ಬೆಂಗಳೂರು (ಜೂ. 06): CySecK ಸೈಬರ್ ಸೆಕ್ಯೂರಿಟಿ ಕರ್ನಾಟಕ ಇದು ಸೈಬರ್ ಶಿಕ್ಷಣವನ್ನು ಕರ್ನಾಟಕದಲ್ಲಿ ಒಂದು ಜನಾಂದೋಲನ ಕಾರ್ಯಕ್ರಮವಾಗಿ ರೂಪಿಸುತ್ತಿದ್ದು, ಇದು ತನ್ನ ದ್ವಿಭಾಷಾ ಸೈಬರ್ ಸುರಕ್ಷತೆ ಸುದ್ದಿಪತ್ರದ ಮೊದಲನೇ ಆವೃತ್ತಿಯಾದ “ಸೈಬರ್ ವಾರ್ತಿಕಾ” ವನ್ನು ನಿಮ್ಮೊಂದಿಗೆ ಹಂಚಿಕೊಂಡಿದೆ. ಈ ಸುದ್ದಿ ಪತ್ರದಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉಪಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ. ಸುದ್ದಿಪತ್ರವು ಆಸಕ್ತಿದಾಯಕ ಮಾಹಿತಿಗಳನ್ನು ಒಳಗೊಂಡಿದ್ದು, “ರಕ್ಷಕ ಮತ್ತು ಭಕ್ಷಕ” ಸೈಬರ್ ಮ್ಯಾಸ್ಕಾಟ್ಗಳ ಮಾರ್ಗದರ್ಶನಗಳನ್ನು ಇದು […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಐಐಐಟಿ ಧಾರವಾಡ : ಬಿ.ಟೆಕ್. ಹಾಗೂ ಬಿ.ಇ. ಮುಗಿಸಿದ ಮಹಿಳಾ ಪದವೀಧರರಿಗೆ ಸೈಬರ್ ಸೆಕ್ಯೂರಿಟಿ ಉಚಿತ ತರಬೇತಿ ಕಾರ್ಯಕ್ರಮ
ಉಡುಪಿ (ಜೂನ್, 06) : CySecK ಸೈಬರ್ ಸೆಕ್ಯೂರಿಟಿ ಕರ್ನಾಟಕ ಇದು ಸೈಬರ್ ಶಿಕ್ಷಣವನ್ನು ಕರ್ನಾಟಕದಲ್ಲಿ ಒಂದು ಜನಾಂದೋಲನ ಕಾರ್ಯಕ್ರಮವಾಗಿ ರೂಪಿಸುತ್ತಿದ್ದು, ಸೈಬರ್ ಶಿಕ್ಷಣದ ಜೊತೆಗೆ ತಂತ್ರಜ್ಞಾನದ ಗುಣಮಟ್ಟ ಕಾಪಾಡಿಕೊಳ್ಳುವಿಕೆ, ಅವಿಷ್ಕಾರ ತಂತ್ರ, ಸೃಜನಶೀಲತೆ, ತಂತ್ರಜ್ಞಾನದ ಸದ್ಬಳಕೆ, ಸೈಬರ್ ಸೆಕ್ಯೂರಿಟಿ ಕುರಿತಾದ ಅರಿವು ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಸೈಬರ್ ಶಿಕ್ಷಾ ,ಇದು ಮೈಕ್ರೋಸಾಫ್ಟ್ ಹಾಗೂ ಡಿ.ಎಸ್.ಐ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಡಿ ಐಐಐಟಿ ಧಾರವಾಡ ಹಾಗೂ CySek ಕರ್ನಾಟಕದ ಜಂಟಿ ಆಶ್ರಯದಲ್ಲಿ […]
ಬಾ ಮಳೆಯೇ…, ಬಾ…
ಬಾ ಮಳೆಯೇ…, ಬಾಭಾನು ಅಳುತಿದೆಕತ್ತಲಗೂಡಿನೊಳಗೆಕರಿಮೋಡಗಳ ತಿಕ್ಕಾಟಕೆ ಸಿಕ್ಕಿಕಣ್ಣೀರ ಧಾರೆಗಳು ಮಳೆಯಾಗಿ ಭೂಮಿಗೆ ಸೇರುವ ತವಕದಲಿಗಗನದಲಿ ಮಳೆ ಮೋಡಗಳ ಕದನಭೂಮಿಗೆ ಮಳೆಯ ತಂಪಾದ ನರ್ತನಯಾರಿಗೋ ನೋವಿನ ಅನುಭವ ಇನ್ನೂ ಯಾರಿಗೋ ಸುಖದ ತಾಂಡವಹಾಗಂತ ನೀ ಸುರಿಯದಿರ ಬೇಡನೀ ಚೆಲ್ಲಿದ ಹನಿಯ ಅಮೃತಧಾರೆಗಳುಕಾದ ಭೂಮಿಗೆ ಅದು ಪ್ರೀತಿ ಸಿಂಚನ ನಿರಂತರ ನಿನ್ನ ಪ್ರೇಮ ಹನಿ ಸುರಿಸುತ್ತಿರುಭೂಮಿಯ ಒಡಲು ಒಣಗಿದೆ ನಿನ್ನ ನಿರೀಕ್ಷೆಯಲಿ ಸಾಕು ಪರೀಕ್ಷೆ ಸುರಿಸಿ ಬೀಡು ಇಳೆಗೆ ಮಳೆಯಾಗಿನಿನಗೆ ನೋವು ಆದರೂ […]
ಕೋಟೇಶ್ವರ : ಕೋವಿಡ್ ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ
ಕೋಟೇಶ್ವರ (ಜೂ, 05): ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೋಟೇಶ್ವರ ಸರಕಾರಿ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೋಟೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಪೂರ್ಣಿಮಾ ಶೇಟ್, ಕೇಂದ್ರದ ನಿರ್ವಾಹಕ ಸುಹಾಸ್ ಪೈ ಜಿಲ್ಲಾಧಿಕಾರಿಗಳಿಗೆ ಲಸಿಕಾ ಕೇಂದ್ರದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸೇವಾ ಭಾರತಿಯ ಸ್ವಯಂಸೇವಕರು ಉಪಸ್ಥಿತರಿದ್ದರು.
ಸಂತ ಮೇರಿ ಮಹಾವಿದ್ಯಾಲಯ, ಶಿರ್ವ : ವಿಶ್ವ ಪರಿಸರ ದಿನಾಚರಣೆ
ಶಿರ್ವ(ಜೂ, 5): ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಎನ್ಸಿಸಿ ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಘಟಕದ ಸ್ವಯಂಸೇವಕರ ಮನೆಯ ಅಂಗಳಗಳಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು. ಕಾಲೇಜಿನ ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಅವರು ಔಷಧ ಗಿಡಗಳನ್ನು ಸಾಂಕೇತಿಕವಾಗಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಯುವಕರನ್ನು ಪ್ರೇರೇಪಿಸಿದರು. ಕಾಲೇಜಿನ ಪ್ರಾಂಶುಪಾಲರು ಡಾ|ಹೆರಾಲ್ಡ್ ಐವನ್ ಮೋನಿಸ್ ರವರು ಎಲ್ಲರಿಗೂ ಶುಭಹಾರೈಸಿದರು. ಎನ್ಸಿಸಿ ಘಟಕದ ಸಹ ಸಂಯೋಜಕಿ ಯಶೋಧಾ […]
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ : ಎನ್. ಎಸ್. ಎಸ್. ಘಟಕದ ವತಿಯಿಂದ ಹಸಿರೇ ಉಸಿರು ಅಭಿಯಾನಕ್ಕೆ ಚಾಲನೆ
ಕುಂದಾಪುರ (ಜೂ, 5): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಸಿರೇ ಉಸಿರು (ಉಸಿರನಿತ್ತ ಪ್ರಕೃತಿಯನ್ನು ಹಸಿರಾಗಿಸೋಣ) ಎನ್ನುವ ಗಿಡ ನೆಡುವ ಅಭಿಯಾನಕ್ಕೆ ಜೂನ್ 5ರಂದು ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಕೆ.ಉಮೇಶ್ ಶೆಟ್ಟಿ ಹಾಗೂ ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೊವಾಡಿಯವರ ಮಾರ್ಗದರ್ಶನದೊಂದಿಗೆ ಕಾಲೇಜಿನ ರಾಷ್ಟ್ರೀಯ […]
ಕರಾವಳಿ – ಮೂಡಣದಿ ಹಿತವಾಗಿ ಆರಂಭಗೊಂಡ ಮುಂಗಾರು ಮಳೆ
ಕರಾವಳಿ ಹಾಗೂ ಮೂಡಣ( ಪಶ್ಚಿಮಘಟ್ಟ) ಭಾಗದಲ್ಲಿ ಮುಂಗಾರು ಮಳೆ ಆರಂಭಗೊಂಡು ಹಿತವಾಗಿ ಸುರಿದಿದೆ. ಹವಾಮಾನ ವರದಿಯ ದಿನದಂತೆ ಬಂದು ತನ್ನ ಆಗಮನವನ್ನು ತೋರಿಸಿ ಜನರಲ್ಲಿ ಖುಷಿಯನ್ನು ಮೂಡಿಸಿತು. ಭಾರತದಲ್ಲಿ ಮುಂಗಾರು ಮಳೆಗೆ ಹೆಚ್ಚಿನ ಮಹತ್ವ ಇದೆ. ಈ ಮಳೆ ಈ ವರುಷ ನಮ್ಮ ಜಿಲ್ಲೆಗೆ ಸಮಯಕ್ಕೆ ಸರಿಯಾಗಿ ಬಂದಿರುವುದು ವಿಶೇಷ. ಜೂನ್ 3 ರೊಳಗೆ ರಾಜ್ಯಕ್ಕೆ ಮುಂಗಾರು ಪ್ರವೇಶಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿತ್ತು. ಮಳೆಯ ಜೊತೆ ಅನ್ನದಾತ […]
ಇಂದು ವಿಶ್ವ ಪರಿಸರ ದಿನ
ಬಂಧುಗಳೆ,ಇಂದು ವಿಶ್ವ ಪರಿಸರ ದಿನ. ಅದರ ನೆನಪಿಗಾಗಿ ಮತ್ತು ನಮ್ಮ ಉಳಿವಿಗಾಗಿ ಎಲ್ಲರೂ ಒಂದೊಂದು ಗಿಡ ನೆಡೋಣ. 138 ಕೊಟಿ ಜನ ಒಂದೊಂದು ಗಿಡ ಎಂದರೆ 138 ಕೋಟಿ ಆಕ್ಸಿಜನ್ ಸಿಲಿಂಡರ್ಗಳು ಎಂದರ್ಥ. ಅದರಲ್ಲಿ 38 ಕೋಟಿ ತೆಗೆದರೂ 100 ಕೋಟಿ ಜನ ಮನಸ್ಸು ಮಾಡಿ ಒಂದೊಂದು ಗಿಡ ನೆಟ್ಟರೂ ನೂರು ಕೋಟಿ ಆಕ್ಸಿಜನ್ ಸಿಲಿಂಡರ್ ಲೆಕ್ಕ ಆಗುತ್ತದೆ. ಆದ್ದರಿಂದ ಬಂಧುಗಳೇ, ಮರೆಯದೆ ಪ್ರತಿಯೊಬ್ಬರು ಒಂದೊಂದು ಅಥವಾ ನಿಮ್ಮ ಕೈಲಾದಷ್ಟು […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ : ಸಿಎ/ಸಿಎಸ್ ಕೋರ್ಸುಗಳಿಗೆ ದಾಖಲಾತಿ ಆರಂಭ
ಕುಂದಾಪುರ (ಜೂ. 05) : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಕುಂದಾಪುರದ ಕುಂದೇಶ್ವರ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸ್ಪೇಸ್) ಸಂಸ್ಥೆ ಸಿಎ/ಸಿಎಸ್ ಮತ್ತು ಸಿಎಂಎ ಪರೀಕ್ಷೆಗಳಿಗೆ ಅನೇಕ ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿ ತಯಾರಿಗೊಳಿಸಿ ಅಖಿಲ ಭಾರತ ಮಟ್ಟದಲ್ಲಿ ರ್ಯಾಂಕ್ ಮತ್ತು ಅತ್ಯುತ್ತಮ ಫಲಿತಾಂಶ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುತ್ತದೆ. ಸಂಸ್ಥೆಯ […]
ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, SSLC ಪರೀಕ್ಷೆ ಇರುತ್ತೆ : ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ
ಬೆಂಗಳೂರು (ಜೂ. 04): ಕರೋನಾ ಕಾರಣದಿಂದಾಗಿ ಈಗಾಗಲೇ ಕೇಂದ್ರ ಸರ್ಕಾರ ಸಿಬಿಎಸ್ ಇ ಮತ್ತು ಐಸಿಎಸ್ಇಯ 10ನೇ ಹಾಗೂ 12ನೇ ತರಗತಿ ಪರೀಕ್ಷೆಗಳು ರದ್ದು ಮಾಡಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರ ರಾಜ್ಯದಲ್ಲಿನ ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ, ಪರೀಕ್ಷೆಗಳ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸಿದೆ. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಬೆಳಿಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಈ ವರ್ಷ […]










