ಉಡುಪಿ (ಜು, 25): ರಾಜ್ಯದಾದ್ಯಂತ ಜುಲೈ26ರ ಸೋಮವಾರದಿಂದ ಪದವಿ, ಸ್ನಾತಕೋತ್ತರ, ಹಾಗೂ ಎಂಜಿನಿಯರಿಂಗ್ ಪದವಿ ಭೌತಿಕ ತರಗತಿಗಳು ಆರಂಭಗೊಳ್ಳಲಿದೆ. ಕೋವಿಡ್ ಕಾರಣದಿಂದಾಗಿ ಆನ್ಲೈನ್ ತರಗತಿಯ ನಡೆಸುತ್ತಿದ್ದ ಕಾಲೇಜುಗಳು ಭೌತಿಕ ತರಗತಿ ನಡೆಸಲು ವಿದ್ಯಾರ್ಥಿಗಳ ಸ್ವಾಗತಕ್ಕೆ ಸಿದ್ಧತೆ ನಡೆಸಿವೆ. ವಿದ್ಯಾರ್ಥಿಗಳಿಗೆ ತರಗತಿಗಳು ಆಫ್ಲೈನ್ ಮತ್ತು ಆನ್ಲೈನ್ ಸೇರಿದಂತೆ ಎರಡೂ ಮಾದರಿಗಳಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಮೇರೆಗೆ ತರಗತಿಗಳಲ್ಲಿ ಪಾಲ್ಗೊಳ್ಳ ಬಹುದಾಗಿದೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ತರಗತಿಗಳನ್ನು ನಡೆಸಲು ಸರ್ಕಾರ […]
ನಾಳೆಯಿಂದ ಪದವಿ ಕಾಲೇಜು ಆರಂಭ
Views: 395