ಕುಂದಾಪುರ(ಜು,15): ಹಲವು ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿ ಸೇವೆಸಲ್ಲಿಸುತಿರುವ ಕುಂದಾಪುರದ ಆರ್. ಎನ್. ಶೆಟ್ಟಿ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿಯವರು ಕುಂದಾಪುರದ ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ . ಈ ಹಿನ್ನೆಲೆಯಲ್ಲಿ ಕಾಲೇಜಿನ ಭೋದಕ -ಭೋಧಕೇತರ ಸಿಬ್ಬಂದಿಗಳು ಶುಭಕೋರಿದರು .
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ :ಸಿಎ ಪರೀಕ್ಷೆ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕುಂದಾಪುರ(ಜು,15): ಸಿಎ /ಸಿಎಸ್ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ರಾಷ್ಟ್ರೀಯ ಮಟ್ಟದ ಅನೇಕ ರ್ಯಾಂಕ್ ಗಳನ್ನು ಪಡೆದ ಸಂಸ್ಥೆ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಕುಂದಾಪುರ. ಸಿಎ ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸಂಸ್ಥೆಯ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಜುಲೈ15ರಂದು ಕುಂದೇಶ್ವರ ರಸ್ತೆಯ ಸಂಸ್ಥೆಯ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿತು. ಇನ್ಸ್ಟಿಟ್ಯೂಟ್ ಆಫ್ ಚಾರ್ಟ್ ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ 2022 ರಲ್ಲಿ ನಡೆಸಿದ […]
ಪರಸ್ಪರ ಸಹಕಾರದಿಂದ ಸೇವೆ: ಲ. ಪ್ರಕಾಶ ಟಿ. ಸೋನ್ಸ್
ಕುಂದಾಪುರ(ಜು,15):ಜಗತ್ತಿನ ಅತಿ ದೊಡ್ಡ ಸೇವಾ ಸಂಘಟನೆಯಾದ ಲಯನ್ಸ್ ಸಂಸ್ಥೆಯ ಮುಖ್ಯ ಉದ್ದೇಶ ಅಗತ್ಯವಿರುವವರಿಗೆ ಬೇಕಾದ ಸೇವೆಯನ್ನು ನೀಡುವುದು. ಕುಂದಾಪುರ ಲಯನ್ಸ್ ಕ್ಲಬ್ ಕಳೆದ50 ವರ್ಷಗಳಿಂದ ವಿವಿಧ ಸೇವೆಗಳನ್ನು ಸೇವೆಗಳನ್ನು ನೀಡುತ್ತಾ ನೊಂದವರ ಕಣ್ಣೀರನ್ನು ಒರೆಸುವ ಕಾರ್ಯ ಮಾಡುತ್ತಾ ಬಂದಿದೆ. ಇನ್ನು ಮುಂದೆಯು ಕೂಡಾ ಒಳ್ಳೆಯ ಸೇವೆ ಜನತೆಗೆ ಈ ಕ್ಲಬಿನಿಂದ ಸಿಗುವಂತಾಗಲಿ ಎಂದು ಲಯನ್ಸ್ 317ಸಿ ಜಿಲ್ಲೆಯ ಮಾಜಿ ಗವರ್ನರ್ ಲ. ಪ್ರಕಾಶ ಟಿ. ಸೋನ್ಸ್ ಲಯನ್ ಕ್ಲಬ್ ಕುಂದಾಪುರದ […]
ತ್ರಾಸಿ:ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರ ಹೆಬ್ಬಾರ್ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ
ತ್ರಾಸಿ(ಜು,07): ಸ್ವರಾಜ್ಯ ೭೫” ಇದರ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆಯ ಅಭಿಯಾನದ 14ನೇ ಕಾಯ೯ಕ್ರಮ ಬೈಂದೂರು ತಾಲೂಕು ವ್ಯಾಪ್ತಿಯ ತ್ರಾಸಿಯ ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರ ಹೆಬ್ಬಾರ್ ಮನೆಯಲ್ಲಿ ಜುಲೈ,03 ರಂದು ನಡೆಯಿತು. ನಾಮ ಫಲಕ ಅನಾವರಣವನ್ನು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿರುವ ಶ್ರೀಯುತ ನೀಲಾವರ ಸುರೇಂದ್ರ ಅಡಿಗರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಿಕೆಯ ಮಿತ್ರರಾದ ಶ್ರೀ ಜನಾರ್ದನ ಮರವಂತೆ ಇವರು ವಹಿಸಿದ್ದರು. ಕಾರ್ಯಕ್ರಮದ ಅತಿಥಿಯಾಗಿ ಶ್ರೀ ಶ್ರೀಧರ್ […]
ಲಾ & ಪ್ರ್ಯಾಕ್ಟೀಸ್ ಆಫ್ ಬ್ಯಾಂಕಿಂಗ್ ಪುಸ್ತಕ ಬಿಡುಗಡೆ
ಕುಂದಾಪುರ (ಜು,8):ಮಂಗಳೂರು ವಿ.ವಿ ಬಿ.ಕಾಂ ದ್ವೀತಿಯ ಸೆಮೆಸ್ಟರ್ ಹೊಸ ಶಿಕ್ಷಣ ನೀತಿಗೆ ಅನುಗುಣವಾದ ಲಾ & ಪ್ರ್ಯಾಕ್ಟೀಸ್ ಆಫ್ ಬ್ಯಾಂಕಿಂಗ್ ಪುಸ್ತಕವನ್ನು ಬೈಂದೂರು ಶಾಸಕ & ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ.ಎಮ್.ಸುಕುಮಾರ್ ಶೆಟ್ಟಿ ತಮ್ಮ ಗ್ರಹ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು. ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಣ ಕ್ಷೇತ್ರದಲ್ಲಿ 26 ವರ್ಷಗಳ ಅನುಭವ ಹೊಂದಿರುವ ಪ್ರೋ.ಕೆ.ಉಮೇಶ್ ಶೆಟ್ಟಿ ಹಾಗೂ ತ್ರಿಶಾ ಕಾಲೇಜು ಉಡುಪಿ ಇದರ ಉಪನ್ಯಾಸಕರಾದ ಶ್ರೀ ಸಂತೋಷ ಶೆಟ್ಟಿಯವರು ಈ […]
ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ): ರಕ್ತದಾನ ಶಿಬಿರದ ಸಂಚಾಲಕರಾಗಿ ಶ್ರೀ ಚೇತನ್ ಶೆಟ್ಟಿ ಕೋವಾಡಿ ಆಯ್ಕೆ
ಕುಂದಾಪುರ (ಜು,8); ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ.), ಇದರ ದಶಮಾನೋತ್ಸವ ವರ್ಷದ ಮೊದಲ ಕಾರ್ಯಕ್ರಮವಾಗಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರದ ಸಂಚಾಲಕರಾಗಿ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲರು, ಸಂಸ್ಕೃತಿ ಚಿಂತಕರು, ಯುವ ಸಂಶೋಧಕ ಶ್ರೀ ಚೇತನ್ ಶೆಟ್ಟಿ ಕೋವಾಡಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆಸ ಸಂಘದ ಸಭೆಯಲ್ಲಿ ಸರ್ವಾನು ಮತದಿಂದ ಇವರನ್ನು ಆಯ್ಕೆಮಾಡಲಾಗಿದ್ದು, ಇವರಿಗೆ ಕುಂದಾಪುರ ತಾಲೂಕು ಯುವ ಬಂಟರ ಸಂಘ ಅಭಿನಂದನೆ ಸಲ್ಲಿಸಿದೆ […]
ಜೇಸಿಐ ಕುಂದಾಪುರ ಸಿಟಿ ಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ
ಕುಂದಾಪುರ(ಜು,7): ಜೆಸಿಐನ ವಲಯ XV ರ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನವು ವಿಟ್ಲದಲ್ಲಿ ನಡೆದಿದ್ದು,ಜೇಸಿಐ ಕುಂದಾಪುರ ಸಿಟಿ ಘಟಕವು ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿಗೆ ಭಾಜನವಾಗಿದೆ,ಮಾತ್ರವಲ್ಲದೆ ಸುಮಾರು ಒಂದೂವರೆ ಲಕ್ಷದಷ್ಟು ದೇಣಿಗೆಯನ್ನು ಜೇಸಿಐ ಇಂಡಿಯಾ ಫೌಂಡೇಶನ್ ಗೆ ನೀಡುವುದರ ಮೂಲಕ,ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದಲ್ಲಿ ವಲಯದಲ್ಲೇ ಟಾಪ್ ಒನ್ ಘಟಕವಾಗಿ ಮೂಡಿಬಂದಿದೆ . ಈ ಪ್ರಶಸ್ತಿಗಳನ್ನು ಸಮ್ಮೇಳನದಲ್ಲಿ ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆ ಸಿ ಪೊನ್ನರಾಜ್,ವಲಯ ಹದಿನೈದರ ವಲಯಾಧ್ಯಕ್ಷರಾದ […]
ಕುಂದಾಪುರ-ಕೆರಾಡಿ ಸರ್ಕಾರಿ ಬಸ್ಸು ಓಡಾಟಕ್ಕೆ ಶುಭ ಕೋರಿದ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ
ವಂಡ್ಸೆ(ಜು,7): ಕೆರಾಡಿ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಕುಂದಾಪುರ-ಕೆರಾಡಿ ಸರ್ಕಾರಿ ಬಸ್ಸು ಸಂಪರ್ಕಕ್ಕೆ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಬಸ್ಸಿಗೆ ಪೂಜೆ ನೇರವೆರಿಸಿ ಚಾಲನೆ ನೀಡಿದರು. ಈ ಮೂಲಕ ಗುರುವಾರದಿಂದ ಕುಂದಾಪುರ- ಕೆರಾಡಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಅಧೀಕೃತವಾಗಿ ಆರಂಭವಾಗಿದ್ದು ಕೆರಾಡಿ ಗ್ರಾಮದ ಜನತೆಯ ಬಹು ದಿನದ ಕನಸು ನನಸಾದಂತ್ತಾಗಿದೆ. ನಮ್ಮ ಕ್ಷೇತ್ರದ ಕೆರಾಡಿ ಭಾಗಕ್ಕೆ ಸರ್ಕಾರಿ ಬಸ್ ಸಂಪರ್ಕ ಬೇಕು ಎಂಬುದಾಗಿ ಎ.ಬಿ.ವಿ.ಪಿಯ ನೂರಾರು […]
ಗಂಗೊಳ್ಳಿ: ರೋಟರಿ ಕ್ಲಬ್ ಅಧ್ಯಕ್ಷರಾಗಿ ಸುಗುಣ ಆರ್. ಕೆ ಆಯ್ಕೆ
ಗಂಗೊಳ್ಳಿ(ಜು,6): ರೋಟರಿ ಕ್ಲಬ್ ಗಂಗೊಳ್ಳಿ ಡಿಸ್ಟ್ರಿಕ್ 3182 ವಲಯ 1ರ, 2022 – 23ನೇ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಸುಗುಣ ಆರ್ ಕೆ ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಚಂದ್ರಕಲಾ ಟಿ ಮತ್ತು ಖಜಾಂಜಿಯಾಗಿ ಜನಾರ್ದನ ಪೆರಾಜೆ ಆಯ್ಕೆಯಾಗಿರುತ್ತಾರೆ. ಜುಲೈ 17 ರ ಭಾನುವಾರದಂದು ಪದಪ್ರಧಾನ ಸಮಾರಂಭವು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಇಂಡೋರ್ ಸ್ಟೇಡಿಯಂನಲ್ಲಿ ಜರಗಲಿದ್ದು ವಲಯ 1 ರ ಅಸಿಸ್ಟೆಂಟ್ ಗವರ್ನರ್ ಡಾ. ಉಮೇಶ್ ಪುತ್ರನ್ ಪದಪ್ರಧಾನ ಸಮಾರಂಭವನ್ನು […]
ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಪೂರಕ : ಡಾ.ರಮೇಶ್ ಶೆಟ್ಟಿ
ಕೋಟೇಶ್ವರ(ಜು,4): ಎಕ್ಸಲೆಂಟ್ ಪಿ.ಯು ಕಾಲೇಜು ಮತ್ತು ಶಾಲೆಯಲ್ಲಿ ಮಕ್ಕಳ ಸೃಜನಶೀಲ ಚಟುವಟಿಕೆಗೆ ವೇದಿಕೆ ಕಲ್ಪಿಸಲು ಶಾಲಾ ಭಿತ್ತಿಫಲಕವನ್ನು ವಿಶೇಷವಾಗಿ ಉದ್ಘಾಟಿಸಲಾಯಿತು. ಸಂಸ್ಥೆಯ ಅವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಪೂರಕ : ಡಾ.ರಮೇಶ್ ಶೆಟ್ಟಿಧ್ಯಕ್ಷರಾದ ಡಾ. ರಮೇಶ್ ಶೆಟ್ಟಿಯವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಕುವೆಂಪುರವರ ಕವಿವಾಣಿಯಂತೆ ಶಾಲಾ ಕಾಲೇಜಿನಲ್ಲಿ ‘ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಠ್ಯೇತರ ಚಟುವಟಿಕೆ ಪೂರಕ’ ಎಂದು ಹೇಳಿದರು. ಮುಖ್ಯಶಿಕ್ಷಕಿಯಾದ ಶ್ರೀಮತಿ ಸುರೇಖಾರವರು […]










