ಬೆಂಗಳೂರು (ಆ, 27) : ಜನ್ಮಭೂಮಿ ಫೌಂಡೇಷನ್ (ರಿ)ಬೆಂಗಳೂರು ಕೊಡಮಾಡುವ “ಭಾರತ ಗೌರವ ಪ್ರಶಸ್ತಿ”ಗೆ ಉದ್ಯಮಿ, ಸಮಾಜಸೇವಕ ಶ್ರೀ ಗೋವಿಂದ ಬಾಬು ಪೂಜಾರಿ ಆಯ್ಕೆಯಾಗಿದ್ದಾರೆ. ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಕೊರೊನಾ ವಾರಿಯರ್ಸ್ಗೆ ಆಗಸ್ಟ್ , 29 ರಂದು ಬೆಂಗಳೂರಿನ ಗಾಂಧಿನಗರದ ಆನಂದರಾವ್ ಸರ್ಕಲ್ ಬಳಿಯ ಸ್ಯಾಂಕ್ಟಮ್ ಹೋಟೆಲ್ ನಲ್ಲಿ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಶ್ರೀ ಗೋವಿಂದ ಬಾಬು ಪೂಜಾರಿಯವರು “ಭಾರತ ಗೌರವ ಪ್ರಶಸ್ತಿ”ಯೊಂದಿಗೆ ಸನ್ಮಾನಗೊಳ್ಳಲಿದ್ದಾರೆ. […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಧಾರವಾಡ : ಕೋಚ್ ಆರ್.ಎಸ್ ಮೊಕಾಶಿ ಯವರ ಹುಟ್ಟುಹಬ್ಬದ ಸಂಭ್ರಮಾಚರಣೆ
ಧಾರವಾಡ (ಆ, 24)) : ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ದ ಬಾಸ್ಕೆಟ್ ಬಾಲ್ ಕೋಚ್ ಆರ್.ಎಸ್ ಮೊಕಾಶಿ ಯವರ ಹುಟ್ಟುಹಬ್ಬವನ್ನು ಸ್ಪೆಷಲ್ ಸರ್ಟಿಫಿಕೇಟ್ ಕೋರ್ಸ್ ವಿದ್ಯಾರ್ಥಿಗಳ ವತಿಯಿಂದ ಧಾರವಾಡದ ಸಾಯಿ ಹಾಸ್ಟೆಲ್ ತ್ರೋಬಾಲ್ ಸ್ಟೇಡಿಯಂನಲ್ಲಿ ಆಚರಿಸಲಾಯಿತು. ತರಬೇತುದಾರ ಮೋಕಾಶಿಯವರಿಗೆ ವಿದ್ಯಾರ್ಥಿಗಳು ಜನ್ಮದಿನದ ಶುಭಾಶಯವನ್ನು ಕೋರಿದರು.
ಕುಂದವಾಹಿನಿಗೆ ಧನ್ಯವಾದ ಸಲ್ಲಿಸಿದ ಸಾಹಸಿ – ಆಪತ್ಭಾಂಧವ ಈಶ್ವರ್ ಮಲ್ಪೆ
ನನ್ನೆಲ್ಲಾ ಅಭಿಮಾನಿ ಬಂಧುಗಳಿಗೆ ಪ್ರೀತಿ ಪೂರ್ವಕ ಧನ್ಯವಾದಗಳು. ನಾನಾಯ್ತು, ನನ್ನ ಸಮಾಜ ಸೇವೆ ಕಾರ್ಯ ಆಯ್ತು ಎಂದು ಎಲೆಮರೆಯ ಕಾಯಿಯಂತಿದ್ದ ನನ್ನನ್ನು ಇಂದು ನೀವು ಗುರುತಿಸಿ, ಸನ್ಮಾನಿಸಿ ಪ್ರೀತಿಯಿಂದ ಗೌರವಿಸುತ್ತಿರುವುದು ನನ್ನ ಸಮಾಜಸೇವಾ ಕಾರ್ಯದ ಜವಾಬ್ದಾರಿ ಇನ್ನೂ ಹೆಚ್ಚಿಸಿದಂತೆ ಭಾಸವಾಗುತ್ತಿದೆ. ವಿವಿಧ ಮಾಧ್ಯಮಗಳಲ್ಲಿ ನನ್ನ ಸಮಾಜ ಸೇವಾ ಕಾರ್ಯದ ಕುರಿತು ಸಂದರ್ಶನ, ಲೇಖನಗಳು ಬಿತ್ತರಗೊಂಡಿದೆ. ಆದರೆ ನನ್ನ ಈ ಸಮಾಜ ಸೇವಾ ಕಾರ್ಯಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಮುತುವರ್ಜಿವಹಿಸಿದ ಪ್ರಮುಖ ವ್ಯಕ್ತಿ […]
ಕರೋನಾ ಮುಕ್ತ ಪ್ರಶಂಸೆಗೆ ಪಾತ್ರವಾದ ಗೋಪಾಡಿ ಗ್ರಾಮ : ಮುಂಜಾಗ್ರತಾ ಕ್ರಮವಾಗಿ ನಾಲ್ಕನೇ ಬಾರಿ ಕೋವಿಡ್ ಲಸಿಕಾ ಅಭಿಯಾನ
ಕೋಟೇಶ್ವರ (ಆ,25): ಕರೋನಾ ಮುಕ್ತ ಗ್ರಾಮ ಪ್ರಶಂಸೆಗೆ ಪಾತ್ರವಾದ ಗೋಪಾಡಿ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ನಿರಂತರ ಪ್ರಯತ್ನದಿಂದಾಗಿ ಕರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು ,ಮುಂಜಾಗ್ರತಾ ಕ್ರಮವಾಗಿ ಸತತ ನಾಲ್ಕನೇ ಬಾರಿಗೆ ಕೋವಿಡ್ ಲಸಿಕಾ ಅಭಿಯಾನವನ್ನು ಆಗಸ್ಟ್ ,24 ರಂದು ಆಯೋಜಿಸಲಾಗಿತ್ತು. ಈ ಅಭಿಯಾನ ಗೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು,ಸರ್ವ ಸದಸ್ಯರು ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಎಸ್ ಡಿ.ಎಂ.ಸಿ ಅಧ್ಯಕ್ಷರು,ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು […]
ನಾ ಕಂಡಂತೆ ಕರುಣಾಮಯಿ ಶ್ರೀ ಗೋವಿಂದ ಬಾಬು ಪೂಜಾರಿ
ಅದು ಇಡೀ ಜಗತ್ತನ್ನೇ ಸರ್ವನಾಶ ಮಾಡಲು ಬಂದ ಕರೋನ ಮಹಾಮಾರಿಯ ಆರಂಭದ ಸಮಯ. ಕರೋನಾ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್ಡೌನ್ ಅನಿವಾರ್ಯವಾಗಿ ಆ ಸಂದರ್ಭದಲ್ಲಿ ಕಂಡುಬಂದರೂ ಸಹ ಹಲವರ ಬದುಕಿನ ದಿಕ್ಕು ತಪ್ಪಿದಂತೂ ಸುಳ್ಳಲ್ಲ. ಸರಿಸುಮಾರು ನಾಲ್ಕು ತಿಂಗಳು ಕೆಲಸವಿಲ್ಲದೆ ಕೈಕಟ್ಟಿ ಕುಳಿತಿದ್ದೆ. 30 ವರ್ಷದಿಂದ ಮುಂಬೈಯಲ್ಲಿ ವಾಸವಾಗಿದ್ದ ನನಗೆ ಬಹುತೇಕ ಎಲ್ಲಾ ಕ್ಯಾಟ್ ರಿಂಗ್ ವಲಯದ ಒಡನಾಟವಿದೆ. ಸಣ್ಣ ಮಟ್ಟದಲ್ಲಿ ನನ್ನ ಒಡೆತನದಲ್ಲಿ ಆಕಾಶ್ ಹೆಲ್ತ್ ಫುಡ್ ಪಾಸ್ತಾ ಅಂಡ್ […]
ಪುರಾಣ ಪ್ರಸಿದ್ಧ ಮೂಡುಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ನಟ,ನಿರ್ದೇಶಕರಾದ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಭೇಟಿ
ವಂಡ್ಸೆ (ಆ,24): ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಪುರಾಣ ಪ್ರಸಿದ್ಧ ಮೂಡುಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ಆಗಸ್ಟ್,24 ರಂದು ಕನ್ನಡ ಚಿತ್ರರಂಗದ ಹೆಸರಾಂತ ನಟ,ನಿರ್ದೇಶಕರಾದ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪ್ರದೀಪ್ ಶೆಟ್ಟಿ ಬೆಳ್ಳಾಲ ,ದಿವ್ಯಾಧರ್ ಶೆಟ್ಟಿ ಕೆರಾಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕೆರಾಡಿಯಿಂದ ನಾಲೈದು ಕಿಲೋಮೀಟರ್ ಕಾಡು ದಾರಿಯಲ್ಲಿ ಸಾಗಿದರೆ ಅತ್ಯoತ ಎತ್ತರದ ಸ್ಥಳದಲ್ಲಿ ಉರ್ಧ್ವಮುಖಿಯಾಗಿ ಮೂಡುಗಲ್ಲು ಗುಹೆಯ ಒಳಗೆ ಹರಿಯುವ ನೀರಿನ […]
ಸ್ವದೇಶಿ ವಿಜ್ಞಾನ ಆಂದೋಲನ ಕರ್ನಾಟಕ : ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
ಮಂಗಳೂರು (ಆ, 24) : ರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಂಸ್ಥೆಯಾದ ವಿಜ್ಞಾನ ಭಾರತಿ ಯ ಕರ್ನಾಟಕದ ಘಟಕವಾದ ಸ್ವದೇಶಿ ವಿಜ್ಞಾನ ಆಂದೋಳನ – ಕರ್ನಾಟಕ’ ಸಂಸ್ಥೆ ಇದೇ ಸೆಪ್ಟೆಂಬರ್ 15 ರಿಂದ 17ರ ವರೆಗೆ 16ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನು ಮಂಗಳೂರು ವಿಶ್ವವಿದ್ಯಾನಿಲಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಐಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಕಾರದೊಂದಿಗೆ, ಮಂಗಳ […]
ಬೈಂದೂರು ಮಂಡಲ ಬಿ.ಜೆ.ಪಿ. ಎಸ್ಸಿ ಮೊರ್ಚಾ : ಡಿಸಿ ಮನ್ನಾ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಶಾಸಕರ ಬಿ. ಎಂ. ಸುಕುಮಾರ ಶೆಟ್ಟಿಯವರಿಗೆ ಮನವಿ
ವಂಡ್ಸೆ (ಆ, 23) : ಡಿಸಿ ಮನ್ನಾ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಬೈಂದೂರು ಮಂಡಲ ಬಿ.ಜೆ.ಪಿ ಎಸ್ಸಿ ಮೊರ್ಚಾದ ಸದಸ್ಯರು ಕ್ಷೇತ್ರದ ಶಾಸಕರಾದ ಬಿ ಎಂ ಸುಕುಮಾರ ಶೆಟ್ಟಿಯವರಿಗೆ ಆಗಸ್ಟ್,22 ರಂದು ಶಾಸಕರ ನಿವಾಸಕ್ಕೆ ತೆರಳಿ ಮನವಿ ನೀಡಿದರು. ಈ ಸಂದರ್ಭದಲ್ಲಿ ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷರಾದ ಚಂದ್ರ ಪಂಚವಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಮೂಡುಬಗೆ, ನಿಕಟಪೂರ್ವ ತಾಲೂಕು ಪಂಚಾಯಿತಿ ಸದಸ್ಯ ನಾರಾಯಣ ಕೆ. ಗುಜ್ಜಾಡಿ ಹಾಗೂ […]
ಶ್ರೀ ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ : ಭಕ್ತರಿಂದ ದೇವಾಲಯದ ಗರ್ಭಗುಡಿ ದ್ವಾರಕ್ಕೆ ಹಿತ್ತಾಳೆ ಹೋದಿಕೆ ಹಾಗೂ ಪ್ರಭಾವಳಿ ಹಸ್ತಾಂತರ
ಬೈಂದೂರು (ಆ, 23) : ವಿಶ್ವಕರ್ಮ ಸಮಾಜಬಾಂಧವರ ಪ್ರಮುಖ ಧಾರ್ಮಿಕ ಕೇಂದ್ರವಾದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಳ್ಳೂರು -11 ರ ಉಪ್ರಳ್ಳಿಯ ಶ್ರೀ ಕಾಳಿಕಾಂಬಾ ದೇವಸ್ಥಾನದ ಗರ್ಭಗುಡಿಯ ಶಿಲಾಮಯ ದ್ವಾರಬಾಗಿಲುಗಳಿಗೆ ಭಕ್ತರಾದ ಶ್ರೀ ಯೋಗೀಶ್ ಆಚಾರ್ಯ ಮತ್ತು ಶ್ರೀಮತಿ ಶರ್ಮಿಳಾ ಯೋಗೀಶ್ ಆಚಾರ್ಯ ಬಸ್ರೂರು ದಂಪತಿಗಳು ಹಿತ್ತಾಳೆಯ ಕಲಾತ್ಮಕ ಹೊದಿಕೆಯನ್ನು ಹಾಗೂ ಸುಬ್ರಾಯ ಆಚಾರ್ಯ ಮತ್ತು ಮಕ್ಕಳು ಅಕ್ಸಾಲಿಮನೆ ಬಗ್ವಾಡಿ ಯವರು ದೇವರಿಗೆ ಹಿತ್ತಾಳೆಯ ಪ್ರಭಾವಳಿಯನ್ನು ಸೇವಾರೂಪದಲ್ಲಿ ದೇವಾಲಯದ […]
ಗಂಗೊಳ್ಳಿ: ಮೀನುಗಾರರಿಗೆ ಅತ್ಯಾಧುನಿಕ ಜೀವ ರಕ್ಷಕ ಸಲಕರಣೆ ಗಳನ್ನು ಸರಕಾರ ಒದಗಿಸಬೇಕು: ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘ ಮನವಿ
ಗಂಗೊಳ್ಳಿ(ಆ,22): ಸರಕಾರ ಮೀನುಗಾರರಿಗೆ ಅತ್ಯಾಧುನಿಕವಾದ ಜೀವ ರಕ್ಷಕ ಸಲಕರಣೆಗಳು ಒದಗಿಸಬೇಕು ಹಾಗೂ ಅಳಿವೆ ಬಾಗಿಲಿನ ಸುತ್ತಮುತ್ತಲು ಮೀನುಗಾರರಿಗೆ ಯಾವುದೇ ರೀತಿಯ ಜೀವ ಹಾನಿಯಾಗದಂತೆ 24X7 ರಕ್ಷಣಾ ಪಡೆ ನಿರ್ಮಿಸಿ ಕಾರ್ಯನಿರತರಾಗುವಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಗಂಗೊಳ್ಳಿ ವಲಯ ನಾಡದೋಣಿ ಸಂಘದ ವತಿಯಿಂದ ಯಶವಂತ ಖಾರ್ವಿಯವರ ನೇತ್ರತ್ವದಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕಿ ಸುಮಲತಾ ರವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಗಣಪತಿ ಖಾರ್ವಿ, ನಿರ್ದೇಶಕ ರಾಜೇಶ್ ಖಾರ್ವಿ ಹಾಗೂ ಜೊತೆ […]










