ಕುಂದಾಪುರ, (ಮಾ.08): ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ. ಮತ್ತು ಬಿ.ಸಿ.ಎ. ಪದವಿಯಲ್ಲಿ ರ್ಯಾಂಕ್ ಗಳಿಸಿದ್ದಾರೆ.
ಮೊಳಹಳ್ಳಿಯ ಶ್ರೀ ನಾಗೇಶ್ವರ ಉಡುಪ ಹಾಗೂ ಸವಿತಾ ಎನ್. ಉಡುಪ ದಂಪತಿಗಳ ಪುತ್ರಿ ರಶ್ಮಿ ಉಡುಪ ಬಿ.ಕಾಂ. ಪದವಿಯಲ್ಲಿ 6ನೇ ರ್ಯಾಂಕ್, ಯಡಮೊಗೆಯ ಶ್ರೀ ಪುರುಷೋತ್ತಮ ಕನ್ನಂತ ಹಾಗೂ ನಾಗರತ್ನ ದಂಪತಿಗಳ ಪುತ್ರಿ ಕೀರ್ತನಾ ಬಿ.ಸಿ.ಎ. ಪದವಿಯಲ್ಲಿ 5ನೇ ರ್ಯಾಂಕ್ಗಳಿಸಿದ್ದಾರೆ.
ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಂ. ಸುಕುಮಾರ್ ಶೆಟ್ಟಿ, ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ವೃಂದ, ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.