ಕೋಟೇಶ್ವರ(ಡಿ.19): ದೇಶಿಯ ಗೋತಳಿಗಳ ರಕ್ಷಣೆ ಮತ್ತು ಪಂಚಗವ್ಯ ಉತ್ಪನ್ನಗಳು ಕುರಿತು ಜನ ಜಾಗೃತಿ ಮೂಡಿಸುತ್ತಿರುವ ಕೋಟೇಶ್ವರ ಸಮೀಪದಬೀಜಾಡಿಯ ಕಪಿಲೆ ಗೋ ಸಮೃದ್ಧಿ ಟ್ರಸ್ಟ್(ರಿ) ಇದರ ಪ್ರವರ್ತಕರಾದ ಶ್ರೀಕುಮಾರ್ ಕಾಂಚನ ರವರಿಗೆ ಗೋವತ್ಸಪ್ರಿಯ ಪ್ರಶಸ್ತಿ ಲಭಿಸಿದೆ. ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠ ಉಡುಪಿ ಇವರ ಆಶ್ರಯದಲ್ಲಿ ಡಿ. 14ರಂದು ನಡೆದ ರಾಜ್ಯಮಟ್ಟದ ದೇಶಿ ಗೋಪಾಲಕ, ಕೃಷಿಕ ಹಾಗೂ ಗೋ-ಉತ್ಪನ್ನ ತಯಾರಕ ಸಮ್ಮೇಳನದಲ್ಲಿ ಶ್ರೀಕುಮಾರ್ ಕಾಂಚನ ರವರಿಗೆ ಗೋವತ್ಸ ಪ್ರಿಯ’ […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಕುಂದಾಪುರ ರೋಟರಿ ಕ್ಲಬ್ ಗೆ ಹಿರಿಯ ಚಲನಚಿತ್ರ ನಟ ಶ್ರೀ ರಮೇಶ್ ಭಟ್ ಭೇಟಿ
ಕುಂದಾಪುರ (ಡಿ.18): ಕನ್ನಡ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ನಟ ಶ್ರೀ ರಮೇಶ್ ಭಟ್ ರವರು ರೋಟರಿ ಕ್ಲಬ್ ಕುಂದಾಪುರಕ್ಕೆ ಇತ್ತೀಚೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಸೇರಿ ಅವರನ್ನು ಸನ್ಮಾನಿಸಲಾಯಿತು ಸದಸ್ಯರಾದ ಮಾಜಿ ಸಹಾಯಕ ಗೌರ್ನರ್ ಶ್ರೀ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ರೋಟೇರಿಯನ್ ಮುತ್ತಯ್ಯ ಶೆಟ್ಟಿ ಹಾಗೂ ನಾಗರಾಜಶೆಟ್ಟಿ ಈ ಸಂದರ್ಭದಲ್ಲಿ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತಾಡಿದ ಶ್ರೀ ರಮೇಶ್ ಭಟ್ ರೋಟರಿ ಕ್ಲಬ್ ಸದಸ್ಯರ […]
ಗಂಗೊಳ್ಳಿ: ಡಾ. ಬಿ.ಆರ್ ಅಂಬೇಡ್ಕರ್ ರ ವರ ಪರಿನಿರ್ವಾಣ ದಿನಾಚರಣೆ
ಗಂಗೊಳ್ಳಿ(ಡಿ.13) : ಡಾ. ಅಂಬೇಡ್ಕರ್ ಯುವಕ ಮಂಡಲ (ರಿ) ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಳಿ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಮೇಲ್ ಗಂಗೊಳ್ಳಿಯ ಅಂಬೇಡ್ಕರ್ ಭವನದಲ್ಲಿ ಬಿ.ಆರ್ ಅಂಬೇಡ್ಕರ್ ರ ವರ 65ನೇ ವರುಷದ ಪರಿನಿರ್ವಾಣ ದಿನಾಚರಣೆ ನಡೆಯಿತು. ಯುವಕ ಮಂಡಲದ ಉಪಾಧ್ಯಕ್ಷ ಕಿರಣ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಂಸ್ಥೆಯ ಗೌರವ ಅಧ್ಯಕ್ಷರಾದ ಭಾಸ್ಕರ್ ಹೆಚ್. ಜಿ ಮಾತನಾಡಿ ಅಂಬೇಡ್ಕರ್ ಅವರ ಜೀವನ ಶೈಲಿ […]
ವಕ್ವಾಡಿ: ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮ ಫಲಕ ಅಳವಡಿಕೆ
ಕುಂದಾಪುರ(ಡಿ, 12): ಕುಂಭಾಶಿ ಸಮೀಪದ ವಕ್ವಾಡಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೃಷ್ಣ ಐತಾಳ್ ರವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆ ಎಂಬ ನಾಮಫಲಕ ಅಳವಡಿಸುವ ಕಾರ್ಯಕ್ರಮವನ್ನು ಸ್ವರಾಜ್ಯ 75 ತಂಡ ಹಾಗೂ ವಿವಿಧ ಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಯಿತು. ಶ್ರೀ ಪ್ರೇಮಾನಂದ ಶೆಟ್ಟಿ ಕಟ್ಕೇರಿ ಯವರು ನಾಮಫಲಕ ಅನಾವರಣಗೊಳಿಸಿ ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ದೇಶಪ್ರೇಮ ನಾವು ಪ್ರತಿದಿನ ಸ್ಮರಿಸಬೇಕು ಹಾಗೂ ಸರಕಾರ ಸ್ವಾತಂತ್ರ್ಯ ಹೋರಾಟಗಾರರ ಮನೆಯ ಬಗ್ಗೆ ಕಳಕಳಿಯನ್ನು […]
ಸಮುದಾಯ ಆರೋಗ್ಯ ಕೇಂದ್ರ ಬೈಂದೂರು:ಅಂಬ್ಯುಲೆನ್ಸ್ ಸೇವೆಗೆ ಸಹಾಯ ಹಸ್ತ ಚಾಚಿದ ಡಾ. ಗೋವಿಂದ ಬಾಬು ಪೂಜಾರಿ
ಬೈಂದೂರು(ಡಿ.11); ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಗೋವಿಂದ ಬಾಬು ಪೂಜಾರಿ ಯವರು ಬಹುಬಗೆಯ ಸಮಾಜಸೇವೆ ಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು , ಅದಕ್ಕೆ ಪೂರಕವಾಗಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ವಾಹನ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸರಕಾರದಿಂದ ಸಿಬ್ಬಂದಿ ನೇಮಕವಾಗುವ ತನಕ ತಾತ್ಕಾಲಿಕವಾಗಿ ಅಂಬ್ಯುಲೆನ್ಸ್ ನ ಓರ್ವ ಚಾಲಕನಿಗೆ ಮಾಸಿಕ ಸಂಬಳ ಹಾಗೂ ಅಂಬ್ಯುಲೆನ್ಸ್ ಸಂಚಾರಕ್ಕೆ ಅಗತ್ಯವಿರುವ ಡೀಸೆಲ್ ವೆಚ್ಚವನ್ನು ಭರಿಸಿಕೊಡುವುದರ ಮೂಲಕ ಮಾನವೀಯ ನೆಲೆಯ […]
ಆಶಾ ಕಾರ್ಯಕರ್ತೆ ಕಲ್ಪನಾ ಜಿ. ಯವರಿಗೆ ಸನ್ಮಾನ
ಗಂಗೊಳ್ಳಿ (ಡಿ.6): ಕಳೆದ 12 ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಮತ್ತು ಕೋವಿಡ್ ಸಮಯದಲ್ಲಿ ನಿರಂತರವಾಗಿ ಸೇವಾ ಮನೋಭಾವನೆಯೊಂದಿಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಉತ್ತಮವಾದ ನಿರ್ವಹಣೆಯನ್ನು ತೋರಿದ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಸುಗಮಕಾರರಾದ ಕಲ್ಪನಾ ಜಿ ಆರ್. ಪ್ರಭಾಕರ್ ಅವರನ್ನು ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಕಾರ್ಟೂನು ಹಬ್ಬದಲ್ಲಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ, ಮನೋವೈದ್ಯ ಡಾ. ಪಿ ವಿ […]
ಚೆಫ್ ಟಾಕ್ ಪ್ರೈವೇಟ್ ಲಿಮಿಟೆಡ್ : ಕೋಲಾರದ ಶಾಖೆ ಉದ್ಘಾಟನೆ
ಕುಂದಾಪುರ (ನ,30): ಗುಣಮಟ್ಟದ ಆಹಾರ ಮತ್ತು ಆತಿಥ್ಯದಲ್ಲಿ ದೇಶದಾದ್ಯಂತ ಹೆಸರುವಾಸಿಯಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಸಾರಥ್ಯದ ಚೆಫ್ ಟಾಕ್ ಪ್ರೈವೇಟ್ ಲಿಮಿಟೆಡ್ ನ ಕೋಲಾರ ಶಾಖೆ ಇತ್ತೀಚೆಗೆ ಉದ್ಘಾಟನೆಗೊಂಡಿತು. ಕೋಲಾರದ ನರಸಾಪುರದಲ್ಲಿನ ಶಾಖೆಯ ಉದ್ಘಾಟನೆಯಲ್ಲಿ ಮಾಜಿ ಶಾಸಕರಾದ ಶ್ರೀ ವರ್ತೂರ್ ಪ್ರಕಾಶ್ ,ಹಾಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಗೋವಿಂದರಾಜು ಹಾಗೂ ಶ್ರೀ ಜೈನ ಯಕ್ಷೇಶ್ವರಿ ಮತ್ತು ಶ್ರೀ ಶನೇಶ್ವರ ಪಾತ್ರಿಗಳಾದ ವಿಜಯ್ ಪೂಜಾರಿ ಉಪ್ಪುಂದ ರವರು ಉಪಸ್ಥಿತರಿದ್ದು […]
ನೈಕಂಬ್ಳಿ: ಸಂಭ್ರಮದ ಕಾರ್ತಿಕ ದೀಪೋತ್ಸವ
ಮಾರಣಕಟ್ಟೆ (ನ,30): ಮಹಾಲಿಂಗೇಶ್ವರ ದೇವಸ್ಥಾನ ನೈಕಂಬ್ಳಿಯಲ್ಲಿ ಸಂಭ್ರಮದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನ,29ರಂದು ಜರುಗಿತು. ದೀಪೋತ್ಸವ ಪ್ರಯುಕ್ತ ರಾಘವೇಂದ್ರ ಭಜನಾ ಮಂಡಳಿಯವರಿಂದ ಭಜನೆ , ಮಹಾ ಮಂಗಳಾರತಿ ಹಾಗೂ ಅನ್ನಪ್ರಸಾದ ಸೇವೆ ನೆರವೇರಿತು. ಜೀರ್ಣೋದ್ಧಾರ ಸಮಿತಿ ಪ್ರಮುಖರು, ಪ್ರೇರಣಾ ಯುವ ವೇದಿಕೆ ಸದಸ್ಯರು, ಊರ ಗಣ್ಯರು ಉಪಸ್ಥಿತರಿದ್ದರು.
ಈಶ್ವರ್ ಮಲ್ಪೆಯವರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ
ಉಡುಪಿ (ನ,28); ಉಡುಪಿಯ ಪ್ರತಿಷ್ಠಿತ ಸಂಸ್ಥೆಯಾದ ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯಿಂದ ಪ್ರತಿವರ್ಷ ಮಹಾಸಭೆಯ ದಿನ ಸಮಾಜ ಸೇವಕರನ್ನು ಗುರುತಿಸಿ ಅರ್ಹ ವ್ಯಕ್ತಿಗಳಿಗೆ ನೀಡುವ ಸೇವಾ ರತ್ನ ಪ್ರಶಸ್ತಿಯನ್ನು ಈ ವರುಷ ಮುಳುಗು ತಜ್ಞ ,ಜೀವರಕ್ಷಕ ,ಆಪದ್ಬಾಂಧವ ಈಶ್ವರ್ ಮಲ್ಪೆ ಬಲರಾಮನಗರ ಇವರಿಗೆ 2021 ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ . ಈಶ್ವರ್ ಮಲ್ಪೆಯವರು ಹಗಲು ರಾತ್ರಿ ಯನ್ನದೇ 24 ಗಂಟೆ ಜನಸೇವೆಯಲ್ಲಿದ್ದು, ಇಲ್ಲಿಯತನಕ […]
ಮುಳ್ಳಿಕಟ್ಟೆ: ಎಚ್. ಎಸ್. ಫ್ಯೂಯಲ್ಸ್ ಶುಭಾರಂಭ
ಮುಳ್ಳಿಕಟ್ಟೆ(ನ,28): ಮುಳ್ಳಿಕಟ್ಟೆ ಹೊಸಾಡುವಿನ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಇಂಡಿಯನ್ ಆಯಲ್ ಕಾರ್ಪೋರೇಶನ್ ನ ಎಚ್. ಎಸ್. ಫ್ಯೂಯಲ್ಸ್ ಇತ್ತೀಚೆಗೆ ಶುಭಾರಂಭಗೊಂಡಿತು. ಬೈಂದೂರು ಶಾಸಕ ಶ್ರೀ ಬಿ ಎಂ ಸುಕುಮಾರ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಬ್ಲಾಡಿ ಮಂಜಯ್ಯ ಶೆಟ್ಟಿ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಾಜಿ ಶಾಸಕ ಗೋಪಾಲ ಪೂಜಾರಿ ,ಡಾ|ಅತುಲ್ ಕುಮಾರ್ ಶೆಟ್ಟಿ, ಫೆಲಿಕ್ಸ್ ಕ್ರಾಸ್ಟಾ ,ಪ್ರಸನ್ನ ಶೆಟ್ಟಿ ,ವರುಣ್ ಉಪ್ಪಿನಲ್ ,ಬಿ […]










