ಕುಂದಾಪುರ (ಜು,10): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನೀಡಲಾಗುವ 2023-24ನೇ ಶೈಕ್ಷಣಿಕ ವರ್ಷದ
ವಿದ್ಯಾರ್ಥಿ ವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿಯು 2023ರಲ್ಲಿ ನಡೆದ ಎಸ್ಎಸ್ಎಲ್ಸಿ ಅಥವಾ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸರಾಸರಿ 80% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುವುದರೊಂದಿಗೆ ಪ್ರಸ್ತುತ ಪ್ರಥಮ ವರ್ಷದ ಪದವಿಪೂರ್ವ, ಪದವಿ ತರಗತಿಯಲ್ಲಿ ಅಥವಾ ಯಾವುದೇ ವೃತ್ತಿಪರ ಶಿಕ್ಷಣ/ತರಬೇತಿಯ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು ಅಥವಾ ಪ್ರವೇಶ ಪಡೆದಿರಬೇಕು.
ಬಂಟ ಸಮುದಾಯವನ್ನು ಪ್ರತಿನಿಧಿಸುವ ಕುಂದಾಪುರ ತಾಲೂಕಿನ ನಿವಾಸಿಯಾಗಿರಬೇಕು. ಅವಿಭಜಿತ ಬೈಂದೂರು ತಾಲೂಕಿನ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಪ್ರತಿನಿಧಿಯಾಗಿದ್ದು ಕುಟುಂಬದ ವಾರ್ಷಿಕ ಆದಾಯ ರೂ. 1,00,000 ಮೀರಿರಬಾರದು.
ಹಾಗೆಯೇ, 2023-24ನೇ ಶೈಕ್ಷಣಿಕ ವರ್ಷದ ‘ಪ್ರತಿಭಾ ಪುರಸ್ಕಾರ’ ಯೋಜನೆಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ವಿದ್ಯಾರ್ಥಿಯು 2023ರಲ್ಲಿ ನಡೆದ ಎಸ್ಎಸ್ಎಲ್ಸಿ ಅಥವಾ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸರಾಸರಿ 95% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕುಟುಂಬದ ವಾರ್ಷಿಕ ಆದಾಯಕ್ಕೆ ಯಾವುದೇ ಮಿತಿ ಇರುವುದಿಲ್ಲ. ಎಪಿಎಲ್ ಪಡಿತರ ಚೀಟಿ ಹೊಂದಿದವರು ಸಹ ಅರ್ಜಿ ಸಲ್ಲಿಸಬಹುದು.
ಸಂಘದ ಅಧಿಕೃತ ಜಾಲತಾಣ www.youthbuntskundapur.com ಮೂಲಕ ಈ ಎರಡೂ ಯೋಜನೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಅರ್ಜಿಯಲ್ಲಿ ಯಾವುದೇ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗಿಲ್ಲ.
ಆನ್ಲೈನ್ ಅರ್ಜಿಯು ದಿನಾಂಕ; 31.07.2023ರ ರಾತ್ರಿ 11.45ರವರೆಗೆ ಮಾತ್ರ ತೆರೆದಿರುತ್ತದೆ. ಅಗತ್ಯ ಮಾಹಿತಿಗಾಗಿ ವಿದ್ಯಾರ್ಥಿ ವೇತನ ಸಮಿತಿ ಸಂಚಾಲಕ ಶ್ರೀ ಸತೀಶ್ ಶೆಟ್ಟಿ ಹೆಸ್ಕತ್ತೂರು ಇವರನ್ನು 9743222467 ಮೂಲಕ ಹಾಗೂ ತಾಂತ್ರಿಕ ನೆರವಿಗಾಗಿ ವೆಬ್ಸೈಟ್ ನಿರ್ವಾಹಕ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಇವರನ್ನು 8762822427 ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ ಎಂಬುದಾಗಿ ಸಂಘದ ಗೌರವಾಧ್ಯಕ್ಷ ಬಿ. ಉದಯ್ ಕುಮಾರ್ ಶೆಟ್ಟಿ ಮತ್ತು ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.