ಅದು ಬೆಂಗಳೂರಿನ ಹೊರವಲಯದಲ್ಲಿದ್ದ ಹತ್ತು ವರ್ಷದ ಹಳೆಯ ಅಪಾರ್ಟ್ ಮೆಂಟ್. ಅಲ್ಲಿ ಇಪ್ಪತ್ತೈದು ಕುಟುಂಬದವರು ವಾಸಿಸುತ್ತಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಅಲ್ಲಿ ಸಂತೋಷದಿಂದ ಬದುಕುತ್ತಿದ್ದಾರೆ. ಹತ್ತು ವರ್ಷಗಳಿಂದ ಒಂದೇ ಕಡೆ ಜೀವನ ಸಾಗಿಸುತ್ತಿರುವ ಈ ಅಪಾರ್ಟ್ ಮೆಂಟ್ ವಾಸಿಗಳ ನಡುವೆ ಒಂದು ವಿಶೇಷವಾದ ಬಾಂಧವ್ಯ ಬೆಳೆದಿದೆ. ಅವರುಗಳ ನಡುವೆ ಸ್ನೇಹ ಸಂಬಂಧವನ್ನು ಮೀರಿದ ಒಂದು ಅನುಬಂಧ ಏರ್ಪಟ್ಟಿದೆ. ಕಳೆದ ಎರಡು ಮೂರು ತಿಂಗಳಿಂದ ಈ ಅಪಾರ್ಟ್ ಮೆಂಟ್ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಕರಿನೆರಳು
ಇಂದು-ನಾಳೆ ಹೇಗೋಹಾಗೆ ದಿನ, ವಾರ, ತಿಂಗಳುಗಳುವರ್ಷಗಳು ಉರುಳುತ್ತಿವೆ ಗೊತ್ತೇ ಆಗದೆಬದುಕು ಸಹಜ ಅ ಸಹಜಗಳ ಇಂದು, ನಾಳೆಗಳ ಮಧ್ಯೆಈಗ ಎಲ್ಲಾ ಭರವಸೆಗಳ ಮೇಲೆ ಕಟ್ಟಿದ ಬದುಕುಗಾಜಿನ ಮನೆಯಂತಾಗಿದೆಕಾಯುತ್ತಿದ್ದೇವೆ ನಾವುಗಳು ಸರತಿಸಾಲಿನಲ್ಲಿ ಇಂದು, ನಾಳೆಯೂ ಮುಂದೆ ಏನೇನೊ ಎಂದುಮುಂದೆ ಹೋಗುವವರಿಗೆ ದಾರಿ ಮಾಡಿ ಕೊಡುತ್ತಾ ಕಂಡು ಕಾಣದ ಎಂದೂ ಮರೆಯದ ಈ ಹೆಮ್ಮಾರಿ ಕಾಯಿಲೆಗೆ ಶರಣಾಗಿಕೆಲವರ ಜೀವ ಪಂಚ ಭೂತಗಳಲ್ಲಿ ಲೀನವಾಗಿದೆಹೇಳದೆ ಕೇಳದೆ ಕನಸು ಮಾರಿ ಹೊರಟು ಬಿಟ್ಟಿದ್ದಾರೆ ಹೊಸ ಲೋಕ […]
ಗಂಗೊಳ್ಳಿಯಲ್ಲಿ ಕೋವಿಡ್ ಲಸಿಕೆ ಅಭಿಯಾನ
ಗಂಗೊಳ್ಳಿ (ಜೂ, 2): ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಹಾಗೂ ಸೇವಾ ಭಾರತಿಯ ಸಹಕಾರದಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಹಾಗೂ ಸರಸ್ವತಿ ವಿದ್ಯಾಲಯದಲ್ಲಿ (ಲಸಿಕೆಯ ಇರುವಿಕೆಯ ಮೇರೆಗೆ) ಲಸಿಕಾ ಅಭಿಯಾನ ನಡೆಯುತ್ತಿದೆ. ಸಾರ್ವಜನಿಕರು ಕೋವಿಡ್ ಲಸಿಕೆಯ ವಿಚಾರದಲ್ಲಿ ಸ್ವಯಂ ಸೇವಕರನ್ನು ಯಾವುದೇ ಸಮಯದಲ್ಲಿ ಸಂಪರ್ಕಿಸಬಹುದು ಹಾಗೂ ಲಸಿಕಾ ಕೇಂದ್ರಕ್ಕೆ ಬರುವ ಮುನ್ನ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸೇವಾಭಾರತಿ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ ಆಗಮಿಸಬೇಕೆಂದು […]
ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ|ಗಿರೀಶ್ ಕುಲಕರ್ಣಿಯವರಿಗೆ ಗೌರವಾರ್ಪಣೆ
ಗಂಗೊಳ್ಳಿ (ಜೂ, 2): ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿ ಸೇವಾ ನಿಮಿತ್ತ ಯಾದಗಿರಿಗೆ ವರ್ಗಾವಣೆಗೊಂಡಿರುವ ಡಾ|ಗಿರೀಶ್ ಕುಲಕರ್ಣಿ ಇವರಿಗೆ ಸೇವಾ ಭಾರತಿ ಗಂಗೊಳ್ಳಿ ಇದರ ಸ್ವಯಂಸೇವಕರು ಗೌರವ ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಲ್ಲಿಸಿದರು. ಕೋವಿಡ್ ಸಂದರ್ಭದಲ್ಲಿನ ಡಾ |ಗಿರೀಶ್ ಕುಲಕರ್ಣಿಯವರ ವೈದ್ಯಕೀಯ ಸೇವೆಗೆ ಸ್ವಯಂಸೇವಕರು ಹಾಗೂ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.
ಸೇಂಟ್ ಮೇರಿಸ್ ಕಾಲೇಜು ಶಿರ್ವ : ಸೈಬರ್ ಸುರಕ್ಷತೆ, ನೈತಿಕ ಹ್ಯಾಕಿಂಗ್ ಕುರಿತು ವರ್ಚುವಲ್ ಕಾರ್ಯಾಗಾರ
ಶಿರ್ವ (ಜೂ, 02): ಸೇಂಟ್ ಮೇರಿಸ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಡಾಟಾ ಸ್ಪೇಸ್ ಸೆಕ್ಯುರಿಟಿ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಎಥಿಕಲ್ ಹ್ಯಾಕಿಂಗ್ ಮತ್ತು ಸೈಬರ್ ಸೆಕ್ಯುರಿಟಿ ಕುರಿತು ವರ್ಚುವಲ್ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಮೊದಲ ಅಧಿವೇಶನದಲ್ಲಿ ಎಥಿಕಲ್ ಹ್ಯಾಕಿಂಗ್ನಲ್ಲಿ ಡಾಟಾ ಸ್ಪೇಸ್ ಸೆಕ್ಯುರಿಟಿ ಎಕ್ಸ್ಪರ್ಟ್ನ ಸಂಸ್ಥಾಪಕರಾದ ಶ್ರೀ ಸಮಿರನ್ ಸಾಂತ್ರಾ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ಸೈಬರ್ ಸುರಕ್ಷತೆಯ ಬಗ್ಗೆ ಅವರು ಮಾತನಾಡುತ್ತಾ ಇದು ಸಮಯದ ತುರ್ತು ಅವಶ್ಯಕತೆಯಾಗಿದೆ ಮತ್ತು […]
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ವತಿಯಿಂದ ರಾಷ್ಟ್ರೀಯ ಸೇವಾಭಾರತಿ ಸಂಸ್ಥೆಯ ಸೇವಾ ಕಾರ್ಯಕ್ಕೆ ದೇಣಿಗೆ ಹಸ್ತಾಂತರ
ಕೋಟೇಶ್ವರ (ಜೂ, 01): ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿರುವ ರಾಷ್ಟ್ರೀಯ ಸೇವಾಭಾರತಿ ಸಂಸ್ಥೆಗೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ, ಉಡುಪಿ ವತಿಯಿಂದ 50 ಸಾವಿರ ರೂ ದೇಣಿಗೆಯ ಚೆಕ್ ನ್ನು ಮೊಗವೀರ ಸಂಘಟನೆ (ರಿ) ಉಡುಪಿ ಇದರ ಕೋಟೇಶ್ವರ ಘಟಕದ ಮೂಲಕ ಸೇವಾಭಾರತಿ ಪ್ರಮುಖರಿಗೆ ಹಸ್ತಾಂತರಿಸಲಾಯಿತು. ಮೊಗವೀರ ಯುವ ಸಂಘಟನೆ(ರಿ) ಉಡುಪಿ ಇದರ ಜಿಲ್ಲಾ ಮಾಜಿ ಅಧ್ಯಕ್ಷ ಸತೀಶ್ ಎಂ. ನಾಯ್ಕ್ ಚೆಕ್ ನ್ನು […]
ಅಮ್ಮ
ಹಸಿದು ಬಂದರೆ ತುತ್ತು ಕೊಡುವವಳುಬಾಯಾರಿ ಬಂದರೆ ನೀರು ನೀಡುವವಳುಅತ್ತು ಬಂದರೆ ಮಮತೆಯ ಮಳೆ ಗೈಯುವವಳು.. ನಿರ್ಸಗದ ಕೊಡುಗೆ ಆವಳುಸಹನೆಯ ಮೂರ್ತಿ ಅವಳುತ್ಯಾಗದ ಹೃದಯ ಆವಳು ಮಮತೆಯ ಗಣಿ ಆವಳುಆಸರೆಯ ಬಳ್ಳಿ ಅವಳುಪ್ರೀತಿಯ ಹೆಮ್ಮರ ಅವಳು ಕನಸಿನ ಶುರು ಆವಳುವಿದ್ಯೆಯ ಮೂಲ ಆವಳುಪ್ರೇಮದ ಸೆಲೆ ಆವಳು ಆಕಾಶದಷ್ಟು ಎತ್ತರ ಅವಳುಭೂಮಿಯಷ್ಟೆ ವಿಶಾಲ ಅವಳುಪ್ರಕೃತಿಯಷ್ಟೆ ಶಾಂತ ಅವಳು ತರ್ಕಕ್ಕೂ ಎಟುಕದ ಮನಸ್ಸಿನವಳುಮನು ಕುಲದ ಉಸಿರು ಅವಳುಮಗುವಿನ ಮೆಲುನಿಡಿಗೆ ಸಿಂಚಿನ ಅವಳು ಈಶ್ವರ. ಸಿ. […]
ಎಕ್ಸಲೆಂಟ್ ಕುಂದಾಪುರ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಮೂಡಬಿದ್ರೆ ನೇತೃತ್ವ : ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಿಗೆ ಸುವರ್ಣಾವಕಾಶ – ಪ್ರೊ ಬಾಲಕೃಷ್ಣ ಶೆಟ್ಟಿ
ಕುಂದಾಪುರ (ಮೇ, 30) : ಜೀವನದಲ್ಲಿ ನಾನೊಬ್ಬ ಶ್ರೇಷ್ಠ ವೈದ್ಯ ನಾಗಬೇಕು, ಒಳ್ಳೆಯ ಐಐಟಿ ಕಾಲೇಜಿನಲ್ಲಿ ಇಂಜಿನಿಯರ್ ಆಗಬೇಕು ಇಲ್ಲ ಲೆಕ್ಕಪರಿಶೋಧಕನಾಗಬೇಕು,ಕಂಪನಿ ಸೆಕ್ರೆಟರಿ ಆಗಬೇಕು ಎನ್ನುವ ಕನಸನ್ನು ಕಾಣುತ್ತಿರುವ ಅದೆಷ್ಟು ವಿದ್ಯಾರ್ಥಿಗಳಿಗೆ ಡಾ. ರಮೇಶ್ ಶೆಟ್ಟಿ ನೇತೃತ್ವದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ತಂಡ ಕುಂದಾಪುರದ ಎಕ್ಸಲೆಂಟ್ ಕಾಲೇಜಿನ ಸಂಪೂರ್ಣ ಆಡಳಿತ ವಹಿಸಿಕೊಂಡಿರುವುದು ಸುವರ್ಣ ಅವಕಾಶವಾಗಲಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಕನಸು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಮೂಡುಬಿದಿರೆಯ ಮೂಲಕ […]
ಕುಂದಾಪುರದ ಕೋವಿಡ್ ಆಸ್ಪತ್ರೆಯನ್ನು ಸ್ವಚ್ಚಗೊಳಿಸಿದ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಕುಂದಾಪುರ ಪ್ರಖಂಡದ ಕಾರ್ಯಕರ್ತರು
ಕುಂದಾಪುರ (ಮೇ, 30): ಕರೋನಾ ಎರಡನೆಯ ಅಲೆಯಿಂದಾಗಿ ಮುಂಬರುವ ದಿನಗಳಲ್ಲಿ ತಾಲೂಕಿನ ಆಸ್ಪತ್ರೆಗಳಲ್ಲಿ ಎದುರಾಗಬಹುದಾದ ಚಿಕಿತ್ಸೆ ಹಾಗೂ ಹಾಸಿಗೆಗಳ ಅಭಾವದ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ “ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಕುಂದಾಪುರ ಪ್ರಖಂಡ” ಇದರ ಕಾರ್ಯಕರ್ತರು ಕುಂದಾಪುರ ನಗರದ ಕಳೆದ ವರ್ಷ ಕೋವಿಡ್ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಿದ ಹಳೆ ಆದರ್ಶ ಆಸ್ಪತ್ರೆಯನ್ನು ಮೇ 30 ರಂದು ಸ್ವಚ್ಛಗೊಳಸಿ ವೈದ್ಯಕೀಯ ಸೇವೆಗಾಗಿ ಸಜ್ಜುಗೊಳಿಸಿದರು. ಇವರಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾಥ್ […]
ಕುಂದಾಪುರ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಯಶಸ್ವಿ 7ನೇ ವರ್ಷಾಚರಣೆ – ರಕ್ತದಾನ ಶಿಬಿರ
ಕುಂದಾಪುರ (ಮೇ, 30): ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿ ಯವರ ನೇತೃತ್ವದ ಕೇಂದ್ರ ಸರಕಾರ ಯಶಸ್ವಿ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಕುಂದಾಪುರ ವಿಧಾನಸಭಾ ಕ್ಷೇತ್ರ ಇವರ ನೇತೃತ್ವದಲ್ಲಿ ಮೇ 30 ರಂದು ಕುಂದಾಪುರದ ರೆಡ್ ಕ್ರಾಸ್ ಸಂಸ್ಥೆಯಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ […]










