ಯಾರು ಎಂದು ಕೆತ್ತದಅರ್ಥಹೀನ ಶಿಲೆಯಾಗದಂತಹಯಾರೆಷ್ಟೇ ಚುಚ್ಚಿದರುಕಿಂಚಿತ್ತೂ ನೋವಾಗದಂತಹಯೋಗ್ಯತೆ ಇಲ್ಲದವರಸ್ಪರ್ಶಕ್ಕೆ ಸಂಕುಚಿತವಾಗದಂತಹಕಂಡ ಕಂಡವರ ಕಾಲ ಧೂಳಿಗೆಮಾಸಿ ಮಸುಕಾಗದಂತಹಕಳಸದ ಬಳಿ ಇಟ್ಟರು ಸರಿಮೆಟ್ಟಿಲ ಬಳಿ ಇಟ್ಟರು ಸರಿಹಿಗ್ಗದೆ ಕುಗ್ಗದೆ ಸಮಚಿತ್ತದಿಂದಿರುವಂತಹಕಲ್ಲಾಗಬೇಕಿತ್ತು ನಾನುನೋವು ದುಃಖಗಳ ನೀಡುವವಿಷಯದಲ್ಲಾದರೂ ಅರೆಕ್ಷಣಕನಿಷ್ಠ ಮನಸಾದರೂಕಲ್ಲಾಗಬೇಕಿತ್ತು. -ಸುಶ್ಮಿತಾ ನೇರಳಕಟ್ಟೆ
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಅಂಪಾರು : ವಿಕಲಚೇತನರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ
ಅಂಪಾರು (ಜೂ, 22): ಉಡುಪಿ ಜಿಲ್ಲೆಯ ಸಕ್ಷಮ ಸಂಸ್ಥೆಯಿಂದ ಅಂಪಾರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ವಿಕಲಚೇತನರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಜೂನ್,22 ರಂದು ಅಂಪಾರು ಗ್ರಾಮ ಪಂಚಾಯತ್ ಕೇಂದ್ರದಲ್ಲಿ ನಡೆಯಿತು. ಉಡುಪಿ ಜಿಲ್ಲೆಯ ಸಕ್ಷಮ ಸಂಸ್ಥೆಯ ಶ್ರೀ ನಿತೇಶ್ ಮಲ್ಪೆ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಅಂಪಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, VRW ಸುಜಾತ ಶೆಟ್ಟಿ, ಹಾಗೂ […]
ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್ : ಸಿ.ಇ.ಟಿ. ಪರೀಕ್ಷೆಯ ಅರ್ಜಿ ಸಲ್ಲಿಸಲು ಸಹಾಯ ಕೇಂದ್ರ
ಉಡುಪಿ (ಜೂ, 22): ಕರ್ನಾಟಕದಲ್ಲಿ ವೃತ್ತಿ ಶಿಕ್ಷಣ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿ.ಇ.ಟಿ.- 2021 ರ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು 15 ಜೂನ್ 2021ರಿಂದ ಪ್ರಾರಂಭವಾಗಿದ್ದು 10 ಜುಲೈ 2021ರ ವರೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಬಾರಿಯೂ ಈ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆಯಲಿದೆ. ಪ್ರಸ್ತುತ ಜಿಲ್ಲೆಯಲ್ಲಿ ಜಾರಿ ಇರುವ ಕರೋನಾ ನಿಯಂತ್ರಣ ಮಾರ್ಗಸೂಚಿಯ ಅನ್ವಯ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ […]
ವಂಡ್ಸೆ : ಶಾಸಕರ ನಿವಾಸದಲ್ಲಿ ವಿಶ್ವ ಯೋಗ ದಿನಾಚರಣೆ
ವಂಡ್ಸೆ (ಜೂ, 22): ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಲು ಯೋಗಾಸನ ಅತ್ಯವಶ್ಯಕ. ಆ ನಿಟ್ಟಿನಲ್ಲಿ ಜೂನ್, 21 ರಂದು ಜಗತ್ತಿನ ವಿವಿಧ ಭಾಗಗಳಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಗುತ್ತದೆ. ನಮ್ಮ ರಾಜ್ಯದ ವಿವಿಧ ಭಾಗಗಳಲ್ಲೂ ವಿಶ್ವ ಯೋಗ ದಿನಾಚರಣೆ ಆಚರಿಸಿದ್ದು, ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ತಮ್ಮ ನೆಂಪುವಿನಲ್ಲಿರುವ ನಿವಾಸದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುವುದರ ಮೂಲಕ ಯೋಗಾಸನದ ಮಹತ್ವವನ್ನು ತಿಳಿಸಿದರು. ಈ […]
ಶ್ರೀ ವರಲಕ್ಷ್ಮೀ ಚಾರಿಟೇಬಲ್ (ರಿ) ಉಪ್ಪುಂದ : ಜೂನ್, 26 ರಂದು ಬಡ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ ಕಾರ್ಯಕ್ರಮ
ಉಪ್ಪುಂದ (ಜೂನ್, 22): ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಸರಿಸುಮಾರು ಆರು ಸಾವಿರಕ್ಕೂ ಮಿಕ್ಕಿ ಬಡಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ನ್ನು ವಿತರಿಸಿರುವ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರ ಜನ್ಮದಿನದ ಶುಭ ಸಂದರ್ಭದಲ್ಲಿ ಉಪ್ಪುಂದದ ಕಾಸನಾಡಿ ಗ್ರಾಮದ ವಿಜಯ ರಮೇಶ್ ಪೂಜಾರಿಯವರಿಗೆ ಟ್ರಸ್ಟ್ ವತಿಯಿಂದ ನೀಡಲಾಗುವ ನೂತನ ಗ್ರಹ ‘ಶ್ರೀ ವರಲಕ್ಷ್ಮೀ ನಿಲಯ’ ದ ಪ್ರವೇಶೋತ್ಸವ ಹಾಗೂ ಹಸ್ತಾಂತರ ಕಾರ್ಯಕ್ರಮ ಜೂನ್, 26 ರ ಶನಿವಾರದಂದು ಉಪ್ಪುಂದದ ಕಾಸನಾಡಿಯಲ್ಲಿ ಜರುಗಲಿದೆ. […]
ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಕುಂದಾಪುರ : 2021-22 ನೇ ಸಾಲಿನ ದಾಖಲಾತಿ ಆರಂಭ
ಕುಂದಾಪುರ (ಜೂ, 21) : ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ – ಬೋರ್ಡ್ ಹೈಸ್ಕೂಲ್) ಇಲ್ಲಿನ 2021-22 ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಹೊಸದಾಗಿ 8 ಮತ್ತು 9 ನೇ ತರಗತಿಗಳಿಗೆ ಸೇರ್ಪಡೆಗೊಳ್ಳಲು ದಾಖಲಾತಿ ಆರಂಭಗೊಂಡಿದೆ. ಮಕ್ಕಳ ದಾಖಲಾತಿ ಪ್ರಕ್ರಿಯೆ ಬಯಸುವ ಪೋಷಕರು ಈ ಕೆಳಗೆ ನೀಡಲಾದ ಲಿಂಕ್ ಬಳಸಿ ಆನ್ಲೈನ್ ಮೂಲಕ ಗೂಗಲ್ ದಾಖಲಾತಿ ಫಾರ್ಮ್ ತುಂಬಿಸಿ ತಮ್ಮ ಮಕ್ಕಳ ದಾಖಲಾತಿಯನ್ನು ಖಾತ್ರಿ […]
“ನನ್ನ ತಂದೆ”
ಕಣ್ಣು ತೆರೆದಾಗ ನಾ ಕಂಡ ಶಿವ ನೀನುಮನೆಯಂಬ ಗುಡಿಯಲಿ ನೆಲಸಿರುವ ದೇವರು ನೀನುನಿನ್ನ ನಡೆಯೇ ವಿದ್ಯಾದಾಯಿನಿನಿನ್ನ ನುಡಿಯೇ ದಿವ್ಯವಾಣಿನೀನೇ ನನ್ನ ಬಾಳ ಅನುಗ್ರಹನೀನೇ ನನ್ನ ಸರ್ವಸ್ವ ….ನನ್ನ ತಂದೆ. ನೀನು ಕಣ್ತುಂಬ ನಿದ್ದೆ ಮಾಡಿದ್ದು ನೋಡಿಲ್ಲ ನಾನುನಮ್ಮ ಬದುಕು ರೂಪಿಸು ಹಗಲಿರುಳು ದುಡಿದವ ನೀನುನಿನ್ನ ಮನದಲ್ಲಿ ತುಂಬಿತ್ತು ನಮ್ಮ ಉಜ್ವಲ ಭವಿಷ್ಯದ ಚಿಂತೆನೀನೇ ನನ್ನ ಸರ್ವಸ್ವ ….ನನ್ನ ತಂದೆ. ನಿನ್ನ ನಗುವೆ ನನಗೆ ಕೋಟಿ ಧನನೀನಿರುವ ತಾಣವೇ ನನಗೆ ದೇವಸ್ಥಾನನಿನ್ನ […]
ಮೊಳಕೆ
ಕಣ್ಣೀರು ಚೆಲ್ಲಬೇಡಮೊಳಕೆಯೊಂದು ನಾಳೆಯಿಂದ ನಿನ್ನಕಣ್ಣೀರನ್ನೇ ಬಯಸೀತುಕಣ್ಣೀರು ಚೆಲ್ಲಬೇಡಅದನ್ನೇ ಹೀರಿದ ನೆಲ ದಿನ ಕಳೆದಂತೆಬಂಜರು ಭೂಮಿಯಾದೀತುಸಾಧ್ಯವಾದರೆ ನೀನೊಮ್ಮೆ ನಕ್ಕುಬಿಡುದ್ವೇಷದ ಬೀಜ ಬಿತ್ತಿದವರೆಲ್ಲ ಒಳಗೊಳಗೇಕುದ್ದು ಬೆಂದು ಹೋಗಲಿಇಲ್ಲವಾದರೆ ಅಂತೆಯೇ ಸುಮ್ಮನಿದ್ದುಬಿಡುನಿನ್ನ ಕೆಣಕಿದವರಿಗೆಲ್ಲ ನೀನೊಂದು ಬಂಡೆಯೆಂದುಗೊತ್ತಾಗಿ ಸುಮ್ಮನಾಗಿಹೋಗಲಿಶಸ್ತ್ರ ಹೋರಾಟ ಗೊತ್ತಿರಲೇ ಬೇಕಾಗಿಲ್ಲ ಗೆಲ್ಲಲುಸುಮ್ಮನೆ ಬಂದೂಕನ್ನೆತ್ತಿಕೋ, ಗುರಿಯಿಡುಕುದುರೆಯ ಮೇಲೆ ಬೆರಳಿರಲಿಎದುರಿನವನು ಖಡ್ಗ ಕೆಳಗಿಡಬಹುದು ಅಥವಾಬಿಳಿ ಪತಾಕೆ ಹಾರಿಸಿಯಾನುಸುಮ್ಮನೆ ಬಂದೂಕಿನ ಕುದುರೆಯನ್ನೆಳೆದು ಬಿಡುನಳಿಕೆಯಿಂದ ಕೆಂಗುಲಾಬಿಯೇ ಚಿಮ್ಮಲಿಸೋತರೂ ಜಯ ನಿನ್ನದಾಗಬಹುದುಬಾನಿಂದ ಹನಿಯೊಂದು ಚೆಲ್ಲಬಹುದುಮೊಳಕೆ ಚಿಗುರಲೂ ಬಹುದು ಕಿಗ್ಗಾಲು ಜಿ. […]
ಕನಸುಗಳು ಮಾರಾಟವಾಗಿದೆ…!
ಕನಸುಗಳು ಮಾರಾಟವಾಗಿದೆ…! ಏಳು ಸುತ್ತಿನ ಕೋಟೆಯಲಿ ….ಕನಸುಗಳು ಇದೆ ನೂರಾರುಸಾಗುತಿದೆ ಕಾವಲುದಾರಿಯಲ್ಲಿ ಗುರಿ, ಗುರು ಮರೆತು ಬೇಕಾಗಿದ್ದಾರೆ… ಕನಸುಗಳಿಗೆ ಬಣ್ಣ ಹಚ್ಚುವವರು ಬೇಕು… ಆಸೆಗಳಿಗೆ ದಾರಿ ತೋರಿಸುವವರುಕನಸು ಮಾರಿ ಹೊರಟಿದೆ ಜೀವಗಳುಬಿಳಿ ಬಟ್ಟೆ ಹೊದ್ದು, ಬಣ್ಣದ ಬಟ್ಟೆ ಮರೆತು. ಸಾವುವೆಂಬ ಕಠಿಣ ಶಬ್ದ ಮೆಲ್ಲನೆ ಹೇಳಿ ಸೂಚನೆ ಕೊಡದೆ ಹೊರಟು ನಿಂತಿದ್ದಾರೆಯಾರಿಗೂ ಹೇಳದೇ…. ಏನನು ಕೇಳದೆ ಯಾರನು ಕಾಯದೆ… ಬಾರದ ಲೋಕದಡೆ …ಕನಸು ಹೊತ್ತವನ ಪ್ರಯಾಣ…! ಈಶ್ವರ ಸಿ ನಾವುಂದ
ಸಂತ ಮೇರಿ ಮಹಾವಿದ್ಯಾಲಯ, ಶಿರ್ವ : ಅಂತರಾಷ್ಟ್ರೀಯ ಯೋಗ ದಿನಾಚರಣೆ
ಶಿರ್ವ (ಜೂ, 21): ಅಂತರಾಷ್ಟ್ರೀಯ ಯೋಗ ದಿನವನ್ನು ಜೂನ್ 21ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.ಪ್ರಸ್ತುತ ಸಾಲಿನಲ್ಲಿ ಕೋವಿಡ್ -19 ಕಾರಣದಿಂದಾಗಿ ಸಾರ್ವಜನಿಕ ಸಭೆ,ಸಮಾರಂಭ ಹಾಗೂ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇಧಿಸುವುದರಿಂದ, ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ,ಯೋಗ ದಿನವನ್ನು ಆಚರಿಸಲು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆಯುಷ್ ಇಲಾಖೆ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಆಯುಷ್ ಮಂತ್ರಾಲಯವು ನೀಡಿರುವ ಮಾರ್ಗಸೂಚಿಯಂತೆ “Be With Yoga, Be At Home” ಘೋಷವಾಕ್ಯದೊಂದಿಗೆ […]










