ಗಂಗೊಳ್ಳಿ(ಜು,13) : ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ಮೂರನೇ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಅಂಗವಾಗಿ ಜುಲೈ 14 ಭಾನುವಾರ ಸಂಜೆ 4:00 ಗುಜ್ಜಾಡಿ ಗೋಪಾಲ್ ನಾಯಕ್ ರೋಟರಿ ಸಭಾಂಗಣದಲ್ಲಿ ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ‘ಮೃಡ’ ನಾಟಕ ಪ್ರದರ್ಶನ ನಡೆಯಲಿದೆ. ಶಿವನ ನೈಜ ದರ್ಶನವನ್ನು ಅಪೇಕ್ಷಿಸಿ ಹೊರಡುವ ಭಕ್ತನೊಬ್ಬನಿಗೆ ಜೀವನದ ಸತ್ಯ ದರ್ಶನವಾಗುವ ಕಥೆಯನ್ನು ನಾಟಕ ಹೊಂದಿದ್ದು , […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಸುಣ್ಣಾರಿ: ನಿವೃತ ಮುಖ್ಯೋಪಾಧ್ಯಾಯಿನಿ ಸರೋಜನಿಯವರಿಗೆ ಸನ್ಮಾನ
ಕೋಟೇಶ್ವರ (ಜು,13): ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹೊಂಬಾಡಿ-ಮಂಡಾಡಿ ಇಲ್ಲಿ ಮುಖ್ಯೋಪಾಧ್ಯಾಯಿನಿ ಯಾಗಿದ್ದ ಶ್ರೀಮತಿ ಸರೋಜನಿ ಯವರು ಶಿಕ್ಷಕ ವ್ರತ್ತಿಯಿಂದ ನಿವೃತ್ತಿ ಹೊಂದಿದ್ದು, ಆ ಪ್ರಯುಕ್ತ ಸುಣ್ಣಾರಿ ವೆಂಕಟೇಶ ಕಲ್ಯಾಣ ಮಂಟಪದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲಾ ಸಂಚಾಲಕರಾದ ಶ್ರೀ ಕಿಶೋರ ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಅಧ್ಯಾಪಕರ ಪರವಾಗಿ ಶ್ರೀಮತಿ ಸರೋಜನಿ ಮೇಡಂ ಮತ್ತು ಅವರ ಪತಿ ಶ್ರೀ […]
ಸಿಎ ಅಂತಿಮ ಪರೀಕ್ಷೆಯಲ್ಲಿ ರಕ್ಷಿತ್ ಕುಮಾರ್ ಶೆಟ್ಟಿ ತೇರ್ಗಡೆ
ಕೊಲ್ಲೂರು (ಜು,12): ಇಲ್ಲಿನ ಶ್ರೀ ಮೂಕಾಂಬಿಕೆ ದೇವಳದ ಪದವಿ ಪೂರ್ವ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ರಕ್ಷಿತ್ ಕುಮಾರ್ ಶೆಟ್ಟಿ ಅವರು ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ,ಉಪನ್ಯಾಸಕೇತರ ವೃಂದದವರು ಅಭಿನಂದನೆ ಹಾಗೂ ಶುಭಾಶಯ ಕೋರಿರುತ್ತಾರೆ.
ಶ್ರೀ ಮೂಕಾಂಬಿಕ ದೇವಳದ ಸ್ವತಂತ್ರ ಪಿ ಯು ಕಾಲೇಜು :ಪೋಷಕರ ಸಭೆ
ಕೊಲ್ಲೂರು ( ಜು,13): ಇಲ್ಲಿನ ಶ್ರೀ ಮೂಕಾಂಬಿಕ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆ ಇತ್ತೀಚೆಗೆ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ. ಬಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂದರ್ಭದಲ್ಲಿ ಪ್ರಥಮ ಪಿಯುಸಿಯ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಭೂಮಿಕಾ ,ದ್ವಿತೀಯ ಸ್ಥಾನ ತಿಲಕ್ ಪಿ ಸಿ, ತೃತೀಯ ಸ್ಥಾನ ಪಡೆದ ಸುಬ್ರಹ್ಮಣ್ಯ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ […]
ಎಕ್ಸಲೆಂಟ್ ಪಿ ಯು ಕಾಲೇಜು ಕುಂದಾಪುರ: ವಿಶೇಷ ಡಿಪಿಪಿ ತರಗತಿ ಉದ್ಘಾಟನೆ
ಕುಂದಾಪುರ(ಜು,06): ಇಲ್ಲಿನ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮುಂದಿನ ಸ್ಪಧಾತ್ಮಕ ಪರೀಕ್ಷೆಗಳಾದ ನೀಟ್,ಜೆಇಇ, ಸಿಇಟಿ ಪರೀಕ್ಷೆಗಳಿಗೆ ಸಿದ್ಧಗೊಳಿಸಲು ವಿಶೇಷ ಡಿಪಿಪಿ ತರಗತಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ನೀಟ್, ಜೆಇಇ, ಸಿಇಟಿ ಕೋರ್ಸ್ಗಳ ಅನುಭವಿ ಹಿರಿಯ ಉಪನ್ಯಾಸಕರಾದ ಮಿ. ಬಾಲಾಜಿ ಗುಪ್ತ ಇವರ ಮಾಗದರ್ಶನದಲ್ಲಿ ಡಿಪಿಪಿ ತಂಡದ ಅನುಭವಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು. ಈ ಕುರಿತು ಮಾತನಾಡಿದ […]
ಎಂ ಐ ಟಿ ಮೂಡ್ಲಕಟ್ಟೆ: ಹೊಸ ಕೋರ್ಸ್ ಎಂ ಸಿ ಎ ಆರಂಭ
ಕುಂದಾಪುರ(ಜು.06): ಇಲ್ಲಿನ ಪ್ರತಿಷ್ಠಿತ ಕಾಲೇಜು ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ನ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎ ಐ ಸಿ ಟಿ ಈ )ಹೊಸದಿಲ್ಲಿ ಇವರಿಂದ ಅನುಮೋದನೆ ದೊರೆತಿದೆ. ಈ ಕೋರ್ಸ್ ನ ಪದವಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿ ಟಿ ಯು )ಅಡಿಯಿಂದ ನೀಡಲಾಗುವುದು. ಬಿ ಸಿ ಎ/ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಅಥವಾ ಸಮಾನಾಂತರ ವಿಷಯಗಳಲ್ಲಿ ಶೇಕಡ 50 ಮತ್ತು ಅಧಿಕ ಅಂಕಗಳೊಂದಿಗೆ ಪದವಿ ಮುಗಿಸಿದ ವಿದ್ಯಾರ್ಥಿಗಳು, ಈ ಶೈಕ್ಷಣಿಕ ವರ್ಷದಿಂದಲೇ ಪ್ರವೇಶಾ ತಿ ಪಡೆಯಲು ಅವಕಾಶವಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಕಾಲೇಜು ಕಚೇರಿಯನ್ನು ಸಂಪರ್ಕಿಸಿಲು ತಿಳಿಸಲಾಗಿದೆ.
ಜು.14 ರಂದು ಬಿಲ್ಲವರ ಹಿತ ರಕ್ಷಣಾ ವೇದಿಕೆಯ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಗಂಗೊಳ್ಳಿ(ಜು,06) : ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ ಇದರ ಮೂರನೇ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಮತ್ತು ದಿ.ಜಿ.ಕೆ ರಾಮದಾಸ ಕೊಡೇರಿ ಮನೆ ಇವರ ಸ್ಮರಣಾರ್ಥ ಶ್ರೀಮತಿ ರಾಧಾ ರಾಮದಾಸ ಪೂಜಾರಿ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ ನೀಡುತ್ತಿರುವ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಜುಲೈ 14 ಭಾನುವಾರದಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಜರಗಲಿರುವುದು. ಬಿಲ್ಲವರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಜಿ.ಗೋಪಾಲ […]
ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪಿ ಯು ಕಾಲೇಜು: ಅಂತರಾಷ್ಟ್ರೀಯ ಯೋಗ ದಿನಾಚರಣೆ
ಕೊಲ್ಲೂರು (ಜು,05): ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಇತ್ತೀಚೆಗೆ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ ಕೆ ಯವರು ವಹಿಸಿದ್ದರು.ರಾಜ್ಯಮಟ್ಟದ ಯೋಗದ ಸಂಪನ್ಮೂಲ ವ್ಯಕ್ತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಹೊಳೆಯ ಶಿಕ್ಷಕ ಮಂಜುನಾಥ ದೇವಾಡಿಗಯವರು ಉದ್ಘಾಟಿಸಿ ಯೋಗದ ಉಪಯೋಗಗಳು ಹಾಗೂ ಯೋಗವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ […]
ಡಾ lಬಿ ಬಿ ಹೆಗ್ಡೆ ಕಾಲೇಜು ಕುಂದಾಪುರ : ಆನ್ಲೈನ್ ಮೂಲಕ ಆದಾಯ ತೆರಿಗೆ ಪಾವತಿ ಕುರಿತು ಅರಿವು ಕಾರ್ಯಕ್ರಮ
ಕುಂದಾಪುರ (ಜು, 02): ಡಾl ಬಿ ಬಿ ಹೆಗ್ಡೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ಅಂತಿಮ ಬಿ ಬಿ ಎ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಆದಾಯತೆರಿಗೆ ಪಾವತಿ ಕುರಿತು ಅರಿವು ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಸಿ. ಎ ಆನಂದ್ ತೀರ್ಥ ಉಡುಪಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಆದಾಯ ತೆರಿಗೆ ಪಾವತಿ ಮಾಡುವಾಗ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಈ ಸಂಧರ್ಭದಲ್ಲಿ ಕಾಲೇಜಿನ […]
ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪಿ ಯು ಕಾಲೇಜು : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕೊಲ್ಲೂರು(ಜು,4): ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ 2023-24 ನೆ ಶೈಕ್ಷಣಿಕ ಸಾಲಿನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 51 ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಹಿಂದಿನ ವಿದ್ಯಾರ್ಥಿ ಸಿಎ ಸುದೀಪ್ ಶೆಟ್ಟಿ ಯವರು ಕೊಡಮಾಡಿದ ಬೆಳ್ಳಿಯ ನಾಣ್ಯವನ್ನು ಉಡುಗೊರೆಯಾಗಿ ನೀಡಲಾಯಿತು. ಸಂಸ್ಥೆಯ ಪ್ರಾಂಶುಪಾಲ ಗೋಪಾಲಕೃಷ್ಣ ಜಿಕೆ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ […]










