ಕುಂದಾಪುರ( ಸೆ,16): ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕಬಡ್ಡಿ ಪಂದ್ಯವು ಎಲ್ಲ ಜಿಲ್ಲೆಗಳ ಮೂಲೆ ಮೂಲೆಗಳಲ್ಲೂ ಪಸರಿಸುವಲ್ಲಿ ಇಂಥ ರೋಚಕ ಪಂದ್ಯಾಟಗಳು ಸಹಕಾರಿಯಾಗಿವೆ. ” ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯವರಾದಶ್ರೀ ಸೀತಾರಾಮ್ ನಕ್ಕತ್ತಾಯ ಹೇಳಿದರು. ಅವರು ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ -ಇದರ ಸಹಯೋಗದಲ್ಲಿ ಆಯೋಜಿಸಲಾದಕುಂದಾಪುರ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ತಾಲೂಕು […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಸರಸ್ವತಿ ವಿದ್ಯಾಲಯ ಗಂಗೊಳ್ಳಿ: ಕಿಂಡರ್ ಪ್ಲೇ ಗಾರ್ಡನ್ ಉದ್ಘಾಸಿದ ಶ್ರೀ ಆನಂದ ಸಿ ಕುಂದರ್
ಗಂಗೊಳ್ಳಿ (ಸೆ.16):ಇಲ್ಲಿನ ಸರಸ್ವತಿ ವಿದ್ಯಾಲಯದ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಕಿಂಡರ್ ಪ್ಲೇ ಗಾರ್ಡನ್ ನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಉದ್ಯಮಿ ಆನಂದ ಸಿ ಕುಂದರ್ ಇತ್ತೀಚಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾ ಸಂಸ್ಥೆ ಒದಗಿಸುವ ಇಂತಹ ಸೌಲಭ್ಯಗಳು ಮಕ್ಕಳಲ್ಲಿ ಉತ್ಸಾಹ ವನ್ನು ಹೆಚ್ಚಿಸುತ್ತದೆ. ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ನೀಡುತ್ತವೆ ಎಂದು ಹೇಳಿದರು. ಜಿ ಎಸ್ ವಿ ಎಸ್ […]
ಕ್ರಿಯೇಟಿವ್ ಪಿ .ಯು. ಕಾಲೇಜು ಕಾರ್ಕಳ : ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ ಎಸ್ ಮಾಹಿತಿ ಕಾರ್ಯಗಾರ
ಕಾರ್ಕಳ (ಸೆ. 15) : ಇಲ್ಲಿನ ಪ್ರತಿಷ್ಠಿತ ಕ್ರಿಯೇಟಿವ್ ಪಿ ಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ ಎಸ್ ಮಾಹಿತಿ ಕಾರ್ಯಗಾರವನ್ನು ಸೆ.09 ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಖ್ಯಾತ ಕಂಪೆನಿ ಸೆಕ್ರೇಟರಿ ಸಂತೋಷ ಪ್ರಭುರವರು ವಿದ್ಯಾರ್ಥಿಗಳಿಗೆ ಸಿ.ಎಸ್ ನ ಮಹತ್ವದ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ C.S ಎಂಬುದು ಒಂದು ಅತ್ಯುನ್ನತ ಹುದ್ದೆ ಇಂದು ಭಾರತದಲ್ಲಿ C.S (ಕಂಪೆನಿ ಸೆಕ್ರೆಟರಿ) ನ ಕೊರತೆ ಇದ್ದು […]
ಪ್ರೊ. ಕೆ. ಉಮೇಶ್ ಶೆಟ್ಟಿಯವರಿಗೆ ಉತ್ತಮ ಆಡಳಿತಗಾರ ಪ್ರಶಸ್ತಿ
ಕುಂದಾಪುರ (ಸೆ. 14) : ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ.ಬಿ.ಬಿ ಹೆಗ್ಡೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ 26 ವರ್ಷಗಳ ಅನುಭವ ಹೊಂದಿರುವ ಪ್ರೊ. ಕೆ. ಉಮೇಶ್ ಶೆಟ್ಟಿಯವರಿಗೆ ಅಭಿಜ್ಞಾ ವಿಸ್ಡಮ್ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ ಫಾರ್ ಬೆಸ್ಟ್ ಅಡ್ಮಿನಿಸ್ಟ್ರೇಟರ್ ಪ್ರಶಸ್ತಿ ಲಭಿಸಿದೆ. ಮಂಗಳೂರಿನ ಅಭಿಜ್ಞಾ ಎಜುಕೇಷನ್ ಸಂಸ್ಥೆ ಈ ಪ್ರಶಸ್ತಿಯನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆ. 05, 2022ರಂದು ಮಂಗಳೂರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
ಅಕ್ಷಯ ಹೆಗ್ಡೆ ಮೊಳಹಳ್ಳಿಗೆ ಮಲ್ಟಿಪಲ್ ಸ್ಟಾರ್ ಲಯನ್ ಅವಾರ್ಡ್
ಕುಂದಾಪುರ (ಸೆ. 11) : ಇತ್ತೀಚೆಗೆ ಗೋವಾ ,ಆಂಧ್ರಪ್ರದೇಶ ,ಕರ್ನಾಟಕ ರಾಜ್ಯಗಳನ್ನೊಳಗೊಂಡ ಲಯನ್ಸ್ ಮಲ್ಟಿಪಲ್ ಜಿಲ್ಲೆ 317 ನ ಮಲ್ಟಿಪಲ್ ಸ್ಟಾರ್ ಲಯನ್ ಅವಾರ್ಡ್ ನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರೂಪಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಸ್ವೀಕರಿಸಿದರು. ಇವರು ಮೂರು ಬಾರಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ, ಲಯನ್ಸ್ ವಿಚಾರ ಸಂಕೀರ್ಣ ಮತ್ತು ಸಮ್ಮೇಳನಗಳ ಜಿಲ್ಲಾಧ್ಯಕ್ಷರಾಗಿ, ಲಯನ್ಸ್ ಜಿಲ್ಲಾ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಗೆದ್ದು ಕೊಂಡಿದ್ದಲ್ಲದೇ, […]
ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು: ಶಿಕ್ಷಕರ ದಿನಾಚರಣೆ ಸಮಾರಂಭ ಗುರು-ನಮನ
ಹೆಮ್ಮಾಡಿ (ಸೆ, 06): ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನಾಚರಣೆ ಯ ಆಂಗವಾಗಿ ಶಿಕ್ಷಕರ ದಿನಾಚರಣೆ ಸಮಾರಂಭ ಸೆ.05 ರಂದು ಕಾಲೇಜಿನಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾಗಿರುವ ಶ್ರೀ ಗಣೇಶ ಮೊಗವೀರರವರು ವಹಿಸಿದ್ದರು.ಮುಖ್ಯ ಅತಿಥಿಯಾಗಿ ಆಗಮಿಸಿರುವ ಸರ್ಕಾರಿ ಪ್ರೌಢಶಾಲೆ ಸಿದ್ಧಾಪುರದ ಸಹ ಶಿಕ್ಷಕಿಯಾಗಿರುವ ಶ್ರೀಮತಿ ವಸಂತಿ ಭಟ್ ಶಿಕ್ಷಕ-ಶಿಕ್ಷಣ-ವಿದ್ಯಾರ್ಥಿ ಈ ಕುರಿತು ಮಾತನಾಡಿದರು. ಪ್ರಾಂಶುಪಾಲರಾಗಿರುವ ಶ್ರೀ ಗಣೇಶ ಮೊಗವೀರರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ […]
ಗಂಗೊಳ್ಳಿ : ಪ್ರತಿಭಾ ಕಾರಂಜಿಯಲ್ಲಿ ಕೊಂಚಾಡಿ ರಾಧ ಶೆಣೆೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಉತ್ತಮ ಪ್ರದರ್ಶನ
ಗಂಗೊಳ್ಳಿ (ಆ,29): ಇಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ,29 ರಂದು ನಡೆದ ಗಂಗೊಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೊಂಚಾಡಿ ರಾಧ ಶೆಣೆೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿಕೇರಿ ಗಂಗೊಳ್ಳಿ ಇಲ್ಲಿಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಿರಿಯರ ವಿಭಾಗದಲ್ಲಿ ಸಂಜೀತ ಎಮ್ .ದೇವಾಡಿಗ ಚಿತ್ರಕಲೆಯಲ್ಲಿ ಪ್ರಥಮ , ಪ್ರೇಕ್ಷ ಕಥೆ ಹೆೇಳುವುದರಲ್ಲಿ ಪ್ರಥಮ, ಪೂರ್ವಿ ಭಕ್ತಿ ಗೀತೆ ಪ್ರಥಮ , ಖುಷಿ ಅಭಿನಯ […]
ಮಂಗಳೂರು ಕೆ.ಎಂ.ಎಫ್ ಗೆ ಕ್ರಿಯೇಟಿವ್ ವಾಣಿಜ್ಯ ವಿದ್ಯಾರ್ಥಿಗಳಿಂದ ಕೈಗಾರಿಕಾ ಭೇಟಿ
ಮಂಗಳೂರು(ಆ,26): ಕ್ರಿಯೇಟಿವ್ ಪಿ.ಯು ಕಾಲೇಜು, ಕಾರ್ಕಳ ಸಂಸ್ಥೆಯ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ “ಕೈಗಾರಿಕಾ ಭೇಟಿ” ಕಾರ್ಯಕ್ರಮವನ್ನು ಆ .23 ರಂದು ಆಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಂಗಳೂರಿನ ಕೆ.ಎಂ.ಎಫ್ ಕೈಗಾರಿಕೆಗೆ ಭೇಟಿ ನೀಡಿ ಕೈಗಾರಿಕೆಯಲ್ಲಿನ ಹಾಲು ಉತ್ಪಾದನಾ ಘಟಕದ ಪ್ರಕ್ರೀಯೆಗಳು, ಹಂತಗಳು ಉತ್ಪಾದನಾ ವಿಧಾನಗಳು ಹಾಗೂ ಉತ್ಪನ್ನಗಳ ಬಗ್ಗೆ ಸವಿಸ್ಥಾರವಾದ ಮಾಹಿತಿಯನ್ನು ಸಂಗ್ರಹಿಸಿದರು. ಬದುಕಿನಲ್ಲಿ ಪಠ್ಯದ ಜ್ಞಾನದ ಜೊತೆಗೆ ಪಠ್ಯದಲ್ಲಿನ ವಿಷಯಗಳ ಪ್ರಾಯೋಗಿಕ ಜ್ಞಾನವು ಮಹತ್ತರವಾದದು ಹಾಗೂ ಒಬ್ಬ ಯಶಸ್ವಿ ಉದ್ಯಮದಾರನ್ನಾಗಿಸಲು […]
ಎಕ್ಸಲೆಂಟ್ ಕುಂದಾಪುರ: ನಾಲ್ಕು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ, ಅಂತಾರಾಷ್ಟ್ರೀಯ ಪಂದ್ಯಾಕೂಟದಲ್ಲಿ ಮೂರು ಪದಕ
ಕುಂದಾಪುರ(ಆ,26):: ಸುಣ್ಣಾರಿಯ ಎಕ್ಸಲೆಂಟ್ ಸ್ಕೂಲ್ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮಟ್ಟ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಸಾಧನೆಗೈಯುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಚಾಪನ್ನು ಮೂಡಿಸಿದ್ದಾರೆ.ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಆಯೋಜಿಸಿರುವ ಜಿಲ್ಲಾ ಮಟ್ಟದ ಬಾಲಕ – ಬಾಲಕಿಯರ ಚದುರಂಗ ಸ್ಪರ್ಧೆಯಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕುಂದಾಪುರದ ವಿದ್ಯಾರ್ಥಿಗಳಾದ ಮಾನಸ ಪ್ರಥಮ ಸ್ಥಾನಿಯಾಗಿ ಹಾಗೂ ನಿಹಾಲ್ ಎನ್ ಶೆಟ್ಟಿ ತೃತೀಯ ಸ್ಥಾನಿಯಾಗಿ ರಾಜ್ಯ […]
ಗೀತಗಾಯನ :ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕುಂದಾಪುರ (ಆ,26): ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಪ್ರೌಢಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ತಾಲೂಕು ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕುಂದಾಪುರ ಇವರ ಸಂಯುಕ್ತಾಶ್ರಯದಲ್ಲಿ ಕುಂದಾಪುರದ ರೋಟರಿ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ದೇಶಭಕ್ತಿಗೀತಗಾಯನ ಸ್ಪರ್ಧೆಯಲ್ಲಿ […]










