ಸಾಲಿಗ್ರಾಮ (ಜ.08): ಇಲ್ಲಿನ ಟೀಮ್ ಯಕ್ಷ ಬ್ರಹ್ಮ ಶ್ರೀ ಸ್ವಯಂ ಸೇವಾ ಸಂಘಟನೆಯ ವತಿಯಿಂದ ಅನಾರೋಗ್ಯ ಪೀಡಿತ ಶ್ರೀ ಸುರೇಶ್ ಮೊಗವೀರ ರವರ ಚಿಕಿತ್ಸಾ ವೆಚ್ಚ ಬರಿಸಲು ಸಾಲಿಗ್ರಾಮ ಜಾತ್ರೆಯ ಪ್ರಯುಕ್ತ ಜನವರಿ 18 ನೇ ತಾರೀಖಿನಂದು ಸಾಲಿಗ್ರಾಮ ಮೇಳದ ಯಕ್ಷಗಾನವನ್ನು ಹಮ್ಮಿಕೊಂಡಿದೆ. ಕಲಾಭಿಮಾನಿಗಳಾದ ತಾವುಗಳು ಮಾನವೀಯ ನೆಲೆಯ ಈ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತನು ಮನ ಧನ ಸಹಾಯದೊಂದಿಗೆ ನೊಂದ ಜೀವಕ್ಕೆ ನೆರವಾಗಬೇಕೆಂದು ಸಂಘಟಕರು ತಿಳಿಸಿದ್ದಾರೆ. ವರದಿ:ರಾಘವೇಂದ್ರ ಹಾರ್ಮಣ್.
Tag: raghavendra harman
ಡಿ. 13 ರಂದು ಇಡೂರು ಕುಂಜ್ಞಾಡಿಯ ಕಂಬಳ
ಕುಂದಾಪುರ( ಡಿ,07): ತಾಲೂಕಿನ ಪ್ರಸಿದ್ಧ ಸಾಂಪ್ರದಾಯಿಕ ಕಂಬಳವಾದ ಇಡೂರು ಕುಂಜ್ಞಾಡಿಯ ಕಂಬಳವು ಡಿಸೆಂಬರ್ 13 ರ ಬುಧವಾರದಂದು ಮಧ್ಯಾಹ್ನ 12 ಗಂಟೆಗೆ ಮಾರಣಕಟ್ಟೆ ಸಮೀಪದ ಶ್ರೀ ಕ್ಷೇತ್ರ ಕುಂಜ್ಞಾಡಿ ಹಾಯ್ಗುಳಿ ದೇವಸ್ಥಾನದ ಕಂಬಳ ಗದ್ದೆಯಲ್ಲಿ ನಡೆಯಲಿದೆ. ಸಾರ್ವಜನಿಕರು ಹಾಗೂ ಕಂಬಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕಂಬಳ ಗದ್ದೆ ಕುಟುಂಬದವರು, ಸಂಘಟಕರು,ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ವರದಿ : ರಾಘವೇಂದ್ರ ಹರ್ಮಣ್
ಬೆಂಗಳೂರು: ಸಿರಿಕಲಾ ಮೇಳದ 13ನೇ ವಾರ್ಷಿಕೋತ್ಸವ – ಸನ್ಮಾನ
ಬೆಂಗಳೂರು (ಅ,02): ಬೆಂಗಳೂರಿನ ನಯನ ಸಭಾಂಗಣದಲ್ಲಿ ಸಿರಿಕಲಾಮೇಳದ 13ನೇ ವಾರ್ಷಿಕೋತ್ಸವ ಕಾರ್ಯಕ್ರಮ ಅಕ್ಟೋಬರ್ 01 ರಂದು ಜರುಗಿತು. ಸಿರಿಕಲಾಮೇಳದ 13ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಿ.ವಿ.ದತ್ತಾತ್ರೇಯ ಯವರಿಗೆ ಸಿರಿಕಲಾಪುರಸ್ಕಾರ,ಕೃಷ್ಣಮೂರ್ತಿ ಮಂಜರಿಗೆ ಮತ್ತು ನಾಗರಾಜ ನಾಯಕ ತೊರ್ಕೆಯವರಿಗೆ ಸಿರಿಕಲಾಪೋಷಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಧಾಕರ ಪೈ, ಆರ್.ವಿ.ಜಾಗೀರದಾರ್, ದಿನೇಶ ಜೋಶಿ, ಆರ್.ಶ್ರೀನಿವಾಸಾಚಾರ್, ಕರುಣಾಕರ ಹೆಗ್ಡೆ, ಸುಜಾತ, ಮಹಾಬಲೇಶ್ವರ, ಕೃಷ್ಣಮೂರ್ತಿ ನಾಯಕ್, ವಿ.ಎನ್.ಹೆಗಡೆ, ವಾಸುದೇವ ರಾವ್, ಸುರೇಶ ಹೆಗಡೆ, ಗೋ.ನಾ.ಸ್ವಾಮಿ, ಶ್ರೀದೇವಿ […]
ಬೆಂಗಳೂರು: 1000 ನೇ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ ಕಲಾಕ್ಷೇತ್ರ
ಬೆಂಗಳೂರು (ಆ,15): ಇದೇ ಅಗಸ್ಟ್ 16 ರ ರಾತ್ರಿ 9:30 ಕ್ಕೆ ಸರಿಯಾಗಿ ಸಾಲಿಗ್ರಾಮ ಹಾಗೂ ಸೌಕೂರು ಮೇಳದ ದಿಗ್ಗಜ ಅತಿಥಿ ಕಲಾವಿದರ ಸಮ್ಮಿಲನದಲ್ಲಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಬೇಲ್ತೂರು ಕ್ಷೇತ್ರ ಮಹಾತ್ಮೆ ಎಂಬ ಪ್ರಸಂಗ 1000 ನೇಯ ಪ್ರದರ್ಶನಗೊಳ್ಳಲಿದೆ.. ಮುಖ್ಯ ಅತಿಥಿಯಾಗಿ ಕೆ.ಜಯಪ್ರಕಾಶ್ ಹೆಗ್ಡೆ, ಮತ್ತು ಅನೇಕ ಗಣ್ಯರು ಆಗಮಿಸಿಲಿದ್ದಾರೆ, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇಂತಹ ಅಭೂತಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಿ ಎಂದು ಯಕ್ಷ ಬ್ರಹ್ಮಶ್ರೀ ತಂಡದ […]
ಅಗಸ್ಟ್ 16 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ
ಕುಂದಾಪುರ (ಜು,25): ಯಕ್ಷ ಬ್ರಹ್ಮಶ್ರೀ ತಂಡದವರ ಆಶ್ರಯದಲ್ಲಿ ಅಗಸ್ಟ್ 16 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಲಿಗ್ರಾಮ ಮತ್ತು ಸೌಕೂರು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಎರಡನೇ ವರ್ಷದ ಅದ್ದೂರಿ ಯಕ್ಷಗಾನದ ಪ್ರದರ್ಶನದ ನಡೆಯಲಿದೆ . ಆ ಪ್ರಯುಕ್ತ ಯಕ್ಷಗಾನದ ಕರಪತ್ರ ಮತ್ತು ಬೇಲ್ತೂರು ಕ್ಷೇತ್ರ ಮಹಾತ್ಮೆ ಎಂಬ ಪ್ರಸಂಗವನ್ನು ಮಾಜಿ ಸಂಸದರು,ಮಾಜಿ ಸಚಿವರು ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾದ, ಕೆ.ಜಯಪ್ರಕಾಶ್ ಹೆಗ್ಡೆ ಅವರು ಬಿಡುಗಡೆ ಮಾಡಿದರು. […]
ಶಂಕರನಾರಾಯಣ : ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ
ಶಂಕರನಾರಾಯಣ( ಮೇ,16): ಸರಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ ಪ್ರೌಢ ಶಾಲಾ ವಿಭಾಗದ 1990ನೇ ಸಾಲಿನ ಎಸ್ .ಎಸ್ .ಎಲ್. ಸಿ .ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಗುರುವಂದನೆ ಕಾರ್ಯಕ್ರಮವು ಕಾಲೇಜಿನ ಶ್ರೀ ಸುಬ್ರಹ್ಮಣ್ಯ ಜೋಯಿಷ ಸುವರ್ಣ ಸಭಾಂಗಣದಲ್ಲಿ ಇತ್ತೀಚೆಗೆ ನೆರವೇರಿತು. ಸುಮಾರು 45ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ತಮ್ಮ ಕುಟುಂಬ ಸಮೇತ ಈ ಪುನರ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಅಂದಿನ ಪ್ರೌಢಶಾಲಾ ಶಿಕ್ಷಕರಾದ ಶ್ರೀ ಗೋಪಾಲ್ ಶೆಟ್ಟಿಗಾರ್ , […]
ಬೆಂಗಳೂರು : ಮೋಕ್ಷ ಸಂಗ್ರಾಮ ಯಕ್ಷಗಾನ ಪ್ರದರ್ಶನ
ಬೆಂಗಳೂರು( ಡಿ,24): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಿಂದ ಸಿರಿಕಲಾ ಮೇಳದ ಕಲಾವಿದರಿಂದ ಬೆಂಗಳೂರಿನ ಚಾಮರಾಜ ಪೇಟೆಯ ಉದಯಭಾನು ಕಲಾಸಂಘದಲ್ಲಿ “ಮೋಕ್ಷ ಸಂಗ್ರಾಮ” ಎಂಬ ಯಕ್ಷಗಾನ ಇತ್ತೀಚೆಗೆ ಪ್ರದರ್ಶನಗೊಂಡಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್ ಚಂದ್ರಶೇಖರ್,ಉದ್ಯಮಿಗಳಾದ ಚಂದ್ರಶೇಖರ್ ಹೆಬ್ಬಾರ್ , ರಾಘವೇಂದ್ರ ಹತ್ವಾರ್ ಮತ್ತು ಕರುಣಾಳು ಟ್ರಸ್ಟ್ ನ ಆನಗಳ್ಳಿ ಕರುಣಾಕರ ಹೆಗಡೆ ಭಾಗವಹಿಸಿ ಯಕ್ಷಗಾನಕ್ಕೆ ಶುಭ ಹಾರೈಸಿದರು. […]
ಟೀಮ್ ಕುಂದಾಪುರಿಯನ್ ವತಿಯಿಂದ ಬೆಂಗಳೂರಿನಲ್ಲಿ ಅರ್ಥಪೂರ್ಣ ದೀಪಾವಳಿ ಆಚರಣೆ
ಬೆಂಗಳೂರು ( ಅ,31): ಇಲ್ಲಿನ ಕೂಡ್ಲು ಸಮೀಪ ಇರುವ ವಲಸೆ ಕಾರ್ಮಿಕರ ಕೇರಿಯ ಜನರೊಂದಿಗೆ ಟಿಮ್ ಕುಂದಾಪುರಿಯನ್ ತಂಡದವರು ಸಂಭ್ರಮದಿಂದ ದೀಪಾವಳಿ ಹಬ್ಬ ಮತ್ತು ಪುನೀತ್ ರಾಜ್ಕುಮಾರ್ ಪುಣ್ಯ ಸ್ಮರಣೆ ಆಚರಿಸಿದರು. ಈ ಸಂದರ್ಭದಲ್ಲಿ ಟಿಮ್ ಕುಂದಾಪುರಿಯನ್ ತಂಡದ ಸದಸ್ಯ ಮತ್ತು ಮಾಧ್ಯಮ ನಿರೂಪಕ ರಂಜಿತ್ ಶಿರಿಯಾರ ಮಾತನಾಡಿ ಮಹಾನಗರದ ಒತ್ತಡದ ಜೀವನದ ಮಧ್ಯೆ ಬಿಡುವು ಮಾಡಿಕೊಂಡು ನಿಮ್ಮೊಂದಿಗೆ ನಾವು ನಮ್ಮ ಪೋಷಕರನ್ನು ಕಾಣುತ್ತವೆ. ನಿಮ್ಮ ಮಕ್ಕಳ ಮುಂದಿನ ಶೈಕ್ಷಣಿಕ ಜೀವನ […]
ಯಾದಗಿರಿ ಜಿಲ್ಲೆಯ ರೈತನ ಮನವಿಗೆ ಸ್ಪಂದಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯ ಅರುಣ ಕುಮಾರ್ ಕಲ್ಗದೆ
ಬೆಂಗಳೂರು (ಸೆ,28):ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮದ ರೈತ ಸಂಗಣ್ಣ ಶಿವಪ್ಪ ಚಳ್ಳಗಿ ಯವರಿಗೆ ಕರ್ನಾಟಕ ಭೂ ನ್ಯಾಯ ಮಂಡಳಿಯಿಂದ ನೋಟಿಸ ನೀಡಲಾಗಿತ್ತು. ಆತ ಅಮರೇಶ ಕಾಮನಕೇರಿ ಯವರ ಮುಖಾಂತರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಅರುಣ ಕುಮಾರ ಕಲ್ಗದೆ ರವರನು ಭೇಟಿಯಾಗಿ ತಮಗಾದ ಸಮಸ್ಯೆ ತಿಳಿಸಿದ್ದಾರೆ. ಇದಕ್ಕೆ ತಕ್ಷಣ ಸ್ಪಂದಿಸಿದ ಅರುಣ ಕುಮಾರ ಕಲ್ಗದೆರವರು ರೈತನ ಪರ ವಾದ ಮಾಡಲು ವಕೀಲರನ್ನು ನೇಮಿಸಿ ಕೊಟ್ಟು […]
ಹಾವೇರಿ: ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಜನ್ಮ ದಿನಾಚರಣೆ
ಹಾವೇರಿ(ಆ,15): ಇಲ್ಲಿನ ನರಸೀಪುರದ ಸುಕ್ಷೇತ್ರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪರಮ ಪೂಜ್ಯ ಜಗದ್ಗುರಗಳಾದ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಜನ್ಮದಿನಾಚರಣೆಯನ್ನು ಆ,15 ರಂದು ಆಚರಿಸಲಾಯಿತು. ಶ್ರೀಗಳಿಗೆ ಹಿಂದುಳಿದ ಶಾಶ್ವತ ಆಯೋಗದ ಸದಸ್ಯರಾದ ಅರುಣ್ ಕುಮಾರ್ ಕಲ್ಗದ್ದೆ ಅವರು ಶುಭಾಶಯಗಳು ಕೋರಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪಭಾಕರ್ ಕುಂದರ್ ರಾಘವೇಂದ್ರ ಹಾರ್ಮಣ್ ಜೊತೆಯಲ್ಲಿದ್ದರು.