ಶಿವ೯(ಮಾ.20) : ಸಂತ ಮೇರಿ ಕಾಲೇಜಿನ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು ವಿಜ್ಞಾನ ವೈಜ್ಞಾನಿಕ ಮನೋಧರ್ಮ ಕ್ಕಾಗಿ ಯುವಜನತೆ ಎಂಬ ಧ್ಯೇಯದ ಅಡಿಯಲ್ಲಿ ಪ್ರೌಢ ಶಾಲಾ ವಿಭಾಗ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾನಗರ ಮುದರಂಗಡಿಯಲ್ಲಿ ನಡೆಯಿತು.
ಪ್ರತಿಯೊಬ್ಬ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಥಿ೯ಯು ನಿಷ್ಠೆಯಿಂದ ಪಾಲ್ಗೊಂಡು ತನ್ನ ಮುಂದಿನ ಜೀವನದಲ್ಲಿ ನಾಯಕನಾಗಿ ಹೊರಹೊಮ್ಮಲು ಸಾಧ್ಯವೆಂದು ಕಾರ್ಯಕ್ರಮ ಉದ್ಘಾಟಿಸಿ ಮುದರಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷಶ್ರೀ ಶರತ್ ಶೆಟ್ಟಿ ಮಾತನಾಡಿದರು.
ಬದುಕಿನಲ್ಲಿ ಬರುವ ಕೊರತೆಗಳನ್ನು ಸಮಪ೯ಕವಾಗಿ ನಿಭಾಯಿಸಬೇಕಾದರೆ ಕೊರತೆಗಳ ಜೊತೆ ವಿದ್ಯಾರ್ಥಿಗಳು ಬದುಕಿದಾಲೇ ಮುಂದೆ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯವೆಂದು ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಮೋನಿಸ್ ರವರು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಘುರಾಮ್ ನಾಯಕ್ ರವರು ಮಾತನಾಡಿ ಸಹಕಾರ ಸಹಬಾಳ್ವೆ ಸಹಜೀವನ ಶಿಬಿರಾರ್ಥಿಗಳ ಜೀವನ ಧ್ಯೇಯವಾಗಬೇಕೆಂದರು. ಪರಸ್ಪರ ಒಬ್ಬರಿಗೊಬ್ಬರು ಅರಿತು ನಡೆದಾಗ ಸಮಾಜ ಶಾಂತಿಯುತವಾಗಿರಲು ಸಾಧ್ಯವೆಂದು ಸರಕಾರಿ ಪ್ರೌಢಶಾಲೆಯ ಮುಖ್ಯೋಪದಾಯಿನಿ ಶ್ರೀಮತಿ ಪುಷ್ಪಾವತಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಅಮಿತಾ ಅಮಿನ್ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ಸಭೆಯಲ್ಲಿ ಶ್ರೀ ಕರುಣಾಕರ ಭಂಡಾರಿ ಅಧ್ಯಕ್ಷ ರು ಪ.ಪೂ.ಕಾಲೇಜಿನ ಶಾಲಾಭಿವೃದ್ಧಿ ಸಂಘ, ಶ್ರೀ ರವೀಂದ್ರ ಪ್ರಭು ಪ.ಪೂ.ಕಾಲೇಜಿನ ಅಧ್ಯಕ್ಷರು, ಶ್ರೀ ಶಿವರಾಮ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎರಡೂ ಸಂಸ್ಥೆಗಳ ಭೋದಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಶ್ರೀ ಪ್ರೇಮನಾಥ್ ಸ್ವಾಗತಿಸಿ, ಕು.ರಕ್ಷಾ ವಂದಿಸಿ, ಕು.ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.