ಕುಂದಾಪುರ(ಸೆ,15): ಇಲ್ಲಿನ ಕಲಾಮಂದಿರದಲ್ಲಿ ರೋಟರಿ ಕುಂದಾಪುರ, ತಾಲೂಕು ಆರೋಗ್ಯ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ತಾಲೂಕಿನ ಶಾಲಾ ಮಕ್ಕಳಿಗೆ ಅಪೌಷ್ಟಿಕತೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಯಿತು. ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಆಗಮಿಸಿದ ಸುಮಾರು 500 ಮಕ್ಕಳಿಗೆ ಚಿಕಿತ್ಸೆಯನ್ನು ನೀಡಲಾಯಿತು. ಸಮಾರಂಭವನ್ನು ಸಹಾಯಕ ಆಯುಕ್ತರಾದ ಶ್ರೀ ರಾಜು ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ರಾಜೇಶ್ವರಿ, ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ.ರಾಬರ್ಟ್, […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಆಪತ್ಭಾಂಧವ ಈಶ್ವರ್ ಮಲ್ಪೆ ಕುಟುಂಬಕ್ಕೆ ಸಹ್ರದಯಿ ಯುವಕರಿಂದ ಸಹಾಯ ಧನ ಹಸ್ತಾಂತರ
ಮಲ್ಪೆ (ಸೆ,12): ತನ್ನ ಕೌಟುಂಬಿಕ ಸವಾಲುಗಳ ನಡುವೆಯೂ ಇನ್ನೊಬ್ಬರ ಸಹಾಯಕ್ಕೆ ಸದಾ ಸಿದ್ದರಾಗುವ, ಜೊತೆಗೆ ಅದೆಷ್ಟೋ ಜನರಿಗೆ ಆಪತ್ ಕಾಲದಲ್ಲಿ ಸಹಾಯಹಸ್ತ ಚಾಚಿರುವ ಈಶ್ವರ ಮಲ್ಪೆಯವರ ಕೌಟುಂಬಿಕ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಉಡುಪಿಯ ಸಹೃದಯಿ ಯುವಕರಾದ ಸ್ಯಾನ್ಫೋರ್ಡ್ ಡಿ’ಸೋಜಾ,ಸತ್ಯ ಆಚಾರ್ಯ,ನವೀನ್ ಸಾಲಿಯಾನ್,ಮಿಥುನ್ ಪೂಜಾರಿಯವರ ತಂಡ ಈಶ್ವರ್ ಮಲ್ಪೆ ಯವರ ಮನೆಗೆ ಭೇಟಿ ನೀಡಿ ಇವರ 2 ವಿಕಲ ಚೇತನ ಮಕ್ಕಳ ಚಿಕಿತ್ಸೆಗಾಗಿ 25000 ರೂ, ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಯುವಕರ ತಂಡದ ಸಹಾಯಕ್ಕೆ […]
ಮಾರಣಕಟ್ಟೆ: ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಕಲಾವಿದರ ಕಾರ್ಮಿಕರ ಹಿತರಕ್ಷಣಾ ಯಕ್ಷಕಲಾ ಟ್ರಸ್ಟ್ ಉದ್ಘಾಟನೆ
ವಂಡ್ಸೆ(ಸೆ,11): ಕರಾವಳಿಯ ಸಾಂಸ್ಕೃತಿಕ ವೈಭವ ಸಾರುವ ಯಕ್ಷಗಾನ ಇಂದು ಜಗತ್ ಪ್ರಸಿದ್ದ ವಾಗಿದ್ದು , ಯಕ್ಷಗಾನ ಕಲಾವಿದರು ಸಂಘಟಿತರಾಗಿ ಹೊಸ ಟ್ರಸ್ಟ್ ಹುಟ್ಟುಹಾಕಿದ್ದು, ಕಲಾವಿದರು ಜೊತೆಗೆ ಕಾರ್ಮಿಕರನ್ನೂ ಸೇರಿಸಿಕೊಂಡಿರುವುದು ಧನಾತ್ಮಕ ಬೆಳವಣಿಗೆ. ಈ ಟ್ರಸ್ಟ್ ಸಮಾಜದೊಂದಿಗೆ ಸೇರಿ ಸೌಹಾರ್ದತೆಗೆ ದಾರಿಯಾಗಬೇಕು ಹಾಗೂ ಕಲಾವಿದರಿಗೆ, ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡುವ ಜೊತೆಗೆ ಅವರ ಕಷ್ಟಸುಖಗಳಲ್ಲಿ ಭಾಗಿಯಾಗಬೇಕು ಎಂದು ಹೋಟೆಲ್ ಉದ್ಯಮಿ, ಸಹ್ರದಯಿ ಕೃಷ್ಣಮೂರ್ತಿ ಮಂಜ ಹೇಳಿದರು. ಅವರು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಕಲ್ಯಾಣ […]
ಯುವಕರಲ್ಲಿ ದೇಶಪ್ರೇಮ ಹಾಗೂ ದೇಶ ಸೇವೆಗೆ ಅಣಿಗೊಳಿಸುವುದೇ ನಮ್ಮ ಗುರಿ : ಗೋವಿಂದ ಬಾಬು ಪೂಜಾರಿ
ಬೈಂದೂರು (ಸೆ , 9) : ವೀರ ಯೋಧ ಪ್ರಶಾಂತ್ ದೇವಾಡಿಗರ ಮುಂದಾಳತ್ವದ ನೇಶನ್ ಲವರ್ಸ್ ಬೈಂದೂರು ತಂಡ ಯುವಕರಲ್ಲಿ ದೇಶ ಪ್ರೇಮ ಹಾಗೂ ಕ್ರೀಡಾಸಕ್ತಿಯೊಂದಿಗೆ ಸೈನಿಕ ತರಬೇತಿಯಂತಹ ಅರ್ಥಪೂರ್ಣ ಯೋಜನೆಯನ್ನು ಹಾಕಿಕೊಂಡಿದ್ದು ,ಇವರ ಯೋಜನೆಗೆ ಬೆನ್ನೆಲುಬಾಗಿ ನಿಂತ ದೇಶದ ಪ್ರತಿಷ್ಠಿತ ಆಹಾರ ಮತ್ತು ಆತಿಥ್ಯಕ್ಕೆ ಹೆಸರಾದ ಶೆಫ್ ಟಾಕ್ ಸಂಸ್ಥೆಯ ಮುಖ್ಯಸ್ಥರು ಹಾಗೂ ವರಲಕ್ಷೀ ಚಾರಿಟೇಬಲ್ ಟ್ರಸ್ಟ್ (ರಿ) ಉಪ್ಪುಂದ ಇದರ ಸಂಚಾಲಕರಾಗಿರುವ ಗೋವಿಂದ ಬಾಬು ಪೂಜಾರಿಯವರನ್ನು ಗೌರವಾಧ್ಯಕ್ಷರಾಗಿ ಹಾಗೂ […]
ಜಿಲ್ಲಾ ವಿಕಲಚೇತನರ ಇಲಾಖೆ ಹಾಗೂ ಎಪಿಡಿ ವತಿಯಿಂದ ವಿವಿಧ ಕಾರ್ಯಕ್ರಮ
ಬೈಂದೂರು (ಸೆ, 9): ಜಿಲ್ಲಾ ವಿಕಲಚೇತನರ ಇಲಾಖೆ ಹಾಗೂ ಎಪಿಡಿ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಕುಂದಾಪುರ ತಾಲೂಕು ಹಾಗೂ ಬೈಂದೂರು ತಾಲೂಕಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಹಾಗೂ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ತಿಂಗಳ ಸಮುದಾಯಾಧಾರಿತ ಔದ್ಯೋಗಿಕ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಸಪ್ಟೆಂಬರ್,9 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. […]
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ
ವಂಡ್ಸೆ (ಸೆ,7): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೈಂದೂರು ತಾಲೂಕು ಕೊಲ್ಲೂರು ವಲಯ ಮೆಕ್ಕೆ ಒಕ್ಕೂಟದ ಛತ್ರಮಠ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಮೆಕ್ಕೆ ಒಕ್ಕೂಟದ ಅಧ್ಯಕ್ಷರಾದ ಎಂ ಜೆ ಬೇಬಿ ಅವರು ಅಧ್ಯಕ್ಷತೆ ವಹಿಸಿದ್ದರು. ವನದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿಯಾದ ನಾರಾಯಣ ಶೆಟ್ಟಿ ಅತ್ತಿಕಾರ್ ಕಾರ್ಯಕ್ರಮ […]