ಬೈಂದೂರು (ಮಾ. 7): ಶಿಕ್ಷಣ ಪ್ರತಿಯೊಂದು ಮಗುವಿಗೂ ಅವಶ್ಯಕ. ಶಿಕ್ಷಣ ಎಂದೆಂದಿಗೂ ನನ್ನ ಮೊದಲ ಆದ್ಯತೆ, ಸದೃಡ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಮೂಲ ಅಡಿಪಾಯ ಎಂದು ಬೈಂದೂರಿನ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಹೇಳಿದರು. ಅವರು ಶಿರೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ವಾಹನದ ಚಾಲನಾ ಕಾರ್ಯಕ್ರಮದಲ್ಲಿ ಹೇಳಿದರು.
ಸ್ವತಹ ಶಾಸಕರೇ ಶಾಲಾ ವಾಹನವನ್ನು ಚಲಾಯಿಸಿ ನೂತನ ಶಾಲಾ ವಾಹನಕ್ಕೆ ಚಾಲನೆ ನೀಡಿದ್ದು ಕುತೂಹಲಕರವಾಗಿತ್ತು. ನನ್ನ ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿಗೆ ವಿಶೇಷ ಆದ್ಯತೆ ನೀಡುವುದರ ಜೊತೆಗೆ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಕರ್ನಾಟಕದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಬೈಂದೂರು ತಾ.ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಶಿರೂರು ಗ್ರಾ.ಪಂ. ಅಧ್ಯಕ್ಷೆ ಜಿ.ಯು. ದಿಲ್ ಶಾದ್ ಬೇಗಂ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್, ಪಂಚಾಯತ್ ಸದಸ್ಯರಾದ ರವೀಂದ್ರ ಶೆಟ್ಟಿ ಆರ್ಮಕ್ಕಿ, ನಾಗಯ್ಯ ಶೆಟ್ಟಿ , ಪ್ರಸನ್ನ ಶೆಟ್ಟಿ, ಪ್ರೇಮಾ ಮೊಗೇರ್,ನಾಗರತ್ನ ಆಚಾರ್ಯ, ಉಷಾ ಗಾಣಿಗ, ಸುರೇಂದ್ರ ದೇವಾಡಿಗ, ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ ಮೇಸ್ತ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸತೀಶ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಚಿಕ್ಕು ಪೂಜಾರಿ ಉಪಸ್ಥಿತರಿದ್ದರು .
ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಅಬೂಬಕರ್, ಸೈಯದ್ ಜಾಫರ್,ಅಜ್ಜಲ್ ಸಾಹೇಬ್, ಅಕ್ರಮ ಸಕ್ರಮ ಸಮಿತಿ ಸದಸ್ಯ ದಿನೇಶ್ ಕುಮಾರ್,ಎಸ್.ಎಂ ಸೈಯದ್, ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಅಧ್ಯಕ್ಷ ಸಾಧನದಾಸ್, ಇ.ಸಿ.ಒ ಚಂದ್ರ ದೇವಾಡಿಗ, ಬಿ.ಆರ್.ಪಿ. ಕರುಣಾಕರ ಶೆಟ್ಟಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ ಪ್ರಭು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಶಂಕರ ಶಿರೂರು ಸ್ವಾಗತಿಸಿದರು,ಶಿಕ್ಷಕ ಮಹಾದೇವ ಬಿಲ್ಲವ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸೋಮರಾಯ ಜನ್ನು ವಂದಿಸಿದರು. ಶಿಕ್ಷಕ ಸಿ.ಎನ್. ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು.