ಗಂಗೊಳ್ಳಿ(ಆ,27): ಸೇವಾ ಸಂಘ(ರಿ.) ಗಂಗೊಳ್ಳಿಯ 49 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ವೇದಿಕೆಯಲ್ಲಿ ಗಂಗೊಳ್ಳಿಯ ಸ್ಯಾಕ್ಸೋಫೋನ್ ವಾದನದ ಬಹುಮುಖ ಬಾಲ ಪ್ರತಿಭೆ ಸಂಜಿತ್ ಎಮ್ ದೇವಾಡಿಗ ತಮ್ಮ ತಂಡದೊಂದಿಗೆ ಸ್ಯಾಕ್ಸೋಫೋನ್ ವಾದನ ಸೇವೆಯನ್ನು ಸಲ್ಲಿಸಿದರು. ಶಾರದೆ ದಯೆ ತೋರಿದೆ, ಡೀ ಡೀ ಆಡ್ಯಾನೇ ರಂಗ , ಆವ ಕುಲವೋ ರಂಗ, ಕಣ್ಣುಗಳೆರಡು ಸಾಲದಮ್ಮ, ಕಮಲದ ಮೊಗದೋಳೆ, ತುಳುವನಾಡ ಧರ್ಮ ತುಡರ್, ಎಂಥ ಅಂದ ಎಂಥ ಚಂದ, ತಂಬೂರಿ ಮೀಟಿದವ […]
Category: ಶಿಕ್ಷಣ -ಉದ್ಯೋಗ
ಸುದ್ದಿ ಸಮಾಚಾರ — > ಶಿಕ್ಷಣ -ಉದ್ಯೋಗ
ಕ್ರಿಕೆಟ್ : ಕುಂದಾಪುರದ ವಿ. ಕೆ. ಆರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ
ಕುಂದಾಪುರ (ಆ,27): ಇಲ್ಲಿನ ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಮೈಸೂರು ವಿಭಾಗೀಯ ಮಟ್ಟದ ಕ್ರಿಕೆಟ್ ಹಾರ್ಡ್ ಬಾಲ್ ಪಂದ್ಯಾಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 8ನೇ ತರಗತಿ ವಿದ್ಯಾರ್ಥಿನಿ ತ್ರಿಶಾ ಐ ನಾಯಕ್ 14ರ ವಯೋಮಾನದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. 10ನೇ ತರಗತಿಯ ಅಂಶಿತ್ 17ರ ವಯೋಮಾನದ […]
ಡಾIಬಿ.ಬಿ.ಹೆಗ್ಡೆ ಕಾಲೇಜು:ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿಸ್ತರಣಾ ಚಟುವಟಿಕೆ
ಕುಂದಾಪುರ(ಆ,27): ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರದಲ್ಲಿ ವಿಸ್ತರಣಾ ಚಟುವಟಿಕೆ ಜರುಗಿತು. ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಂತ್ರಜ್ಞರಾದ ಶ್ರೀ ವೀರೇಂದ್ರರವರು ವಿದ್ಯಾರ್ಥಿಗಳಿಗೆ ರಕ್ತವನ್ನು ನೀಡಲು ಹೇಗೆ ಸಹಾಯಕರಾಗಬೇಕು ಜೊತೆಗೆ ರಕ್ತ ಸಂಗ್ರಹ, ಪರಿಷ್ಕರಣೆ, ಮತ್ತು ಸಂಗ್ರಹಿಸಿದ ರಕ್ತದ ಪ್ರಕ್ರಿಯೆಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಸಭಾಪತಿಗಳಾದ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು ಎನ್.ಎಸ್.ಎಸ್ ಘಟಕ: ಹೂವಿನ ಕೋಲು ಪ್ರದರ್ಶನ
ಕುಂದಾಪುರ (ಅ. 24) : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯಕ್ಷಗಾನ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ನವರಾತ್ರಿ ಪ್ರಯುಕ್ತ ಸಾಂಪ್ರದಾಯಿಕ ಹೂವಿನ ಕೋಲು ಪ್ರದರ್ಶನ ನಡೆಯಿತು. ‘ಕೃಷ್ಣಾರ್ಜುನ’ ಪ್ರಸಂಗವನ್ನು ಆಯ್ಕೆ ಮಾಡಿಕೊಂಡು ಅರ್ಜುನನಾಗಿ ಅಂತಿಮ ಬಿ.ಎಸ್ಸಿ.ಯ ಲಕ್ಷ್ಮೀಕಾಂತ್ ಯು. ಶೆಟ್ಟಿ, ಕೃಷ್ಣನಾಗಿ, ದ್ವಿತೀಯ ಬಿ.ಕಾಂ. (ಡಿ)ನ ಪವಿತ್ರ ಪೈ ಅರ್ಥ ಹೇಳಿದರು. ಭಾಗವತಿಕೆಯಲ್ಲಿ ದ್ವಿತೀಯ ಬಿ.ಸಿ.ಎ. (ಎ)ನ ಪೂಜಾ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು: ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ. ಘಟಕದ ವತಿಯಿಂದ ಆರೋಗ್ಯ ಅರಿವು ಕಾರ್ಯಕ್ರಮ
ಕುಂದಾಪುರ (ಅ. 25) : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎನ್.ಸಿ.ಸಿ. ಘಟಕ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲಾ ಮಾಹಿತಿ ಮತ್ತು ಶಿಕ್ಷಣ ವಿಭಾಗ, ಕುಂದಾಪುರ ತಾಲೂಕು ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ ಕಾಲೇಜಿನ ಮೂಕಾಂಬಿಕ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿ ತಾಲೂಕು ಆರೋಗ್ಯ ಅಧಿಕಾರಿ ಡಾ| […]
ಸರಕಾರಿ ಪಿ ಯು ಕಾಲೇಜು ಹೊಸಂಗಡಿ: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಹೆಮ್ಮಾಡಿ(ಅ.27): ಸರಕಾರಿ ಪಿ ಯು ಕಾಲೇಜು ಹೊಸಂಗಡಿ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ 2023, ಇದರ ಉದ್ಘಾಟನಾ ಕಾರ್ಯಕ್ರಮವು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆಯಲ್ಲಿ ಅಕ್ಟೋಬರ್ 25 ರಂದು ಜರಗಿತು. ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆ ಇದರ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಸಚ್ಚಿದಾನಂದ ಚಾತ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.. ಆಜ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮಾ.ವ್ಯ.ಸೇ.ಸ.ಸಂ.ನಿ. ಮಾನಂಜೆ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು : ರೋವರ್ಸ್ ಹಾಗೂ ರೇಂಜರ್ಸ್ ಘಟಕದಿಂದ ಸೇವಾ ಶಿಬಿರ
ಕುಂದಾಪುರ (ಅ.26): ಕರಾವಳಿಯ ಪ್ರಸಿದ್ಧ ಕ್ಷೇತ್ರವಾದ ಉಚ್ಚಿಲ ಮಹಾ ಲಕ್ಷ್ಮೀ ದೇವಸ್ಥಾನದ ದಸರಾ ಮಹೋತ್ಸವದ ಪ್ರಯುಕ್ತ ಕುಂದಾಪುರದ ಡಾ|ಬಿ.ಬಿ ಹೆಗ್ಡೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸ್ವಯಂ ಸೇವಕರಿಂದ ಒಂದು ದಿನದ ಸೇವಾ ಶಿಬಿರವನ್ನು ಅಕ್ಟೋಬರ್ 22ರಂದು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಸ್ವಯಂಸೇವಕರು ಸಕ್ರಿಯವಾಗಿ ಈ ಶಿಬಿರದಲ್ಲಿ ಭಾಗವಹಿಸಿದ್ದರು.ಕಾಲೇಜಿನ ರೋವರ್ಸ್ ಘಟಕದ ಸಂಯೋಜಕರಾದ ಪ್ರವೀಣ್ ಮೊಗವೀರ ಗಂಗೊಳ್ಳಿ, ಶಿಬಿರವನ್ನು ಸಂಯೋಜಿಸಿದರು.ಜಿಲ್ಲಾ ಸ್ಕೌಟ ಮತ್ತು ಗೈಡ್ ಪ್ರಮುಖರಾದ ಶ್ರೀಮತಿ ಸುಮನ ಉಪಸ್ಥಿತರಿದ್ದರು.
ರಾಜ್ಯಮಟ್ಟದ ಎನ್ನೆಸ್ಸೆಸ್ ಯುವಜನೋತ್ಸವದಲ್ಲಿ ಡಾ Iಬಿ. ಬಿ. ಹೆಗ್ಡೆ ಕಾಲೇಜಿನ ಸ್ವಯಂಸೇವಕ ಮದನ್ ಎಮ್. ವಿ
ಕುoದಾಪುರ (ಅ.17) : ಅಕ್ಟೋಬರ್ 03 ರಿಂದ 07 ವರೆಗೆ ರಾಯಚೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಎನ್.ಎಸ್.ಎಸ್. ಯುವಜನೋತ್ಸವದಲ್ಲಿ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಸ್ವಯಂಸೇವಕ ಮದನ್ ಎಮ್. ವಿ ಅವರು ಮಂಗಳೂರು ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಿದ್ದಾರೆ. ವೈಯಕ್ತಿಕವಾಗಿ ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತೀಯ, ಗುಂಪು ಸ್ಪರ್ಧೆಯಲ್ಲಿ ವಸ್ತು ಪ್ರದರ್ಶನದಲ್ಲಿ ಪ್ರಥಮ, ಭಾವೈಕ್ಯತಾ ಮೆರವಣಿಗೆಯಲ್ಲಿ ದ್ವಿತೀಯ ಹಾಗೂ ಪ್ರಹಸನದಲ್ಲಿ […]
ಅಂತರ್ ಕಾಲೇಜು ನಾಟಕ ಸ್ಪರ್ಧೆ – ಡಾIಬಿ.ಬಿ. ಹೆಗ್ಡೆ ಕಾಲೇಜು ರನ್ನರ್ಸ್
ಕುಂದಾಪುರ (ಅ.10) : ದಿನಾಂಕ 10-10-2023 ರಂದು ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಉಡುಪಿಯ ವತಿಯಿಂದ ಯುವಜನೋತ್ಸವ 2023ರ ಅಂಗವಾಗಿ ಎಮ್.ಜಿ.ಎಮ್. ಕಾಲೇಜಿನ ನೂತನ ರವೀಂದ್ರ ಮಂಟಪ ಇಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್. ಸ್ವಯಂಸೇವಕರ ತಂಡ ದ್ವಿತೀಯ ಸ್ಥಾನ ಪಡೆದಿದೆ. ಜಿಲ್ಲಾ ಏಡ್ಸ್ ನಿಯಂತ್ರಣಧಿಕಾರಿ ಡಾ| ಚಿದಾನಂದ ಸಂಜು ಪ್ರಶಸ್ತಿಯನ್ನು ಕಾಲೇಜಿನ ಉಪಪ್ರಾಂಶುಪಾಲ, ಎನ್.ಎಸ್.ಎಸ್. ಕಾರ್ಯಕ್ರಮಧಿಕಾರಿ […]
ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ:ಡಾ|ಬಿ.ಬಿ. ಹೆಗ್ಡೆ ಕಾಲೇಜು ಪ್ರಥಮ
ಕುಂದಾಪುರ (ಅ. 15): ಜೆ.ಸಿ.ಐ ಕುಂದಾಪುರ ಘಟಕವು ಜೆ.ಸಿ.ಐ ಸಪ್ತಾಹ -2023 ರ ಪ್ರಯುಕ್ತ ‘ಕಾಮನಬಿಲ್ಲು’ ಎಂಬ ಶೀರ್ಷಿಕೆ ಅಡಿಯಲ್ಲಿ ಆಯೋಜಿಸಿದ್ದ ಅಂತರ್ ಕಾಲೇಜು ಮಟ್ಟದ ಸಾಂಸ್ಕçತಿಕ ಸ್ಪರ್ಧೆಯಲ್ಲಿ ಕುಂದಾಪುರದ ಡಾ|. ಬಿ.ಬಿ. ಹೆಗ್ಡೆ ಕಾಲೇಜು “ಪ್ರಥಮ ಸ್ಥಾನವನ್ನು” ಪಡೆದುಕೊಂಡಿತು. ವಿದ್ಯಾರ್ಥಿಗಳು ಯಕ್ಷಗಾನ, ಅರೆಶಾಸ್ತ್ರೀಯ , ಜಾನಪದ ನೃತ್ಯ, ಸಿನಿಮಾ ನೃತ್ಯ, ಹಳೆಯ ಸಿನಿಮಾ ಹಾಡು ಸೇರಿದಂತೆ ವೈವಿದ್ಯಮಯ ಸಾಂಸ್ಕçತಿಕ ಕಾರ್ಯಕ್ರಮ ನೀಡಿದರು. ಜೆ.ಸಿ.ಐ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಜೆ.ಸಿ. […]










