ಕುಂದಾಪುರ (ಜೂ,06): ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ರಾಣಿ ಅಬ್ಬಕ್ಕ ಕರಾವಳಿ ಕರ್ನಾಟಕದ ಧೀಮಂತ ಶಕ್ತಿ. ವಸಾಹತುಶಾಹಿ ಆಳ್ವಿಕೆಗೆ ಅಬ್ಬಕ್ಕ ನೀಡಿದ ಪ್ರತಿಕ್ರಿಯೆ ಸ್ತುತ್ಯಾರ್ಹ. ಅಂತವರ ವ್ಯಕ್ತಿತ್ವವನ್ನು ಇಂದಿನ ಯುವ ಜನತೆಗೆ ಪರಿಚಯಿಸುವುದು ಮುಖ್ಯ ಎಂದು ನಿವೃತ್ತ ಪ್ರಾಂಶುಪಾಲರಾದ ಡಾ| ವಿ.ಕೆ. ಯಾದವ ಹೇಳಿದರು.
ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ, ಮಂಗಳೂರು ಇವರ ಸಹಯೋಗದೊಂದಿಗೆ ರಾಣಿ ಅಬ್ಬಕ್ಕ @ 500 ಸರಣಿ ಉಪನ್ಯಾಸ ಮಾಲಿಕೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಎಮ್.ಐ.ಟಿ., ಮಣಿಪಾಲದ ಗಣಿತಶಾಸ್ತçದ ಪ್ರಾಧ್ಯಾಪಕರಾದ ಡಾ| ವಾದಿರಾಜ ಗೋಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಣಿ ಅಬ್ಬಕ್ಕ @ 500 ಸರಣಿ ಉಪನ್ಯಾಸ ಮಾಲಿಕೆಯ ಸಂಯೋಜಕರಾದ ಶ್ರೀ ವೆಂಕಟೇಶ ನಾಯಕ್ ಮತ್ತು ಯಶವಂತ ಕುದ್ರೋಳಿ ಉಪಸ್ಥಿತರಿದ್ದರು.
ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣಿತಶಾಸ್ತç ಪ್ರಾಧ್ಯಾಪಕಿ ಶ್ರೀಮತಿ ನಿರ್ಮಲ ಬಿಲ್ಲವ ಪ್ರಾರ್ಥಿಸಿ, ಕನ್ನಡ ಸಹಾಯಕ ಪ್ರಾಧ್ಯಾಕರಾದ ಶ್ರೀ ಸುಕುಮಾರ ಶೆಟ್ಟಿ ಸ್ವಾಗತಿಸಿ, ಶ್ರೀಮತಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಪ್ರವೀಣಾ ಎಮ್. ಪೂಜಾರಿ ವಂದಿಸಿದರು.