ಕೋಟ(ಸೆ.27): ಗೀತಾನಂದ ಫೌಂಡೇಶನ್ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಕಾಳಜಿಗೆ ನಿರಂತರವಾಗಿ ಸ್ಪಂದಿಸುತ್ತಿರುವ ಕೊಡುಗೈದಾನಿ ಶ್ರೀ ಆನಂದ್ ಸಿ.ಕುಂದರ ರವರು ಸರಕಾರಿ ಶಾಲಾ ಎಸ್ .ಡಿ .ಎಂ .ಸಿ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲೆ ನೀಡುವ 2024 -25 ಸಾಲಿನ ಉಡುಪಿ ಜಿಲ್ಲಾ ಮಟ್ಟದ ಸರಕಾರಿ ಶಾಲೆಗಳ ಅಭಿವೃದ್ಧಿ ಹರಿಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ .29ರಂದು ಬೆಳಗ್ಗೆ 10ಕ್ಕೆ ಆನೆಗುಡ್ಡೆ ಶ್ರೀ ವಿನಾಯಕ ಸಭಾಭವನ ಜರುಗಲಿದೆ.
ಗೀತಾನಂದ ಫೌಂಡೇಶನ್ ಪ್ರವರ್ತಕರಾಗಿರುವ ಶ್ರೀ ಆನಂದ್ ಸಿ. ಕುಂದರ್ ರವರು ತಮ್ಮಟ್ರಸ್ಟ್ ಮೂಲಕ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಕಲಿಕಾ ಸಾಮಗ್ರಿ ಗಳನ್ನು ವಿತರಣೆ ಮಾಡಿದ್ದಾರೆ.ಅಲ್ಲದೇ ಅನೇಕ ಶಿಕ್ಷಣ ಸಂಸ್ಥೆಗಳಿಗೆ ಮಹಾ ಪೋಷಕರಾಗಿದ್ದಾರೆ.