ಪಡುಕೋಣೆ(ಅ,27): ಸ್ಥಳೀಯ ಗ್ರಾಮಾಂತರ ಜನರ ಆರೋಗ್ಯವರ್ಧನೆಗಾಗಿ ಆಯುಷ್ಮಾನ್ ಇಲಾಖೆಯ ಸೂಚನೆಯ ಮೇರೆಗೆ ಅಕ್ಟೋಬರ್ 26 ರಂದು ನಾಡ ಪ್ರಾಥಮಿಕ ಆರೋಗ್ಯಕೇಂದ್ರದ ಪ್ರಾಯೋಜಕತ್ವದಲ್ಲಿ ಇಲ್ಲಿನ ಶ್ರೀ ಮಹಾವಿಷ್ಣು ದೇವಸ್ಥಾನದ ಶ್ರೀಮಹಾವಿಷ್ಣು ಕಲಾಮಂದಿರದಲ್ಲಿ ಆಯೋಜನೆಗೊಂಡ ಸರಳ ಯೋಗ ಮತ್ತು ಪ್ರಾಣಾಯಾಮ ಶಿಬಿರವು ಅಕ್ಟೋಬರ್ 17ರಿಂದ ಪ್ರಾರಂಭವಾಗಿ 26 ರ ತನಕ 10 ದಿನಗಳ ಪರ್ಯಂತ ಶಿಬಿರಾರ್ಥಿಗಳಿಗೆ ತರಬೇತಿ ನಡೆದು ಸಮಾರೋಪಗೊಂಡಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಪುರುಷೋತ್ತಮ ಅಡಿಗ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಆನಂದ […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಸಾಲಿಗ್ರಾಮ: ಗುರುನರಸಿಂಹ ಸಹಕಾರಿ ಸಂಸ್ಥೆಯ ಅಧ್ಯಕ್ಷರಾಗಿ ಆನಂದ ಸಿ. ಕುಂದರ್ ಪುನರಾಯ್ಕೆ
ಸಾಲಿಗ್ರಾಮ(ಅ,25): ಇಲ್ಲಿನ ಶ್ರೀ ಗುರು ನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಉದ್ಯಮಿ ಆನಂದ ಸಿ, ಕುಂದರ್ ಮೂರನೇ ಬಾರಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಂಜೀವ ಜಿ. ಅವಿರೋಧ ಆಯ್ಕೆಯಾದರು. ನಿರ್ದೇಶಕರು ಹಾಗೂ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಅ,24 ರಂದು ಚುನಾವಣೆ ನಡೆದಿದ್ದು,ಎಲ್ಲ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾನವೀಯ ಮೌಲ್ಯಗಳ ಸರದಾರರು ”Humanity”ಸಂಸ್ಥೆಯ ಸದ್ಗುಣ ಸಮಾಜ ಸೇವಾ ಯುವಕರು
ಸಮಾಜ ಸೇವೆ ಮಾಡುವಾಗ ಜಾತಿ-ಧರ್ಮವನ್ನು ನೋಡದೆ ಪ್ರತಿಯೊಬ್ಬರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದಲ್ಲಿ ಸೌಹಾರ್ಧತೆ ಮತ್ತು ಮನುಷ್ಯನ ಮಾನವೀಯತೆಯ ದರ್ಶನವಾಗುತ್ತದೆ.ಒಬ್ಬ ವ್ಯಕ್ತಿ ಅಥವಾ ಸಮಾಜ ಸೇವಾ ಸಂಸ್ಥೆ ತನ್ನನ್ನು ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವಾಗ ಮಾನವೀಯ ಮೌಲ್ಯಗಳನ್ನು ಹೊಂದಬೇಕಾಗಿರುವುದು ಅತ್ಯವಶ್ಯಕ. ಈ ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿ ತನಗೆ ಗೌರವದಿಂದ ಬದುಕಲು ಅವಕಾಶ ಮಾಡಿ ಕೊಟ್ಟ ಸಮಾಜಕ್ಕೆ ಋಣಿಯಾಗಿರುವುದರ ಜೊತೆಗೆ ತಮ್ಮಿಂದ ಸಮಾಜಕ್ಕೆ ಏನಾದರೂ ಸೇವೆ ನೀಡಬೇಕೆಂಬ ಒಂದಿಷ್ಟು ಸೇವಾ ಮನಸ್ಸುಗಳು ಕಾತುರದಿಂದಿರುತ್ತದೆ. ಅಂತ […]
ಜೈಕುಂದಾಪ್ರ ಸೇವಾ ಟ್ರಸ್ಟ್ (ರಿ) ಕುಂದಾಪುರ: ಅ,24 ರಂದು ಸಹಾಯ ಹಸ್ತ ಹಸ್ತಾಂತರ ಮತ್ತು ಅಭಿನಂದನಾ ಕಾರ್ಯಕ್ರಮ
ಕುಂದಾಪುರ (ಅ,23): “ಯುವ ಮನಸ್ಸುಗಳಿಗೆ ಸ್ಫೂರ್ತಿ, ನೊಂದವರಿಗೆ ನೆರವಿನ ದಾರಿದೀಪ” ಎನ್ನುವ ಧ್ಯೇಯದೊಂದಿಗೆ ಬಹು ಬಗೆಯಸೇವಾ ಕೈಂಕರ್ಯದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಸಮಾನ ಮನಸ್ಕ ಯುವಕರಿಂದ ರಚಿತವಾದ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ) ಇದೇ ಅಕ್ಟೋಬರ್,24 ರ ಭಾನುವಾರ ಸಮಯ ಮಧ್ಯಾಹ್ನ 3.30 ಕ್ಕೆ ಕೋಟ ಹಳೆಬಸ್ಟ್ಯಾಂಡ್ ಬಳಿ ಇರುವ ಶ್ರೀ ದೇವಿ ಕಾಂಪ್ಲೆಕ್ಸ್ ನಲ್ಲಿ ಸಹಾಯ ಹಸ್ತ ಹಸ್ತಾಂತರ ಮತ್ತು ಅಭಿನಂದನಾ ಕಾರ್ಯಕ್ರಮವನ್ನುನಲ್ಲಿ ಹಮ್ಮಿಕೊಳ್ಳಲಾಗಿದೆ. ಈ […]
ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ರೋಟರಾಕ್ಟ್ ಕ್ಲಬ್ ಉದ್ಘಾಟನೆ
ಗಂಗೊಳ್ಳಿ( ಅ,22): ವ್ಯಕ್ತಿತ್ವದ ಬೆಳವಣಿಗೆ, ನಾಯಕತ್ವ ಗುಣ ಕಲಿಕೆ, ಸಮಾಜದ ಆಗುಹೋಗುಗಳ ಬಗ್ಗೆ ಸ್ಪಂದಿಸುವ ಗುಣ, ಪರಿಸರ ಸಂರಕ್ಷಣೆ ಮುಂತಾದ ಸೃಜನಾತ್ಮಕ ಹವ್ಯಾಸಗಳನ್ನು ವಿದ್ಯಾರ್ಥಿದೆಸೆಯಲ್ಲಿಯೇ ಬೆಳೆಸುವ ಉದ್ದೇಶವನ್ನು ರೋಟರಾಕ್ಟ್ ಕ್ಲಬ್ ಹೊಂದಿದೆ ಎಂದು R I district 3182 ಜಿಲ್ಲಾ ಗವರ್ನರ್ ಎಂ ರಾಮಚಂದ್ರಮೂರ್ತಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಆಶ್ರಯದಲ್ಲಿ ಆರಂಭಗೊಂಡ ರೋಟರ್ಯಾಕ್ಟ್ ಕ್ಲಬ್ ನ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ರೋಟರಾಕ್ಟ್ ಕ್ಲಬ್ […]
ಯುವ ಬ್ರಿಗೇಡ್ ಕುಂದಾಪುರ: ಅ,23ರಂದು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧದ ವಿರುದ್ಧ ಪಂಜಿನ ಮೆರವಣಿಗೆ
ಕುಂದಾಪುರ (ಅ,22): ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧದ ವಿರುದ್ಧ ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಅಕ್ಟೋಬರ್ 23,ರ ಶನಿವಾರ ಸಂಜೆ 7:00 ಗಂಟೆಯಿಂದ ಕುಂದಾಪುರದ ಶಾಸ್ತ್ರಿ ಸರ್ಕಲ್ನಿಂದ ಪ್ರತಿಭಟನಾ ಮೆರವಣಿಗೆ ಚಾಲನೆ ಪಡೆದು ಕುಂದಾಪುರ ಬಸ್ ನಿಲ್ದಾಣ ಪುನಃ ಶಾಸ್ತ್ರಿ ಸರ್ಕಲ್ ನಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬಡ ಕುಟುಂಬಕ್ಕೆ ಮನೆ ಕಟ್ಟಿಸಿ ಕೊಡುವ ಸಂಕಲ್ಪ:ಸಮಾಜ ಸೇವಕಿ ಶ್ರೀ ಮತಿ ಗೀತಾಂಜಲಿ ಸುವರ್ಣ
ಉಡುಪಿ(ಅ,21) : ಉಷಾ ಪೂಜಾರಿಯವರ ಹಳೆಯದಾದ ಮನೆ ಮಳೆ ಮತ್ತು ಗಾಳಿಗೆ ಮೈಯೊಡ್ಡಿ ಸಂಪೂರ್ಣ ಕುಸಿದಿದ್ದು ,ಇದರ ಮಾಹಿತಿ ಪಡೆದ ಸಮಾಜ ಸೇವಕರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆಗಿರುವ ಶ್ರೀಮತಿ ಗೀತಾಂಜಲಿ ಸುವರ್ಣ ಉಷಾರವರ ಮನೆಗೆ ಭೇಟಿಕೊಟ್ಟು ಇವರ ಕಷ್ಟವನ್ನು ಆಲಿಸಿ ಈ ಬಡ ಕುಟುಂಬಕ್ಕೆ ಆಸರೆಯಾಗಲಿ ಎಂದು ಸ್ನೇಹ ಚಾರಿಟೇಬಲ್ ಟ್ರಸ್ಟ್ ಇದರ ಮುಖ್ಯಸ್ಥರಾದ ಶ್ರೀ ಶಿವಾನಂದ್ ಕೋಟ್ಯಾನ್ ರವರ ಸಂಪೂರ್ಣ ಸಹಕಾರದೊಂದಿಗೆ ಶ್ರೀಮತಿ ಗೀತಾಂಜಲಿ ಸುವರ್ಣ […]
ಯುವಾ ಬ್ರಿಗೇಡ್ ಶಂಕರನಾರಾಯಣ: “ನನ್ನ ಶಾಲೆಗೆ ನನ್ನ ಸೇವೆ” ಸ್ವಚ್ಚತಾ ಕಾರ್ಯಕ್ರಮ
ಕುಂದಾಪುರ(ಅ,20): ಯುವ ಬ್ರೀಗೇಡ್ ಶಂಕರನಾರಾಯಣ ಇವರ ಆಯೋಜನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳನ್ನು ಜೊತೆಗೂಡಿಸಿಕೊಂಡು “ನನ್ನ ಶಾಲೆಗೆ ನನ್ನ ಸೇವೆ” ಎನ್ನುವ ಶೀರ್ಷಿಕೆಯಡಿಯಲ್ಲಿ ಶಂಕರನಾರಾಯಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಅಕ್ಟೋಬರ್,19 ಹಮ್ಮಿಕೊಳ್ಳಲಾಯಿತು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ತನ್ನ ಶಾಲೆಯ ಆವರಣವನ್ನು ಚಂದಗಾಣಿಸುವಲ್ಲಿ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ನ ಕಾರ್ಯಕರ್ತರಾದ ಸತೀಶ್ ಶಂಕರನಾರಾಯಣ, ಪ್ರಮೋದ್ ಶಂಕರನಾರಾಯಣ, ಕಿರಣ್ ಉಳ್ಳೂರು,ಚೇತನ್ ಶಂಕರನಾರಾಯಣ ಹಾಗೂ ಮುಖ್ಯ ಅತಿಥಿಗಳಾಗಿ […]
ಈಜುಗಾರ ,ಜೀವರಕ್ಷಕ, ಭಾಸ್ಕರ್ ತಲಗೋಡುರವರಿಗೆ ಮಾನವೀಯ ನೆಲೆಯ ಸಹಾಯ: ಉಡುಪಿಯ ಬೆಳ್ಮಣ್ ನ ‘ಹ್ಯೂಮನಿಟಿ “ಸೇವಾ ಸಂಸ್ಥೆವತಿಯಿಂದ ಗ್ರಹ ನಿರ್ಮಾಣಕ್ಕೆ 1ಲಕ್ಷ ರೂ, ಧನಸಹಾಯ
ಕುಂದಾಪುರ(ಅ,15): ಈಜುಗಾರ ,ಜೀವರಕ್ಷಕ, ಭಾಸ್ಕರ್ ಕಳಸ,ತಲಗೋಡು ರವರ ಸಮಾಜ ಸೇವೆ ಗುರುತಿಸಿ ಕೊಟ್ಟ ಸನ್ಮಾನದ ಪ್ರಶಸ್ತಿಪತ್ರ ಹಲವಾರು . ಆದರೆ ಇವರಿಗೆ ವಾಸವಾಗಿರಲು ಮನೆ ಇಲ್ಲದಿರುವುದುಹಾಗೂ ಸರ್ಕಾರದ ಇಲಾಖೆಗಳ ನಿರ್ಲಕ್ಷ್ಯದ ಕುರಿತಾದ ಪೂರ್ಣ ಕಥೆ ಮತ್ತು ವ್ಯಥೆಯ ಪುಟವನ್ನು ಸಾರ್ವಜನಿಕರ ಎದುರು ತೆರೆದಿಟ್ಟಿದ್ದೆವು. ಇದನ್ನು ಗಮನಿಸಿದ ಉಡುಪಿ ಬೆಳ್ಮಣ್ ನ ‘ಹ್ಯೂಮನಿಟಿ “ಸೇವಾ ಸಂಸ್ಥೆ ಭಾಸ್ಕರ್ ತಲಗೋಡುರವರ ಮನೆ ಕಟ್ಟುವ ಆಸೆಗೆ ಸ್ಪಂದಿಸಿ 1ಲಕ್ಷ ಧನಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. […]
ನಾನು ಮತ್ತು ನನ್ನ ಫಸ್ಟ್ ಬ್ಯಾಚ್ ಸ್ಟೂಡೆಂಟ್ಸ್
ತಾಯಿ ಮಡಿಲಿನಲ್ಲಿ ಹಸುಗೂಸು ಕಣ್ತೆರೆದರೂ, ಒಳಗಣ್ಣು ತೆರೆಯುವುದು ಗುರುವಿನ ಸಮಕ್ಷಮದಲ್ಲಿ. ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ, ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಮಹತ್ವವನ್ನರಿತು ಶಿಕ್ಷಕಿಯಾಗಬೇಕೆಂಬ ಹಂಬಲದಿಂದ ಶಿಕ್ಷಣವನ್ನು ಮುಗಿಸಿ ಶಿಕ್ಷಕರ ವ್ರತ್ತಿಗೆ ಕಾಲಿಟ್ಟಾಗ ಕಾಲೇಜಿನ ಮೊದಲನೇ ದಿನದ ಅನುಭವ ಒಂಥರಾ ಚೆಂದ. ಮನಸ್ಸಲ್ಲಿ ಒಂಥರಾ ಖುಷಿ, ಒಂದಿಷ್ಟು ಭಯ, ಒಂದಿಷ್ಟು ಗೊಂದಲಗಳ ಗೂಡಾಗಿತ್ತು. ಪ್ರತಿಯೊಬ್ಬ ಶಿಕ್ಷಕರಿಗೂ ತಮ್ಮ ಮೊದಲ ಬ್ಯಾಚ್ ಸ್ಟೂಡೆಂಟ್ ಗಳ ನೆನಪು ಅಮರ. ಏಕೆಂದರೆ ಶಿಕ್ಷಕ ವೃತ್ತಿಯ […]










