ಕಾರ್ಕಳ ( ಮೇ ,03): 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗಣಿತನಗರದ ಸ್ವಸ್ತಿ ಕಾಮತ್ 625 ರಲ್ಲಿ 625 ಅಂಕಗಳೊoದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.
ಲಿಖಿತ್ ಡಿ ಶೆಟ್ಟಿ 621 ಅಂಕಗಳೊoದಿಗೆ ಶಾಲೆಗೆ ದ್ವಿತೀಯ ಸ್ಥಾನ ಹಾಗೂ ರಾಜ್ಯಕ್ಕೆ ಐದನೇ ಸ್ಥಾನ, ಮಿಶಾಲ್ ಅಸ್ಸಾದಿ ಮತ್ತು ವೇದಿಕಾ 620 ಅಂಕಗಳೊoದಿಗೆ ಶಾಲೆಗೆ ತೃತೀಯ ಹಾಗೂ ರಾಜ್ಯಕ್ಕೆ ಆರನೇ ಸ್ಥಾನ ಪಡೆದುಕೊಂಡಿದ್ದಾರೆ. ರಾಜ್ಯಮಟ್ಟದ ಮೊದಲ ಹತ್ತು ಸ್ಥಾನಗಳಲ್ಲಿ ಸಂಸ್ಥೆಯ 15 ವಿದ್ಯಾರ್ಥಿಗಳು ಗುರುತಿಸಿಕೊಂಡಿದ್ದಾರೆ.
ಪರೀಕ್ಷೆಗೆ ಹಾಜರಾದ 107 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು 613 (98%) ಕ್ಕಿಂತ ಅಧಿಕ ಅಂಕಗಳನ್ನು, 41 ವಿದ್ಯಾರ್ಥಿಗಳು 600 (96%) ಕ್ಕೂ ಹೆಚ್ಚು ಅಂಕಗಳನ್ನು, 43 ವಿದ್ಯಾರ್ಥಿಗಳು 595 (95%) ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುತ್ತಾರೆ. 75 (70.09%) ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. 89 ಉತ್ತರಪತ್ರಿಕೆಗಳಲ್ಲಿ 100 ಕ್ಕೆ 100 ಅಂಕಗಳ ಸಾಧನೆ ಮಾಡಿರುತ್ತಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಟ್ರಸ್ಟಿಗಳು, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.