ಗಂಗೊಳ್ಳಿ(ಫೆ,25):ಅವಕಾಶ ಫೌಂಡೇಶನ್ ತನ್ನ ದಶಮಾನೋತ್ಸವದ ಅಂಗವಾಗಿ ಇತ್ತೀಚಿಗೆ ಅಮಾವಾಸೆ ಬೈಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆರರಿಂದ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳ ವಿಭಾಗದ ಗ್ರಾಮೀಣ ಜೀವನ ಕುರಿತಾದ ಚಿತ್ರಕಲಾ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಸಂಜಿತ್ ಎಂ ದೇವಾಡಿಗ ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಇವರು ಗಂಗೊಳ್ಳಿಯ ಸ್ಯಾಕ್ಸೋಫೋನ್ ಕಲಾವಿದ ಮಾಧವ ದೇವಾಡಿಗ ಮತ್ತು ಗಣಿತಶಾಸ್ತ್ರ ಉಪನ್ಯಾಸಕಿ ಸಾವಿತ್ರಿ ಎಸ್ ದಂಪತಿ ಪುತ್ರ.