ಬೆಂಗಳೂರು (ಜು, 18) : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಜು. 20ಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟವಾಗಲಿದೆ ಎಂದು ಪಿ.ಯು ಶಿಕ್ಷಣ ಇಲಾಖೆಯ ನಿರ್ದೇಶಕರ ಕಛೇರಿಯಿಂದ ಪ್ರಕಟಣೆ ಹೊರಬಿದ್ದಿದೆ. 2020-21ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಹೊಸ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ಫಲಿತಾಂಶವನ್ನು ವೀಕ್ಷಿಸುವ ಸಲುವಾಗಿ ನೋಂದಣಿ ಸಂಖ್ಯೆ ನೀಡಲಾಗುತ್ತಿದೆ.ಫಲಿತಾಂಶ ಪ್ರಕಟಗೊಳಿಸುವ ವಿಚಾರದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ರೋಟರಿ ಕ್ಲಬ್ ಕುಂದಾಪುರ : 2021-22 ನೇ ಸಾಲಿನ ಪದಪ್ರಧಾನ ಸಮಾರಂಭ
ಕುಂದಾಪುರ (ಜು, 17): ರೋಟರಿ ಕ್ಲಬ್ ಕುಂದಾಪುರ ದ 2021- 22 ನೇ ಸಾಲಿನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಜುಲೈ,16 ರಂದು ಕೋಟೇಶ್ವರದ ಸಹನ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಜರುಗಿತು. ರೋಟರಿ ವರ್ಷ 2021- 22ರ ಕ್ಲಬ್ ನ ಸಾರಥ್ಯವನ್ನು Rtn Phf ಶಶಿಧರ್ ಹೆಗ್ಡೆಯವರು ವಹಿಸಿಕೊಂಡರು. ಸಮಾಜಸೇವೆಯಲ್ಲಿ ರೋಟರಿಯ ಮಹತ್ವ ಹಾಗೂ ತಮ್ಮ ಮುಂದಿರುವ ಸವಾಲುಗಳ ಬಗ್ಗೆ ತಿಳಿಸಿ ಸದಸ್ಯರ ಸಹಕಾರವನ್ನು ಕೋರಿದರು. ಈ ಕಾರ್ಯಕ್ರಮಕ್ಕೆ ಮುಖ್ಯ […]
ಭಾಗಮಂಡಲ : ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ತುರ್ತು ಸಂದರ್ಭದಲ್ಲಿ ಉಚಿತ ಆಟೋ ರೀಕ್ಷಾ ಸೇವೆ
ಭಾಗಮಂಡಲ (ಜು, 17) : ಕೋವಿಡ್ ಸಂಕಷ್ಟ ಹಾಗೂ ಸವಾಲುಗಳ ನಡುವೆಯೂ ಕರ್ನಾಟಕ ಸರಕಾರವು ಅತ್ಯಂತ ಸುರಕ್ಷಿತ ಮುಂಜಾಗ್ರತಾ ಕ್ರಮ ಗಳೊಂದಿಗೆ ಈ ಬಾರಿಯ ಎಸ್. ಎಸ್. ಎಲ್. ಸಿ. ಪರೀಕ್ಷೆ ಯನ್ನು ಇದೇ ಜುಲೈ 19 ರಿಂದ ನಡೆಸಲು ತೀರ್ಮಾನಿಸಿದೆ. ಹಾಗೆಯೇ ಪರೀಕ್ಷಾ ಕೇಂದ್ರಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕೂಡ ಸರ್ಕಾರದ ವತಿಯಿಂದ ಮಾಡಲಾಗಿದೆ. ಒಂದು ವೇಳೆ ದೂರದಿಂದ ಕಾಲ್ನಡಿಗೆಯಲ್ಲಿ ಬಂದು ಆಕಸ್ಮಿಕ ವಾಗಿ ಬಸ್ಸು […]
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ
ಗಂಗೊಳ್ಳಿ (ಜು, 17) : ಇಲ್ಲಿನ ಸಮುದಾಯ ಹಿತರಕ್ಷಣಾ ಸಮಿತಿ(ರಿ). ಗಂಗೊಳ್ಳಿ ವತಿಯಿಂದ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. 2021- 22 ನೇ ಶೈಕ್ಷಣಿಕ ಸಾಲಿನಲ್ಲಿ 8, 9 ಮತ್ತು 10ನೇ ತರಗತಿಯಲ್ಲಿ ಕಲಿಯುತ್ತಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಮಾತ್ರ ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪ್ರಬಂಧದ ವಿಷಯ ದೇಶಪ್ರೇಮ ಎಂದರೆ?. […]
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ : ‘ಶ್ರೀ ವರಲಕ್ಷ್ಮೀ ನಿಲಯ’ ಪ್ರವೇಶೋತ್ಸವ
ಬೈಂದೂರು (ಜು, 12): ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರ ಪುತ್ರ ಮಾಸ್ಟರ್ ಪ್ರಜ್ವಲ್ ಜಿ. ಪೂಜಾರಿ ಯವರ ಜನ್ಮದಿನದ ಶುಭ ಸಂದರ್ಭದಲ್ಲಿ ಕೊಡೇರಿಯ ರವಳುಮನೆ ನಾಗಮ್ಮ ಎನ್ನುವ ಬಡ ಮಹಿಳೆಯ ಕುಟುಂಬಕ್ಕೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ನ ಅಧ್ಯಕ್ಷರಾದ ಶ್ರೀ ಗೋವಿಂದ ಬಾಬು ಪೂಜಾರಿಯವರು ನೂತನ ಗ್ರಹ ನಿರ್ಮಿಸಿ ಜುಲೈ 16 ರಂದು ಪ್ರವೇಶೋತ್ಸವದ ಜೊತೆಗೆ ಮನೆಯ ಕೀ ಯನ್ನು ರವಳುಮನೆ ನಾಗಮ್ಮ ರವರಿಗೆ ಹಸ್ತಾಂತರಿಸಿದರು. […]
ಬಗ್ವಾಡಿ:ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರರ ಮನೆ ನಿರ್ಮಾಣಕ್ಕೆ ಶ್ರೀ ಗೋವಿಂದ ಬಾಬು ಪೂಜಾರಿ ನೆರವು
ಬಗ್ವಾಡಿ (ಜು, 15) : ಮಾರಣಕಟ್ಟೆ ಮೇಳದ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಮೊಗವೀರ ಬಗ್ವಾಡಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿರುವುದರ ಜೊತೆಗೆ ವಾಸಯೋಗ್ಯ ಮನೆಇಲ್ಲದೆ ತೀರ ಕಷ್ಟದಲ್ಲಿರುವುದನ್ನು ಗಮನಿಸಿದ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರು ಸ್ವತಃ ಕಲಾವಿದ ಸುಬ್ರಹ್ಮಣ್ಯನ ಮನೆಗೆ ಭೇಟಿ ನೀಡಿ ನೂತನ ಮನೆ ನಿರ್ಮಾಣಕ್ಕೆ 50,000 ರೂಪಾಯಿ ಚೆಕ್ ಹಸ್ತಾಂತರಿಸಿದರು. ಅಮ್ಮಾ ವೇದಿಕೆಯ ಸದಸ್ಯರ ಜೊತೆ ಸೇರಿ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ […]
ಬದುಕು
ಹುಟ್ಟು ಸಾವಿನ ಮಧ್ಯದಲ್ಲಿಅಲ್ಪ ದಿನದ ಈ ಬದುಕಿನಲ್ಲಿಬಂದು ಹೋಗುವವರು ಹಲವರುಕೊನೆ ತನಕ ಉಳಿಯುವವರು ಕೆಲವರು ತಂದೆ ತಾಯಿಗೆ ತಕ್ಕ ಮಕ್ಕಳಾಗಿಗುರು ಹಿರಿಯರಿಗೆ ಗೌರವಿಸಿಸಮಾಜಕ್ಕೆ ಮಾದರಿಯಾಗಿಬದುಕ ಬೇಕೆನ್ನುವ ಬಯಕೆ ಬದುಕ ಪುಟಗಳು ನಮಗರಿವಿಲ್ಲದೇ ಸರಿಯುತಿದೆಕಾಲಚಕ್ರದ ಸುಳಿಯಲಿಬದುಕ ಪಯಣವ ನಿಲ್ಲಿಸಲು!ಹೆದರಬೇಕಿಲ್ಲ! ಅದು ಪ್ರಕ್ರತಿಯ ನಿಯಮ ಇರುವಷ್ಟು ದಿನ ಆಗ ಬಯಸುವ ವಿಶ್ವ ಮಾನವಎಲ್ಲರಿಗೂ ಹಂಚುವ ಪ್ರೀತಿ ಸ್ನೇಹವಸಾರ್ಥಕ ಜೀವನದ ನಿರೀಕ್ಷೆಯಲಿ ಪ್ರತಿ ಕ್ಷಣವಬನ್ನಿ, ಇರುವಷ್ಟು ದಿನ ಉತ್ಸಾಹದಿ ಬದುಕುವ .. ಎ ಎಸ್ […]
ಮಂಗಳೂರು ವಿಶ್ವವಿದ್ಯಾನಿಲಯ : ಬಾಕಿ ಉಳಿದ ಸೆಮಿಸ್ಟರ್ ಪರೀಕ್ಷೆ ನಡೆಸಲು ಚಿಂತನೆ
ಮಂಗಳೂರು (ಜು,13) : ಕೋವಿಡ್ ಕಾರಣದಿಂದಾಗಿ ಬಾಕಿ ಉಳಿದಿರುವ ಮಂಗಳೂರು ವಿ.ವಿ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರಥಮ,ತ್ರತೀಯ ಹಾಗೂ ಐದನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಮಂಗಳೂರು ವಿಶ್ವವಿದ್ಯಾನಿಯ ಚಿಂತನೆ ನಡೆಸಿದೆ. ಬಾಕಿ ಉಳಿದ ಪರೀಕ್ಷೆಗಳನ್ನು ನಡೆಸುವ ಕುರಿತಾದ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಿ ಅನುಮತಿ ಪಡೆಯಲು ವಿ.ವಿ. ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ನಿರ್ಧರಿಸಿದ್ದಾರೆ. ಬಾಕಿ ಉಳಿದ ಪರೀಕ್ಷೆಗಳನ್ನು ಆದಷ್ಟು ಬೇಗ ನಡೆಸಿ ಮೌಲ್ಯಮಾಪನ ನಡೆಸಲು ಚಿಂತನೆ ನಡೆಸಲಾಗಿದೆ. ಆಗಸ್ಟ್ […]
ಮಹಾನಗರ ಮತ್ತು ಅವನು
ಮಹಾನಗರದ ಬೀದಿಗಳಲ್ಲಿ ನಡೆಯುತ್ತಿದ್ದಾನೆಬಟ್ಟೆಯಂಗಡಿಯ ಮುಂದೆ ಬೊಂಬೆಗಳ ಮೈತುಂಬವಿಧವಿಧವಾದ ಬಟ್ಟೆಗಳುಹೋಟೆಲಿನೆದುರಲ್ಲಿ ಬಗೆಬಗೆಯ ತಿಂಡಿಯ ಚಿತ್ರಗಳುಇಂದ್ರನ ರಥವನ್ನೂ ಮೀರಿಸುವ ಹೊಸಬಗೆಯ ಕಾರುಗಳುಹೊಸ ಫ್ಯಾಷನ್ನಿನ ಹರಿದ ಜೀನ್ಸ್ ತೊಟ್ಟ ಯುವಪಡೆಮಾಲುಗಳ ಮುಂದೆ ಬೆಳಗುವ ಬಣ್ಣಬಣ್ಣದ ಲೈಟುಗಳೆದುರುಚಂದ್ರನ ಬೆಳದಿಂಗಳು ಯಾವ ಲೆಕ್ಕ?ನಟನ ಅರವತ್ತಡಿ ಎತ್ತರದ ಕಟೌಟಿನ ಮುಂದೆ ಅವನು ಕುಬ್ಜ ಮಾಲ್ ನೆದುರಿನ ಸುಸಜ್ಜಿತ ಬಸ್ ಸ್ಟಾಪ್ ನಲ್ಲಿ…ನಗರ ಸಾರಿಗೆ ಬಸ್ ಗಾಗಿ ಕಾದುಹೆಚ್ಚೂ ಕಡಿಮೆ ಕೊಳಗೇರಿಯಂತಿರುವ ಪ್ರದೇಶದತಗಡಿನ ಮಾಡಿನ ಶೆಡ್ ಸೇರುತ್ತಾನೆತೇಪೆ ಹಚ್ಚಿದ ಜೀನ್ಸ್ […]
ಕೋಟೇಶ್ವರ : ಸಹಾಯಹಸ್ತ ಅಂಕದಕಟ್ಟೆ ಹಾಗೂ ಕಟ್ಟೆ ಫ್ರೆಂಡ್ಸ್ ಅಂಕದಕಟ್ಟೆ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಗೌರವ ಸಮರ್ಪಣೆ
ಕೋಟೇಶ್ವರ (ಜು,13) : ಕರೋನಾ ಮೊದಲ ಅಲೆಯ ದಿನಗಳಿಂದ ಇಲ್ಲಿಯವರೆಗೂ ಮತ್ತು ಕರೋನಾ ನಿರ್ನಾಮವಾಗುವವರೆಗೂ ಮುಂದಿನ ಸರತಿಯಲ್ಲಿ ನಿಂತು ಕರೋನಾ ವಿರುದ್ದ ಹೋರಾಡುವುದರ ಜೊತೆಗೆ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ನಿಸ್ವಾರ್ಥವಾಗಿ ಸೇವೆಗೈಯುತ್ತಿರುವ ಆಶಾ ಕಾರ್ಯಕರ್ತರ ಸೇವೆಗೆ ಈ ಸಮಾಜದ ಋಣ ಸಾಗರದಷ್ಟಿದೆ. ಆ ದಿಸೆಯಲ್ಲಿ ಸಾಸಿವೆಯಷ್ಟಾದರು ಋಣ ತೀರಿಸುವ ಶಕ್ತಿ ಭಗವಂತ ನಮ್ಮ ಬಳಗಕ್ಕೆ ನೀಡಿದ್ದಾನೆ ಎಂಬ ಆಶಯದೊಂದಿಗೆ ಜುಲೈ 13 ರಂದು ಕೋಟೇಶ್ವರ ಸಮೀಪದ ಅಂಕದಕಟ್ಟೆಯಲ್ಲಿ ಸಹೃದಯಿ ದಾನಿಗಳ […]










