ಮರ
ದಿನಂಪ್ರತಿ ಮನೆಯೆದುರು ಹಕ್ಕಿಗಳ ಹಿಕ್ಕೆಯನ್ನು ಗುಡಿಸಿ ಸ್ವಚ್ಛಗೊಳಿಸುವ ಕೆಲಸ ಸಾಕಾಗಿಹೋಗಿತ್ತು. ಮನೆಯೆದುರು ತಾವರೆ ಕೊಳಕ್ಕೆ ಅರ್ಧ ಬುಟ್ಟಿಯಾಗುವಷ್ಟು ಒಣಗಿದ ಎಲೆಗಳೂ ಬೀಳುತ್ತಿದ್ದವು. ಮಳೆ ಬಂದು ನಿಂತರೂ ಮರದ ಎಳೆಗಳಿಂದ ಹನಿಗಳು ಬೀಳುತ್ತಿದ್ದವು. ಒಮ್ಮೊಮ್ಮೆ ಬೀಸುವ ಗಾಳಿಗೆ ಚಳಿಯೂ ವಿಪರೀತ. ಬೇಸರವಾಗಿ ಮರಕ್ಕೊಂದು ಗತಿ ಕಾಣಿಸಿದ.
ಈಗ ದಿನವೂ ತಾವರೆ ಕೊಳಕ್ಕೆ ನೀರು ತುಂಬಿಸಬೇಕು. ಪಕ್ಷಿಗಳಿಗಾಗಿ ತಾರಸಿಯಲ್ಲಿ ಪಾತ್ರಗಳಲ್ಲಿ ನೀರಿಡುತ್ತಾನೆ. ಆದರೆ ಪಕ್ಷಿಗಳು ಸುಳಿಯುವುದೇ ಇಲ್ಲ! ಬೆವರಿದಾಗ ಚಳಿಯಾಗುತ್ತದೆ…!

ಕಿಗ್ಗಾಲು ಜಿ. ಹರೀಶ್










