ವಂಡ್ಸೆ(ಸೆ,11): ಕರಾವಳಿಯ ಸಾಂಸ್ಕೃತಿಕ ವೈಭವ ಸಾರುವ ಯಕ್ಷಗಾನ ಇಂದು ಜಗತ್ ಪ್ರಸಿದ್ದ ವಾಗಿದ್ದು , ಯಕ್ಷಗಾನ ಕಲಾವಿದರು ಸಂಘಟಿತರಾಗಿ ಹೊಸ ಟ್ರಸ್ಟ್ ಹುಟ್ಟುಹಾಕಿದ್ದು, ಕಲಾವಿದರು ಜೊತೆಗೆ ಕಾರ್ಮಿಕರನ್ನೂ ಸೇರಿಸಿಕೊಂಡಿರುವುದು ಧನಾತ್ಮಕ ಬೆಳವಣಿಗೆ. ಈ ಟ್ರಸ್ಟ್ ಸಮಾಜದೊಂದಿಗೆ ಸೇರಿ ಸೌಹಾರ್ದತೆಗೆ ದಾರಿಯಾಗಬೇಕು ಹಾಗೂ ಕಲಾವಿದರಿಗೆ, ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡುವ ಜೊತೆಗೆ ಅವರ ಕಷ್ಟಸುಖಗಳಲ್ಲಿ ಭಾಗಿಯಾಗಬೇಕು ಎಂದು ಹೋಟೆಲ್ ಉದ್ಯಮಿ, ಸಹ್ರದಯಿ ಕೃಷ್ಣಮೂರ್ತಿ ಮಂಜ ಹೇಳಿದರು. ಅವರು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಕಲ್ಯಾಣ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಶಿರ್ವ ಸಂತ ಮೇರಿ ಮಹಾವಿದ್ಯಾಲಯ : ಫಿಟ್ ಇಂಡಿಯಾ ಫ್ರೀಡಂ ಓಟ – ಅಭಿಯಾನ
ಶಿರ್ವ (ಸೆ, 11) : ಸದೃಢ ಭಾರತ ನಿರ್ಮಾಣಕ್ಕೆ ದೇಶದಲ್ಲಿ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ, ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು ಎಂಬುದು ಈ ಅಭಿಯಾನದ ಮೂಲ ಉದ್ದೇಶ. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ವತಿಯಿಂದ ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ರ ಅಭಿಯಾನಕ್ಕೆ ರಾಷ್ಟ್ರವ್ಯಾಪಿ ಚಾಲನೆ ನೀಡಿದ್ದಾರೆ. ಯುವ ಜನಾಂಗ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳದೇ ಇರುವ […]
ಡಾ. ಬಿ.ಬಿ. ಹೆಗ್ಡೆ ಕಾಲೇಜು : ಕ್ಯಾಂಪಸ್ ವಾಯ್ಸ್ ವಾರ್ತಾ ಸಂಚಿಕೆ ಬಿಡುಗಡೆ
ಕುಂದಾಪುರ (ಸೆ. 10) : ಕುಂದಾಪುರದ ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಅರ್ಧ ವಾರ್ಷಿಕ ವಾರ್ತಾ ಸಂಚಿಕೆಯಾದ ಕ್ಯಾಂಪಸ್ ವಾಯ್ಸ್ ನ್ನು ಸೆಪ್ಟೆಂಬರ್,5 ರಂದು ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಕಾಳಾವರದ ಉದಯ್ ಕುಮಾರ್ ಶೆಟ್ಟಿಯವರು ಬಿಡುಗಡೆಗೊಳಿಸಿದರು. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ಥಗಿತ ಉಂಟಾಗಿದೆ. ಆದರೆ ನಮಗೆ ಸಿಕ್ಕಿದ ದಿನಗಳನ್ನೆ ಬಳಸಿಕೊಂಡು, ವಿದ್ಯಾರ್ಥಿಗಳಿಗೆ ಕ್ರೀಡಾ ದಿನಾಚರಣೆ, ಎಥ್ನಿಕ್ ಡೇ ಆಯೋಜಿಸುವುದರ ಜೊತೆಗೆ […]
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸಕುತ್ತೂರು : ಶಿಕ್ಷಕರ ದಿನಾಚರಣೆ ಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ
ತೆಕ್ಕಟ್ಟೆ (ಸೆ, 10) : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸಕುತ್ತೂರಿನಲ್ಲಿ ಶಿಕ್ಷಕರ ದಿನಾಚರಣೆ ಯ ಪ್ರಯುಕ್ತ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹೆಸಕುತ್ತೂರು ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಹೆಸಕುತ್ತೂರು ಒಕ್ಕೂಟ ಇವರ ವತಿಯಿಂದ ಗುರುವಂದನಾ ಕಾರ್ಯಕ್ರಮ ಜರುಗಿತು. ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್, ಸಹ ಶಿಕ್ಷಕರಾದ ಸಂಜೀವ ಎಂ, ಜಯಲಕ್ಷ್ಮಿ ಬಿ., ಜಯರಾಮ ಶೆಟ್ಟಿ, ವಿಜಯಾ ಅರ್, ಅಶೋಕ ತೆಕ್ಕಟ್ಟೆ, ವಿಜಯ ಶೆಟ್ಟಿ, ರವೀಂದ್ರ […]
ಕೊಳಲುವಾದನ ಸ್ಪರ್ಧೆ : ಗಂಗೊಳ್ಳಿಯ ಶ್ಯಾಮ್ ಜಿ. ಎನ್. ಪೂಜಾರಿ ಪ್ರಥಮ ಸ್ಥಾನ
ಕುಂದಾಪುರ (ಸೆ, 9) : ಮಧ್ಯಪ್ರದೇಶದ ಮೊರೆನಾದ ಶಿವ್ಸ್ ಮ್ಯೂಸಿಕಲ್ ಅಕಾಡೆಮಿ ವತಿಯಿಂದ ನಡೆದ ಆನ್ಲೈನ್ ಕೊಳಲುವಾದನ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಶ್ಯಾಮ್ ಜಿ. ಎನ್. ಪೂಜಾರಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕೊಳಲುವಾದನದಲ್ಲಿ ಅಪಾರ ಆಸಕ್ತಿಯನ್ನು ಹೊಂದಿರುವ ಶ್ಯಾಮ್ ಗಂಗೊಳ್ಳಿಯ ಖ್ಯಾತ ಛಾಯಾಗ್ರಾಹಕ ಗಣೇಶ್ ಪಿ. ಪೂಜಾರಿ ಮತ್ತು ಮಾಲತಿ ದಂಪತಿಯ ಪುತ್ರ.
ಹೆಮ್ಮಾಡಿ : ರಿಕ್ಷಾ ನಿಲ್ದಾಣ ಉದ್ಘಾಟಿಸಿ,ಶುಭ ಹಾರೈಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ
ಹೆಮ್ಮಾಡಿ(ಸೆ,7): ಹೆಮ್ಮಾಡಿ ಭಾಗದ ರಿಕ್ಷಾ ಚಾಲಕ ಮಾಲಕರ ಬಹುದಿನದ ಬೇಡಿಕೆಯಾಗಿದ್ದ ರಿಕ್ಷಾ ನಿಲ್ದಾಣವನ್ನು ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗಿದ್ದು,ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು ಉದ್ಘಾಟಿಸಿ ಶುಭಹಾರೈಸಿದರು. ರಿಕ್ಷಾ ಚಾಲಕ- ಮಾಲಕರ ಜನ ಪರ ಕಾಳಜಿಯನ್ನು ಪ್ರಶಂಸಿದ ಶಾಸಕರು ರಿಕ್ಷಾ ನಿಲ್ದಾಣಕ್ಕೆ ಇಂಟರ್ಲಾಕ್ ಅಳವಡಿಸಲು ಒಂದು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು, ಪಕ್ಷದ ಕಾರ್ಯಕರ್ತ ಮತ್ತು ರಿಕ್ಷಾ ಚಾಲಕ & ಮಾಲಕರು ಉಪಸ್ಥಿತರಿದ್ದರು.
ಯುವಕರಲ್ಲಿ ದೇಶಪ್ರೇಮ ಹಾಗೂ ದೇಶ ಸೇವೆಗೆ ಅಣಿಗೊಳಿಸುವುದೇ ನಮ್ಮ ಗುರಿ : ಗೋವಿಂದ ಬಾಬು ಪೂಜಾರಿ
ಬೈಂದೂರು (ಸೆ , 9) : ವೀರ ಯೋಧ ಪ್ರಶಾಂತ್ ದೇವಾಡಿಗರ ಮುಂದಾಳತ್ವದ ನೇಶನ್ ಲವರ್ಸ್ ಬೈಂದೂರು ತಂಡ ಯುವಕರಲ್ಲಿ ದೇಶ ಪ್ರೇಮ ಹಾಗೂ ಕ್ರೀಡಾಸಕ್ತಿಯೊಂದಿಗೆ ಸೈನಿಕ ತರಬೇತಿಯಂತಹ ಅರ್ಥಪೂರ್ಣ ಯೋಜನೆಯನ್ನು ಹಾಕಿಕೊಂಡಿದ್ದು ,ಇವರ ಯೋಜನೆಗೆ ಬೆನ್ನೆಲುಬಾಗಿ ನಿಂತ ದೇಶದ ಪ್ರತಿಷ್ಠಿತ ಆಹಾರ ಮತ್ತು ಆತಿಥ್ಯಕ್ಕೆ ಹೆಸರಾದ ಶೆಫ್ ಟಾಕ್ ಸಂಸ್ಥೆಯ ಮುಖ್ಯಸ್ಥರು ಹಾಗೂ ವರಲಕ್ಷೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಸಂಚಾಲಕರಾಗಿರುವ ಗೋವಿಂದ ಬಾಬು ಪೂಜಾರಿಯವರನ್ನು ಗೌರವಾಧ್ಯಕ್ಷರಾಗಿ ಹಾಗೂ […]
ಜಿಲ್ಲಾ ವಿಕಲಚೇತನರ ಇಲಾಖೆ ಹಾಗೂ ಎಪಿಡಿ ವತಿಯಿಂದ ವಿವಿಧ ಕಾರ್ಯಕ್ರಮ
ಬೈಂದೂರು (ಸೆ, 9): ಜಿಲ್ಲಾ ವಿಕಲಚೇತನರ ಇಲಾಖೆ ಹಾಗೂ ಎಪಿಡಿ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಕುಂದಾಪುರ ತಾಲೂಕು ಹಾಗೂ ಬೈಂದೂರು ತಾಲೂಕಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಹಾಗೂ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ತಿಂಗಳ ಸಮುದಾಯಾಧಾರಿತ ಔದ್ಯೋಗಿಕ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಸಪ್ಟೆಂಬರ್,9 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. […]
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ
ವಂಡ್ಸೆ (ಸೆ,7): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೈಂದೂರು ತಾಲೂಕು ಕೊಲ್ಲೂರು ವಲಯ ಮೆಕ್ಕೆ ಒಕ್ಕೂಟದ ಛತ್ರಮಠ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಮೆಕ್ಕೆ ಒಕ್ಕೂಟದ ಅಧ್ಯಕ್ಷರಾದ ಎಂ ಜೆ ಬೇಬಿ ಅವರು ಅಧ್ಯಕ್ಷತೆ ವಹಿಸಿದ್ದರು. ವನದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿಯಾದ ನಾರಾಯಣ ಶೆಟ್ಟಿ ಅತ್ತಿಕಾರ್ ಕಾರ್ಯಕ್ರಮ […]
ಉಡುಪಿ ಹೆಲ್ಪ್ ಲೈನ್ (ರಿ):4ನೇಯ ವರ್ಷದ ಸಂಭ್ರಮದ ಕಾರ್ಯಕ್ರಮ
ಉಡುಪಿ (ಸೆ,7): ಹಸಿದವರ ಬಾಳಿನ ಆಶಾಕಿರಣವಾಗಿರುವ ಉಡುಪಿ ಹೆಲ್ಪ್ ಲೈನ್ (ರಿ) ಇದರ 4ನೇಯ ವರ್ಷದ ಸಂಭ್ರಮದ ಕಾರ್ಯಕ್ರಮ ಆಗಸ್ಟ್,28 ರಂದು ಅನಾಥ ಮಕ್ಕಳ ಬಾಳಿನ ಆಶಾ ಕಿರಣವಾದ ಸಂತೆಕಟ್ಟೆಯ ಕೃಷ್ಣಾನುಗ್ರಹ ಅನಾಥಾಶ್ರಮದಲ್ಲಿ ಆಚರಿಸಲಾಯಿತು. ಆ ಪ್ರಯುಕ್ತ ಆಶ್ರಮದ ಮಕ್ಕಳಿಗೆ ಊಟ,ಉಪಹಾರ ಹಾಗೂ ಹಣ್ಣು ಹಂಪಲು ಗಳನ್ನು ವಿತರಿಸಲಾಯಿತು. ಹಾಗೆಯೇ ಕೆ.ಜಿ ರೋಡ್ ಸಮೀಪ ಸುಬ್ರಹ್ಮಣ್ಯ ಆಚಾರ್ಯರವರ ತಾಯಿಗೆ ಆಹಾರ ಸಾಮಗ್ರಿಗಳ ಕಿಟ್ ನೀಡಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕ […]










