ಕಾರ್ಕಳ (ಜೂ 10): 21 ಕರ್ನಾಟಕ ಬೆಟಾಲಿಯನ್ ಎನ್ ಸಿ ಸಿ ಅಯೋಜಿಸಿದ ಹತ್ತು ದಿನಗಳ ಕಂಬೈನ್ಡ್ ಆನ್ಯುವಲ್ ಟ್ರೈನಿಂಗ್ ಕ್ಯಾಂಪ್ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಸಂಪನ್ನಗೊಂಡಿತು. ಈ ತರಬೇತಿ ಶಿಬಿರದಲ್ಲಿ 592 ಎನ್.ಸಿ.ಸಿ ಕ್ಯಾಡೆಟ್ಗಳು ಭಾಗಹಿಸಿದ್ದು ಸೇನಾ ತರಬೇತಿ, ಶಿಬಿರ ಜೀವನ, ದೈಹಿಕ ತರಬೇತಿ (ಕಸರತ್ತು) , ಫೈರಿಂಗ್, ಅಡೆತಡೆಗಳನ್ನೆದುರಿಸುವ ಕೋರ್ಸಿನ ತರಬೇತಿಯ ಪ್ರಯೋಜನ ಪಡೆದುಕೊಂಡರು.
ಯುವ ಆಪದ ಮಿತ್ರ ಯೋಜನೆಯಡಿಯಲ್ಲಿ ಜಿಲ್ಲಾ ವಿಪತ್ತು ಪರಿಹಾರ ನಿರ್ವಹಣಾ ಪ್ರಾಧಿಕರ ಪ್ರತಿನಿಧಿಗಳಿಂದ ಆಯ್ದ ಕೆಡೆಟ್ಗಳಿಗೆ ವಿಪತ್ತು ಪರಿಹಾರ ನಿರ್ವಹಣೆಯ ತರಬೇತಿಯನ್ನು ನೀಡಲಾಯಿತು. ಮಂಗಳೂರಿನ ಪೋಲಿಸ್ ಕಮಿಷನರ್ (ಆಯುಕ್ತ) ಕಛೇರಿಯ ವತಿಯಿಂದ ಜೂನ್ 5,2025 ರಂದು ನಕ್ರೆಯಲ್ಲಿರುವ ಫೈರಿಂಗ್ ರೇಂಜ್ನಲ್ಲಿ”ಸ್ಟನ್ & ಸ್ಮೋಕ್ ಗ್ರೆನೇಡ್ ಫೈರಿಂಗ್ “ ಮತ್ತು ಗಲಭೆ ನಿಯಂತ್ರಣ ಡ್ರಿಲ್ಗಳ ನೇರ ಪ್ರಾತ್ಯಕ್ಷತೆಯನ್ನು ಕೂಡಾ ನೀಡಲಾಯಿತು.
ಸಿ ಎ ಟಿ ಸಿ ಶಿಬಿರದಲ್ಲಿ ಎನ್ ಸಿ ಸಿ ಕ್ಯಾಡೆಟ್ಗಳಿಗೆ ವಿಪತ್ತು ಪರಿಹಾರ ನಿರ್ವಹಣ ಕೌಶಲ ತರಬೇತಿ ಯನ್ನು ಎನ್.ಸಿ.ಸಿ ಗ್ರೂಪ್ ಪ್ರಧಾನ ಕಛೇರಿ ಮಂಗಳೂರು ಇದರ ಆಶ್ರಯದಲ್ಲಿ ಆಯೋಜಿಸಲಾಗಿದ್ದು , ಮಂಗಳೂರು ಗ್ರೂಪ್ ಕಮಾಂಡರ್ ಕರ್ನಲ್ ವಿರಾಜ್ ಕಾಮತ್ ಕ್ಯಾಡೆಟ್ಗಳೊಂದಿಗೆ ಸಂವಹನ ನಡೆಸಿ , ತರಬೇತಿ ಶಿಬಿರದ ವ್ಯವಸ್ಥೆಯ ಪರಿಶೀಲನೆ ಮಾಡಿದರು.