ಕುಂದಾಪುರ (ಡಿ.06): ಶ್ರೀ ಸಿದ್ಧಿ ವಿನಾಯಕ ಶಾಲೆಯಲ್ಲಿ ಹಟ್ಟಿಅಂಗಡಿಯಲ್ಲಿ ನಡೆದ AICS CBSE ಜಿಲ್ಲಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್- 2023 ರಲ್ಲಿ ಕುಂದಾಪುರದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ಗಳು 5 ಪದಕಗಳನ್ನು ಪಡೆದು ಸಾಧನೆಗೈದಿದ್ದಾರೆ.
17 ವರ್ಷದೊಳಗಿನ ಬಾಲಕಿಯರ ಗುಂಡು ಎಸೆತದಲ್ಲಿ ಹಾಗೂ ನೆಹಾಲ್ ಆರ್ ಹೆಗ್ಡೆ (ಗುರುಕುಲ ಪಬ್ಲಿಕ್ ಸ್ಕೂಲ್) ಚಿನ್ನದ ಪದಕ ಹಾಗೂ ಡಿಸ್ಕಸ್ ಥ್ರೋ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. 14 ವರ್ಷದೊಳಗಿನ ಬಾಲಕರ 100 ಮೀ ಓಟದಲ್ಲಿ ರಾನ್ಸ್ಲಿ ( ಶ್ರೀ ಸಿದ್ಧಿ ವಿನಾಯಕ ಶಾಲೆ ಹಟ್ಟಿಅಂಗಡಿ) ಕಂಚಿನ ಪದಕ ಹಾಗೂ 200 ಮೀ ಓಟದಲ್ಲಿ ಕಂಚಿನ ಪದಕ , ಲಾಂಗ್ ಜಂಪ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಇವರಿಗೆ ಕುಂದಾಪುರ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಕ್ರೀಡಾ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಪ್ರಶಾಂತ್ ಶೆಟ್ಟಿ ಯವರು ತರಬೇತಿ ನೀಡಿದ್ದಾರೆ.