ಕಾರ್ಕಳ (ಆ .13): ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರು ಸುಂದರ ಪುರಾಣಿಕ ಸ್ಮಾರಕ ಸಂಯುಕ್ತ ಸರಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ಆಯೋಜಿಸಿದ್ದ 14ರ ವಯೋಮಿತಿಯೊಳಗಿನ ಬಾಲಕಿಯರ ವಲಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆಯಾದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
Tag: jnana sudha
ಪ್ರಾಮಾಣಿಕವಾಗಿರುವವರು ಆರೋಗ್ಯವಾಗಿರುತ್ತಾರೆ : ಶ್ರೀಮತಿ ಜ್ಯೋತಿ ಮಹಾದೇವ್
ಗಣಿತನಗರ( ಆ,10) : ಬದುಕು ಆಕರ್ಷಣೆಯ ಗುಚ್ಚ. ಅದರಾಚೆಗಿರುವ ಮೌಲ್ಯವನ್ನು ಅರಿತರೆ ಜೀವನ ಸ್ವಚ್ಛವಾಗಿರಲು ಸಾಧ್ಯ. ಸಮಾಜದೆದುರು ನಾವು ಏನು ಅನ್ನೋದನ್ನು ತೋರಿಸಿಕೊಡುವಲ್ಲಿ ತಲೆತಗ್ಗಿಸದಂತೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ನಮ್ಮೊಳಗಿನ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಂಡು ಮುನ್ನಡೆದ ಪ್ರಾಮಾಣಿಕರು ಆರೋಗ್ಯವಾಗಿರುತ್ತಾರೆ ಎಂದು ಹಿಪ್ನೋಥೆರಪಿಸ್ಟ್ ಶ್ರೀಮತಿ ಜ್ಯೋತಿ ಮಹಾದೇವ್ ಹೇಳಿದರು. ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಕಳದ ರೋಟರಿ ಕ್ಲಬ್, ಆನ್ಸ್ ಕ್ಲಬ್ ಹಾಗೂ ಕಾಲೇಜಿನ ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ಘಟಕದ ವತಿಯಿಂದ […]
ಭಾರತವೆನ್ನುವುದು ಪುಣ್ಯಕ್ಷೇತ್ರ : ಅಕ್ಷಯ ಗೋಖಲೆ ಕಾರ್ಗಿಲ್ ವಿಜಯ ದಿವಸ ‘ಮೌಲ್ಯಸುಧಾ’ದಲ್ಲಿ ಅಭಿಮತ
ಗಣಿತನಗರ( ಜು,28): ನಾವು ಬದುಕಿನಲ್ಲಿ ಸಾಧನೆ ಮಾಡಿದರೂ ಸಹ ಬದುಕು ದೇಶಕ್ಕೆ ಸಮಪಿತವಾಗಿರಲಿ ಎಂದು ಖ್ಯಾತ ವಾಗ್ಮಿ ಕು.ಅಕ್ಷಯ ಗೋಖಲೆ ನುಡಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ 38ರಲ್ಲಿ ಕಾರ್ಗಿಲ್ ವಿಜಯ ದಿವಸದ ಶುಭಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಖ್ಯಾತ ವಾಗ್ಮಿ ಕು.ಅಕ್ಷಯ ಗೋಖಲೆ ‘ಬಹುರತ್ನ […]
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಉದ್ಘಾಟನೆ
ಕಾರ್ಕಳ(ಜು ,4): ಮಕ್ಕಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಮತ್ತು ಜವಬ್ದಾರಿಯುತ ಭಾವೀ ನಾಗರಿಕರನ್ನು ಬೆಳೆಸುವಲ್ಲಿ ಶಾಲಾ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಡ್ವಕೇಟ್ ಶ್ವೇತಾ ವಿಪುಲ್ ತೇಜ್ ಹೇಳಿದರು. ಇವರು ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿನ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಮಕ್ಕಳೇ ಮುಂದಿನ ನಾಯಕರು ಎಂದು ಹೇಳುವಾಗ ಮಕ್ಕಳಲ್ಲಿ ನಾಯಕತ್ವ ಸಾಮರ್ಥ್ಯ ಅಭಿವೃದ್ಧಿಪಡಿಸುವ ಅಗತ್ಯತೆ ಇದೆ, ಶಾಲಾ […]
ಮಾನವನ ವ್ಯಕ್ತಿತ್ವ ಹಲವಾರು ವಿಚಾರಗಳ ಮಿಶ್ರಣ : ವೀರೇಶಾನಂದ ಸರಸ್ವತಿ ಸ್ವಾಮೀಜಿತಿಂಗಳ ಮೌಲಿಕ ಕಾರ್ಯಕ್ರಮ ‘ಮೌಲ್ಯಸುಧಾ’ದಲ್ಲಿ ಅಭಿಮತ
ಗಣಿತ ನಗರ(ಜು,01): ಜೀವನದಲ್ಲಿ ಯಶಸ್ಸಿಗಿಂತ ಮೌಲ್ಯಗಳಿಗೆ ಬೆಲೆಕೊಡಬೇಕು ಹಾಗೂ ಗೌರವಿಸ ಬೇಕು, ನಾವು ಬುದ್ದಿವಂತರಾದರೆ ಸಾಲದು, ಪ್ರಜ್ಞಾವಂತರಾಗಬೇಕು ಎಂದು ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ನುಡಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ “ಮೌಲ್ಯಸುಧಾ”-37ರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತುಮಕೂರಿನ ರಾಮಕೃಷ್ಣ ನಗರದ ರಾಮಕೃಷ್ಣ – ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ […]
ರಾಷ್ಟ್ರಮಟ್ಟದ ಐ.ಐ.ಎಸ್.ಇ.ಆರ್ ಪ್ರವೇಶ ಫಲಿತಾಂಶ : ಜ್ಞಾನಸುಧಾದ ಸರ್ವಜಿತ್ ಕೆ.ಆರ್.ಗೆ ಜನರಲ್ ಮೆರಿಟ್ನಲ್ಲಿ 90ನೇ ರ್ಯಾಂಕ್
ಕಾರ್ಕಳ(ಜೂ,26): ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟçಮಟ್ಟದಲ್ಲಿ ನಡೆಸುವ ಐ.ಐ.ಎಸ್.ಇ.ಆರ್ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್ನಲ್ಲಿ ಸಾವಿರದೊಳಗಿನ ರ್ಯಾಂಕುಗಳು ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿ ಸರ್ವಜಿತ್ ಕೆ.ಆರ್ ಜನರಲ್ ಮೆರಿಟ್ ವಿಭಾಗದಲ್ಲಿ 90ನೇ ರ್ಯಾಂಕ್ ತನ್ನದಾಗಿಸಿಕೊಂಡಿದ್ದಾರೆ. ಸರ್ವಜಿತ್ ಕೆ.ಆರ್ 90ನೇ ರ್ಯಾಂಕ್,ಆಕಾಶ್ ಎಚ್. ಪ್ರಭು 312ನೇ ರ್ಯಾಂಕ್ (ಕೆಟಗರಿಯಲ್ಲಿ 42ನೇ ರ್ಯಾಂಕ್), ತನ್ಮಯ್ ಜಿ.ಎಸ್ 383ನೇ ರ್ಯಾಂಕ್, […]
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಕಾರ್ಕಳ (ಜೂ,22): ಯೋಗವು ನಮ್ಮ ಆತ್ಮಗಳನ್ನು ದೈವಿಕತೆಯೊಂದಿಗೆ ಒಟ್ಟುಗೂಡಿಸುತ್ತದೆ. ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಯೋಗದಿಂದ ದೈಹಿಕ, ಮಾನಸಿಕ, ಭಾವನಾತ್ಮಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗವು ಒಂದು ದಿನದ ಆಚರಣೆ ಆಗಿರದೆ ಜೀವನದ ಭಾಗವಾಗಿ ಸ್ವೀಕರಸೋಣ ಎಂದು ಸಹಜ ಯೋಗ ತರಬೇತುದಾರರಾದ ಶ್ರೀಮತಿ ಸವಿತಾ ಉಧ್ಭವ್ ಅವರು ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ […]
ನೀಟ್-2025ರ ಫಲಿತಾಂಶ :ಜ್ಞಾನಸುಧಾದ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ
ಕಾರ್ಕಳ (ಜೂ ,15): ರಾಷ್ಟ್ರ ಮಟ್ಟದಲ್ಲಿ ಎಂ.ಬಿ.ಬಿ.ಎಸ್ ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ) ನಡೆಸಿದ ನೀಟ್-2025ರ ಫಲಿತಾಂಶದಲ್ಲಿ ಪರೀಕ್ಷೆ ಬರೆದ 22ಲಕ್ಷದ 9 ಸಾವಿರದ 318 ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ 20 ವಿದ್ಯಾರ್ಥಿಗಳಿಗೆ ರಾಷ್ಟ್ ಮಟ್ಟದಲ್ಲಿ ಹತ್ತು ಸಾವಿರದೊಳಗಿನ ರ್ಯಾಂಕ್ ಲಭಿಸಿದ್ದು, ಹರ್ಷ ಯು ಪೂಜಾರಿ 99.9360 ಪರ್ಸಂಟೈಲ್ನೊoದಿಗೆ 720ರಲ್ಲಿ 600 ಅಂಕ ಪಡೆದು ರಾಷ್ಟçಮಟ್ಟದಲ್ಲಿ 1411ನೇ ರ್ಯಾಂಕ್ ಪಡೆದಿರುತ್ತಾರೆ. ಹರ್ಷ […]
ಕಾರ್ಕಳ : ಸಿ ಎ ಟಿ ಸಿ ಶಿಬಿರದಲ್ಲಿ ಎನ್ ಸಿ ಸಿ ಕ್ಯಾಡೆಟ್ಗಳಿಗೆ ವಿಪತ್ತು ಪರಿಹಾರ ನಿರ್ವಹಣ ಕೌಶಲ ತರಬೇತಿ
ಕಾರ್ಕಳ (ಜೂ 10): 21 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ಅಯೋಜಿಸಿದ ಹತ್ತು ದಿನಗಳ ಕಂಬೈನ್ಡ್ ಆನ್ಯುವಲ್ ಟ್ರೈನಿಂಗ್ ಕ್ಯಾಂಪ್ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಸಂಪನ್ನಗೊಂಡಿತು. ಈ ತರಬೇತಿ ಶಿಬಿರದಲ್ಲಿ 592 ಎನ್.ಸಿ.ಸಿ ಕ್ಯಾಡೆಟ್ಗಳು ಭಾಗಹಿಸಿದ್ದು ಸೇನಾ ತರಬೇತಿ, ಶಿಬಿರ ಜೀವನ, ದೈಹಿಕ ತರಬೇತಿ (ಕಸರತ್ತು) , ಫೈರಿಂಗ್, ಅಡೆತಡೆಗಳನ್ನೆದುರಿಸುವ ಕೋರ್ಸಿನ ತರಬೇತಿಯ ಪ್ರಯೋಜನ ಪಡೆದುಕೊಂಡರು. ಯುವ ಆಪದ ಮಿತ್ರ ಯೋಜನೆಯಡಿಯಲ್ಲಿ ಜಿಲ್ಲಾ ವಿಪತ್ತು ಪರಿಹಾರ […]
ಮೇ ,30 ರಂದು ಜ್ಞಾನಸುಧಾ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ
ಗಣಿತ ನಗರ(ಮೇ ,29): : ಕಾರ್ಕಳ ಜ್ಞಾನಸುಧಾ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವವು ಮೇ ,30 ರ ಶುಕ್ರವಾರದಂದು ಜರುಗಲಿದ್ದು, ಆ ದಿನ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಮೊದಲ ಹಂತದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ 2025ರ ವಾರ್ಷಿಕ ಪರೀಕ್ಷೆಯ ಸಾಧಕ ವಿದ್ಯಾರ್ಥಿಳಿಗೆ ರೂ. 64 ಲಕ್ಷದ […]










