ಕುಂದಾಪುರ(ಫೆ.01): ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂ ಬಿ ಎ ಪದವಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯು ಸಲುವಾಗಿ ಡಿಜಿಟಲ್ ಮಾರ್ಕೆಟಿಂಗ್ ವಿಷಯದ ಕುರಿತಾಗಿ ವಿಶೇಷ ತರಬೇತಿ ಕಾರ್ಯಕ್ರಮ ಜನವರಿ 29 ರಂದು ಆಯೋಜಿಸಲಾಗಿತ್ತು .
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ನಿಟ್ಟೆಯ ಪ್ರೊಫೆಸರ್ ಡಾ. ನಿಧೀಶ್ ರಾವ್ ಇವರು ಡಿಜಿಟಲ್ ಮಾರ್ಕೆಟಿಂಗ್ ಕುರಿತಾಗಿ ಮಾರ್ಗದರ್ಶನ ನೀಡಿದರು ,ಡಿಜಿಟಲ್ ಮಾರ್ಕೆಟಿಂಗ್ ಮಹತ್ವ, ಎಸ್ ಇ ಒ ತಂತ್ರಗಳು,ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್,ಪೇ ಪರ್ ಕ್ಲಿಕ್ ಜಾಹೀರಾತುಗಳು ಕಂಟೆಂಟ್ ಮಾರ್ಕೆಟಿಂಗ್ ಮತ್ತು ಬ್ರಾಂಡ್ ಬಿಲ್ಡಿಂಗ್ ,ಪ್ರಾಯೋಗಿಕ ಉದಾಹರಣೆಗಳೂಂದಿಗೆ ವಿದ್ಯಾರ್ಥಿಗಳೂಂದಿಗೆ ಚರ್ಚಿಸಿದರು .
ಎಂ ಬಿ ಎ ವಿಭಾಗದ ಮುಖ್ಯಸ್ತೆ ಡಾ. ಸುಚಿತ್ರಾ ಪೂಜಾರಿ ಮತ್ತು ಉಪನ್ಯಾಸಕರು ಉಪಸ್ಥಿತಿಯಲ್ಲಿದ್ದರು. ದ್ವಿತೀಯ ವಿಭಾಗದ ವಿದ್ಯಾರ್ಥಿಯಾದ ರಶ್ಮಿತ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.