ಕುಂದಾಪುರ (ಎ.16): ಪ್ರಾಚ್ಯ ವಸ್ತುಗಳು ಪೂರ್ವಜರ ಸಂಪ್ರದಾಯದ ಪ್ರತೀಕ ಅವುಗಳನ್ನು ಉಳಿಸುವ ಮತ್ತು ಪರಿಚಯಿಸುವಲ್ಲಿ ವಿದ್ಯಾರ್ಥಿಗಳ ಪ್ರಯತ್ನ ಶ್ಲಾಘನೀಯ ಎಂದು ಉದಯವಾಣಿ ದಿನಪತ್ರಿಕೆಯ ಉಪಮುಖ್ಯ ವರದಿಗಾರ ಶ್ರೀ ಲಕ್ಷ್ಮಿ ಮಚ್ಚಿನ ಹೇಳಿದರು. ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಪ್ರಾಚ್ಯ ವಸ್ತುಗಳ ಪ್ರದರ್ಶನದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮಾತನಾಡಿ, ಪ್ರಾಚ್ಯ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಅಂಬೇಡ್ಕರ್ ಬದುಕು ಮತ್ತು ಸಾಧನೆ ಎಲ್ಲರಿಗೂ ಪ್ರೇರಣೆ : ನರೇಂದ್ರ ಎಸ್ ಗಂಗೊಳ್ಳಿ
ಗಂಗೊಳ್ಳಿ(ಎ ,14): ಅಂಬೇಡ್ಕರ್ ಅವರ ಬದುಕು ಹೋರಾಟ ಮತ್ತು ಸಾಧನೆ ಜಗತ್ತಿನ ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವಂತದ್ದು ಈ ನಿಟ್ಟಿನಲ್ಲಿ ಅವರ ಬದುಕನ್ನು ಪ್ರತಿಯೊಬ್ಬರು ಅಧ್ಯಯನ ಮಾಡುವ ಅಗತ್ಯವಿದೆ ಎಂದು ಲೇಖಕ ಮತ್ತು ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯ ಪಟ್ಟರು. ಅವರು ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್ ನೆಹರು ಯುವ ಕೇಂದ್ರ ಉಡುಪಿ, ಡಾ. ಬಿ. ಆರ್ ಅಂಬೇಡ್ಕರ್ ಯುವಕ ಮಂಡಲ, ಅಮೃತ […]
ಬಿ. ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಸಂಚಿಕೆ “ಶಿಖರ”ಅನಾವರಣ
ಕುಂದಾಪುರ, (ಎ 15): ಮಂಗಳೂರು ವಿಶ್ವವಿದ್ಯಾನಿಲಯ ಅಂತರ್-ಕಾಲೇಜು ಮಟ್ಟದ ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಗಮನ ಸೆಳೆದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 2023-24ನೇ ಸಾಲಿನ ವಾರ್ಷಿಕ ಸಂಚಿಕೆ ‘ಶಿಖರ’ವನ್ನು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಶ್ರೀ ಶ್ರೀನಿವಾಸ ಸೋಮಯಾಜಿಯವರು ಅನಾವರಣಗೊಳಿಸಿ, ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ […]
ಬಿ. ಬಿ. ಹೆಗ್ಡೆ ಕಾಲೇಜಿಗೆ ‘ಪ್ರಜ್ಞಾ– 2025’ ಸಮಗ್ರ ಪುರಸ್ಕಾರ
ಕುಂದಾಪುರ (ಎ.22): ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಎರಡು ದಿನ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆ ‘ಪ್ರಜ್ಞಾ 2025’ ರಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮೊದಲನೇ ದಿನ ಶೈಕ್ಷಣಿಕ ಸ್ಪರ್ಧೆಯಲ್ಲಿ 15 ಬಹುಮಾನ, ಎರಡನೇ ದಿನ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಆಯೋಜಿಸಿದ ಎಲ್ಲಾ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದು, ಒಟ್ಟು 24 ಬಹುಮಾನ ಪಡೆಯುವ ಮೂಲಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಎರಡೂ ವಿಭಾಗಗಳಲ್ಲಿ […]
ಜೆಇಇ ಮೈನ್ಸ್ 2025 ಎರಡನೇ ಹಂತದ ಪ್ರವೇಶ ಪರೀಕ್ಷೆ: ಹೆಮ್ಮಾಡಿಯ ಜನತಾ ಪಿ ಯು ಕಾಲೇಜಿಗೆ 99 ಪರ್ಸಂಟೈಲ್ ಗಿಂತ ಅಧಿಕ ಅಂಕಗಳು
ಹೆಮ್ಮಾಡಿ (ಎ ,21): ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ ಎರಡನೇ ಹಂತದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜು ಪ್ರಾರಂಭದ ಮೂರನೇ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ಆರಂಭಗೊಂಡು ಶೈಕ್ಷಣಿಕ ಸಂಚಲನ ಮೂಡಿಸಿರುವ ಜನತಾ ಶಿಕ್ಷಣ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಾ ಗುಣಮಟ್ಟದ ಶಿಕ್ಷಣ ನೀಡುತ್ತಿದೆ, ಜೆಇಇ ಮೈನ್ಸ್ 2025ರ ಎರಡನೇ ಹಂತದ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ಆಕಾಶ್ […]
ಕ್ರಾಸ್ ಲ್ಯಾಂಡ್ ಕಾಲೇಜು ಬ್ರಹ್ಮಾವರ : ಮಾನವ ಹಕ್ಕು ಅರಿವಿನ ಕುರಿತು ಉಪನ್ಯಾಸ
ಬ್ರಹ್ಮಾವರ (ಎ. 19): ಇಲ್ಲಿನ ಕ್ರಾಸ್ ಲ್ಯಾಂಡ್ ಪದವಿ ಕಾಲೇಜಿನ ಮಾನವ ಹಕ್ಕು ಘಟಕದ ಆಶ್ರಯದಲ್ಲಿ ಮಾನವ ಹಕ್ಕುಗಳ ಕುರಿತು ಅರಿವು ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏಪ್ರಿಲ್,19 ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರದ ಡಾ. ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಮಾತನಾಡಿ ಮಾನವ ಹಕ್ಕುಗಳ ಅರಿವು ಎಲ್ಲರಿಗೂ ಅಗತ್ಯ […]
ರಥೋತ್ಸವದ ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸುವ ಕಾರ್ಯ ಶ್ಲಾಘನೀಯ – ಆನಂದ್ ಸಿ. ಕುಂದರ್
ಬಗ್ವಾಡಿ(ಎ. 14): ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇಗುಲದ ಬ್ರಹ್ಮರಥೋತ್ಸವದ ಪ್ರಯುಕ್ತ ಬಗ್ವಾಡಿ ಉತ್ಸವ”ದ ಶೀರ್ಷಿಕೆಯಡಿಯಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಹಾಗೂ ಸಾಂಸ್ಕೃತಿಕ ವೈಭವ ಹಮ್ಮಿಕೊಂಡಿರುವುದು ಶ್ಲಾಘನೀಯ. ಇದು ರಥೋತ್ಸವದ ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸುತ್ತದೆ. ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿಯ ಉತ್ತಮ ಕಾರ್ಯಗಳು ನಿಮ್ಮಿಂದಾಗಲಿ ಎಂದು ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಶ್ರೀ ಆನಂದ ಸಿ ಕುಂದರ್ ಹೇಳಿದರು. ಅವರು ಶ್ರೀ ಮಹಿಷಾಸುರ ಮರ್ದಿನಿ ಸಾಂಸ್ಕೃತಿಕ ಬಳಗ ಇವರ […]
ಎಚ್.ಎಮ್.ಎಮ್ & ವಿ.ಕೆ.ಆರ್ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆ : ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ 3 – ದಿನ 6
ಕುಂದಾಪುರ (ಎ. 13 ) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ 2025 ಸೀಸನ್ 3 ಸಮ್ಮರ ಕ್ಯಾಂಪ್ನ 6ನೇ ದಿನದಂದು ಮಕ್ಕಳ ಸಂತೆ ನಡೆಯಿತು. ಪ್ರಗತಿಪರ ಕೃಷಿಕರಾದ ಗುಂಡು ಪೂಜಾರಿ ಹರವರಿ ಮಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮಕ್ಕಳು ಹಾಗೂ ಪೋಷಕರನ್ನು ಉದ್ದೇಶಿಸಿ ಕೃಷಿ ದೇಶದ ಬೆನ್ನೆಲುಬು, ಪ್ರತಿಯೊಬ್ಬರು […]
ಉಡುಪಿ ಜಿಲ್ಲಾ ಅತ್ಲೇಟಿಕ್ಸ್ ಕ್ರೀಡಾಕೂಟ -2025: ಕುಂದಾಪುರ ಟ್ರ್ಯಾಕ್ &ಫೀಲ್ಡ್ ಅತ್ಲೇಟಿಕ್ಸ್ ಅಕಾಡೆಮಿಯ ಕ್ರೀಡಾಪಟುಗಳಿಗೆ ಪದಕ
ಉಡುಪಿ(ಏ,14): ಚೇತನ ಸ್ಪ್ರಿಂಟರ್ಸ್ ಮತ್ತು ರನ್ನರ್ಸ್ ಇವರ ಸಹಯೋಗದೊಂದಿಗೆ ಕಿಡ್ಸ್ ಸ್ಪೋರ್ಟ್ಸ್ ಸಹಕಾರದೊಂದಿಗೆ ಉಡುಪಿ ಜಿಲ್ಲಾ ಅತ್ಲೇಟಿಕ್ಸ್ ಕ್ರೀಡಾಕೂಟ 2025 ರಲ್ಲಿ ಕುಂದಾಪುರ ಟ್ರ್ಯಾಕ್ ಅಂಡ್ ಫೀಲ್ಡ್ ಅತ್ಲೇಟಿಕ್ಸ್ ಅಕಾಡೆಮಿಯ 26 ಕ್ರೀಡಾಪಟುಗಳು ಪದಕ ಪಡೆದು ಸಾಧನೆಗೈದಿದ್ದಾರೆ. 8 ವರ್ಷ ವಯೋಮಾನದ ಹುಡುಗರ ವಿಭಾಗ :ಪ್ರತ್ಯುಶ್ ಜಿ ಶೆಟ್ಟಿ – 50 ಮೀಟರ್ ( ದ್ವಿತೀಯ ), ಬಾಲ್ ಥ್ರೋ (ತೃತೀಯ ), 4×100ಮೀಟರ್ ರಿಲೇ (ದ್ವಿತೀಯ ).ಆರಾಧನ್ ಪಿ […]
ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಗಣೇಶ ಮೊಗವೀರರವರಿಗೆ ರಾಷ್ಟ್ರೀಯ ಮಟ್ಟದ ಸರ್ದಾರ್ ಪಟೇಲ್ ಯುನಿಟಿ ಪ್ರಶಸ್ತಿ ಪ್ರದಾನ
ಹೆಮ್ಮಾಡಿ( ಏ .14): ಏಪ್ರಿಲ್ 11ರಂದು ಗೋವಾದಲ್ಲಿ ನಡೆದ ಪ್ರತಿಷ್ಠಿತ ಟೊಪ್ನೆಟೆಕ್ ಪೌಂಡೇಶನ್ ನವರು ಕೊಡಮಾಡುವ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸರ್ದಾರ್ ಪಟೇಲ್ ಯುನಿಟಿ ಅವಾರ್ಡ್ಸ್ 2025-“ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿತ್ವ” ಪ್ರಶಸ್ತಿಯನ್ನು ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರರಿಗೆ ಪ್ರದಾನ ಮಾಡಲಾಯಿತು. ಶ್ರೀಯುತರು ಇದುವರೆಗೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಸೇವೆಯನ್ನು […]










