ಹೊಸಂಗಡಿ ( ಮಾ .01): EFFULGENCE ಎಂಬ ಶೀರ್ಷಿಕೆಯಡಿ , “ಪ್ರತಿಭೆಗಳಿಗೊಂದು ಕನ್ನಡಿ, ಹೊಸತನಕ್ಕೊಂದು ಮುನ್ನುಡಿ” ಧ್ಯೇಯ ವಾಕ್ಯದೊಂದಿಗೆ ಅತ್ಯಾಧುನಿಕ ಹಾಗೂ ಮಾದರಿ ಸೌಕರ್ಯಗಳನ್ನೊಳಗೊಂಡ ಮೊದಲ ಕಾಲೇಜು ಎಂಬ ಹೆಗ್ಗಳಿಕೆಯನ್ನು ಸಂಪಾದಿಸಿಕೊಂಡಿರುವ ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿಯಲ್ಲಿ ವಿವಿಧ ಸೌಲಭ್ಯಗಳ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.

CAN FINS HOMES LIMITED ಪ್ರಾಯೋಜಿತ ಸೋಲಾರ್ ಉತ್ಪಾದನಾ ಘಟಕ ಉದ್ಘಾಟನೆ , CSR ನಿಧಿಯಡಿಯಲ್ಲಿ ಇಡೀ ಕಾಲೇಜಿಗೆ ಸೋಲಾರ್ ಉತ್ಪಾದಿತ ವಿದ್ಯುತ್ ಸೌಲಭ್ಯವನ್ನು ಪಡೆದಿದ್ದು ಇದರೊಂದಿಗೆ 10 KW ವಿದ್ಯುತ್ ಅನ್ನು ಉಪಯೋಗಿಸಿಕೊಳ್ಳುವ ಸದವಕಾಶವನ್ನು ಪಡೆದುಕೊಂಡಿದೆ. ಇದರಿಂದಾಗಿ ವರ್ಷವಿಡೀ ತಡೆಯಿಲ್ಲದ ವಿದ್ಯುತ್ ಅನ್ನು ಪಡೆದುಕೊಂಡ ಕಾಲೇಜಾಗಿ ಗುರುತಿಸಿಕೊಂಡಿದೆ. ಇದರಿಂದ 26 ಕಂಪ್ಯೂಟರ್, 4 ಇಂಟರ್ ಆಕ್ಟಿವ್ ಟಿವಿ, ಫ್ಯಾನ್ , ಪ್ರಾಜೆಕ್ಟರ್ ಅನ್ನು ತಡೆಯಿಲ್ಲದೆ ಬಳಸಿಕೊಳ್ಳಬಹುದಾಗಿದೆ.
ಕೃಷ್ಣಮೂರ್ತಿ ಮಂಜ ಅತ್ಯಾಧುನಿಕ ಪ್ರಯೋಗಾಲಯ ಉದ್ಘಾಟನೆ : ಕಾಲೇಜಿನ ಪ್ರಯೋಗಾಲಯಕ್ಕೆ ಶ್ರೀ ಕೃಷ್ಣಮೂರ್ತಿ ಮಂಜ ಆರ್ಥಿಕ ನೆರವಿನಿಂದ ಯೋಜಿತ- ಯೋಚಿತ ಅತ್ಯಾಧುನಿಕ ಪ್ರಯೋಗಾಲಯ ನಿರ್ಮಾಣಗೊಂಡಿದ್ದು ಎಲ್ಲಾ ಪ್ರಯೋಗಾಲಯಕ್ಕೂ ಮಾದರಿ ಎನಿಸಿದೆ.

ಸಿಇಟಿ ತರಬೇತಿ. ಈ ವರ್ಷದಿಂದ ಪ್ರಥಮ ಹಾಗೂ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ CET ತರಬೇತಿ ನೀಡಲಿದ್ದು ಮಾರ್ಚ್ ಎಪ್ರಿಲ್ ಮೇ ನಲ್ಲಿ ನಿರಂತರ ತರಗತಿಗಳು ನಡೆಯಲಿವೆ. ಈ ಎಲ್ಲಾ ಯೋಜನೆಗಳ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಸನ್ಮಾನ್ಯ ಶ್ರೀ ಗುರುರಾಜ ಗಂಟಿಹೊಳೆ ಇವರು ನೆರವೇರಿಸಿದ್ದು ಒಂದು ಸರಕಾರಿ ಕಾಲೇಜಿನಲ್ಲಿ ಖಾಸಗೀ ಕಾಲೇಜನ್ನು ಮೀರಿಸುವಷ್ಟು ಸೌಲಭ್ಯ ಲಭ್ಯವಿದ್ದು ಉಳಿದ ಕಾಲೇಜುಗಳಿಗೆ ಇದು ಮಾದರಿ ಎಂದು ಮೆಚ್ಚುಗೆ ಸೂಚಿಸಿ , ಕಾಲೇಜಿನ ಅಭಿವೃದ್ಧಿಗೆ ಏನೇ ಬೇಕಾದರೂ ನಾನು ಜೊತೆಗಿರುತ್ತೇನೆ ಎಂದರು.

ಭಾಸ್ಕರ್ ಶೆಟ್ಟಿ ಕಾರ್ಯಾಧ್ಯಕ್ಷರು. ಕಾಲೇಜು ಅಭಿವೃದ್ಧಿ ಸಮಿತಿ ಸ.ಪ.ಪೂ ಹೊಸಂಗಡಿ,ಶ್ರೀಮತಿ ಶಾಂತಿ ನಾಯ್ಕ್.. ಮಾಜಿ ಅಧ್ಯಕ್ಷ ರು. ಗ್ರಾಮ ಪಂಚಾಯತ್ ಹೊಸಂಗಡಿ,ನೆಳಾಲ್ ಶಂಕರ ಶೆಟ್ಟಿ. ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಹೊಸಂಗಡಿ,ಅವಿನಾಶ್ ಶೆಟ್ಟಿ. ಮಾಜಿ ಸದಸ್ಯರು,ಗ್ರಾಮ ಪಂಚಾಯತ್ ಹೊಸಂಗಡಿ, ರವೀಂದ್ರ ಶೆಟ್ಟಿ, ಮಾಜಿ ಸದಸ್ಯರು,ಗ್ರಾಮ ಪಂಚಾಯತ್ ಹೊಸಂಗಡಿ, ಶ್ರೀಮತಿ ಶ್ರೀಮತಿ, ಮಾಜಿ ಸದಸ್ಯರು,ಗ್ರಾಮ ಪಂಚಾಯತ್ ಹೊಸಂಗಡಿ, ಪ್ರೇಮಾ ಕೆ ಮಡಿವಾಳ. ಮಾಜಿ ಸದಸ್ಯರು,ಗ್ರಾಮ ಪಂಚಾಯತ್ ಹೊಸಂಗಡಿ, ದೇವಿಪ್ರಸಾದ್ ಶೆಟ್ಟಿ ಬಾಳೆಬೇರು, ಉದ್ಹಮಿಗಳು. ಯಡಮೊಗೆ. ಉದಯ ನಾಯ್ಕ. ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ. ಸ.ಪ.ಪೂ ಕಾಲೇಜು. ಹೊಸಂಗಡಿ,
ಚಂದ್ರಜೋಗಿ, ಕಾರ್ಯದರ್ಶಿ, ಹಳೆ ವಿದ್ಯಾರ್ಥಿ ಸಂಘ. ಸ.ಪ.ಪೂ ಕಾಲೇಜು ಹೊಸಂಗಡಿ,ಗುರುಪ್ರಸಾದ್ M. ಮುಖ್ಯ ಶಿಕ್ಷಕರು, ಸ.ಪ.ಪೂ ಕಾಲೇಜು, ಪ್ರೌಢಶಾಲಾ ವಿಭಾಗ. ಹೊಸಂಗಡಿ,ರಾಜೇಂದ್ರ, ಬೆಚ್ಚಳ್ಳಿ , ಕೃಷಿ ಸಂಪನ್ಮೂಲ ವ್ಯಕ್ತಿ, , ಪ್ರಶಸ್ತಿ ವಿಜೇತ ಕೃಷಿಕರು.ಉಪಸ್ಥಿತರಿದ್ದರು.
ಅಕ್ಷಯ್ ಹೆಗ್ಡೆ ಮೊಳಹಳ್ಳಿ, ಅರ್ಥಶಾಸ್ತ್ರ ಉಪನ್ಯಾಸಕರು. ಸ.ಪ.ಪೂ ಕಾಲೇಜು ಹೊಸಂಗಡಿ ನಿರೂಪಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕರಾದ ವೆಂಕಟೇಶ P R. ಸ್ವಾಗತಿಸಿದರು, ರಣಜಿತ್ ಕುಮಾರ್ ಶೆಟ್ಟಿ. ಪ್ರಾಂಶುಪಾಲರು ಪ್ರಸಾವನೆಗೈದರು. ಎಜಾಸ್. ರಾಜ್ಯಶಾಸ್ತ್ರ ಉಪನ್ಯಾಸಕರು ಧನ್ಯವಾದ ಸಮರ್ಪಿಸಿದರು.











