ಗಂಗೊಳ್ಳಿ (ನ,26): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ ಮತ್ತು ಮಣಿಪಾಲ್ ಸಿಗ್ನಾ ಆರೋಗ್ಯ ವಿಮಾ ಕಂಪನಿಯ ಸಹಯೋಗದೊಂದಿಗೆ ಮಾಹೆ ಮಣಿಪಾಲ ಇವರ ಸಹಕಾರದೊಂದಿಗೆ ಯಾವುದೇ ಜಾತಿ, ಮತ,ಧರ್ಮ ಬೇಧಭಾವವಿಲ್ಲದೇ ಸಮಾಜದ ಎಲ್ಲಾ ವರ್ಗದವರಿಗೆ ಲಭ್ಯವಿರುವ ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡುಗಳ ನೋಂದಾವಣಿ ನ,15 ರಿಂದ ಪ್ರಾರಂಭಗೊಂಡಿದ್ದು ಪ್ರಯುಕ್ತ ನ,27ರಂದು ಶನಿವಾರ ಮಧ್ಯಾಹ್ನ ಸಮಯ 2 ರಿಂದ 5 ಗಂಟೆಯ ತನಕ ಗಂಗೊಳ್ಳಿ ಗ್ರಾಮ ಪಂಚಾಯತ್ ಎದುರುಗಡೆ ಇರುವ ಮಂಜುನಾಥ […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಗಂಗೊಳ್ಳಿಯ ಶ್ಯಾಮ್ ಗೆ ಕರಾಟೆಯಲ್ಲಿ ಬೆಳ್ಳಿ ಪದಕ
ಗಂಗೊಳ್ಳಿ (ನ, 17) : ಶೋರಿನ್ ರಿಯೂ ಕರಾಟೆ ಎಂಡ್ ಕೊಬುಡೊ ಅಸೋಸಿಯೇಷನ್ ವತಿಯಿಂದ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಇತ್ತೀಚಿಗೆ ನಡೆದ 18ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯ ಫೈಟ್ ವಿದ್ ಗೋಲ್ಡನ್ ಬ್ರೌನ್ ವಿಭಾಗದಲ್ಲಿ ಗಂಗೊಳ್ಳಿಯ ಶ್ಯಾಮ್ ಜಿ. ಎನ್. ಪೂಜಾರಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕವನ್ನು ಪಡೆದಿರುತ್ತಾನೆ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯಲ್ಲಿ ಓದುತ್ತಿರುವ […]
ಕoಬದಕೋಣೆ: ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಆರ್. ಕೆ. ಸಂಜೀವರಾಯರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ
ಕoಬದಕೋಣೆ(ನ,16);“ಸ್ವರಾಜ್ಯ ೭೫” ರವರ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆ ಅಭಿಯಾನದ ಪ್ರಯುಕ್ತ ಕoಬದಕೋಣೆಯ ದಿವಂಗತ ಆರ್. ಕೆ. ಸಂಜೀವರಾಯರ ಮನೆಯಲ್ಲಿ ನ,13 ರ ಶನಿವಾರದಂದು ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶ್ರೀ ಜನಾರ್ಧನ್ ಮರವಂತೆ ಯವರು ನಾಮಫಲಕವನ್ನು ಅನಾವರಣ ಮಾಡಿದರು. ನಂತರ ಸರ್ವರು ದಿವಂಗತ ಸಂಜೀವರಾಯ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಲ್ಲಿಸಿದರು. ಶ್ರೀ.ಬಿ ಪಿ ಶಿವಾನಂದ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.”ಸ್ವರಾಜ್ಯ75″ ರ ಸಂಚಾಲಕರಾದ ಪ್ರದೀಪ್ ಕುಮಾರ್, ಬಸ್ರೂರು […]
ಜಿಲ್ಲಾಮಟ್ಟದ ಸಾಂಸ್ಕೃತಿಕ ಉತ್ಸವ ಕಲಾ ಸಂಗಮ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ರೋಟರಾಕ್ಟ್ ಕ್ಲಬ್ ಚಾಂಪಿಯನ್
ಬ್ರಹ್ಮಾವರ(ನ ,17):ರೋಟರಿ ಕ್ಲಬ್ ಬ್ರಹ್ಮಾವರದ ಆಶ್ರಯದಲ್ಲಿ ಅಲ್ಲಿನ ರೋಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ಬ್ರಹ್ಮಾವರದ ರೋಟರಿ ಹಾಲ್ ನಲ್ಲಿ ಕಳೆದ ಶನಿವಾರ ರೋಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಉತ್ಸವ ಕಲಾ ಸಂಗಮದಲ್ಲಿ ಅತ್ಯುತ್ತಮವಾದ ನಿರ್ವಹಣೆಯನ್ನು ನೀಡುವ ಮೂಲಕ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಾಕ್ಟ್ ಕ್ಲಬ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಎಂಟು ತಂಡಗಳು ಭಾಗವಹಿಸಿದ್ದ ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾಲಯದ ರೋಟರಾಕ್ಟ್ ವಿದ್ಯಾರ್ಥಿಗಳು ನಿರೂಪಣೆಯಲ್ಲಿ ಪ್ರಥಮ […]
ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿಯವರಿಗೆ ಸನ್ಮಾನ
ಕುಂದಾಪುರ (ನ,15) : ದುಬೈ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹೆಸರಾಂತ ಹೋಟೆಲ್ ಉದ್ಯಮಿ ಹಾಗೂ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರನ್ನುಕರ್ನಾಟಕ ರಾಜ್ಯ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ ನಾಗೇಶ್ ರವರು ಸನ್ಮಾನಿಸಿದರು. ಈ ಸಂದರ್ಭ ನಮ್ಮ ಕುಂದಾಪ್ರ ಕನ್ನಡ ಬಳಗದ ಗೌರವಾಧ್ಯಕ್ಷರಾದ ವಕ್ವಾಡಿ ಪ್ರವೀಣ್ ಶೆಟ್ಟಿ ಅಧ್ಯಕ್ಷರಾದ ಸಾಧನ್ದಾಸ್, ಉಪಾಧ್ಯಕ್ಷರಾದ ದಿನೇಶ್ ದೇವಾಡಿಗ ನಾಗೂರು,ಕೃಷ್ಣಪ್ರಸಾದ್ ಅಡ್ಯಂತಾಯ ಮೊದಲಾದವರು ಉಪಸ್ಥಿತರಿದ್ದರು.
ನ,15 ರಿಂದ ಜಿ. ಶಂಕರ್ ಆರೋಗ್ಯಸುರಕ್ಷಾ ಕಾರ್ಡ್ಗಳ ನವೀಕರಣ ಪ್ರಾರಂಭ
ಕುಂದಾಪುರ (ನ,12): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ಪ್ರವರ್ತಕರಾದ ನಾಡೋಜಾ ಡಾ. ಜಿ. ಶಂಕರ್ ರವರು ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಬಡವರ ಅರೋಗ್ಯ ಸ್ವಾಸ್ಥ್ಯಕ್ಕಾಗಿ ಮಣಿಪಾಲ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಸಹಯೋಗದೊಂದಿಗೆ ಮಾಹೆ ಮಣಿಪಾಲದ ಸಹಕಾರದಿಂದ ಹಮ್ಮಿಕೊಂಡ ಜಿ. ಶಂಕರ್ ಆರೋಗ್ಯ ವಿಮಾ ಯೋಜನೆ ನವೀಕರಣ ಮತ್ತು ಹೊಸ ಕಾರ್ಡುಗಳ ನೋಂದಾವಣಿ ಅಭಿಯಾನ ಇದೇ ನವೆಂಬರ್ ,15 ರಿಂದ 30 ರ ತನಕ ನಡೆಯಲಿದೆ. 2021ರಲ್ಲಿ ಒಟ್ಟು 52,505 […]
ನ,15 ರಿಂದ ಜಿ. ಶಂಕರ್ ಆರೋಗ್ಯಸುರಕ್ಷಾ ಕಾರ್ಡ್ಗಳ ನವೀಕರಣ ಪ್ರಾರಂಭ
ಕುಂದಾಪುರ (ನ,12): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ಪ್ರವರ್ತಕರಾದ ನಾಡೋಜಾ ಡಾ. ಜಿ. ಶಂಕರ್ ರವರು ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಬಡವರ ಅರೋಗ್ಯ ಸ್ವಾಸ್ಥ್ಯಕ್ಕಾಗಿ ಮಣಿಪಾಲ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಸಹಯೋಗದೊಂದಿಗೆ ಮಾಹೆ ಮಣಿಪಾಲದ ಸಹಕಾರದಿಂದ ಹಮ್ಮಿಕೊಂಡ ಜಿ. ಶಂಕರ್ ಆರೋಗ್ಯ ವಿಮಾ ಯೋಜನೆ ನವೀಕರಣ ಮತ್ತು ಹೊಸ ಕಾರ್ಡುಗಳ ನೋಂದಾವಣಿ ಅಭಿಯಾನ ಇದೇ ನವೆಂಬರ್ ,15 ರಿಂದ 30 ರ ತನಕ ನಡೆಯಲಿದೆ. 2021ರಲ್ಲಿ ಒಟ್ಟು 52,505 […]
ಸಂಪ್ರದಾಯಗಳ ಆಚರಣೆಯ ಹಿಂದಿರುವ ವೈಜ್ಞಾನಿಕ ಹಿನ್ನೆಲೆಯ ಅರಿವು ನಮಗಿರಬೇಕು – ಉಮಾನಾಥ್ ದೇವಾಡಿಗ ಗಂಗೊಳ್ಳಿ
ಗಂಗೊಳ್ಳಿ (ನ, 04) : ಪ್ರತಿಯೊಂದು ಸಂಪ್ರದಾಯಗಳ ಆಚರಣೆಯ ಹಿಂದೆ ವೈಜ್ಞಾನಿಕ ಹಿನ್ನೆಲೆ ಇರುತ್ತದೆ. ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚಿನ ಪ್ರಯತ್ನವನ್ನು ನಾವು ಮಾಡಬೇಕಿದೆ. ಗೂಡುದೀಪ ಸ್ಪರ್ಧೆಯಂತಹ ಕಾರ್ಯಕ್ರಮಗಳು ನಮ್ಮಲ್ಲಿನ ಕಲೆಯನ್ನು ಉದ್ದೀಪನಗೊಳಿಸಲು ನೆರವಾಗುತ್ತವೆ ಎಂದು ಖ್ಯಾತ ಸ್ಯಾಕ್ಸೋಫೋನ್ ವಾದಕ ಉಮಾನಾಥ್ ದೇವಾಡಿಗ ಹೇಳಿದರು. ಅವರು ಗಂಗೊಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ದೀಪಾವಳಿಯ ಅಂಗವಾಗಿ ಆಯೋಜಿಸಿದ್ದ ಗೂಡುದೀಪ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪನ್ಯಾಸಕ ಬರಹಗಾರ […]
ಗಂಗೊಳ್ಳಿಯಲ್ಲಿ 66 ನೇ ಕನ್ನಡ ರಾಜ್ಯೋತ್ಸವ
ಗಂಗೊಳ್ಳಿ (ನ, 01) : ಬೆಂಗಳೂರು ಹೋಟೆಲ್ ನ್ಯೂಸ್ ಪತ್ರಿಕೆ ಮತ್ತು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ಸಮಿತಿ(ರಿ)ವತಿಯಿಂದ ಗಂಗೊಳ್ಳಿಯಲ್ಲಿ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಗಂಗೊಳ್ಳಿಯ ಕನ್ನಡ ಧ್ವಜ ಕಟ್ಟೆಯ ಬಳಿ ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿದ ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿಯ ಅಧ್ಯಕ್ಷರಾದ ಜಿ.ಗೋಪಾಲ ಪೂಜಾರಿ ಮಾತನಾಡಿ ಕನ್ನಡಿಗರಾದ ನಾವು ನಮ್ಮ ದಿನನಿತ್ಯದ ಸಂವಹನದಲ್ಲಿ ಹೆಚ್ಚೆಚ್ಚು ಕನ್ನಡವನ್ನು ಬಳಸಬೇಕು. ಕನ್ನಡ ನಾಡು ನುಡಿಯ ಬಗ್ಗೆ ಸದಾಕಾಲ ಗೌರವ […]
ಕೆಮ್ಮಣ್ಣು ಗಣಪತಿ ವ್ಯವಸಾಯ ಸಂಘ ನಿ. ವತಿಯಿಂದ ಸಮಾಜ ಸೇವಕ ಈಶ್ವರ್ ಮಲ್ಪೆಯವರಿಗೆ ಸನ್ಮಾನ
ಉಡುಪಿ (ಅ, 30): ಇಲ್ಲಿನ ಕೆಮ್ಮಣ್ಣು ಗಣಪತಿ ವ್ಯವಸಾಯ ಸಂಘ ನಿ. ವತಿಯಿಂದ ಜೀವರಕ್ಷಕ, ಈಜುಪಟು ಶ್ರೀ ಈಶ್ವರ್ ಮಲ್ಪೆ ಯವರ ಸಮಾಜಸೇವೆ ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತಿಯಾಗಿ ಈಶ್ವರ್ ಮಲ್ಪೆ ಯವರು ಸಂತಸವನ್ನು ವ್ಯಕ್ತಪಡಿಸುವುದರ ಜೊತೆಗೆ ಇನ್ನು ಸಮಾಜಸೇವೆಯ ಕರ್ತವ್ಯದ ಹೊಣೆ ಹೆಚ್ಚಾಗಿದೆಯೆಂದು ಸಂತೋಷದಿಂದಲೇ ಹೇಳಿಕೊಂಡರು.










