ಜ್ಯೋತಿಷ್ಯದ ಕುರಿತಾದ ಹುಚ್ಚು ಕುತೂಹಲ ಯಾರಿಗಿಲ್ಲಾ ಹೇಳಿ.! ಕೆಲವರು ಅಪಾರವಾಗಿ ನಂಬಿದರೆ, ಇನ್ನೂ ಕೆಲವರು ಅದೊಂದು ಮೂಡನಂಬಿಕೆ ಅಂದುಕೊಂಡು ಸಮ್ಮನಾಗುತ್ತಾರೆ.ಇನ್ನೂ ಕೆಲವರು ಕುತೂಹಲಕ್ಕಾಗಿ ಆಗಾಗ ಜ್ಯೋತಿಷಿಯ ಬಳಿ ಹೋಗುವುದುಂಟು !. ಜ್ಯೋತಿಷ್ಯ ಶಾಸ್ತ್ರಕ್ಕೆ ನಮ್ಮ ದೇಶದಲ್ಲಿ ಅದರದ್ದೆ ಆದ ಪೌರಾಣಿಕ ಮಹತ್ವ ಇದೆ.ಆದರೆ ಜ್ಯೋತಿಷ್ಯವನ್ನೇ ಅಸ್ತ್ರವಾಗಿರಿಸಿಕೊಂಡು ಜನರನ್ನು ಮೋಸಮಾಡುವವರ ನಡುವೆ ಪ್ರಾಮಾಣಿಕತೆಯಿಂದ ಜ್ಯೋತಿಷ್ಯ ಹೇಳುವವರು ಮೂಲೆಗುಂಪಾಗಿರುವುದು ವಿಪರ್ಯಾಸವೇ ಸರಿ.ಅದೇನೇ ಇರಲಿ ! ಆ ನಾಲ್ಕು ಜನ ಯುವಕರು ಜ್ಯೋತಿಷ್ಯದ ಕುರಿತಾದ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಜೈ ಕುಂದಾಪ್ರ ಸೇವಾ ಟ್ರಸ್ಟ್ ವತಿಯಿಂದ ಸಮಾಜಸೇವಕ ಗೋವಿಂದ ಬಾಬು ಪೂಜಾರಿಯವರಿಗೆ ಸನ್ಮಾನ
ಬೈಂದೂರು (ಮೇ, 29): ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಪ್ರವರ್ತಕರು, ಕೊಡುಗೈ ದಾನಿ ಹಾಗೂ ಸಮಾಜಸೇವಕರು ಆಗಿರುವ ಗೋವಿಂದ ಬಾಬು ಪೂಜಾರಿಯವರನ್ನು ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ) ಕುಂದಾಪುರದ ವತಿಯಿಂದ ಸನ್ಮಾನಿಸಲಾಯಿತು. ಯಾವುದೇ ಜಾತಿ-ಮತ, ಧರ್ಮ ತಾರತಮ್ಯವಿಲ್ಲದೆ ಸಮಾಜದಲ್ಲಿರುವ ಅಶಕ್ತರನ್ನು ಗುರುತಿಸಿ ನಿರಂತರ ಸಮಾಜಸೇವೆ ಗೈಯುತ್ತಿರುವ ಗೋವಿಂದ ಬಾಬು ಪೂಜಾರಿ ಯವರು ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ) ಇದರ ಗೌರವ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಟ್ರಸ್ಟ್ ವತಿಯಿಂದ […]
ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ : ಕರೋನಾ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದವರಿಗೆ ಅನ್ನ ದಾಸೋಹ
ಕುಂದಾಪುರ (ಮೇ, 28): ಕರೋನಾ ಲಾಕ್ಡೌನ್ ನ ಪ್ರಾರಂಭದ ದಿನಗಳಿಂದಲೂ ಅಶಕ್ತರಿಗೆ ವೈದ್ಯಕೀಯ ನೆರವು, ತುರ್ತು ಸಂದರ್ಭದಲ್ಲಿ ರಕ್ತದಾನ ಹಾಗೂ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ ಕುಂದಾಪುರದ ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಇದೀಗ ಮಧ್ಯಾಹ್ನದ ಅನ್ನದಾಸೋಹ ಯೋಜನೆಯನ್ನು ಹಾಕಿಕೊಂಡು ಅಶಕ್ತರಿಗೆ ನೆರವಾಗಲು ಮುಂದಾಗಿದೆ. ಕೊರೊನ ಲಾಕ್ ಡೌನ್ ಸಮಯದಲ್ಲಿ ಅಶಕ್ತ ಬಡ ದಿನಗೂಲಿ ಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ವತಿಯಿಂದ ಮಧ್ಯಾಹ್ನದ ಊಟದ […]
ಬ್ಲ್ಯಾಕ್ ಫಂಗಸ್ ಕಾಯಿಲೆಗೆ ಔಷಧಿ ಕಂಡು ಹಿಡಿದ ಗಂಗೊಳ್ಳಿಯ ಬಿ. ಶ್ರೀಕಾಂತ ಪೈಯವರ ಮನದಾಳದ ಮಾತು
ಲಿಪೊಸೊಮನ್ ಆ್ಯಂಪೊಟೆರಿಸಿನ್ ಬಿ’ ಔಷಧಿಯನ್ನು ಕಂಡು ಹಿಡಿಯಲು ಶ್ರಮ ಪಟ್ಟಿರುವ ಭಾರತ ಸೀರಮ್ ಎಂಡ್ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪೆನಿಯ ಸಂಶೋಧಕ ತಂಡದ ನೇತೃತ್ವ ವಹಿಸಿದವರು ಕರಾವಳಿಯ ಕನ್ನಡಿಗರಾದ ಬಾಂಡ್ಯ ಶ್ರೀಕಾಂತ ಪೈ. ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿ ಮೂಲದ ದಿವಂಗತ ಬಾಂಡ್ಯ ಅಣ್ಣಪ್ಪ ಪೈ ಅವರ ಪುತ್ರ ಬಾಂಡ್ಯ ಶ್ರೀಕಾಂತ ಪೈ. ಶ್ರೀಕಾಂತ ಪೈ ಯವರು ತಮ್ಮ ಈ ಸಾಧನೆಯ ಅನುಭವಗಳನ್ನು, ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಕೋವಿಡ್ ನಂತರವೂ […]
ಗಂಗೊಳ್ಳಿ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಹ ಕುಟುಂಬಗಳಿಗೆ ಮೀನುಗಾರಿಕಾ ಸವಲತ್ತುಗಳನ್ನು ವಿತರಿಸಿದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ
ಗಂಗೊಳ್ಳಿ (ಮೇ, 26): ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಏಳು ಅರ್ಹ ಕುಟುಂಬಗಳಿಗೆ ತಲಾ 3.90 ಲಕ್ಷ ರೂಪಾಯಿ ಮೌಲ್ಯದ ದೋಣಿ ಮತ್ತಿತರ ಮೀನುಗಾರಿಕಾ ಸಲಕರಣೆಗಳನ್ನು ಬೈಂದೂರಿನ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿ ವಿತರಿಸಿದರು.ಮೀನುಗಾರರು ನೆಮ್ಮದಿಯ ಜೀವನ ನಡೆಸುವಂತಾಗಬೇಕು ಎಂಬ ಆಶಯದೊಂದಿಗೆ ಮೀನುಗಾರಿಕೆ ದೋಣಿ, ಇಂಜಿನ್, ಬಲೆ, ಲೈಫ್ ಜಾಕೆಟ್, ಶಾಖ ನಿರೋಧಕ ಪೆಟ್ಟಿಗೆ ಹಸ್ತಾಂತರಿಸಲಾಗಿದೆ ಎಂದು ಶಾಸಕರು […]
ಮಂಗಳೂರು ವಿವಿ : ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಅಹ್ವಾನ
ಮಂಗಳೂರು ( ಮೇ, 26): ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರುವಿನ ಯೋಗ ವಿಜ್ಞಾನ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯದಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅಂಗೀಕೃತ ವಿ.ವಿ. ಯಿಂದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ. 55 (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಟ ಶೇ. 50) ಅಂಕಗಳನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ವಿವಿಯ ವೆಬ್ ಸೈಟ್( www.mangaloreuniversity.ac.in) […]
ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ : ಹತ್ತು ದಿನಗಳ ಆನ್ಲೈನ್ ಬೇಸಿಗೆ ಶಿಬಿರ ಸಂಪನ್ನ
ಉಡುಪಿ (ಮೇ, 27): ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಮೇ 16 ರಿಂದ 25 ರವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ 10 ದಿನಗಳ “ಆನ್ಲೈನ್ ಬೇಸಿಗೆ ಶಿಬಿರ” ಸಂಪನ್ನಗೊಂಡಿದೆ. ಈ ಹತ್ತು ದಿನಗಳ ಶಿಬಿರದಲ್ಲಿ ಕಾಲೇಜಿನ 9 ತಂಡಗಳು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳನ್ನು ವಿಂಗಡನೆ ಮಾಡಿ ಅವರಿಗೆ ವಿವಿಧ […]
ಮುರುಡೇಶ್ವರದ ಸತೀಶ್ ದೇವಾಡಿಗರ ಕಲೆಯ ಕೈಚಳಕಕ್ಕೆ ಮನಸೋತ ನಟ ಅರ್ಜುನ್ ಸರ್ಜಾ
ಬೈಂದೂರು (ಮೇ, 27): ಮುರುಡೇಶ್ವರದ ಪ್ರಸಿದ್ಧ ಮರದ ಕಲಾಕ್ರತಿ ರಚಿಸುವ ಕಲೆಗಾರ ಸತೀಶ್ ದೇವಾಡಿಗ ಇವರ ಅದ್ಭುತವಾದ ಮರದ ಕೆತ್ತನೆಗೆ ಮನಸೋತ ಭಾರತೀಯ ಚಿತ್ರರಂಗದ ಪ್ರಸಿದ್ದ ನಟ ಅರ್ಜುನ್ ಸರ್ಜಾ ಅವರು ಚೆನ್ನೈ ನಲ್ಲಿರುವ ತನ್ನ ಆರಾಧ್ಯ ದೇವರಾದ ಆಂಜನೇಯ ದೇವಾಲಯದ ಪ್ರವೇಶದ್ವಾರದ ಬಾಗಿಲುಗಳ ಮರದ ಕೆತ್ತನೆಯ ಕೆಲಸವನ್ನು ಸತೀಶ್ ದೇವಾಡಿಗರಿಗೆ ಒಪ್ಪಿಸಿದ್ದಾರೆ. ಹಾಗೆಯೇ ಅರ್ಜುನ್ ಸರ್ಜಾರವರ ಅಳಿಯ ಚಿರಂಜೀವಿ ಸರ್ಜಾ ಹಾಗೂ ಅರ್ಜುನ್ ಸರ್ಜಾರ ಸಹೋದರ ಕಿಶೋರ್ ಸರ್ಜಾ […]
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ : ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ನೇರ ನೇಮಕಾತಿ
ಬೆಂಗಳೂರು (ಮೇ, 24): ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಮುಂದಾಗಿದ್ದು 3200ಕ್ಕೂ ಹೆಚ್ಚು ಪೊಲೀಸ್ ಕಾನ್ಸ್ಟೇಬಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯ ಅಧಿಕೃತ ವೆಬ್ https://recruitment.ksp.gov.in ನಲ್ಲಿ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಮೇ 25ರ ಬೆಳಗ್ಗೆ 10 ರಿಂದ ಜೂನ್ 25 ಸಂಜೆ 6 ಗಂಟೆಯೊಳಗೆ […]
ಕೊರೋನಾದಿಂದ ಗುಣಮುಖರಾದ ಕಟ್ ಬೇಲ್ತೂರಿನ ಒಂದೇ ಕುಟುಂಬದ 9 ಮಂದಿ ಸದಸ್ಯರು
ಹೆಮ್ಮಾಡಿ (ಮೇ, 23): ಹೌದು, ಕರೋನಾ ಆತಂಕದಿಂದ ಭಯಭೀತರಾಗುವ ಜನರ ನಡುವೆ ಇದೊಂದು ಪಾಸಿಟಿವ್ ಸ್ಟೋರಿ. ಕುಂದಾಪುರ ತಾಲೂಕಿನ ಕಟ್ ಬೇಲ್ತೂರು ಎಂಬ ಗ್ರಾಮದ ಶಂಕರ್ ನಾಯ್ಕ್ ಎನ್ನುವವರ ಕುಟುಂಬದ 9 ಮಂದಿ ಸದಸ್ಯರು ಕೊರೋನ ಪಾಸಿಟಿವ್ ಗೆ ತುತ್ತಾಗಿದ್ದರು. ಒಂದು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಈ ಕುಟುಂಬ ಎಲ್ಲಾ ಸದಸ್ಯರಿಗೂ ಕೊರೋನಾ ಅಂಟಿಕೊಂಡಿತ್ತು. ಆದರೆ ಈ ಕುಟುಂಬದ ಸದಸ್ಯರು ಧ್ರತಿಗೆಡದೆ ಧೈರ್ಯದಿಂದ ಕರೋನಾ ಗೆದ್ದು ಗುಣಮುಖರಾಗಿದ್ದಾರೆ. ಆತ್ಮಸ್ಥೈರ್ಯದ ಜೊತೆ […]










