” ಬದಲಾಗುತ್ತಿರುವ ಜಗತ್ತಿನಲ್ಲಿ ತಂತ್ರಜ್ಞಾನದ ಜೊತೆಗೆ ಅದರ ಸುರಕ್ಷತೆಯು ಕೂಡ ಮಹತ್ವದ್ದಾಗಿದೆ. ವಿಷ್ಣು ಪುರಣದಲ್ಲಿ ಉಲ್ಲೇಖಿಸಲಾದ ಮತ್ಸ್ಯ ನ್ಯಾಯದ ಕಥೆ ಇಂದಿನ ಆಧುನಿಕ ಪ್ರಪಂಚದಲ್ಲೂ ಹೆಚ್ಚು ಮಹತ್ವ ಪಡೆದಿದೆ.” ಎಂಬುದಾಗಿ ಶ್ರೀಯುತ ಕಾರ್ತಿಕ್ ರಾವ್ ಬಪ್ಪನಾಡು Centre Head CySecK, ಕರ್ನಾಟಕ ಸರಕಾರ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಎರಡು ದಿನದ ” Ethical hacking” ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. Centre of Excellence for Cyber Security (CySecK) ಕರ್ನಾಟಕ ಸರಕಾರ ಇದರ ಪ್ರಯೋಜಕತ್ವದಲ್ಲಿ, MUIC ( Mangalore University Incubation Centre), ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎರಡು ದಿನದ Ethical Hacking ಕಾರ್ಯಾಗಾರ 21 ಜನವರಿಯಿಂದ 22 ಜನವರಿಯವರೆಗೆ ನಡೆಯಿತು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ನವೀನ್ ಕುಮಾರ್ S. K, Chairman Electronics ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ವಹಿಸಿ ಕೊಂಡರು. ರಕ್ಷಾ ಮತ್ತು ತಂಡದವರಿಂದ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಕಾರ್ಯಾಗಾರದ Co-convenor ನವೀನ್ ಚಂದ್ರ ಕುಮಾರ್ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಧನ್ಯವಾದ ಸಮರ್ಪಣೆ ಕೌಶಿಕ್ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಚೈತ್ರ ನಡೆಸಿಕೊಟ್ಟರು. ಎರಡು ದಿನ ಮುಖ್ಯ ತರಬೇತುದಾರ ಶ್ರೀಯುತ. ರೋಬಿನ್ಸೂನ್ ಡಿಸೋಜಾ, ಸೈಬರ್ ಸೆಕ್ಯುರಿಟಿ ತಜ್ಞ, Cybersapiens United LLP, ಮಂಗಳೂರು ಮತ್ತು ತಂಡದವರಿಂದ ಮಾಹಿತಿಪೂರ್ಣ ಕಾರ್ಯಾಗಾರ ನಡೆಸಿಕೊಟ್ಟರು.
ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಇಸ್ರೋದ ವಿಶ್ರಾಂತ ಹಿರಿಯ ವಿಜ್ಞಾನಿ ಹಾಗೂ IBM ಸಂಸ್ಥೆಯ ಸಹಾಯ ಸಂಸ್ಥೆ ಆಗಿರುವಂತಹ NCS ನ ನಿರ್ದೇಶಕ Dr. ಮುಕ್ತೇಶ್ ಪಡ್ಕೆ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಜಾಗತಿಕ ಅವಶ್ಯಕತೆಗಳು ಹಾಗೂ ಅದಕ್ಕೆ ಸಿದ್ಧರಿರಬೇಕಾದ ಯುವ ಪಡೆ ಮತ್ತು ಅದನ್ನು ಸಾಕಾರಗೊಳಿಸಲು ಸದಾ ಸಿದ್ಧರಿರುವ ಹಿರಿಯರ ಮಾರ್ಗದರ್ಶನದ ಬಗ್ಗೆ ಮಾತನಾಡಿ ಹೊಸ ಹುಮ್ಮಸ್ಸನ್ನು ತುಂಬಿದರು.