ಶಿರ್ವ (ಮಾ. 25) : ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆ, ಶಿರ್ವ ಸಂತ ಮೇರಿ ಕಾಲೇಜಿನ ವಿದ್ಯಾರ್ಥಿ ಸತ್ಯ ಸುಬ್ರಹ್ಮಣ್ಯ ವಿ.ಎಸ್. ರವರು ಮಂಗಳೂರು ವಿಶ್ವವಿದ್ಯಾನಿಲಯ 2020 ರ ಸಪ್ಟೆಂಬರ್ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಗಣಕ ವಿಜ್ಞಾನ ವಿಭಾಗ ಬಿ.ಸಿ.ಎ. ದಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ಕಾಸರಗೋಡಿನ ಶ್ರೀ. ವೆಂಕಟೇಶ್ವರ ಭಟ್ ಮತ್ತು ಶ್ರೀಮತಿ ಗೌರಿ ಅವರ ಪುತ್ರರಾದ ಇವರು ಶೇಕಡಾ 95.72% ಅಂಕಗಳೊಂದಿಗೆ ನಾಲ್ಕನೇ […]
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಇಳಿಸಂಜೆ
ಇಳಿಸಂಜೆಯ ಹೊತ್ತು , ಅದು ನೀನಿಳಿದು ಹೋಗುವ ಹೊತ್ತು ನೀನೆಂದರೆ ಮಸ್ತಕಕ್ಕೇರುವ ಮತ್ತು , ವಾಸ್ತವಕ್ಕೆ ಬರಲೆಂದೇ ನಿತ್ಯ ನೀನಿಳಿದು ಹೋಗುವೆ ಎನ್ನುವುದು ಗೊತ್ತು ಕಾದಿರುವೆ ಬಹಳ ಕಾತುರವ ಹೊತ್ತು , ಕಳೆದುಕೊಂಡಿರುವುದೂ ಬಹಳವೇ ಇತ್ತು #ಏನೇ_ಹೇಳಿ , ಈ ಮರುಳನಿಗೇನು ಗೊತ್ತು , ಮರಳಿನ ಮೇಲೆ ಮೂಡುವುದಿಲ್ಲವೆಂದು ನಿನ್ನ ಆ ಹೆಜ್ಜೆಯ ಒತ್ತು.
ಮ್ಯಾಪಥಾನ್ 2021 ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್ ಪ್ರಶಸ್ತಿ
ಉಡುಪಿ (ಮಾ.23): ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ಡಾ. ನಾಗರಾಜ ಭಟ್ ಹಾಗೂ ಡಾ. ಸಚಿನ್ ಭಟ್ ಇವರು ಇಸ್ರೋ-ಐ.ಐ.ಟಿ ಬಾಂಬೆ ವಿ.ಐ.ಸಿ.ಟಿ.ಇ ಇವರ ಜಂಟಿ ಸಹಭಾಗಿತ್ವದಲ್ಲಿ ಆಯೋಜನೆಗೊಂಡ ಮ್ಯಾಪಥಾನ್- 2021 ರ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇವರ ತಂಡದ ‘ಸಮುದ್ರಸೀಮಾ ಕೋಸ್ಟಲ್ ಕರ್ನಾಟಕ ಶೋಲೈನ್ ಡೈನಮಿಕ್ಸ್’ ಎಂಬ ಸಂಶೋಧನೆಗೆ ಈ ಪುರಸ್ಕಾರ ಲಭಿಸಿದೆ. ಡಾ. ನಾಗರಾಜ ಭಟ್ ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ […]
ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ
ಉಡುಪಿ (ಮಾ, 23) :ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು, ಕಲ್ಯಾಣಪುರ ಇದರ ವಾರ್ಷಿಕೋತ್ಸವ ಮಾರ್ಚ್ 19 ರಂದು ನಡೆಯಿತು. ಪಾಂಪೈ ಕಾಲೇಜು, ಐಕಳ ಇದರ ಪ್ರಾಂಶುಪಾಲರಾದ ಶ್ರೀ ಪುರುಷೋತ್ತಮ ಕೆ.ವಿ ಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳ ಮುಂದಿರುವ ಪ್ರಸ್ತುತ ಸವಾಲುಗಳು ಹಾಗೂ ಅವುಗಳನ್ನು ಎದುರಿಸುವ ಬಗೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಂಚಾಲಕರಾದ ವೆ.ರೆ.ಫಾ ವಲೇರಿಯನ್ ಮೆಂಡೊನ್ಸಾ ಅಧ್ಯಕ್ಷತೆಯನ್ನು ವಹಿಸಿದ್ದು, ಪ್ರಾಂಶುಪಾಲೆ ಶ್ರೀಮತಿ ಸವಿತ ವಾರ್ಷಿಕ ವರದಿಯನ್ನು ವಾಚಿಸಿದರು. ವಿದ್ಯಾರ್ಥಿ ಸಂಘದ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಅಂತರ್ ಕಾಲೇಜು ಸಾಂಪ್ರದಾಯಿಕ ಕ್ರೀಡೆಗಳ ಸಂಪನ್ನ
ಕುಂದಾಪುರ (ಮಾ,22): ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜು ಮಟ್ಟದ ಸಾಂಪ್ರದಾಯಿಕ ಕ್ರೀಡೆಗಳ ಸಮಾರೋಪ ಸಮಾರಂಭ ಮಾರ್ಚ್ 19ರಂದು ನಡೆಯಿತು. ಕಾರ್ಯಕ್ರಮದಲ್ಲಿ ಬ್ರಹ್ಮಾವರದ ಎಸ್.ಎಮ್.ಎಸ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೆಂಕಟೇಶ್ ಭಟ್, ಕುಂದಾಪುರದ ಭಂಡಾರ್ಕಾರ್ ಆರ್ಟ್ಸ್ ಎಂಡ್ ಸಾಯನ್ಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಶಂಕರನಾರಾಯಣ, ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ […]
ಹಿರಿಯ ನಾಗರಿಕರಿಗೆ ಕರೋನಾ ಲಸಿಕೆ ಹಾಕಿಸಲು ಸೇವಾ ನಿರತರಾದ ಶ್ರೀಮತಿ ರೂಪಾ ಪೈ
ಕುಂದಾಪುರ (ಮಾ. 22) ಕುಂದಾಪುರದ ಭಾರತೀಯ ಜನತಾ ಪಾರ್ಟಿಯ ಮಹಿಳಾ ಮೋರ್ಚಾದ ಅಧ್ಯಕ್ಷೆಯಾದ ಶ್ರೀಮತಿ ರೂಪಾ ಪೈಯವರು ತಮ್ಮ ಸದಸ್ಯರ ಜೊತೆಗೂಡಿ 65 ವರ್ಷ ಮೇಲ್ಪಟ್ಟ ವಯೋವೃದ್ಧರನ್ನು ಕೋಟೇಶ್ವರ- ಕುಂಭಾಶಿ -ಗೋಪಾಡಿ ಮೂರು ಗ್ರಾಮಗಳಲ್ಲಿ ಕರೋನಾ ಲಸಿಕೆಯನ್ನು ಹಾಕಿಸಲು ಸಹಕರಿಸಿದರು. ಇವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ : ಮಾರ್ಚ್ 26 ರಂದು ಕನ್ನಡ ನಾಟಕ ಅಧ್ವಾನಪುರ ಪ್ರದರ್ಶನ
ಉಡುಪಿ (ಮಾ. 23) ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ, ಉಡುಪಿ ಇದರ ಲಲಿತ ಕಲಾ ಸಂಘದ ಆಶ್ರಯದಲ್ಲಿ ಅಧ್ವಾನಪುರ ಎನ್ನುವ ಕನ್ನಡ ನಾಟಕ ಇದೇ ಮಾರ್ಚ್ 26 ರ ಸಂಜೆ 6.30ಕ್ಕೆ ಕಾಲೇಜಿನ ಬಯಲು ರಂಗಮಂಟಪದಲ್ಲಿ ಪ್ರದರ್ಶನಗೊಳ್ಳಲಿದೆ. ಖ್ಯಾತ ಹನಿಗವಿ ಹೆಚ್. ಡುಂಡಿರಾಜ್ ರಚನೆಯ, ವಿಘ್ನೇಶ್ ತೆಕ್ಕಾರು, ವಿನ್ಯಾಸ -ನಿರ್ದೇಶನದ ಈ ನಾಟಕಕ್ಕೆ ರೋಹಿತ್ ಎಸ್. ಬೈಕಾಡಿ ಸಂಗೀತ ನಿರ್ದೇಶನ ಮಾಡಿರುತ್ತಾರೆ. ಹಾಗೆಯೇ ರವಿ ಕಾರಂತ್ ಕೋಟ ರಾಗ ಸಂಯೋಜನೆ ಮಾಡಿದ್ದು, […]
ವಿಶ್ವ ಜಲ ದಿನಾಚರಣೆಯ ಅಂಗವಾಗಿ ಮಾಹಿತಿ ಕಾರ್ಯಗಾರ
ಉಡುಪಿ (ಮಾ. 23) : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪರಿಸರ ಕ್ಲಬ್ ಮತ್ತು ಸಂಸ್ಥೆಯ ಸಿವಿಲ್ ವಿಭಾಗದ ಸ್ಥಪತಿ ಘಟಕದ ಸಹಯೋಗದೊಂದಿಗೆ ವಿಶ್ವ ಜಲದಿನಾಚರಣೆಯ ಅಂಗವಾಗಿ 22 ಮಾರ್ಚ್ 2021 ರಂದು “ಮಾನವನ ಆಧುನಿಕ ಚಟುವಟಿಕೆಗಳು ನೀರಿನ ಕೊರತಗೆ ಕಾರಣವಾಗಿವೆಯೇ” ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ ಜಿಲ್ಲಾ ಜಲಸಂಪನ್ಮೂಲ ವ್ಯಕ್ತಿ ಶ್ರೀ ಜೋಸೆಫ್ ರೆಬೆಲ್ಲೊ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಜಗತ್ತು ಎದುರಿಸುತ್ತಿರುವ ಪ್ರಸ್ತುತ […]
ಸಪ್ತಪದಿ ಯೋಜನೆ : ಸಾಮೂಹಿಕ ವಿವಾಹ ಕಾರ್ಯಕ್ರಮ – ಒಂದಿಷ್ಟು ಮಾಹಿತಿ
ಮದುವೆ ಸಂದರ್ಭದಲ್ಲಿ ಉಳ್ಳವರು ಮಾಡುವ ಖರ್ಚು, ದುಂದುವೆಚ್ಚ, ಆಡಂಬರ ಒಂದುಕಡೆಯಾದರೆ, ಮದುವೆಯಾಗಲು ಆರ್ಥಿಕ ಸಂಕಷ್ಟ ಸವಾಲುಗಳನ್ನು ಎದುರಿಸುತ್ತಿರುವವರು ಇನ್ನೊಂದು ಕಡೆ. ಬಡ ಕುಟುಂಬಗಳಲ್ಲಿ ಮದುವೆ ಕಾರ್ಯ ಇಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕರೋನೊತ್ತರ ದಿನಗಳಲ್ಲಂತೂ ಬಡಕುಟುಂಬಗಳಿಗೆ ವಿವಾಹ ಕಾರ್ಯ ನಡೆಸಲು ತುಂಬಾ ಕಷ್ಟ.
ಡಾ| ಬಿ.ಬಿ. ಹೆಗ್ಡೆ ಕಾಲೇಜು : ಸಾಂಪ್ರದಾಯಿಕ ದಿನಾಚರಣೆ
ಸಂಸ್ಕೃತಿ, ಆಚರಣೆಗಳು ಕೇವಲ ಒಂದು ದಿನಕ್ಕಷ್ಟೇ ಸೀಮಿತವಾಗಬಾರದು. ಧಾರ್ಮಿಕ ಕಾರ್ಯಕ್ರಮಗಳಿಗಾದರೂ ಸಾಂಪ್ರದಾಯಿಕ ಉಡುಗೆ ತೊಡುವಂತಾಗಬೇಕು. ಆ ಮೂಲಕ ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಉಳಿಯುವಂತಾದರೆ ಈ ದಿನದ ಆಚರಣೆ ಅರ್ಥಪೂರ್ಣವಾಗುತ್ತದೆ.










