ಕಾರ್ಕಳ (ಜೂ,22): ಯೋಗವು ನಮ್ಮ ಆತ್ಮಗಳನ್ನು ದೈವಿಕತೆಯೊಂದಿಗೆ ಒಟ್ಟುಗೂಡಿಸುತ್ತದೆ. ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಯೋಗದಿಂದ ದೈಹಿಕ, ಮಾನಸಿಕ, ಭಾವನಾತ್ಮಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗವು ಒಂದು ದಿನದ ಆಚರಣೆ ಆಗಿರದೆ ಜೀವನದ ಭಾಗವಾಗಿ ಸ್ವೀಕರಸೋಣ ಎಂದು ಸಹಜ ಯೋಗ ತರಬೇತುದಾರರಾದ ಶ್ರೀಮತಿ ಸವಿತಾ ಉಧ್ಭವ್ ಅವರು ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಶ್ರೀಮತಿ ವಾಣಿ ಕೆ, ಸಹಜ ಯೋಗ ತರಬೇತುದಾರರಾದ ಶ್ರೀಮತಿ ವಿನುತಾ ಮತ್ತು ಶ್ರೀ ನವೀನ್ ಉಪಸ್ಥಿತರಿದ್ದರು. ಸಹಶಿಕ್ಷಕಿಯಾದ ಶ್ರೀಮತಿ ದಿವ್ಯಾ ರಾವ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿನಿಯರಾದ ವಾಸ್ತವಿ ವಿಜಯ್ ಕುಮಾರ್ ಸ್ವಾಗತಿಸಿ, ಹಿಮಾನಿ ಡಿ ಶೆಟ್ಟಿ ಧನ್ಯವಾದವಿತ್ತರು.