ಉಚ್ಚಿಲ(ಅ.26): ಕರಾವಳಿ ಭಾಗದ ಪ್ರಸಿದ್ಧ ಉಚ್ಚಿಲ ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಮೊಗವೀರ ಯುವ ಸಂಘಟನೆ (ರಿ.)ಉಡುಪಿ ಜಿಲ್ಲೆ ಇವರ ರಕ್ತದಾನದ ಮಹತ್ವದ ಕುರಿತಾಗಿ ಜನಜಾಗೃತಿ ಸಾರುವ ಟ್ಯಾಬ್ಲೊ ಸಾರ್ವಜನಿಕರ ಗಮನ ಸೆಳೆದಿದೆ. ಕರಾವಳಿ ಭಾಗದಲ್ಲಿ ರಕ್ತದಾನದ ಕ್ರಾಂತಿಯನ್ನೇ ಮಾಡಿರುವ ನಾಡೋಜ ಡಾ.ಜಿ. ಶಂಕರ್ ರವರ ಮಾರ್ಗದರ್ಶನದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ(ರಿ), ಉಡುಪಿ ಜಿಲ್ಲೆ ಈಗಾಗಲೇ ನಾಡಿನಾದ್ಯಂತ ಹಮ್ಮಿಕೊಂಡಿರುವ ರಕ್ತ ದಾನದ ಕಿರುನೋಟ ಹಾಗೂ ಜಿ.ಶಂಕರ್ ಮಣಿಪಾಲ […]
Tag: mogaveera society
ಮೊಗವೀರ ಯುವ ಸಂಘಟನೆ(ರಿ),ಹೆಮ್ಮಾಡಿ ಘಟಕ:ಡಾ. ಜಿ.ಶಂಕರ್ ರವರ 68 ನೇ ಹುಟ್ಟು ಹಬ್ಬದ ಪ್ರಯುಕ್ತ ತಲ್ಲೂರಿನ ನಾರಾಯಣ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಜನ್ಮ ದಿನಾಚರಣೆ
ತಲ್ಲೂರು(ಆ.05): ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಡಾ. ಜಿ.ಶಂಕರ್ ರವರ 68 ನೇ ಹುಟ್ಟು ಹಬ್ಬವನ್ನು ಮೊಗವೀರ ಯುವ ಘಟನೆಯ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ತಲ್ಲೂರಿನ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಆಚರಿಸಲಾಯಿತು. ಕೇಕ್ ಕತ್ತರಿಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದರ ಜೊತೆಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸುವುದರ ಜೊತೆಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಯಿತು. ಮೊಗವೀರ ಯುವ ಘಟನೆಯ ಹೆಮ್ಮಾಡಿ ಘಟಕದ ಅಧ್ಯಕ್ಷ […]
ಉಡುಪಿ ಜಿಲ್ಲಾ ಕರಾಟೆ ಚಾಂಪಿಯನ್ ಶಿಪ್ :ಫೀಯೋನಿಕ್ಸ್ ಅಕಾಡೆಮಿ ಇಂಡಿಯಾ ಸಂಸ್ಥೆ ಉತ್ತಮ ಸಾಧನೆ
ಕುಂದಾಪುರ (ಆ,30): ಉಡುಪಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಇವರು ಆಯೋಜಿಸಿದ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ (AKSKA) ಮತ್ತು ಕರಾಟೆ ಇಂಡಿಯಾ ಆರ್ಗನೈಸೇಷನ್(KIO) ಇವರ ಸಂಯೋಜನೆಯಲ್ಲಿ ಆಗಸ್ಟ್ 27ರಂದು ಪರ್ಕಳದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಫೀಯೋನಿಕ್ಸ್ ಅಕಾಡೆಮಿ ಇಂಡಿಯಾ ಸಂಸ್ಥೆಯ ಕರಾಟೆ ಪಟುಗಳು 11 ಚಿನ್ನದ ಪದಕ, 9 ಬೆಳ್ಳಿಯ ಪದಕ ಮತ್ತು 4 ಕಂಚಿನ ಪದಕವನ್ನು ಗೆಲ್ಲುವ ಮುಖಾಂತರ ಸಂಸ್ಥೆಗೆ ಬಹುದೊಡ್ಡ ಕೊಡುಗೆಯನ್ನು […]
ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ , ಬೈಂದೂರು -ಶಿರೂರು ಘಟಕ: ಕಡಲತೀರ ಸ್ವಚ್ಛತೆ & ಉದ್ಯಾನ ನಿರ್ಮಾಣ
ಬೈಂದೂರು(ಆ.19): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ , ಬೈಂದೂರು -ಶಿರೂರು ಘಟಕ ಇದರ “ಸಂಭ್ರಮ 2023″ಅಂಗವಾಗಿ ಉಡುಪಿ ಜಿಲ್ಲೆಯ ಪ್ರಸಿದ್ಧ ನೈಸರ್ಗಿಕ ಕಡಲ ತೀರದಲ್ಲಿ ಒಂದಾದ ಅಳ್ವೆಗದ್ದೆ ಬೀಚ್ ನಲ್ಲಿ ಕರಾವಳಿ ಕಾವಲು ಪಡೆಯ ಸಹಕಾರದೊಂದಿಗೆ ಕಡಲತೀರ ಸ್ವಚ್ಛತೆ ಮತ್ತು ಉದ್ಯಾನ ನಿರ್ಮಾಣ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಡಲ ತೀರದಲ್ಲಿ ರಾಶಿ ಬಿದ್ದಿರುವ ಪ್ಲಾಸ್ಟಿಕ್ ಮತ್ತು ತ್ಯಾಜ್ಯಗಳನ್ನು ಆಯ್ದು ಪ್ರತ್ಯೇಕಿಸಿ ಗ್ರಾಮ ಪಂಚಾಯತ್ನ ವಾಹನದಲ್ಲಿ ಸಾಗಿಸಲಾಯಿತು.ಪ್ರವಾಸಿಗರಿಗೆ ನೆರಳು ನೀಡುವ […]
ಮೊಗವೀರ ಯುವ ಸಂಘಟನೆಯ [ರಿ.] ಉಡುಪಿ ಜಿಲ್ಲೆ,ಹೆಮ್ಮಾಡಿ ಘಟಕ: ಸೈನಿಕರಿಗೆ ಗೌರವಾರ್ಪಣೆ
ಹೆಮ್ಮಾಡಿ(ಆ,15): ಮೊಗವೀರ ಯುವ ಸಂಘಟನೆಯ [ರಿ.] ಉಡುಪಿ ಜಿಲ್ಲೆ,ಹೆಮ್ಮಾಡಿ ಘಟಕ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಉಡುಪಿ ,ಅಂಬಲಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಪ್ರಯುಕ್ತ ಹಮ್ಮಿಕೊಂಡ ಸೈನಿಕರಿಗೊಂದು ಗೌರವಾರ್ಪಣೆ ಕಾರ್ಯಕ್ರಮಹಿನ್ನೆಲೆಯಲ್ಲಿ ಹೆಮ್ಮಾಡಿಯ ನಿವ್ರತ್ತ ಯೋಧ ನಾರಾಯಣ ಬಿಲ್ಲವರ ಸ್ವ ಗೃಹಕ್ಕೆ ತೆರಳಿ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ(ರಿ.), ಕುಂದಾಪುರ ಶಾಖೆಯ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿ ಯಂಗಡಿ […]
ಮೊಗವೀರ ಯುವ ಸಂಘಟನೆ(ರಿ),ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ- ವನ-ಮಹೋತ್ಸವ-ಗಿಡ ವಿತರಣೆ
ಹೆಮ್ಮಾಡಿ(ಆ,10): ಮೊಗವೀರ ಯುವ ಸಂಘಟನೆ(ರಿ), ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ ಉಡುಪಿ ಹಾಗೂ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇವರ ಸಹಬಾಗಿತ್ವದಲ್ಲಿ,ಮೊಗವೀರ ಮಹಾಜನ ಸೇವಾ ಸಂಘ(ರಿ.),ಮುಂಬೈ ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಇವರ ಸಹಕಾರದೊಂದಿಗೆ ವನ-ಮಹೋತ್ಸವ ಹಾಗೂ ಸಸಿ ವಿತರಣೆ ಕಾರ್ಯಕ್ರಮ ಅಗಸ್ಟ್ 06 ರಂದು ಬಗ್ವಾಡಿಯ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ವಠಾರದಲ್ಲಿ ಜರುಗಿತು. ಹೆಮ್ಮಾಡಿ ಘಟಕದ ಅಧ್ಯಕ್ಷರಾದ ಲೋಹಿತಾಶ್ವ ಆರ್ ಕುಂದರ್ ಕಾರ್ಯಕ್ರಮದ […]
ಸಿಎ ಫೈನಲ್ ಪರೀಕ್ಷೆಯಲ್ಲಿ ಸಚಿನ್ ಮೊಗವೀರ ಕಾವ್ರಾಡಿ ತೇರ್ಗಡೆ
ಕುಂದಾಪುರ (ಜು,2): ಇನ್ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಇವರು ಮೇ 2023ರಲ್ಲಿ ನೆಡೆಸಿದ ಸಿಎ ಫೈನಲ್ ಪರೀಕ್ಷೆಯಲ್ಲಿ ಸಚಿನ್ ಮೊಗವೀರ ಕಾವ್ರಾಡಿ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದರ ಮೂಲಕ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ. ಇವರು ಕಾವ್ರಾಡಿಯ ಮುಂಬಾರುಗುಡ್ಡಿ ನಿವಾಸಿ ಸವಿತಾ ಸಂತೋಷ ಮೊಗವೀರ ರವರ ಪುತ್ರ.
ರೋಟರಿ ಕ್ಲಬ್ ಕೋಟೇಶ್ವರ: ಅಧ್ಯಕ್ಷರಾಗಿ ಜಗದೀಶ್ ಮೊಗವೀರ ಮಾರ್ಕೋಡು ಆಯ್ಕೆ
ಕೋಟೇಶ್ವರ(ಜು,02):ರೋಟರಿ ಕ್ಲಬ್ ಕೋಟೇಶ್ವರ ಇದರ 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಶ್ರೀ ಜಗದೀಶ್ ಮೊಗವೀರ ಆಯ್ಕೆಯಾಗಿದ್ದಾರೆ. ಹಾಗೂ ಕಾರ್ಯದರ್ಶಿಯಾಗಿ ರಾಜು ಮೊಗವೀರ ರವರು ಆಯ್ಕೆಯಾಗಿದ್ದಾರೆ.
ಹೆಮ್ಮಾಡಿಯಲ್ಲಿ ಎ.09 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಹೆಮ್ಮಾಡಿ(ಎ,06): ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಅಂಬಲಪಾಡಿ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಹೆಮ್ಮಾಡಿ, ರಕ್ತನಿಧಿ ಕೆಎಂಸಿ ಆಸ್ಪತ್ರೆ ಮಣಿಪಾಲ ಇವರ ನೇತೃತ್ವದಲ್ಲಿ ಏಪ್ರಿಲ್, 09 ರ ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಮತ್ಸಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ. ಶ್ರೀ ಲಕ್ಷ್ಮೀನಾರಾಯಣ ರಿಕ್ಷಾ ಚಾಲಕರು […]
ಕುಂದಾಪುರ : ಏ.05 ರಂದು ವೀಳ್ಯ ಶಾಸ್ತ್ರ ಹಾಗೂ ವಧು-ವರರಿಗೆ ಉಡುಗೆ ತೊಡುಗೆಗಳ ವಿತರಣಾ ಕಾರ್ಯಕ್ರಮ
ಕೋಟೇಶ್ವರ (ಮಾ.29): ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಹಾಗೂ ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಮೇ 03 ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಮೂಹಿಕ ವೀಳ್ಯ ಶಾಸ್ತ್ರ ಕಾರ್ಯಕ್ರಮ ಹಾಗೂ ವಧು- ವರರಿಗೆ ಉಡುಗೆ ತೊಡುಗೆಗಳ ವಿತರಣಾ ಕಾರ್ಯಕ್ರಮ ಕುಂದಾಪುರದ ಚಿಕ್ಕನ್ ಸಾಲ್ ರಸ್ತೆ ಬಳಿ ಇರುವ ಮೊಗವೀರ ಭವನದಲ್ಲಿ ಏಪ್ರಿಲ್.05 ರoದು ನಡೆಯಲಿದೆ. ಮಾ.28 ರಂದು […]










