ಕುಂದಾಪುರ(ಜು,13): ಪರೀಕ್ಷೆ ಬಗ್ಗೆ ಮಾಹಿತಿ ಉಪನ್ಯಾಸ ವಿದ್ಯಾರ್ಥಿಗಳು ನೀಟ್ ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಸಿಸುವಾಗ ತಮ್ಮ ಸ್ಪರ್ಧೆಯಿರುವುದು ಬೇರೆಯವರೊಂದಿಗೆ ಅಲ್ಲ, ತನ್ನದೇ ಆದ ನಿನ್ನೆಯ ಸಾಮರ್ಥ್ಯದೊಂದಿಗೆ ಇಂದಿನ ಕೌಶಲ್ಯವನ್ನು ಸ್ಪರ್ಧೆಗೊಡ್ಡಿ, ನಿರಂತರತೆ, ಶಿಸ್ತು ಮತ್ತು ದೊಡ್ಡ ಕನಸು ಕಾಣುವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಒಂದು ಪ್ರತಿಶತವಾದರೂ ನಿನ್ನೆಗಿಂತ ಉತ್ತಮರಾಗಬೇಕೆಂದು ಮನಗಂಡು ಯಶಸ್ಸು ಸಾಧಿಸಬೇಕು” ಎಂದು ಕುವೈಟ್ ನ ಅಲ್ ಸಭಾ ಆಸ್ಪತ್ರೆಯ ಮಕ್ಕಳತಜ್ಞ, ಸೀನಿಯರ್ ರಿಜಿಸ್ಟ್ರಾರ್, ಡಾ. ಶಿಶಿರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಶಿಶಿರ್ ಶೆಟ್ಟಿಯವರನ್ನು ಸಭೆಗೆ ಪರಿಚಯಿಸಿ ಸ್ವಾಗತಿಸಿದರು. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯರಾದ ಸಹನಾ ಮತ್ತು ಮೇಘನಾ ಪ್ರಾರ್ಥನೆಗೈದರು.
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನೀಸ್ ನತಾಶಾ ಡಿಸೋಜಾ ರವರು ನಿರೂಪಿಸಿ ವಂದನಾರ್ಪಣೆಗೈದರು.











