ. ನವೆಂಬರ್ 30 ರಂದು ಬೆಂಗಳೂರಿನಲ್ಲಿ ನಡೆದ GWR-GLOBAL WORLD RECORD ಯೋಗ ಪ್ರದರ್ಶನದಲ್ಲಿ ಭಾಗಿಯಾಗಿ ಈ ಸಾಧನೆಗೈದಿದ್ದಾರೆ. ಇವರು ಕುಂದಾಪುರದ ಡಾIಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಯಾಗಿದ್ದಾರೆ.
ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ
ಕಲ್ಯಾಣಪುರ(ಡಿ.15): ಮಿಲಾಗ್ರಿಸ್ ಕಾಲೇಜಿನ 2022-23ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಟ್ರೈ ಸೆಂಟಿನರಿ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. ಜಿ . ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ ಇದರ ಚೇರ್ಮನ್ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ಹಣೆ ಬರಹಗಳನ್ನು ತಾವೇ ರೂಪಿಸಿಕೊಳ್ಳಬೇಕು. ಸರಳತೆಯೊಂದಿಗೆ ಜ್ಞಾನ, ಶಿಸ್ತು, ಹಾಗೂ ಜೀವನ ಪಾಠಗಳನ್ನು ಸಂಸ್ಥೆಯಿಂದ ಪಡೆದು […]
ಕುಂದಗನ್ನಡ ಅಧ್ಯಯನ ಆಸಕ್ತಿ ಬೆಳೆಸಿಕೊಳ್ಳಿ- ಡಾ. ಕಿಶೋರ್ ಕುಮಾರ್ ಶೆಟ್ಟಿ
ಕುಂದಾಪುರ (ಡಿ.15): ಕುಂದಗನ್ನಡ ಭಾಷೆ ಹಾಗೂ ಸಂಸ್ಕೃತಿ ಬಹಳ ವೈಶಿಷ್ಟ್ಯ ಪೂರ್ಣವಾಗಿದ್ದು, ತನ್ನದೇ ಆದ ಸ್ವಂತಿಕೆ ಮತ್ತು ಅಸ್ಮಿತೆಯನ್ನು ಹೊಂದಿರುವ ಕುಂದಾಪುರದ ಪ್ರಾದೇಶಿಕ ಭಾಷೆ ,ಸಂಸ್ಕೃತಿ ಸಂಪ್ರದಾಯ, ಆಚಾರ ,ವಿಚಾರಗಳು ಈ ಮಣ್ಣಿನಲ್ಲಿ ಅಡಗಿದ್ದು ಅದನ್ನು ಸಂಶೋಧನೆ ಮುಖಾಂತರ ಹೊರತೆಗೆಯುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಬೇಕೆಂದು ಸರಕಾರಿ ಪ್ರೌಢಶಾಲೆ ಹಕ್ಲಾಡಿ ಇದರ ಕನ್ನಡ ಶಿಕ್ಷಕರು ಹಾಗೂ ಸಂಶೋಧಕರಾದ ಡಾ. ಕಿಶೋರ್ ಕುಮಾರ್ ಶೆಟ್ಟಿ ಹೇಳಿದರು. ಅವರು ಡಾ| ಬಿ.ಬಿ ಹೆಗ್ಡೆ ಪ್ರಥಮ […]
ಎಚ್.ಎಮ್.ಎಮ್ & ವಿ.ಕೆ.ಆರ್ ಶಾಲೆ – ಜೆ ಇ ಲಸಿಕಾ ಅಭಿಯಾನ
ಕುಂದಾಪುರ(ಡಿ,12): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಮೆದುಳು ಜ್ವರದ ವಿರುದ್ಧಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕುಂದಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ಮಕ್ಕಳಿಗೆ ಸಂಭವಿಸಬಹುದಾದ ಮೆದುಳುಜ್ವರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಜಪಾನೀಸ್ ಎನ್ಸೆಫಲೈಟಿಸ್ ಲಸಿಕೆಯನ್ನುಹಾಕಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್, ಉಪ ಪ್ರಾಂಶುಪಾಲೆ ಮತ್ತುಪ್ರೌಢಶಾಲಾ ಮುಖ್ಯ ಶಿಕ್ಷಕಿ […]
ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಜನತಾ ಆವಿಷ್ಕಾರ್ 2022 ಕಾರ್ಯಕ್ರಮ
ಹೆಮ್ಮಾಡಿ(ಡಿ,12): ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ “ಜನತಾ ಆವಿಷ್ಕಾರ್ 2022” ವಿಭಿನ್ನ ಕಾರ್ಯಕ್ರಮವನ್ನು ಡಿ.14 ರಂದು ಕಾಲೇಜಿನಲ್ಲಿ ಆಯೋಜನೆ ಮಾಡಿರುತ್ತಾರೆ. ಪ್ರಮುಖವಾಗಿ Business day (ವ್ಯವಹಾರ ದಿನ)ಇದರೊಂದಿಗೆ ಕುಂದಾಪುರ ಹಾಗೂ ಬೈಂದೂರು ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮಾದರಿ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿರುವ ಗೌರವಾನ್ವಿತ ಶ್ರೀ ಕುರ್ಮಾರಾವ್, ಅರೇಕಾ ಚಹಾದ ಮೂಲಕ ಪ್ರಸಿದ್ಧಿ ಪಡೆದಿರುವ ಉದ್ಯಮಿ ನಿವೇದನ ನೆಂಪೆ,ಮಾಜಿ ಶಾಸಕರಾದ ಶ್ರೀ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು: ವಿಶ್ವ ಮಾನವ ಹಕ್ಕುಗಳ ದಿನಾಚರಣೆ
ಕುಂದಾಪುರ (ಡಿ,12): ಜಾತಿ, ಧರ್ಮ, ಲಿಂಗ ಹಾಗೂ ಬಣ್ಣದ ನೆಲೆಯಲ್ಲಿ ನಮ್ಮ ನಡುವೆ ಅಸಮಾನತೆ ಬರಬಾರದು. ವಿದ್ಯಾರ್ಥಿಗಳು ವಿಶ್ವಮಾನವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಹಕ್ಕುಗಳ ಕುರಿತು ಚಿಂತಿಸಬೇಕು. ಹಕ್ಕುಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಸಂವಿಧಾನದ ತತ್ವಗಳನ್ನು ಅನುಸರಿಸುವ ಮೂಲಕ ಉತ್ತಮ ಪ್ರಜೆಗಳಾಗೊಣ ಎಂದು ಕುಂದಾಪುರದ ಹಿರಿಯ ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನಡೆದ ವಿಶ್ವಮಾನವ ಹಕ್ಕುಗಳ […]
ಡಾ| ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ: ನೊವೇಶನ್ ಮ್ಯಾನೆಜ್ಮೆಂಟ್ ಫೆಸ್ಟ್- ಅಂತರ್ ಕಾಲೇಜು ಸ್ಪರ್ಧೆ
ಕುಂದಾಪುರ(ಡಿ.11): ಇಲ್ಲಿನ ಡಾ| ಬಿ.ಬಿ.ಹೆಗ್ಡೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ನೊವೇಷನ್ ಮ್ಯಾನೆಜ್ಮೆಂಟ್ ಫೆಸ್ಟ್- ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಅಂತರ್ ಕಾಲೇಜು ಸ್ಪರ್ಧೆಯನ್ನು ಡಿಸೆಂಬರ್.13 ರಂದು ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ವ್ಯಾಪ್ತಿಯ ಸರ್ಕಾರಿ,ಅನುದಾನಿತ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜಿನ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ .ಉಮೇಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬೈಂದೂರು ಯುವಕರ ಮೇಲೆ ಹಲ್ಲೆ: ಯುವ ಬಂಟರ ಸಂಘದ ವತಿಯಿಂದ ತೀವ್ರ ಖಂಡನೆ
ಕುಂದಾಪುರ.ಡಿಸೆಂಬರ್ 9. ಬೆಂಗಳೂರು ಕುಂದನಹಳ್ಳಿ ಗೇಟ್ ಹೆಚ್.ಎ.ಎಲ್ ಸಮೀಪ ಬೇಕರಿಯಲ್ಲಿ ನಡೆದ ಬಂಟ ಸಮುದಾಯದ ಯುವಕರ ಮೇಲೆ ಪುಡಿ ರೌಡಿಗಳಿಂದ ನೆಡೆದ ಮಾರಣಾಂತಿಕ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಘಟನೆಯನ್ನು ಕುಂದಾಪುರ ತಾಲೂಕು ಯುವ ಬಂಟರ ಸಂಘ ತೀವ್ರವಾಗಿ ಖಂಡಿಸಿದ್ದಾರೆ. ಹೊಟ್ಟೆಪಾಡಿಗಾಗಿ ಕಷ್ಟಪಟ್ಟು ಸಾಲ ಮಾಡಿ ತಮ್ಮ ಜೀವನವನ್ನು ನಿರ್ವಹಣೆ ಮಾಡಲು ಬೆಂಗಳೂರಿಗೆ ಹೋದ ಇಂಥ ಯುವಕರ ಮೇಲೆ ಹಲ್ಲೆ ನಡೆಸಿದ ಪುಡಿ ರೌಡಿಗಳಿಗೆ ಉಗ್ರವಾದ […]
ಡಾ|ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ವಿಜ್ಞಾನ ಮತ್ತು ಐ.ಟಿ. ಅಸೋಸಿಯೇಶನ್ ಉದ್ಘಾಟನೆ
ಕುಂದಾಪುರ (ಡಿ,9): ಡಾ|. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ಮತ್ತು ಐ.ಟಿ. ಅಸೋಸಿಯೇಶನ್ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಅನುಪಮಾ ಕೋಟ, ವೈಸ್-ಪ್ರೆಸಿಡೆಂಟ್ ಡೆಲಿವರಿ, ಇನ್ಪೊಇನಪೈನಿಟ್ ಟೆಕ್ನೋಲಜಿ, ಉಡುಪಿ ಇವರು ಆಗಮಿಸಿ ಐ.ಟಿ. ಕಂಪನಿಯಲ್ಲಿನ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ವಿವರವಾಗಿ ತಿಳಿಸಿದರು. ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಮಾತನಾಡಿ ತರಗತಿಯಲ್ಲಿ ಕಲಿಯುವ ವಿಷಯವನ್ನು ನಿಜ ಜೀವನದಲ್ಲಿಯೂ ಕೂಡ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಗಣಕ […]










