ಕುಂದಾಪುರ(ಮಾ.7) : ಮಕ್ಕಳನ್ನು ಮೊಬೈಲ್ ದಾಸರನ್ನಾಗಿ ಮಾಡಬೇಡಿ, ಸಾಧ್ಯವಾದಷ್ಟು ಅವರನ್ನು ಹೊರಗಡೆ ಆಟವಾಡಲು ಬಿಡಿ, ಆಟವಾಡುವಾಗ ಎದ್ದು ಬಿದ್ದು ಕಲಿತ ಪಾಠವೇ ಅವರ ಜೀವನವನ್ನು ರೂಪಿಸಬಲ್ಲುದೇ ಹೊರತು ಮೊಬೈಲ್ ನೋಡುವುದರಿಂದ ಅಲ್ಲ, ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿಶ್ರೀ ಪವನ್ ಕುಮಾರ್ ಶೆಟ್ಟಿ ಹೇಳಿದರು. ಅವರು ಕುಂದಾಪುರ ಎಜುಕೇಶನ್ ಸೊಸೈಟಿ (ರಿ) ಪ್ರವರ್ತಿತ ಎಚ್. ಎಮ್. ಎಮ್. ಪೂರ್ವ ಪ್ರಾಥಮಿಕ ವಿಭಾಗದ ʼಗ್ರ್ಯಾಜುಯೇಷನ್ ಡೇ ʼಯ ಮುಖ್ಯ ಅತಿಥಿಯಾಗಿ ವಿಧ್ಯಾರ್ಥಿಗಳಿಗೆ ಪ್ರಮಾಣಪತ್ರ ವನ್ನು […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಬಿ. ಬಿ. ಹೆಗ್ಡೆ ಕಾಲೇಜು: ಮಾರ್ಚ್ 14 ರಿಂದ ‘ವಿ-ಗ್ರೋ’ಬ್ಯುಸಿನೆಸ್ ಡೇ
ಕುಂದಾಪುರ (ಮಾರ್ಚ್ 09): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ವಿ-ಗ್ರೋ ಬ್ಯುಸಿನೆಸ್ ಡೇ ಕಾರ್ಯಕ್ರಮ ಮಾರ್ಚ್ 14, 17 ಮತ್ತು 20 ರಂದು ಮೂರು ಹಂತದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದ ಜೊತೆಗೆ, ಉದ್ಯಮಶೀಲತಾ ಕೌಶಲ್ಯಗಳನ್ನು ಬೆಳೆಸಿಕೊಂಡು ಜಾಗತಿಕ ಮಾರುಕಟ್ಟೆಯ ಪ್ರಾಯೋಗಿಕ ಜ್ಞಾನವನ್ನು ಪಡೆದರೆ ಭವಿಷ್ಯದಲ್ಲಿ ದೊಡ್ಡ ಉದ್ಯಮಿಗಳಾಗಬಹುದು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮೊದಲನೇ ಹಂತ ವ್ಯವಹಾರ […]
ಪದವಿ ಫಲಿತಾಂಶ : ಬಿ. ಬಿ. ಹೆಗ್ಡೆ ಕಾಲೇಜಿಗೆ 4 ರ್ಯಾಂಕ್ ಗಳು
ಕುಂದಾಪುರ (ಮಾ.03): ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಸಿ.ಎ. ಪದವಿಯಲ್ಲಿ ಒಟ್ಟು 4 ರ್ಯಾಂಕ್ಗಳನ್ನು ಗಳಿಸುವ ಮೂಲಕ ಉತ್ಕೃಷ್ಟ ಸಾಧನೆಗೈದಿದ್ದಾರೆ. ಕೊಲ್ಲೂರು ಸಮೀಪದ ಮುದೂರಿನ ಶ್ರೀ ಶೀನ ಪೂಜಾರಿ ಹಾಗೂ ಶ್ರೀಮತಿ ವಿಶಾಲು ದಂಪತಿಗಳ ಪುತ್ರಿ ಶ್ರೇಯಾ ಬಿ.ಕಾಂ. ಪದವಿಯಲ್ಲಿ 2ನೇ ರ್ಯಾಂಕ್, ಕೋಣಿಯ ಶ್ರೀ ಶಂಕರ್ ಮೊಗವೀರ ಹಾಗೂ […]
ಸಿಎ ಅಂತಿಮ ಪರೀಕ್ಷೆಯಲ್ಲಿ ಅಕ್ಷಯ ಶೆಟ್ಟಿ ಉತ್ತೀರ್ಣ
ಕುಂದಾಪುರ ( ಮಾ .02): ದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾ ನೆಡೆಸಿದ 2026 ರ ಸಿಎ ಅಂತಿಮ ಪರೀಕ್ಷೆಯಲ್ಲಿ ಹುಂಚನಿ ಹೆಮ್ಮಕ್ಕಿ ವಸಂತಿ ಶೆಟ್ಟಿ ಮತ್ತು ಉಳ್ಳೂರು 74 ರ ಕರುಣಾಕರ ಶೆಟ್ಟಿಯವರ ಪುತ್ರ ಅಕ್ಷಯ ಶೆಟ್ಟಿ ಯವರು ಉತ್ತೀರ್ಣರಾಗಿರುತ್ತಾರೆ. ಇವರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಹಿಂದಿನ ವಿದ್ಯಾರ್ಥಿ
ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿ : ಅತ್ಯಾಧುನಿಕ ಸೌಕರ್ಯಗಳ ಉದ್ಘಾಟನಾ ಕಾರ್ಯಕ್ರಮ
ಹೊಸಂಗಡಿ ( ಮಾ .01): EFFULGENCE ಎಂಬ ಶೀರ್ಷಿಕೆಯಡಿ , “ಪ್ರತಿಭೆಗಳಿಗೊಂದು ಕನ್ನಡಿ, ಹೊಸತನಕ್ಕೊಂದು ಮುನ್ನುಡಿ” ಧ್ಯೇಯ ವಾಕ್ಯದೊಂದಿಗೆ ಅತ್ಯಾಧುನಿಕ ಹಾಗೂ ಮಾದರಿ ಸೌಕರ್ಯಗಳನ್ನೊಳಗೊಂಡ ಮೊದಲ ಕಾಲೇಜು ಎಂಬ ಹೆಗ್ಗಳಿಕೆಯನ್ನು ಸಂಪಾದಿಸಿಕೊಂಡಿರುವ ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿಯಲ್ಲಿ ವಿವಿಧ ಸೌಲಭ್ಯಗಳ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. CAN FINS HOMES LIMITED ಪ್ರಾಯೋಜಿತ ಸೋಲಾರ್ ಉತ್ಪಾದನಾ ಘಟಕ ಉದ್ಘಾಟನೆ , CSR ನಿಧಿಯಡಿಯಲ್ಲಿ ಇಡೀ ಕಾಲೇಜಿಗೆ ಸೋಲಾರ್ ಉತ್ಪಾದಿತ […]
ಜೆಇಇ ಮೈನ್ಸ್ ಬಿ.ಆರ್ಚ್ ಪರೀಕ್ಷೆ: ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿ ಸುಜಲ್ ಎಸ್ ತೋಳಾರ್ 98.17 ಪರ್ಸoಟೈಲ್
ಹೆಮ್ಮಾಡಿ( ಮಾ .01): ಕೇಂದ್ರ ಸರಕಾರದ ಎನ್ ಟಿ ಎ ಪ್ರಾಧಿಕಾರವು ನಡೆಸುವ ರಾಷ್ಟ್ರ ಮಟ್ಟದ ಜೆಇಇ ಮೈನ್ಸ್ 2026ರ ಪ್ರಥಮ ಹಂತದ ಪರೀಕ್ಷೆಯಲ್ಲಿ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿ ಸುಜನ್ ಎಸ್ ತೋಳಾರ್ 98.17ಪರ್ಸoಟೈಲ್ ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಮೌಲ್ಯವೇ ಜೀವನ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ, ಉತ್ತಮ ಅಂಕಗಳು ಮತ್ತು ಉನ್ನತ ಹುದ್ದೆಗಳತ್ತ ದೌಡಾಯಿಸುತ್ತಿದ್ದಾರೆ. ಆದರೆ ಮಾನವೀಯ ಮೌಲ್ಯಗಳಿಲ್ಲದ ಶಿಕ್ಷಣವು ಸಮಾಜಕ್ಕೆ ಅಪೂರ್ಣವಾದ ಕೊಡುಗೆಯಷ್ಟೇ. ಈ ಹಿನ್ನೆಲೆಯಲ್ಲಿಯೇ ಡಾ. ಬಿ. ಬಿ ಹೆಗ್ಡೆ ಕಾಲೇಜು ಕುಂದಾಪುರವು ನಿಜವಾದ ಅರ್ಥದಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಿಂದ ಪದವಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ವಿಶೇಷವಾಗಿ ಕಲಿಸಲಾಗುತ್ತಿದೆ. ಪ್ರತಿ ತರಗತಿಗೂ “ಮೌಲ್ಯ ಶಿಕ್ಷಣ” ಪೀರಿಯಡ್ ಅನ್ನು […]
ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಮಿನಿ ರಿಸರ್ಚ್ ಪ್ರಾಜೆಕ್ಟ್ ಕಾರ್ಯಾಗಾರ
ಕುಂದಾಪುರ (ಫೆ.19): ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಪ್ರಾಕ್ತನ ಸಂಘದ ಜಂಟಿ ಆಶ್ರಯದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳಿಗೆ ಎನ್.ಇ.ಪಿ. ಪಠ್ಯಕ್ರಮದ ಅಡಿಯಲ್ಲಿ ಮಿನಿ ರಿಸರ್ಚ್ ಪ್ರಾಜೆಕ್ಟ್ನ ಬಗ್ಗೆ ರಿಸರ್ಚ್ ಕಾರ್ಯಾಗಾರ ಪ್ರಾಕ್ತನ ಯಾನ ಶೀರ್ಷಿಕೆಯಡಿ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾಲೇಜಿನ 2023–24ನೇ ಸಾಲಿನ ಮಂಗಳೂರು ವಿಶ್ವವಿದ್ಯಾಲಯದಲ್ಲಿ 6ನೇ ರ್ಯಾಂಕ್ ಪಡೆದ ಪ್ರಾಕ್ತನ ವಿದ್ಯಾರ್ಥಿನಿ ಕುಮಾರಿ ರಶ್ಮಿ ಉಡುಪ ಮೊಳಹಳ್ಳಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಿಸರ್ಚ್ ಪ್ರಾಜೆಕ್ಟ್ಗಳು ಹೇಗೆ […]
ಸಂಜಯ ಗಾಂಧಿ ಪ್ರೌಢ ಶಾಲೆ ಅಂಪಾರು : ಎಸ್ ಎಸ್ ಎಲ್ ಸಿ ಪರೀಕ್ಷೆ ತಯಾರಿ ಕುರಿತು ವಿಶೇಷ ಕಾರ್ಯಾಗಾರ
ಹಾಲಾಡಿ ( ಫೆ.20): ಜೆಸಿಐ ಹಾಲಾಡಿ ವಾರಾಹಿ ಘಟಕದ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ ಸಂಜಯ ಗಾಂಧಿ ಪ್ರೌಢ ಶಾಲೆ ಅಂಪಾರು ಇಲ್ಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ʼಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ? ಎನ್ನುವ ವಿಶೇಷ ಕಾರ್ಯಾಗಾರ ವನ್ನು ಫೆಬ್ರವರಿ 18 ರಂದು ಹಮ್ಮಿಕೊಳ್ಳಲಾಯಿತು. ಜೆಸಿಐ ತರಬೇತುದಾರರು ಮತ್ತು ಸ್ಮಾರ್ಟ್ ಕ್ರೀಯೇಶನ್ಸ್ ಎಜ್ಯುಕೇಶನ್ಸ್ ಟ್ರಸ್ಟ್ (ರಿ) ಹೈಕಾಡಿ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ಕೃಷ್ಣಮೂರ್ತಿ ಹೈಕಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ […]
ಬಿ.ಬಿ ಹೆಗ್ಡೆ ಕಾಲೇಜು : ವಾಣಿಜ್ಯ ವಿಭಾಗದ ವತಿಯಿಂದ ಸಿಎ/ಸಿಎಸ್/ಸಿಎಂಎ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ
ಕುಂದಾಪುರ (ಫೆ.13): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಪ್ರಾಕ್ತನ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ವೃತ್ತಿಪರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಸಿಎ/ಸಿಎಸ್/ಸಿಎಂಎ ವಿದ್ಯಾರ್ಥಿಗಳಿಗೆ ಫೈನಾನ್ಸಿಯಲ್ ಅನಾಲಿಸ್ಟ್, ಆರ್.ಡಿ.ಟಿ.ಎಂ.ಟಿ. ಸ್ಟೀಲ್ಸ್ ಇಂಡಿಯ ಪ್ರೆöÊವೇಟ್ ಲಿಮಿಟೆಡ್ ಸಿಎ ತನುಷ ಡಿ. ರಾವ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ಗುರಿ ತಲುಪಲು ನಿರಂತರ ಅಭ್ಯಾಸವನ್ನು ರೂಢಿಸಿಕೊಳ್ಳಿ, ನಿಮ್ಮ ಗುರಿಯ ಮೇಲೆ ಮಾತ್ರ ಗಮನಹರಿಸಿ ಮತ್ತು ಸ್ಪರ್ಧೆಯು ಇತರರೊಂದಿಗೆ […]










