ಹೆಮ್ಮಾಡಿ (ಎ. 4): ಕುಂದಾಪುರ ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ವೀಣಾ ಭಾಸ್ಕರ್ ಮೆಂಡನ್ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಸದಸ್ಯರಾದ ಶ್ರೀಮತಿ ರತ್ನಾ ರಮೇಶ್ ವಿ. ಕುಂದರ್ ಇವರನ್ನು ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ 1941) ಇದರ ಕುಂದಾಪುರ ಶಾಖೆಯ ವತಿಯಿಂದ ಸನ್ಮಾನಿಸಲಾಯಿತು. ಎಪ್ರಿಲ್, 4 ರಂದು ಬಗ್ವಾಡಿಯ ಶ್ರೀ ಮಹಿಷಾಸುರಮರ್ದಿನಿ ಸಭಾಭವನದಲ್ಲಿ ಆಯೋಜಿಸಿದ್ದ ಗುರಿಕಾರರ ಸಭೆ ಮತ್ತು […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಮೇ 2 ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ
ಹಾಲಾಡಿ (ಎ, 4): ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ ಉಡುಪಿ ಹಾಗೂ ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಜರುಗಲಿರುವ ಮೊಗವೀರ ಸಮುದಾಯದ 25 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಲಾಡಿಯ ಶಾಲಿನಿ ಜಿ.ಶಂಕರ್ ಕನ್ವೆನ್ಷನ್ ಸೆಂಟರ್ ನಲ್ಲಿ ಮೇ 02 ರಂದು ನಡೆಯಲಿದೆ ಎಂದು ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಶಿವರಾಮ ಕೋಟ ಹೇಳಿದರು. ನಾಡೋಜ ಡಾ.ಜಿ ಶಂಕರ್ […]
ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ವತಿಯಿಂದ 90 ನೇ ವಾರದ ಸ್ವಚ್ಛತಾ ಕಾರ್ಯಕ್ರಮ
ಕೋಟೇಶ್ವರ (ಎ. 4): ಕೋಟೇಶ್ವರ ಸಮೀಪದ ಗೋಪಾಡಿ ಕಡಲತೀರದಲ್ಲಿ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ವತಿಯಿಂದ 90 ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಎಪ್ರಿಲ್ 04 ರಂದು ಜರುಗಿತು. ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು 20 ಚೀಲಗಳಷ್ಟು ತ್ಯಾಜ್ಯಗಳನ್ನು ಸಂಗ್ರಹಿಸಿ ಸಮರ್ಪಕ ವಿಲೇವಾರಿಗೆ ವ್ಯವಸ್ಥೆ ಮಾಡಿದರು. ನಿರಂತರವಾಗಿ ಕುಂದಾಪುರ ಕೋಡಿ ,ಬೀಜಾಡಿ ಹಾಗೂ ಗೋಪಾಡಿ ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನ, ಕಡಲಾಮೆ […]
ಯಕ್ಷಗುರು ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ರಿಗೆ ಸನ್ಮಾನ
ಹೆಮ್ಮಾಡಿ (ಎ. 4): ಬಡಗುತಿಟ್ಟಿನ ಪ್ರಸಿದ್ಧ ಯಕ್ಷ ಗುರು, ಯಕ್ಷ ಕವಿ,ಭಾಗವತ ,ನಿರ್ದೇಶಕ ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರನ್ನು ಮೊಗವೀರ ಮಹಾಜನ ಸೇವಾ ಸಂಘ( ಬಗ್ವಾಡಿ ಹೋಬಳಿ 1941) ಇದರ ಕುಂದಾಪುರ ಶಾಖೆಯ ವತಿಯಿಂದ ಸನ್ಮಾನಿಸಲಾಯಿತು. ಎಪ್ರಿಲ್, 4 ರಂದು ಬಗ್ವಾಡಿಯ ಶ್ರೀ ಮಹಿಷಾಸುರಮರ್ದಿನಿ ಸಭಾಭವನದಲ್ಲಿ ಆಯೋಜಿಸಿದ್ದ ಗುರಿಕಾರರ ಸಭೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ರವರು ಸಲ್ಲಿಸಿದ ಅಪಾರ ಸೇವೆಯನ್ನು […]
ಬಗ್ವಾಡಿ ಹೋಬಳಿ ವ್ಯಾಪ್ತಿಯ ಗುರಿಕಾರರ ಸಭೆ ಮತ್ತು ಸನ್ಮಾನ ಕಾರ್ಯಕ್ರಮ
ಹೆಮ್ಮಾಡಿ (ಎ. 4): ಏಪ್ರಿಲ್ 27ರಂದು ನಡೆಯಲಿರುವ ಪುರಾಣ ಪ್ರಸಿದ್ದ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಿಯ ಬ್ರಹ್ಮ ರಥೋತ್ಸವದ ಪೂರ್ವ ತಯಾರಿ ಹಾಗೂ ಬಗ್ವಾಡಿ ಹೋಬಳಿ ವ್ಯಾಪ್ತಿಯ ಗುರಿಕಾರರ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ಏಪ್ರಿಲ್ 4 ರ ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಮಹಿಷಾಸುರ ಮರ್ದಿನಿ ಸಭಾಭವನದಲ್ಲಿ ನಡೆಯಿತು.ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ(ರಿ) ಉಚ್ಚಿಲ ಇದರ ಅಧ್ಯಕ್ಷರಾದ ಜಯ.ಸಿ ಕೋಟ್ಯಾನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೊಗವೀರ […]
ಎಪ್ರಿಲ್ 4 ರಂದು ಬಗ್ವಾಡಿ ಹೋಬಳಿ ವ್ಯಾಪ್ತಿಯ ಗುರಿಕಾರರ ಸಭೆ
ಹೆಮ್ಮಾಡಿ (ಎ. 2): ಪುರಾಣ ಪ್ರಸಿದ್ದ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಿಯ ಬ್ರಹ್ಮ ರಥೋತ್ಸವವು ಇದೇ ಏಪ್ರಿಲ್ 27ರಂದು ನಡೆಯಲಿದ್ದು, ರಥೋತ್ಸವದ ಪೂರ್ವ ತಯಾರಿ ಹಿನ್ನಲೆಯಲ್ಲಿ ಬಗ್ವಾಡಿ ಹೋಬಳಿ ವ್ಯಾಪ್ತಿಯ ಗುರಿಕಾರರ ಸಭೆಯು ಏಪ್ರಿಲ್ 4 ರ ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ದೇವಸ್ಥಾನದ ಬಳಿ ಇರುವ ಮಹಿಷಾಸುರ ಮರ್ದಿನಿ ಸಭಾಭವನದಲ್ಲಿ ನಡೆಯಲಿದ್ದು, ಈ ಸಭೆಯನ್ನು ನಾಡೋಜಾ ಡಾ. ಜಿ. ಶಂಕರ್ ರವರು ಉದ್ಘಾಟಿಸಲಿದ್ದಾರೆ. ಈ ಸಭೆಯ ಅಧ್ಯಕ್ಷತೆಯನ್ನು […]
ಪ್ರೋ. ರಾಮಚಂದ್ರ ರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ
ಕುಂದಾಪುರ (ಎ. 1): ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ. ರಾಮಚಂದ್ರ ರವರು ಮಂಡಿಸಿದ ಮರಾಠಿ ಸಮುದಾಯಗಳ ತೌಲನಿಕ ಅಧ್ಯಯನ ಎನ್ನುವ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ. ನೀಡಿದೆ. ಇವರು ಹಂಪಿ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ। ಗಂಗಾಧರ ದೈವಜ್ಞ ರಿಂದ ಮಾರ್ಗದರ್ಶನ ಪಡೆದಿದ್ದಾರೆ. ಹಾಗೂ ಇವರಿಗೆ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಡಾ| ಪೂರ್ವಚಾರ್ ಎಂ. ರವರು ಸಹ […]
ಬಂಟಕಲ್ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯ : ಮಾಹಿತಿ ಕಾರ್ಯಾಗಾರ
ಉಡುಪಿ (ಮಾ. 31) : ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಮಾಲೋಚನಾ (ಕೌನ್ಸೆಲಿಂಗ್) ಘಟಕವು ದಿನಾಂಕ 30 ಮಾರ್ಚ್2021ರಂದು “ಕೌನ್ಸೆಲಿಂಗ್ ಸ್ಟ್ರಾಟಜಿಸ್” ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಆಯೋಜಿಸಿತ್ತು. ಕಾರ್ಯಗಾರದಲ್ಲಿ ರೋಶನಿ ನಿಲಯ, ಮಂಗಳೂರು ಇದರ ಉಪಪ್ರಾಂಶುಪಾಲರಾದ ಡಾ.ಜೆನಿಸ್ ಮೇರಿ ಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ವ್ಯಕ್ತಿಯ ದೇಹ ಮತ್ತು ಮನಸ್ಸು ನಡುವಿನ ಸಮತೋಲನ ಹಾಗೂ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವಿನ ಸಂವಹನ, ವ್ಯಕ್ತಿಯ ಸಮಸ್ಯೆಗಳನ್ನು ಗುರುತಿಸುವುದು ಮತ್ತು […]
ಬಂಟಕಲ್ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ – 2020 ಕುರಿತಾದ ಉಪನ್ಯಾಸ
ಉಡುಪಿ (ಮಾ. 30): ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಖಾತ್ರಿ ಘಟಕವು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಸಹಯೋಗದೊಂದಿಗೆ “ಉನ್ನತ ಶಿಕ್ಷಣ ರಂಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ -2020ರ ಪರಿಣಾಮಗಳು” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಸಿ. ಕೆ. ಮಂಜುನಾಥ್ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಇವರು ತಮ್ಮ ಉಪನ್ಯಾಸದಲ್ಲಿ ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ […]










