ಕುಂದಾಪುರ(ಜು,3): ಹವಾಮಾನ ವೈಪರೀತ್ಯದಿಂದ ಭವಿಷ್ಯದ ದಿನಗಳು ಆತಂಕದಿಂದ ಕೂಡಿದ್ದು ಯುವ ಜನಾಂಗ ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಬೇಕು. ಗಿಡ ಹಸ್ತಾಂತರ ಸಮಾರಂಭವನ್ನು ಕೇವಲವಾಗಿ ಪರಿಗಣಿಸದೆ ಅದು ಜವಾಬ್ದಾರಿಯ ಹಸ್ತಾಂತರ ಎಂದು ಭಾವಿಸಿ, ಮುಂದಿನ ಪೀಳಿಗೆಗೆ ಹಸಿರು ಹೊನ್ನಿನ ಹೂಡಿಕೆಯಾಗಿಸಬೇಕು ಎಂದು ಮೈಸೂರು ಮರ್ಕಂಟೈಲ್ಸ್ ಕಂಪೆನಿ ಲಿಮಿಟೆಡ್ ಬೆಂಗಳೂರಿನ ಆಡಳಿತ ನಿರ್ದೇಶಕ ಶ್ರೀ ಎಚ್.ಎಸ್. ಶೆಟ್ಟಿ ಹೇಳಿದರು. ಅವರು ಜೂನ್ 28ರ ಬುಧವಾರ ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಕುಂದಾಪುರ ತಾಲೂಕು […]
Tag: nithyananada ampar
ಯುವ ಬಂಟರ ಸಂಘದ ವತಿಯಿಂದ ಮಕ್ಕಳ ತಜ್ಞ ಡಾ. ಬಿ. ಆರ್. ಶೆಟ್ಟಿಗೆ ಸನ್ಮಾನ
ಕುಂದಾಪುರ(ಜು 01): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಜುಲೈ 01ರ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಕುಂದಾಪುರದಲ್ಲಿ ಪ್ರಸಿದ್ಧ ಮಕ್ಕಳ ರೋಗ ತಜ್ಞರಾಗಿ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಸಮಾಜದಲ್ಲಿ ವಿಶೇಷ ಜನಮನ್ನಣೆ ಪಡೆದ ಹಿರಿಯ ಮಕ್ಕಳ ರೋಗ ತಜ್ಞರಾದ ಶ್ರೀ ಡಾ. ಬಿ. ರಾಜೇಂದ್ರ ಶೆಟ್ಟಿ ಯವರನ್ನು ಅವರ ಕುಂದಾಪುರದ ಚಿಕಿತ್ಸಾಲಯದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಸನ್ಮಾನಿಸಿ […]
ಕುಂದಾಪುರ: ಜೂ.28 ರಂದು ಯುವ ಬಂಟರ ಸಂಘದ ವತಿಯಿಂದ 1000 ಹೈಬ್ರೀಡ್ ಸಿಹಿ ಫಲದ ಗಿಡಗಳ ವಿತರಣೆ
ಕುಂದಾಪುರ. ಜೂನ್ 26. ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ ಆಚರಣೆಯ ಅಂಗವಾಗಿ ಹಸಿರು ಹೊನ್ನು ಎಂಬ ಯೋಜನೆಯನ್ನು ರೂಪಿಸಲಾಗಿದ್ದು ಮುಖ್ಯವಾಗಿ ವೈವಿಧ್ಯಮಯ ಗಿಡಗಳನ್ನು ನೆಟ್ಟು ಬೆಳೆಸುವ ಕಾಯಕದಲ್ಲಿ ಯುವ ಜನಾಂಗ ಹೆಚ್ಚು ಸಕ್ರಿಯವಾಗಿ ತೊಡಗಿ ಕೊಳ್ಳುವಂತಾಗಬೇಕು ಎಂಬ ಗುರಿಯನ್ನು ಇರಿಸಿಕೊಂಡು ಜೂನ್ 28 ರ ಬುಧವಾರ ಮಧ್ಯಾಹ್ನ 2.00 ಗಂಟೆಗೆ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ 1000 ಹೈಬ್ರೀಡ್ ಸಿಹಿ ಫಲದ ಗಿಡಗಳ ವಿತರಣೆ ಈ […]
ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಸನ್ಮಾನ
ಕುಂದಾಪುರ( ಜೂನ್ 05): ಮಂಗಳೂರು ವಿಶ್ವವಿದ್ಯಾನಿಲಯದ ಎಸ್. ವಿ. ಪಿ.ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ಅಭಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪುರಸ್ಕೃತರಾದ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ಜೂನ್ 3 ರಂದು ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದ ರಕ್ಷಕ- ಶಿಕ್ಷಕ ಸಂಘದ ಮಹಾಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀ ವಿನ್ಸೆಂಟ್ ಡಿ ಸೋಜಾ ಸನ್ಮಾನಿಸಿ […]
ದಶಮ ಸಂಭ್ರಮಕ್ಕೆ ಸಾರ್ಥಕ್ಯ ಯೋಜನೆಗಳನ್ನು ನೀಡಿದ ಸಂತ್ರಪ್ತಿ: ಡಾ.ಅಂಪಾರು ನಿತ್ಯಾನಂದ ಶೆಟ್ಟಿ
ಕುಂದಾಪುರ(ಜೂನ್ 04): ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ.) ಕುಂದಾಪುರ ದಶಮ ಸಂಭ್ರಮದ ವರ್ಷ 2022-23 ರಲ್ಲಿ ಹಾಕಿಕೊಂಡ ವಿನೂತನ ಯೋಜನೆಗಳ ಮೂಲಕ 60 ಲಕ್ಷಕ್ಕೂ ಹೆಚ್ಚು ಹಣವನ್ನು ಸಮಾಜ ಬಾಂಧವರಿಗೆ ನೀಡುವ ಮೂಲಕ 2023 ರ ಜೂನ್ 04 ನೇ ತಾರೀಖಿಗೆ ದಶಮ ಸಂಭ್ರಮದ ಒಂದು ವರ್ಷದ ಸಾರ್ಥಕ್ಯ ಯೋಜನೆಗಳನ್ನು ಪೂರೈಸಿದ ಸಂತೃಪ್ತಿ ಸಂಘಕ್ಕೂ ಹಾಗೂ ಸಮಾಜ ಬಾಂಧವರಿಗೆ ತಂದುಕೊಟ್ಟಿದೆ ಎಂದು ಕುಂದಾಪುರ ತಾಲೂಕು ಯುವ […]
ಯುವ ಬಂಟರ ಸಂಘದ ವತಿಯಿಂದ ಆರ್ಥಿಕ ನೆರವು ವಿತರಣೆ
ಕುಂದಾಪುರ(ಮೇ7): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಮಾಂಗಲ್ಯ ಸೂತ್ರ ಮತ್ತು ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಆಯ್ದ ಫಲಾನುಭವಿಗಳಿಗೆ ಚೆಕ್ ವಿತರಿಸುವ ಕಾರ್ಯಕ್ರಮ ಮೇ 06 ರ ಶನಿವಾರ ಸಂಜೆ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಸಂಘದ ದಶಮ ಸಂಭ್ರಮ ಮಹಾಪೋಷಕರಾದ ಬಿ. ವಿನಯ್ […]
ಡಾ.ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಅಮುಕ್ತ್ ವತಿಯಿಂದ ಸನ್ಮಾನ
ಕುಂದಾಪುರ (ಫೆ 06): ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಅಧ್ಯಾಪಕರ ಸಂಘ (ರಿ.) (ಅಮುಕ್ತ್) ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಫೆಬ್ರವರಿ 05 ರ ಆದಿತ್ಯವಾರ ನಡೆಸಿದ 36 ನೆಯ ವಾರ್ಷಿಕ ಸಮ್ಮೇಳನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಪದವಿ ಪುರಸ್ಕೃತರಾದ ಶ್ರೀ ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ಅಮುಕ್ತ್ ನ ಪರವಾಗಿ ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು ನ ನಿರ್ದೇಶಕರಾದ ಡಾ. ಅಪ್ಪಾಜಿಗೌಡ ಸನ್ಮಾನಿಸಿ ಗೌರವಿಸಿದರು. ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ […]
ಬಂಟರ ಕ್ರೀಡಾ ಮೇಳದ ಸಂಚಾಲಕರಾಗಿ ಶ್ರೀ ಅರುಣ್ ಕುಮಾರ್ ಶೆಟ್ಟಿ ಆಯ್ಕೆ
ಕುಂದಾಪುರ( ನ,19 ): ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ) ಕುಂದಾಪುರ ದಶಮ ಸಂಭ್ರಮ – 2022 ರ ಪ್ರಯುಕ್ತ ಡಿಸೆಂಬರ್ ತಿಂಗಳ ಕೊನೆಯಲ್ಲಿ ಹಮ್ಮಿಕೊಂಡಿರುವ ಅವಿಭಜಿತ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಕರ್ನಾಟಕದ ಬೇರೆ ಬೇರೆ ಅಹ್ವಾನಿತ ತಂಡಗಳ ಬೃಹತ್ ಕ್ರೀಡಾ ಮೇಳದ ಸಂಚಾಲಕರಾಗಿ ಶ್ರೀ ಎಂ. ಭಾಸ್ಕರ್ ಪೈ ಸರ್ಕಾರಿ ಪ್ರೌಢಶಾಲೆ ಗುಜ್ಜಾಡಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ಯವರು […]
ಲ. ಅಶೋಕ್ ಶೆಟ್ಟಿ ಸಂಸಾಡಿಯವರಿಗೆ ಪಿತ್ರ ವಿಯೋಗ
ಕುಂದಾಪುರ(ಅ,6): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ನ ಸ್ಥಾಪಕಾಧ್ಯಕ್ಷರು, ಕುಂದಾಪುರದ ಪ್ರತಿಷ್ಠಿತ ಶುಭಲಕ್ಷ್ಮಿ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ಪಾಲುದಾರರಾದ ಲ. ಅಶೋಕ್ ಶೆಟ್ಟಿ ಸಂಸಾಡಿ ಅವರ ತಂದೆ ಬಡಾಕೆರೆ ಶಂಕರ ಶೆಟ್ಟಿ (88 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಅ.6 ರಂದು ನಿಧನರಾಗಿದ್ದಾರೆ. ಮೃತರು ಧರ್ಮಪತ್ನಿ ಸೇರಿದಂತೆ ಐದು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಡಾ. ಅಂಪಾರು ನಿತ್ಯಾನಂದ ಶೆಟ್ಟಿಗೆ ಸ್ವರ್ಣ ಸನ್ಮಾನ
ಕುಂದಾಪುರ(ಡಿ.22): ಶೈಕ್ಷಣಿಕವಾಗಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯ ಸರ್ವೇಸಾಮಾನ್ಯವಾಗಿದೆ. ಆದರೆ ಅಪರೂಪವೆಂಬಂತೆ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ ಪುರಸ್ಕೃತರಾದ ಡಾ.ಅಂಪಾರು ನಿತ್ಯಾನಂದ ಶೆಟ್ಟಿಯವರಿಗೆ ಅವರ ಗೋವಾದ ಸ್ನೇಹಿತರಾದ ರವಿರಾಜ್ ಕಫೆ ಹಾಗೂ ಲಕ್ಷ್ಮಿ ಎಂಪೈರ್ ತ್ರಿ ಸ್ಟಾರ್ ಹೋಟೆಲ್ ಮಾಲೀಕರಾದ ಕಾವಡಿ ಸದಾಶಿವ ಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ ಹರ್ಷ ಶೆಟ್ಟಿ ತಂಡ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿ ಗೌರವಿಸಿದ ಅಪರೂಪದ ಸನ್ನಿವೇಶ ಲಯನ್ಸ್ […]










