ವಂಡ್ಸೆ (ಜು, 8) : ಇತ್ತೀಚೆಗೆ ಬೈಕ್ ಅಪಘಾತಕ್ಕೆ ಒಳಗಾದ ಯಕ್ಷಗಾನ ಕಲಾವಿದ ಬಗ್ವಾಡಿಯ ಸುಬ್ರಹ್ಮಣ್ಯ ಮೊಗವೀರ ನ ಮನೆಗೆ ಬೈಂದೂರಿನ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿಯವರು ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಮೀನುಗಾರಿಕೆ ಇಲಾಖೆಯಿಂದ ಶೀಘ್ರವಾಗಿ ಮನೆ ನಿರ್ಮಿಸಿಕೊಡುವುದಾಗಿ ತಿಳಿಸಿ, ತಕ್ಷಣವೇ ಸಂಬಂಧಪಟ್ಟವರಿಗೆ ಶಾಸಕರು ಮಾತನಾಡಿದರು.
ಜೊತೆಗೆ ಕಿರು ಮೊತ್ತದ ಆರ್ಥಿಕ ಸಹಾಯಧನ ನೀಡಿ ಧೈರ್ಯ ತುಂಬಿದ ಶಾಸಕರು ಮನೆ ನಿರ್ಮಿಸಲು ಬೇಕಾಗುವ ಹಂಚುಗಳನ್ನು ಸ್ವತಃ ಉಚಿತವಾಗಿ ಕೊಡುತ್ತೇನೆಂದು ಹೇಳಿದರು. ತಾನೇ ಮುತುವರ್ಜಿಯಿಂದ ಮುಂದೆ ನಿಂತು ಮನೆಕಟ್ಟಲು ಅಗತ್ಯವಾದ ಎಲ್ಲಾ ಸಲಕರಣೆಗಳನ್ನು ಸ್ಥಳಿಯ ಮುಖಂಡರ ಮೂಲಕವಾಗಿ ಉಚಿತವಾಗಿ ಕೊಡಿಸುವ ಭರವಸೆಯನ್ನು ಶಾಸಕರು ನೀಡಿದರು. ಶಾಸಕರ ಈ ಮಾನವೀಯ ಸ್ಪಂದನೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.