ಕಂಡ್ಲೂರು(ಜೂ, 27): ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಕುಂದಾಪುರ ಘಟಕ,ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ಶ್ರೀರಾಮ ಭಜನಾ ಮಂದಿರ ಹಳೆಕೋಟೆ, ಶ್ರೀ ಗಣೇಶೋತ್ಸವ ಸಮಿತಿ ಕಂಡ್ಲೂರು,ಶ್ರೀ ವೀರ ಮಾರುತಿ ಭಜನಾ ಮಂಡಳಿ ಹಳನಾಡು, ಶ್ರೀ ಶಾರದೋತ್ಸವ ಸಮಿತಿ, ಕನ್ನಿಕಾ ಫ್ರೆಂಡ್ಸ್ ಕಂಡ್ಲೂರು ಶ್ರೀ ಮಹಾಗಣಪತಿ ಭಜನಾ ಮಂಡಳಿ ಹಳನಾಡು ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕುಂದಾಪುರ ಇವರ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಕಂಡ್ಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜೂನ್, 29 ರ ಆದಿತ್ಯವಾರದಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 2.00ರ ವರೆಗೆ ಹಮ್ಮಿಕೊಳ್ಳಲಾಗಿದೆ.
ರಕ್ತದಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜೀವವುಳಿಸುವ ಈ ಮಾನವೀಯ ಕಾರ್ಯದಲ್ಲಿ ನಮ್ಮೊಂದಿಗೆ ಕೈ ಜೋಡಿಸ ಬೇಕೆಂದು ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ನಾಗೇಶ ಹಳನಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.