ಗಂಗೊಳ್ಳಿ ( ಫೆ .216): ಇಲ್ಲಿನ ಶ್ರೀ ಇಂದುಧರ ದೇವಸ್ಥಾನ ಇದರ 80ನೇ ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ ಫೆಬ್ರವರಿ 25ರಂದು ಸಂಜೆ, 7:00ರಿಂದ ಅಂತರ್ ಜಿಲ್ಲಾ ಮಟ್ಟದ ಕುಣಿತ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಧಾರ್ಮಿಕ ಮುಖಂಡರಾದ ಬಿ. ಸದಾನಂದ ಶೆಣೈಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಂಗೊಳ್ಳಿ ಪರ್ಶಿನ್ ಬೋಟ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷರಾದ ಶ್ರೀ ಲಕ್ಷ್ಮಿನಾರಾಯಣ ಮಡಿವಾಳರವರು ಕುಣಿತ ಭಜನೆ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಡಾ. ಗಣೇಶ್ ಗಂಗೊಳ್ಳಿ, ಜಾನಪದ ಗಾಯಕ ಹಾಗೂ ಕಲಾವಿದರಾದ ಡಾ.ಸಚಿನ್ ಸಾಲಿಯನ್ ಮಲ್ಪೆ ಮತ್ತು ಗಾಯಕರು ಹಾಗೂ ತಬಲ ವಾದಕರಾದ ಶ್ರೀ ಪ್ರಕಾಶ್ ಶೆಣೈಯವರನ್ನು ಸನ್ಮಾನಿಸಲಾಯಿತು.
ಉಪವಲಯ ಅರಣ್ಯಾಧಿಕಾರಿ ಸದಾಶಿವ ಕೆ ಗಂಗೊಳ್ಳಿ ,ಮತ್ಸ್ಯೋದ್ಯಮಿ ಜೆ .ಟಿ ಮಂಜುನಾಥ್ , ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಗೋಪಾಲ ಬಿಲ್ಲವ ಗಂಗೊಳ್ಳಿ,ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಜಯಂತಿ ಖಾರ್ವಿ ಹಾಗೂ ದೇವಸ್ಥಾನದ ಅಧ್ಯಕ್ಷರಾದ ಗುರುರಾಜ್ ಗಂಗೊಳ್ಳಿ, ಕಾರ್ಯದರ್ಶಿ ನರಸಿಂಹ ಉಪಸ್ಥಿತರಿದ್ದರು. ಅಶೋಕ್ ಏನ್. ಡಿ ಸ್ವಾಗತಿಸಿದರು. ವರದರಾಜ್ ವಂದಿಸಿದರು. ಸುಂದರ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಅಂತರ್ ಜಿಲ್ಲಾ ಮಟ್ಟದ ಕುಣಿತ ಭಜನ ಸ್ಪರ್ಧೆಯಲ್ಲಿ 12 ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶ್ರೀ ಮಾಣಿ ಸಿದ್ಧಲಿಂಗೇಶ್ವರ ದೇವಸ್ಥಾನ ಮೊವಾಡಿ ,ತ್ರಾಸಿ ತಂಡವು ಪಡೆದುಕೊಂಡಿತು. ಶ್ರೀ ಪ್ರಸನ್ನ ಗಣಪತಿ ಭಜರ ಮಂಡಳಿ ಮೂಡ್ಲಕಟ್ಟೆ ದ್ವಿತೀಯ ಸ್ಥಾನ ಹಾಗೂ ಶ್ರೀ ಯಕ್ಷ ದೇವತೆ ಭಜನಾ ಮಂಡಳಿ ಶಿರೂರು ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಮತ್ಸ್ಯೋದ್ಯಮಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಜಿ.ಕೆ ಮಹೇಶ್, ತೀರ್ಪುಗಾರರಾದ ಡಾ . ಗಣೇಶ್ ಗಂಗೊಳ್ಳಿ, ಪ್ರಕಾಶ್ ಶೆಣೈ ಗಂಗೊಳ್ಳಿ , ಡಾ. ಸಚಿನ್ ಸಾಲಿಯನ್ ಮಲ್ಪೆ , ದೇವಸ್ಥಾನದ ಅಧ್ಯಕ್ಷರಾದ ಗುರುರಾಜ್ ಗಂಗೊಳ್ಳಿ, ಕಾರ್ಯದರ್ಶಿ ಕರುಣಾಕರ ಎಂ, ಅರ್ಚಕರಾದ ಜಿ ಟಿ ಕೃಷ್ಣ ಮತ್ತು ಅಶೋಕ್ ಎನ್ . ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಾಶಿವರಾತ್ರಿ ಪ್ರಯುಕ್ತ ಫೆಬ್ರವರಿ 26 ರರಂದು ದೇವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ದೇವರಿಗೆ ವಿವಿಧ ಪೂಜೆಗಳು ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ , ಸಂಜೆ ವಿವಿಧ ಸೇವಾ ಕಾರ್ಯಗಳು ನಡೆದು ಸಂಜೆ ಏಳರಿಂದ ಅಹೋರಾತ್ರಿ ಭಜನಾ ಮಹೋತ್ಸವ ಜರುಗಲಿದೆ. ಹಾಗೆಯೇ ಫೆಬ್ರವರಿ 27 ರ ಬೆಳಿಗ್ಗೆ 6:00ಗೆ ಮಹಾ ಮಂಗಳಾರತಿಯೊಂದಿಗೆ ಭಜನೆ ಸಂಪನ್ನಗೊಳ್ಳಲಿದೆ. ಹಾಗೂ ಆ ದಿನ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.