ಕುಂದಾಪುರ( ಆ ,28): ಐಡಿಯಲ್ ಪ್ಲೇ ಅಬಕಸ್ ಇಂಡಿಯಾ ಪ್ರವೇಟ್ ಲಿಮಿಟೆಡ್ ಸಂಸ್ಥೆ ಆಯೋಜಿಸಿದ್ದ 20ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ನಾಯಕವಾಡಿ ಮಂಕಿ ಶಾಲೆಯ ಧನ್ಯ ವಿ ಅವರು zel ಲೆವೆಲ್ ವಿಭಾಗದಲ್ಲಿ ಪ್ರಾಥಸ್ಥಾನ ಪಡೆದು ವಿನ್ನರ್ ಆಗಿ ಹೊರಹೋಮ್ಮಿದ್ದಾರೆ.

ಇವರು ಐಡಿಯಲ್ ಪ್ಲೇ ಅಬಾಕಸ್ ಕುಂದಾಪುರ ಕೇಂದ್ರದ ಮುಖ್ಯಸ್ಥರಾದ ಪ್ರಸನ್ನ ಕೆಬಿ ಅವರಿಂದ ತರಬೇತಿ ಪಡೆದಿರುತ್ತಾರೆ,. ಇವರು ಕುಂದಾಪುರದ ನಾಯಕವಾಡಿಯ ನಿವಾಸಿಯಾಗಿದ್ಫು ವೀರಭದ್ರ ಮತ್ತು ನಾಗಮಣಿಯ ಪುತ್ರಿಯಾಗಿದ್ದು ಪ್ರಸ್ತುತ ಇವರು ನಾಯಕವಾಡಿ ಮಂಕಿ ಶಾಲೆಯ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.











