ಉಡುಪಿ (ಆ,15): ರಾಜ್ಯೋತ್ಸವ ಪುರಸ್ಕ್ರತ ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಇದರ ಜಿಲ್ಲಾ ಕಚೇರಿಯಲ್ಲಿ 75 ನೇ ಸ್ವಾತ್ರಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಘಟನೆಯ ಜಿಲ್ಲಾಧ್ಯಕ್ಷರಾದ ಶ್ರೀ ಶಿವರಾಮ ಕೋಟ ನೆರವೇರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸುವರ್ಣ ಹಿರಿಯಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಮಲ್ಪೆ : ಬೋಟ್ ದುರಂತ ತಪ್ಪಿಸಿದ ಈಶ್ವರ್ ಮಲ್ಪೆ ತಂಡ
ಮಲ್ಪೆ (ಆ, 14) : ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಎರಡು ಬೋಟುಗಳ ಹಗ್ಗ ತುಂಡಾಗಿ ನೀರಿನ ರಭಸಕ್ಕೆ ಸೈಂಟ್ ಮೇರಿಸ್ ಐಲ್ಯಾಂಡ್ ಕಲ್ಲಿನ ಬಳಿ ಬೋಟ್ ಗಳು ಸಮುದ್ರ ಪಾಲಾಗುವ ಸ್ಥಿತಿಯಲ್ಲಿದ್ದುದ್ದನ್ನು ಗಮನಿಸಿದ ಗಾಳ ಹಾಕುವವರು ಫೋನ್ ಕರೆಯ ಮುಖಾಂತರ ಆಪತ್ಭಾಂಧವ ಈಶ್ವರ್ ಮಲ್ಪೆರವರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಈಶ್ವರ್ ಮಲ್ಪೆ ಮತ್ತು ಜಮೀರ್ ಕಲ್ಮಾಡಿ ಸಮುದ್ರದಲ್ಲಿನ ಕಲ್ಲಿನ ಬಳಿ ತೆರಳಿ ಸಮುದ್ರ ಪಾಲಾಗುತ್ತಿದ್ದ ಎರಡು ಬೋಟುಗಳನ್ನು […]
ಎಸ್ಎಸ್ಎಲ್ಸಿ ಫಲಿತಾಂಶ : ಶೇಕಡಾ 98.24 ಅಂಕ ಪಡೆದ ಸುಚಿತ್ ಚಂದ್ರ
ಕುಂದಾಪುರ (ಆ, 13) : ಮುಂಬೈ ಪದ್ಮ ಕಮಲ ಕೇಟರರ್ಸ ಮಾಲಿಕರಾದ ಕಂಡ್ಲೂರು ಚಂದ್ರ ಮೊಗವೀರ ಹಾಗೂ ಶಿಕ್ಷಕಿ ಸುಜಾತ ಚಂದ್ರರ ಪುತ್ರ ಸುಚಿತ್ ಚಂದ್ರ ಕುಂದಾಪುರದ ವಿ.ಕೆ. ಆರ್. ಆಂಗ್ಲ ಮಾದ್ಶಮ ಶಾಲೆಯ ವಿದ್ಯಾರ್ಥಿಯಾಗಿದ್ದು ಈ ವರ್ಷ ನಡೆದ ಎಸ್ .ಎಸ್ .ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 98.24 ಅಂಕ ಪಡೆದಿರುತ್ತಾರೆ. ಶೈಕ್ಚಣಿಕ ಸಾಧನೆಯ ಜೊತೆಗೆ ಇತ ಕ್ರಿಕೆಟ್, ಕ್ವೀಜ್, ಚೆಸ್ ನಲ್ಲಿ ಆಸಕ್ತಿ ಹೊಂದಿದ್ದಾನೆ .
ಶ್ರೀ ಕೃಷ್ಣನ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಉಡುಪಿ (ಆ, 13) : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಉಡುಪಿಯ ಶ್ರೀ ಕೃಷ್ಣನ ದರ್ಶನ ಪಡೆದರು. ನಂತರ ಪರ್ಯಾಯ ಶ್ರೀಗಳ ಜೊತೆ ಸಮಾಲೋಚನೆ ನಡೆಸಿ ಶ್ರೀಗಳ ಆಶೀರ್ವಾದ ಪಡೆದರು. ಪರ್ಯಾಯ ಮಠಾಧೀಶರು ಮುಖ್ಯಮಂತ್ರಿಗಳಿಗೆ ಮಠದ ವತಿಯಿಂದ ಗೌರವ ಸಮರ್ಪಿಸಿದರು.
ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ವತಿಯಿಂದ ಬಡ ಮಹಿಳೆ ಕಾವೇರಿ ಮೊಗವೀರ್ತಿಯವರಿಗೆ ಮನೆ ನಿರ್ಮಾಣ
ಹೆಮ್ಮಾಡಿ (ಆ, 13) : ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ವತಿಯಿಂದ ಬೈಂದೂರು ತಾಲೂಕಿನ ನಾಡ ಗ್ರಾಮದ ಬಡ ಒಂಟಿ ಮಹಿಳೆ ಹೊರ್ನಿ ಮನೆ ಕಾವೇರಿ ಮೊಗವೀರ್ತಿಯವರಿಗೆ ನೂತನ ಮನೆ “ಅಮ್ಮ” ನಿರ್ಮಾಣ ಮಾಡಿ ಆಗಸ್ಟ್,15 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಸತ್ಯನಾರಾಯಣ ಪೂಜೆಯೊಂದಿಗೆ ನೂತನ ಗ್ರಹದ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಾನವೀಯ ನೆಲೆಯ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ […]
ಅಗಸ್ಟ್ 15 ರ ಸ್ವಾತಂತ್ರ ದಿನದಂದು ಬಡ ಕುಟುಂಬಕ್ಕೆ ನೂತನ ಮನೆ ಹಸ್ತಾಂತರಿಸಲಿರುವ ಗೋವಿಂದ ಬಾಬು ಪೂಜಾರಿ
ತ್ರಾಸಿ (ಆ, 12) : ಶ್ರೀ ಗೋವಿಂದ ಬಾಬು ಪೂಜಾರಿಯವರು ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ನ ಮೂಲಕ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರ ಜೊತೆಗೆ ಬಡ ವರ್ಗದ ಜನರಿಗೆ ಕಷ್ಟ ಕಾಲದ ಆಪತ್ಬಾಂಧವನಾಗಿದ್ದಾರೆ. ಆಶ್ರಯ ಇಲ್ಲದಿರುವ ಕಡು ಬಡವರಿಗೆ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈಗಾಗಲೇ ಮೂರು ಮನೆಗಳನ್ನು ಹಸ್ತಾಂತರಿಸಿದ್ದು , ಇದೀಗ ನಾಲ್ಕನೇ ಮನೆ ಹಸ್ತಾಂತರಕ್ಕೆ ಸಿದ್ದಗೊಳ್ಳುತ್ತಿದೆ. ತ್ರಾಸಿ ಸಮೀಪದ ಕಂಚುಗೋಡು ಭಗತ್ ನಗರದ ಶ್ರೀಮತಿ […]
ಕೊಲ್ಲೂರು : ನವಚೈತನ್ಯ ಜೆ. ಎಲ್. ಜಿ. ತಂಡದ ಉದ್ಘಾಟನೆ
ಕೊಲ್ಲೂರು (ಆ, 12) : ಕೊಲ್ಲೂರು ವಲಯ ಮೆಕ್ಕೆ ಒಕ್ಕೂಟದ ವಾಟೇಗುಂಡಿಯಲ್ಲಿ ನೂತನವಾಗಿ ನವಚೈತನ್ಯ ಜೆ.ಎಲ್.ಜಿ. ತಂಡದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ರಾಮ ಎನ್. ಸಂಘದ ಬಗ್ಗೆ ಮಾಹಿತಿ ನೀಡಿ ದಾಖಲಾತಿ ಹಸ್ತಾಂತರಿಸಿದರು. ಒಕ್ಕೂಟದ ಸೇವಾಪ್ರತಿನಿಧಿ ರಾಮ ಶೆಟ್ಟಿ ಅತ್ತಿಕಾರ್, ಒಕ್ಕೂಟದ ಪದಾಧಿಕಾರಿ ಮಂಜುನಾಥ್ ನಾಯ್ಕ್ ರವರ ಸಮ್ಮುಖದಲ್ಲಿ ನೂತನ ಸಂಘವನ್ನು ಉದ್ಘಾಟನೆ ಮಾಡಲಾಯಿತು. ಸಭೆಯಲ್ಲಿ ನವಚೈತನ್ಯ ಸಂಘದ ಸದಸ್ಯರು ಉಪಸ್ಥಿತರಿದ್ದು, ಸಂಘದ ಉದ್ಘಾಟನೆಯ ಸವಿ […]
ನನ್ನ ಭಾರತಕ್ಕೆ ಕೇವಲ ಒಂದೇ ಚಿನ್ನ ಗೆಲ್ಲುವ ಸಾಮರ್ಥ್ಯವೇ…?
ನನ್ನ ಭಾರತಕ್ಕೆ ಕೇವಲ ಒಂದೇ ಚಿನ್ನ ಗೆಲ್ಲುವ ಸಾಮರ್ಥ್ಯವೇ…?ನನ್ನ ಭಾರತದಲ್ಲಿ ದೇಶಕ್ಕೆ ಒಬ್ಬ ಅಲ್ಲ … ಜಿಲ್ಲೆಗೆ ಒಬ್ಬ ನೀರಜ್ ಚೋಪ್ರ ಸಿಗುತ್ತಾರೆ. ಹೇಗೆ?ಒಂದು ಚಿನ್ನ ಗೆದ್ದವರಿಗೆ ನೂರು ತಲೆಮಾರಿಗಾಗುವಷ್ಟು ಸುರಿಯುವುದಕ್ಕಿಂತ ನೂರು ಚಿನ್ನ ಗೆಲ್ಲಲು ನೂರು ಬಡ ಪ್ರತಿಭೆಗಳನ್ನು ಗುರುತಿಸಿ ಆರ್ಥಿಕ ವೆಚ್ಚ ಸಂಪೂರ್ಣ ಸರ್ಕಾರಗಳು ಬರಿಸಿದರೆ ಇದು ಸಾಧ್ಯ. ಜೊತೆಗೆ ಅತೀ ಹೆಚ್ಚು ಚಿನ್ನ ಗೆಲ್ಲುವ ದೇಶವೂ ನಮ್ಮದಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಖುಷಿಯ ಜೊತೆಗೆ ಹೆಮ್ಮೆಯೂ […]
ತನ್ನ ಸಾಧನೆಯನ್ನು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ಗೆ ಅರ್ಪಿಸಿದ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಣೀತಾ
ಕುಂದಾಪುರ (ಆ, 11) : ಬಸ್ರೂರಿನ ನಿವಾಸಿ, ಸರಕಾರಿ ಪ್ರೌಢಶಾಲೆ ಕೋಣಿಯ ಮುಖ್ಯೋಪಾಧ್ಯಾಯರಾದ ವಿದ್ವಾನ್ ಮಾಧವ ಅಡಿಗ ಹಾಗೂ ಶ್ರೀಮತಿ ಲಕ್ಷ್ಮೀ ಎಮ್, ಅಡಿಗರವರ ಪುತ್ರಿ ಪ್ರಣೀತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿ ರಾಜ್ಯದ ಗಮನ ಸೆಳೆದಿದ್ದಾಳೆ. ಪ್ರಣೀತಾ ಹೇಳುವಂತೆ “ಭವಿಷ್ಯದಲ್ಲಿ ಎಂಜಿನಿಯರ್ ಆಗಿ ಸಮಾಜ ಕಟ್ಟುವ ಬಯಕೆ ನನಗಿದೆ , ಕರೋನಾ ಆತಂಕದ ಕ್ಲಿಷ್ಟ ಕಾಲದಲ್ಲಿಯೂ ಶಿಕ್ಷಕರ ನಿರಂತರ ಪ್ರೋತ್ಸಾಹ , ತಂದೆ ತಾಯಿಯವರ […]
ಎಸ್ಎಸ್ಎಲ್ಸಿ ಫಲಿತಾಂಶ : ಕುಂದಾಪುರದ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯ ಸ್ರಜನ್ ಭಟ್ 625 ಕ್ಕೆ 625 ಅಂಕ
ಕುಂದಾಪುರ (ಆ, 10) : ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಸೃಜನ್ ಭಟ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಆಯಾಯ ದಿನದ ಪಾಠವನ್ನು ಆಂದೇ ಕಲಿತು ಮುಗಿಸುತ್ತಿದ್ದಿದ್ದರಿಂದ ಹೆಚ್ಚು ಒತ್ತಡದಿಲ್ಲದೆ ಪರೀಕ್ಷೆ ಬರೆಯಲು ಸಾಧ್ಯವಾಯಿತು. ಶಿಕ್ಷಕರು ಹಾಗೂ ತಂದೆ-ತಾಯಿಯ ಸಹಕಾರ ಮರೆಯಲಾಗದ್ದು ಎಂದು ಸೃಜನ್ ಅನುಭವವನ್ನು ಹಂಚಿಕೊಂಡಿದ್ದಾರೆ. ಕುಂದಾಪುರ ತಾಲೂಕು ವಡೇರ್ಹೋಬಳಿಯ ನಿವಾಸಿಗಳು […]










